Horoscope Today; ವಾಹನ ವ್ಯವಹಾರದಲ್ಲಿ ಲಾಭ, ಸಹೋದ್ಯೋಗಿಗಳ ಸಹಕಾರ, ಧನು ರಾಶಿಯಿಂದ ಮೀನದವರೆಗೆ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today; ವಾಹನ ವ್ಯವಹಾರದಲ್ಲಿ ಲಾಭ, ಸಹೋದ್ಯೋಗಿಗಳ ಸಹಕಾರ, ಧನು ರಾಶಿಯಿಂದ ಮೀನದವರೆಗೆ ದಿನಭವಿಷ್ಯ

Horoscope Today; ವಾಹನ ವ್ಯವಹಾರದಲ್ಲಿ ಲಾಭ, ಸಹೋದ್ಯೋಗಿಗಳ ಸಹಕಾರ, ಧನು ರಾಶಿಯಿಂದ ಮೀನದವರೆಗೆ ದಿನಭವಿಷ್ಯ

7 ಏಪ್ರಿಲ್‌ 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದಾನೆ. ಆಯಾ ರಾಶಿಚಕ್ರಗಳ ಜನರು ಮಾಡುವ ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳ ಫಲಗಳು ಸಿಗುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಈ ದಿನದ ದಿನಭವಿಷ್ಯ ಇಲ್ಲಿದೆ. (7th April 2024 Daily Horoscope).

Horoscope Today;  ಏಪ್ರಿಲ್ 7 - ಧನು ರಾಶಿಯಿಂದ ಮೀನದವರೆಗೆ ದಿನಭವಿಷ್ಯ
Horoscope Today; ಏಪ್ರಿಲ್ 7 - ಧನು ರಾಶಿಯಿಂದ ಮೀನದವರೆಗೆ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (7th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಭಾನುವಾರ

ತಿಥಿ: ಚತುರ್ದಶಿ ರಾ. 02.34 ರ ವರೆಗೂ ಇರುತ್ತದೆ. ಆನಂತರ ಅಮಾವಾಸ್ಯೆ.

ನಕ್ಷತ್ರ ಪೂರ್ವಾಭಾದ್ರ ನಕ್ಷತ್ರವು ಹ.11.53 ರವರೆಗೂ ಇರುತ್ತದೆ. ಆನಂತರ ಉತ್ತರಾಭಾದ್ರ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ ಬೆಳಗ್ಗೆ 06.11ಕ್ಕೆ

ಸೂರ್ಯಾಸ್ತ ಸಂಜೆ 06.31ಕ್ಕೆ

ರಾಹುಕಾಲ: ಹ. 04.30 ರಿಂದ ಸ. 06.00

ಧನಸ್ಸು - ಹಿರಿಯರಿಂದ ಧನಲಾಭ

ಕೆಲಸ ಕಾರ್ಯಗಳಲ್ಲಿ ಯಶಸ್ಸು ನೀಡುವಂತಹ ಧನಾತ್ಮಕ ಮನೋಭಾವ ಇರಲಿದೆ. ಆಪರಿಮಿತ ನಿರೀಕ್ಷೆಯ ಕಾರಣ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಕುಟುಂಬದಲ್ಲಿ ಪ್ರಗತಿಪರ ಬೆಳವಣಿಗೆಗಳು ಕಂಡುಬರುತ್ತವೆ. ಉದ್ಯೋಗ ಕ್ಷೇತ್ರದ ಬದಲಾವಣೆಗಳು ನಿಮ್ಮ ಪರವಾಗಿರುತ್ತವೆ. ಹಣದ ತೊಂದರೆ ಇರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಕುಟುಂಬದವರ ಸಹಕಾರದಿಂದ ಹಣಕಾಸಿನ ಹೊಣೆಗಾರಿಕೆ ಕಡಿಮೆ ಆಗಲಿದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದ ನಡುವೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸಂತಾನ ಲಾಭವಿದೆ. ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಲಿದ್ದಾರೆ. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯಲಿದೆ.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮಕರ - ವಾಹನ ವ್ಯವಹಾರದಲ್ಲಿ ಲಾಭ

