Horoscope Today: ದಾಂಪತ್ಯದಲ್ಲಿನ ವಿವಾದ ಬಗೆಹರಿಯುವುದು, ಭಾಷೆ ನೀಡುವ ಮುನ್ನ ಯೋಚಿಸಿ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ದಾಂಪತ್ಯದಲ್ಲಿನ ವಿವಾದ ಬಗೆಹರಿಯುವುದು, ಭಾಷೆ ನೀಡುವ ಮುನ್ನ ಯೋಚಿಸಿ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

Horoscope Today: ದಾಂಪತ್ಯದಲ್ಲಿನ ವಿವಾದ ಬಗೆಹರಿಯುವುದು, ಭಾಷೆ ನೀಡುವ ಮುನ್ನ ಯೋಚಿಸಿ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

ಮಾರ್ಚ್​ 8, ಶುಕ್ರವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (8 March 2024 Daily Horoscope).

ಮಾರ್ಚ್​ 8ರ ದಿನಭವಿಷ್ಯ
ಮಾರ್ಚ್​ 8ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (8 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಶುಕ್ರವಾರ

ತಿಥಿ : ತ್ರಯೋದಶಿ ರಾ.08.00 ರವರೆಗು ಇದ್ದು ಆನಂತರ ಚತುರ್ದಶಿ ಆರಂಭವಾಗುತ್ತದೆ.

ನಕ್ಷತ್ರ: ಶ್ರವಣ ನಕ್ಷತ್ರವು ಬೆ.08.23 ರವರೆಗೆ ಇರುತ್ತದೆ. ಆನಂತರ ಧನಿಷ್ಠ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.29

ಸೂರ್ಯಾಸ್ತ: ಸ.06.28

ರಾಹುಕಾಲ : ಬೆ.10.30 ರಿಂದ ಮ.12.00

ರಾಶಿ ಫಲಗಳು

ಧನಸ್ಸು

ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉದ್ಯೋಗದಲ್ಲಿ ಸಮಸ್ಯೆ ