ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ವ್ಯಾಪಾರದಲ್ಲಿ ಕಿರಿಕಿರಿ, ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಡುತ್ತದೆ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

Horoscope Today: ವ್ಯಾಪಾರದಲ್ಲಿ ಕಿರಿಕಿರಿ, ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಡುತ್ತದೆ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

7 ಮೇ 2024 ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (7th May 2024 Daily Horoscope).

ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (7th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಮಂಗಳವಾರ

ತಿಥಿ : ಚತುರ್ದಶಿ 10.45 ರವರೆಗೂ ಇದ್ದು ನಂತರ ಅಮಾವಾಸ್ಯೆ ಆರಂಭವಾಗುತ್ತದೆ.

ನಕ್ಷತ್ರ : ಅಶ್ವಿನಿ ನಕ್ಷತ್ರವು 03.02 ರವರೆಗೂ ಇದ್ದು ನಂತರ ಭರಣಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.56

ಸೂರ್ಯಾಸ್ತ: ಸಂಜೆ 06.37

ರಾಹುಕಾಲ: 03.29 ರಿಂದ 05.04

ರಾಶಿಫಲ

ಮೇಷ

ಸೋದರಿಗೆ ವಿವಾಹ ನಿಶ್ಚಯವಾಗುತ್ತದೆ. ಆತುರದ ನಿರ್ಧಾರದಿಂದ ಯಾವುದೇ ಕೆಲಸ ಆರಂಭಿಸದಿರಿ. ದಂಪತಿ ನಡುವಿನ ಮನಸ್ತಾಪ ಮರೆಯಾಗುತ್ತದೆ. ಉದ್ಯೋಗದಲ್ಲಿ ಅನಿರೀಕ್ಷತವಾಗಿ ಉನ್ನತ ಸ್ಥಾನ ಲಭಿಸುತ್ತದೆ. ಉದ್ಯೋಗದಲ್ಲಿನ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಹಣಕಾಸಿನ ಸಂಬಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರ ಎಲ್ಲರ ಮನಗೆಲ್ಲುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಕುಟುಂಬದವರ ಜೊತೆಯಲ್ಲಿ ವಿದೇಶಕ್ಕೆ ತೆರಳುವ ಅವಕಾಶ ಪಡೆಯುವಿರಿ. ಅಧಿಕಾರಿಗಳಿಗೆ ವಿರೋಧಿಗಳ ಉಪಟಳ ಇರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರ ವ್ಯವಹಾರವು ಮಂದಗತಿಯಲ್ಲಿ ಸಾಗುತ್ತದೆ. ಭವಿಷ್ಯದ ಜೀವನಕ್ಕಾಗಿ ಹಣ ಉಳಿತಾಯ ಮಾಡುವಿರಿ.

ಪರಿಹಾರ : ಬೆಳ್ಳಿ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಹಸಿರು

ವೃಷಭ

ಮಾನಸಿಕ ಒತ್ತಡವಿದ್ದರೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಆರಂಭಿಸಿದ ಕೆಲಸಗಳಲ್ಲಿ ಗೆಲ್ಲುವವರೆಗೂ ವಿರಮಿಸುವುದಿಲ್ಲ. ಅನಿವಾರ್ಯವಾಗಿ ನೌಕರಿಯನ್ನು ಬದಲಿಸುವಿರಿ. ರಕ್ತಕ್ಕೆ ಸಂಬಂಧಿಸಿದ ತೊಂದರೆ ನಿಮ್ಮನ್ನು ಕಾಡಬಹುದು. ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಿದರೆ ತೊಂದರೆಯೊಂದು ದೂರವಾಗುವುದು. ವಿದ್ಯಾರ್ಜನೆಯೊಂದನ್ನೇ ಗುರಿಯಾಗಿರಿಸಿಕೊಂಡು ಉನ್ನತ ಮಟ್ಟ ತಲುಪುವಿರಿ. ಹೆಣ್ಣುಮಕ್ಕಳ ಸಂಗೀತ ನಾಟ್ಯಾಭ್ಯಾಸವು ಸುಲಲಿತವಾಗಿ ಸಾಗುತ್ತದೆ. ಸ್ವಂತ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವ ಆಸೆ ಈಡೇರಲಿವೆ. ಕಣ್ಣಿನ ತೊಂದರೆ ಉಂಟಾಗಬಹುದು. ಹಳೆಯ ಒಪ್ಪಂದದಂತೆ ಪಾಲುದಾರಿಕೆ ವ್ಯಾಪಾರವೊಂದನ್ನು ಆರಂಭಿಸುವಿರಿ.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ನೀಲಿ