ಕುಟುಂಬದ ವಾದ ವಿವಾದಗಳಿಗೆ ಇತಿಶ್ರೀ ಹಾಡುವಿರಿ. ಮಾನಸಿಕ ಒತ್ತಡ ಇದ್ದರೂ ಶಾಂತಿ ಸಂಯಮವನ್ನು ಕಾಪಾಡುವಿರಿ. ಹಣಕಾಸಿನ ಕೊರತೆ ಇರದ ಕಾರಣ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ಕಷ್ಟ ನಷ್ಟಗಳು ಎದುರಾದರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿಯ ಕೊರತೆ ಇರುತ್ತದೆ. ಬಿಡುವಿಲ್ಲದ ಕೆಲಸದ ನಡುವೆ ವಿಶ್ರಾಂತಿಯನ್ನು ಬಯಸುವಿರಿ. ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರದಲ್ಲಿ ಉತ್ತಮ ಲಾಭಾಂಶ ಗಳಿಸುವಿರಿ. ಮಾತನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10 ಅದೃಷ್ಟದ ದಿಕ್ಕು : ನೈರುತ್ಯ ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕುಂಭ - ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ

ಕುಟುಂಬದಲ್ಲಿ ಗಂಭೀರತೆ ಮನೆ ಮಾಡುತ್ತದೆ. ಉದ್ಯೋಗದಲ್ಲಿ ಆಶಾದಾಯಕ ವಾತಾವರಣ ನಿರ್ಮಾಣವಾಗುತ್ತದೆ. ನೊಂದವರ ನೆರಳಾಗಿ ಬಾಳುವಿರಿ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉತ್ತಮ ಆರೋಗ್ಯ ದೊರೆಯುತ್ತದೆ. ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ವಿರುತ್ತದೆ. ವಿದ್ಯಾರ್ಥಿಗಳು ಹಠದ ಗುಣವನ್ನು ಬಿಡಬೇಕು. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಅನುಭವಿಸುವಿರಿ. ಅನುಭವಸ್ಥರ ಮಾತಿನ ಅನ್ವಯ ನಡೆದುಕೊಳ್ಳಿರಿ. ಭೂ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಲಾಭ ದೊರೆಯಲಿದೆ. ಸ್ವಂತ ಭೂ ಗೃಹ ಲಾಭವಿದೆ. ಕುಟುಂಬದವರೊಡನೆ ಪಾಲುದಾರಿಕೆಯ ವ್ಯಾಪಾರ ವ್ಯವಹಾರವನ್ನು ಆರಂಭಿಸುವಿರಿ.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಬೂದು ಬಣ್ಣ

ಮೀನ - ಸಹೋದ್ಯೋಗಿಗಳ ಸಹಕಾರ

ಕೆಲವೊಂದು ಬದಲಾವಣೆಗಳು ದೈನಂದಿನ ಜೀವನದಲ್ಲಿ ಹೊಸ ಆಯಾಮವನ್ನು ಸೃಷ್ಟಿಸುತ್ತದೆ. ಸಕಾರಾತ್ಮಕ ಚಿಂತನೆಗಳು ಮತ್ತು ವಿಶ್ವಾಸಾರ್ಹ ನಡೆನುಡಿಗಳು ಕುಟುಂಬದ ಪ್ರಗತಿಗೆ ಕಾರಣವಾಗಲಿದೆ. ಸುಲಭವಾಗಿ ಎಲ್ಲರೂ ನಿಮ್ಮ ಮಾತಿನ ಪ್ರಭಾವಕ್ಕೆ ಒಳಗಾಗುತ್ತಾರೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ಸನ್ನು ಗಳಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಾರೆ. ಕಷ್ಟಪಟ್ಟು ಗಳಿಸಿದ ಹಣದಲ್ಲಿ ಒಂದು ಪಾಲು ಜನಸೇವೆಗಾಗಿ ವಿನಿಯೋಗಿಸುವಿರಿ. ವಿವಾಹ ಯೋಗವಿದೆ. ವಿದೇಶಿ ವಿನಿಮಯದ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಧಾರ್ಮಿಕ ಕೇಂದ್ರಕ್ಕೆ ಹಣದ ದೇಣಿಗೆ ನೀಡುವಿರಿ.

ಪರಿಹಾರ : ದಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 4 ಅದೃಷ್ಟದ ದಿಕ್ಕು : ಈಶಾನ್ಯ ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿಬಣ್ಣ

---------------------------------------

ಜ್ಯೋತಿಷಿ- ಎಚ್‌. ಸತೀಶ್, ಬೆಂಗಳೂರು

ಮೊಬೈಲ್: 85468 65832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಗೌರಿವಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.