ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೀವನಶೈಲಿ ಬದಲಿಸಿಕೊಳ್ಳುವಿರಿ, ಕೆಲಸ ಕಾರ್ಯದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

ಜೀವನಶೈಲಿ ಬದಲಿಸಿಕೊಳ್ಳುವಿರಿ, ಕೆಲಸ ಕಾರ್ಯದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

7 ಜೂನ್‌ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (7th June 2024 Daily Horoscope).

ಜೀವನಶೈಲಿ ಬದಲಿಸಿಕೊಳ್ಳುವಿರಿ, ಕೆಲಸ ಕಾರ್ಯದಲ್ಲಿ ಶ್ರಮಕ್ಕೆ ತಕ್ಕ ಫಲ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ
ಜೀವನಶೈಲಿ ಬದಲಿಸಿಕೊಳ್ಳುವಿರಿ, ಕೆಲಸ ಕಾರ್ಯದಲ್ಲಿ ಶ್ರಮಕ್ಕೆ ತಕ್ಕ ಫಲ; ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(7th June 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ--ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ: ಪಾಡ್ಯ 04.43 ವರೆಗೂ ಇರುತ್ತದೆ ನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರವು ರಾತ್ರಿ 08.10 ವರೆಗೂ ಇರುತ್ತದೆ ನಂತರ ಆರ್ದ್ರೆ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.44

ರಾಹುಕಾಲ: 10.47 ರಿಂದ 12.23

ರಾಶಿಫಲ

ಧನಸ್ಸು

ಹಣಕಾಸಿನ ವಿಚಾರದಲ್ಲಿ ಎಲ್ಲರನ್ನೂ ಅನುಮಾನದಿಂದ ನೋಡುವಿರಿ. ಸೋಲನ್ನು ಒಪ್ಪದೆ ಗೆಲುವಿಗಾಗಿ ಶ್ರಮಿಸುವಿರಿ. ಆದಾಯಕ್ಕೆ ತಕ್ಕಂತ ಖರ್ಚು ಇರುತ್ತದೆ. ಭೂವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ತಾಯಿಗೆ ಅನಿರೀಕ್ಷಿತ ಧನಲಾಭವಿದೆ. ಅನಿವಾರ್ಯವಾಗಿ ನಿಮ್ಮ ಜೀವನಶೈಲಿಯನ್ನು ಬದಲಿಸುವಿರಿ. ಸ್ವಂತ ಖರ್ಚಿಗಿಂತಲೂ ಬೇರೆಯವರಿಗೆ ಮಾಡುವ ಖರ್ಚುಗಳು ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ತಮ್ಮ ಕಾರ್ಯ ಸಾಧಿಸಲಿದ್ದಾರೆ. ಪಾಲುದಾರಿಕೆ ವ್ಯಾಪಾರ ಆರಂಭಿಸುವ ಯೋಚನೆಗೆ ಚಾಲನೆ ದೊರೆಯುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ.

ಪರಿಹಾರ : ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೇಸರಿ

ಮಕರ

ಮನದಲ್ಲಿ ಹೊಸ ಆಸೆ ಆಕಾಂಕ್ಷೆಗಳು ಮೂಡುತ್ತವೆ. ನಿಮ್ಮಲ್ಲಿನ ಕ್ರೀಯಾಶೀಲ ನಡವಳಿಕೆ ಎಲ್ಲರ ಮನಗೆಲ್ಲುತ್ತದೆ. ಯಾವುದಾದರೊಂದು ಕೆಲಸದಲ್ಲಿ ನಿರತರಾಗುವಿರಿ. ಸ್ನೇಹಿತರ ಜೊತೆಗೂಡಿ ದೂರದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಮಕ್ಕಳ ಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ದೈಹಿಕ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳುವಿರಿ. ಮಾನಸಿಕ ಸದೃಢತೆ ದೊರೆಯುತ್ತದೆ. ಹೊಸ ಭೂಮಿ ಅಥವಾ ಮನೆಯನ್ನು ಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತಿ ಕಂಡುಬರುತ್ತದೆ. ಸ್ವಂತ ಉದ್ಧಿಮೆ ಆರಂಭಿಸುವ ಆಸೆ ನೆರವೇರುತ್ತದೆ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗಾಗಿ ಮನರಂಜನಾ ಕೂಟವನ್ನು ಆಯೋಜಿಸುವಿರಿ. ಸಂಗಾತಿಗೆ ದುಬಾರಿ ಉಡುಗೊರೆ ನೀಡುವಿರಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ಕುಂಭ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮಾನಸಿಕ ಒತ್ತಡದಿಂದ ದೂರವಾಗಲು ಯೋಗಾಭ್ಯಾಸವನ್ನು ಆಶ್ರಯಿಸುವಿರಿ. ಮುಖ್ಯವಾದ ವಿಚಾರಗಳ ಬಗ್ಗೆ ರಹಸ್ಯ ಕಾಪಾಡುವಿರಿ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ಗೊಂದಲದ ವಾತಾವರಣ ಇರಲಿದೆ. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಇರುತ್ತದೆ. ಪ್ರಯತ್ನಿಸಿದಲ್ಲಿ ಹಣವನ್ನು ಉಳಿಸಬಹುದು. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಹಟದ ಸ್ವಭಾವದಿಂದ ಆತ್ಮೀಯ ಗೆಳೆಯರಲ್ಲೊಬ್ಬರು ದೂರವಾಗುತ್ತಾರೆ. ಕೆಲವೊಂದು ತಪ್ಪು ತಿಳುವಳಿಕೆಗಳ ಕಾರಣ ಸಂಗಾತಿ ಜೊತೆ ಮನಸ್ತಾಪ ಉಂಟಾಗಲಿದೆ. ಉದ್ಯೋಗದ ಸಲವಾಗಿ ವಿದೇಶಕ್ಕೆ ತೆರಳುವಿರಿ. ಮಕ್ಕಳ ಜೊತೆ ಸಂತೋಷದಿಂದ ಬಾಳುವಿರಿ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ಮೀನ

ಮನಸ್ಸನ್ನು ಬದಲಿಸದೆ ಸತತ ಪ್ರಯತ್ನದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ಉತ್ತಮ ಸ್ನೇಹಿತರು ಸಿಗುತ್ತಾರೆ. ಕುಟುಂಬದವರ ಬೆಂಬಲ ನಿಮ್ಮ ಅತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅಪೂರ್ಣಗೊಂಡಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಅನಿರೀಕ್ಷಿತವಾಗಿ ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ಸಂಗಾತಿಯು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಮಕ್ಕಳೊಡನೆ ಪ್ರಯಾಣಕ್ಕೆ ಹೋಗುವಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಉದ್ಯೋಗ ಬದಲಾಯಿಸುವಿರಿ. ಕಮೀಷನ್ ಆಧಾರಿತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.

ಪರಿಹಾರ : ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ

ಅದೃಷ್ಟದ ಸಂಖ್ಯೆ 3

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).