Horoscope Today: ಸಂತೋಷದಿಂದ ದಿನ ಕಳೆಯಲಿದ್ದೀರಿ, ಚಾಡಿ ಮಾತಿಗೆ ಬೆಲೆ ಕೊಡದಿರಿ, ಧನುರಾಶಿಯಿಂದ ಮೀನದವರೆಗೆ ರಾಶಿಭವಿಷ್ಯ
ಜೂನ್ 6, 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (6th June 2024 Daily Horoscope).

ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (6th June 2024 Horoscope)
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ಗುರುವಾರ
ತಿಥಿ: ಅಮಾವಾಸ್ಯೆ ಸಂಜೆ 5.44 ರವರೆಗೂ ಇರುತ್ತದೆ. ಅನಂತರ ಪಾಡ್ಯ ಆರಂಭವಾಗುತ್ತದೆ.
ನಕ್ಷತ್ರ: ರೋಹಿಣಿ ನಕ್ಷತ್ರವು ರಾತ್ರಿ 8.22 ರವರೆಗೂ ಇರುತ್ತದೆ. ಅನಂತರ ಮೃಗಶಿರ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳ್ಳಿಗ್ಗೆ 5.52
ಸೂರ್ಯಾಸ್ತ: ಸಂಜೆ 6.44
ರಾಹುಕಾಲ: ಮಧ್ಯಾಹ್ನ 1.58 ರಿಂದ ಮಧ್ಯಾಹ್ನ 3.34
ಧನಸ್ಸು
ಮನದಲ್ಲಿ ವೈರಾಗ್ಯದ ಭಾವನೆ ಇರುತ್ತದೆ. ಒಳ್ಳೆಯ ಭಾವನೆ ಇರುವ ಜನರ ಒಡೆತನ ದೊರೆಯುತ್ತದೆ. ಬೇಸರದ ವೇಳೆ ಹೆತ್ತವರ ಸಾಂತ್ವನ ದೊರೆಯುತ್ತದೆ. ಸಂತೋಷ ಸಂಭ್ರಮಗಳಿಂದ ದಿನವನ್ನು ಕಳೆಯುವಿರಿ. ಖರ್ಚು ವೆಚ್ಚಗಳಿಗೆ ಸರಿ ಹೊಂದುವಷ್ಟು ಹಣವನ್ನು ಸಂಪಾದಿಸಬಲ್ಲಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮ್ಮ ಸಹಾಯವೇ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಹೊರಾಂಗಣ ಕ್ರೀಡೆಗಳಲ್ಲೂ ಭಾಗವಹಿಸುತ್ತಾರೆ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಆತ್ಮೀಯರ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ಕೆಲಸದ ನಡುವೆಯೂ ವಿಶ್ರಾಂತಿ ಪಡೆಯುವಿರಿ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸದಿರಿ.
ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಮಕರ
ನಿಧಾನಗತಿಯಲ್ಲಿ ದಿನದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ದೈಹಿಕ ವ್ಯಾಯಾಮದಿಂದ ಏಕಾಗ್ರತೆ ಹೆಚ್ಚುತ್ತದೆ. ಜವಾಬ್ದಾರಿಯೊಂದಿಗೆ ನಿಮ್ಮ ಕರ್ತವ್ಯವನ್ನು ನಿರ್ವಹಿಸುವಿರಿ. ನಿರುದ್ಯೋಗಿಗಳಿಗೆ ಆತ್ಮೀಯರ ಸಹಾಯದಿಂದ ಉದ್ಯೋಗ ದೊರೆಯುತ್ತದೆ. ತೊಂದರೆಯ ನಡುವೆಯೂ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಸಂಗಾತಿಯ ಬುದ್ದಿವಂತಿಕೆಯ ತೀರ್ಮಾನವು ಮನೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ನಿಮ್ಮ ಅನುಭವವು ಇತರರಿಗೆ ದಾರಿದೀಪವಾಗಲಿದೆ. ಮಕ್ಕಳಿಗೆ ವಿವಾಹ ನಿಶ್ಚಯವಾಗುವುದು. ವಿದ್ಯಾರ್ಥಿಗಳು ಒತ್ತಡವಿಲ್ಲದೆ ಬಾಳುತ್ತಾರೆ.
