ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಾಮಾಜಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವಿರಿ,ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡ; ಜೂ. 7ರ ದಿನ ಭವಿಷ್ಯ

ಸಾಮಾಜಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವಿರಿ,ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡ; ಜೂ. 7ರ ದಿನ ಭವಿಷ್ಯ

7 ಜೂನ್‌ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (7th June 2024 Daily Horoscope).

ಸಾಮಾಜಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವಿರಿ,ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡ; ಜೂ. 7ರ ದಿನ ಭವಿಷ್ಯ
ಸಾಮಾಜಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವಿರಿ,ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡ; ಜೂ. 7ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (7th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ--ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ: ಪಾಡ್ಯ 04.43 ವರೆಗೂ ಇರುತ್ತದೆ ನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರವು ರಾತ್ರಿ 08.10 ವರೆಗೂ ಇರುತ್ತದೆ ನಂತರ ಆರ್ದ್ರೆ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.44

ರಾಹುಕಾಲ: 10.47 ರಿಂದ 12.23

ರಾಶಿಫಲ

ಸಿಂಹ

ಆಹಾರದ ಕಾರಣ ಆರೋಗ್ಯ ಕೆಡುತ್ತದೆ, ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಸಾಲದ ಬಾಧೆಯಿಂದ ಮುಕ್ತರಾಗುವಿರಿ. ನಿಮ್ಮ ಹಣ ಮರಳಿ ಕೈಸೇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧನೆ ನಿಮ್ಮಲ್ಲಿ ಸಂತೋಷ ಮತ್ತು ಹೆಮ್ಮೆ ಮೂಡಿಸುತ್ತದೆ. ಬಂಧು ಬಳಗದವರ ಜೊತೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ಅತೃಪ್ತಿ ಇರುತ್ತದೆ. ಕೋಪದಿಂದ ತಪ್ಪು ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗಿಗಳಿಗೆ ಸಂತೋಷದ ಸುದ್ಧಿ ಬರಲಿದೆ. ದಂಪತಿ ನಡುವೆ ಆತ್ಮೀಯತೆ ಇರುತ್ತದೆ. ಸರ್ಕಾರದ ಸಹಕಾರದಿಂದ ವ್ಯಾಪಾರವೊಂದನ್ನುಆರಂಭಿಸುವಿರಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಬೂದು

ಕನ್ಯಾ

ನಿಮ್ಮ ಮನದಾಸೆಗಳು ಸುಲಭವಾಗಿ ನೆರವೇರಲಿವೆ. ಆರೋಗ್ಯ ಸುಧಾರಿಸಲಿದೆ. ಹಣ ಗಳಿಕೆಯಲ್ಲಿ ಪ್ರಗತಿ ಕಂಡುಬರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸದೆ ಹೋದಲ್ಲಿ ಕೆಲಸ ಕಾರ್ಯದಲ್ಲಿ ಸುಲಭ ಯಶಸ್ಸು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ತೊಂದರೆ ಇರುತ್ತದೆ. ಕುಟುಂಬದ ಸದಸ್ಯರ ಜೊತೆಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ. ನೀವು ಕಂಡ ಕನಸುಗಳು ಈಡೇರಲಿವೆ. ಕಣ್ಣಿನ ತೊಂದರೆ ಇರಲಿದೆ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಸ್ವಂತ ಕೆಲಸ ಕಾರ್ಯಗಳ ವಿಚಾರದಲ್ಲಿ ಯಾರನ್ನೂ ನಂಬುವುದಿಲ್ಲ. ತಪ್ಪು ಮಾಡಿದಲ್ಲಿ ಒಪ್ಪಿಕೊಂಡು ಪಶ್ಚಾತಾಪ ಪಡುವಿರಿ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿ ದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು ನೈರುತ್ಯ

ಅದೃಷ್ಟದ ಬಣ್ಣ : ಆಕಾಶ ನೀಲಿ

ತುಲಾ

ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡ ಇರುತ್ತದೆ. ಕುಟುಂಬದ ಸದಸ್ಯರ ಸಹಾಯದಿಂದ ನೆಮ್ಮದಿಯ ಜೀವನ ನಡೆಸಬಹುದು. ಸಹೋದ್ಯೋಗಿಗಳಿಂದ ವಿಶೇಷ ಗೌರವಕ್ಕೆ ಪಾತ್ರರಾಗುವಿರಿ. ಸಂಗಾತಿಯ ಮನದ ಭಾವನೆಗಳನ್ನು ಗೌರವಿಸುವಿರಿ. ಆತುರದಿಂದ ಯಾವುದೇ ಕೆಲಸಕ್ಕೆ ಕೈ ಹಾಕದಿರಿ. ಸೋದರನ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಿರಿ. ದೀರ್ಘಕಾಲದಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆಯ ಬಗ್ಗೆ ಎಚ್ಚರಿಕೆ ಇರಲಿ. ಸಂಗಾತಿಯೊಡನೆ ಅನಾವಶ್ಯಕ ವಾದ ವಿವಾದ ಎದುರಾಗುತ್ತದೆ. ನಿಮ್ಮ ಸಹವರ್ತಿಗಳು ನಿಮ್ಮ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪ್ರಾಣಿ ಪಕ್ಷಿಗಳ ಬಗ್ಗೆ ಅನುಕಂಪ ತೋರುವಿರಿ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು; ಪಶ್ಚಿಮ

ಅದೃಷ್ಟದ ಬಣ್ಣ; ಕೆಂಪು

ವೃಶ್ಚಿಕ

ಅಪರಿಮಿತ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಆತ್ಮೀಯರ ಜೊತೆಗಿನ ಒಡನಾಟ ಸಂತಸ ನೀಡುತ್ತದೆ. ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಕುಟುಂಬದ ಹಿರಿಯರು ವಹಿಸಿಕೊಳ್ಳುತ್ತಾರೆ. ವಂಶಕ್ಕೆ ಸಂಬಂಧಿಸಿದ ವೃತ್ತಿಯನ್ನು ಅವಲಂಬಿಸುವಿರಿ. ಅಶಕ್ತರಿಗೆ ಸಹಾಯ ಮಾಡುವ ನಿಮ್ಮ ಮನಸ್ಸನ್ನು ಎಲ್ಲರೂ ಗೌರವಿಸುತ್ತಾರೆ. ಈಗ ಇರುವ ಮನೆಯನ್ನು ನವೀಕರಿಸುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಆತ್ಮೀಯರು ಸಹಕರಿಸುತ್ತಾರೆ. ಹಣದ ತೊಂದರೆ ಇರುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಸಂತಸ ಮನೆ ಮಾಡುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಹೆಚ್ಚಿನ ಆಸಕ್ತಿ ತೋರುತ್ತಾರೆ. ರುಚಿಯಾದ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ.

ಪರಿಹಾರ: ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಎಲೆ ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).