ಮಿಥುನ

ಮಾನಸಿಕ ಒತ್ತಡದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸು ಒಪ್ಪುವುದಿಲ್ಲ. ಮಕ್ಕಳ ಸಹಾಯದಿಂದ ನೌಕರಿಯನ್ನು ಬದಲಿಸುವಿರಿ. ಆರೋಗ್ಯದಲ್ಲಿನ ತೊಂದರೆ ನಿಮ್ಮನ್ನು ಕಾಡುತ್ತದೆ. ಕನಿಷ್ಠ ಪಕ್ಷ ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಿದಲ್ಲಿ ಸಮಸ್ಯೆಯೊಂದು ದೂರವಾಗಲಿದೆ. ವಿದ್ಯಾರ್ಜನೆಯು ಸುಲಲಿತವಾಗಿ ಸಾಲುತ್ತದೆ. ಸ್ವಂತ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವ ಸೂಚನೆಗಳಿವೆ. ಹಳೆಯ ಒಪ್ಪಂದದಂತೆ ಪಾಲುದಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಕ್ಕಳ ಜೀವನವನ್ನು ರೂಪಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಎಲ್ಲರ ಜೊತೆ ಅನಾವಶ್ಯಕವಾದ ಮನಸ್ತಾಪ ಉಂಟಾಗುತ್ತದೆ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೇರಳೆ

ಕಟಕ

ಒತ್ತಡದಲ್ಲಿಯೂ ಗೆಲ್ಲುವ ರಹಸ್ಯ ನಿಮಗೆ ತಿಳಿದಿರುತ್ತದೆ. ಕುಟುಂಬದ ಅತಿಮುಖ್ಯವಾದ ಕೆಲಸ ಕಾರ್ಯಗಳನ್ನುಮಾತ್ರ ಮಾಡುವಿರಿ. ಗೆಲ್ಲುವವರೆಗೂ ಸಹನೆ ಕಳೆದುಕೊಂಡು ಕೋಪದಿಂದ ಎಲ್ಲರೊಂದಿಗೆ ವರ್ತಿಸುವಿರಿ. ಉತ್ತಮ ಅವಕಾಶ ದೊರೆವ ಕಾರಣ ನೌಕರಿಯನ್ನು ಬದಲಿಸುವಿರಿ. ಕಿವಿಗೆ ಸಂಬಂಧಿಸಿದ ತೊಂದರೆ ಕಾಡುತ್ತದೆ. ಸಮಾಜ ಸೇವೆ ಮಾಡುವವರಿಗೆ ವಿಶೇಷವಾದ ಸವಲತ್ತು ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಇರುತ್ತಾರೆ. ಕುಟುಂಬದವರ ಜೊತೆಗೂಡಿ ಬೃಹತ್ ಯೋಜನೆಯನ್ನು ರೂಪಿಸುವಿರಿ. ಆತುರದಲ್ಲಿ ಆರಂಭಿಸುವ ಕೆಲಸವೊಂದರಲ್ಲಿ ತೊಂದರೆ ಎದುರಾಗಲಿದೆ. ಸಂಯಮದಿಂದ ಎಲ್ಲರ ಜೊತೆಯಲ್ಲಿ ಸಂತಸದಿಂದ ಬಾಳುವಿರಿ.

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಗುಲಾಬಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).