ಪರಿಹಾರ: ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಬೂದು ಬಣ್ಣ
ಕುಂಭ
ನಿಮ್ಮ ಪ್ರಾವಿಣ್ಯವನ್ನು ಗುರುತಿಸಿ ಆತ್ಮೀಯರು ಅಭಿನಂದನಾ ಸಮಾರಂಭವನ್ನು ಏರ್ಪಡಿಸುತ್ತಾರೆ. ನಿಮ್ಮ ಮನದಾಸೆಯಂತೆ ಜೀವನವನ್ನು ರೂಪಿಸಿಕೊಳ್ಳುವ ಸಾಹಸ ಮಾಡುವಿರಿ. ಅಶಕ್ತರಿಗೆ ಸಹಾಯ ಮಾಡುವಿರಿ. ತಾಯಿಯವರ ಸಹಾಯದಿಂದ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತದೆ. ಮಕ್ಕಳು ಮತ್ತು ಮೊಮ್ಮಕ್ಕಳ ಆಗಮನ ಹಿರಿಯರಲ್ಲಿ ಹೊಸತನ ತುಂಬುತ್ತದೆ. ಸ್ವಂತ ಕೆಲಸ ಕಾರ್ಯಗಳಲ್ಲಿ ಅಡಚಣೆ ಎದುರಾದರೂ ಯಶಸ್ಸು ಕಾಣುವಿರಿ. ಚಾಡಿ ಮಾತಿಗೆ ಬೆಲೆ ನೀಡಿದಲ್ಲಿ ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭಕ್ಕೆ ಕೊರತೆ ಇರುವುದಿಲ್ಲ. ಮೌನ ತೊರೆದು ಮಾತನಾಡಲು ಪ್ರಯತ್ನಿಸಿ.
ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಂದು ಬಣ್ಣ
ಮೀನ
ಮಾನಸಿಕ ಒತ್ತಡವನ್ನು ಕ್ರೀಡಾಚಟುವಟಿಕೆಗಳ ಮೂಲಕ ಕಡಿಮೆ ಮಾಡಿಕೊಳ್ಳುವಿರಿ. ಆಧ್ಯಾತ್ಮದಲ್ಲಿ ವಿಶೇಷವಾದ ಆಸಕ್ತಿ ಉಂಟಾಗುತ್ತದೆ. ಮನಸ್ಸಿಗೆ ಒಪ್ಪುವಂತಹ ಒಡವೆಗಳಿಗೆ ಹಣ ಖರ್ಚು ಮಾಡುವಿರಿ. ಯಾರೊಬ್ಬರ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಅಧಿಕವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುವಿರಿ. ಮಾನಸಿಕ ಒತ್ತಡಕ್ಕೆ ಒಳಗಾಗದೆ ಕೆಲಸ ನಿರ್ವಹಿಸುವಿರಿ. ಉದ್ಯೋಗದಲ್ಲಿನ ಲೋಪದೋಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಿರಿ. ದಿನಾಂತ್ಯದಲ್ಲಿ ಅನಿರೀಕ್ಷಿತವಾಗಿ ಹಣದ ಸಹಾಯ ದೊರೆಯುತ್ತದೆ. ಸ್ವಂತ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ಸಂತಸ ತುಂಬಿರುತ್ತದೆ. ವಿಶ್ರಾಂತಿ ತೆಗೆದುಕೊಳ್ಳುವುದನ್ನೇ ಮರೆವಷ್ಟು ಕೆಲಸವಿರುತ್ತವೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
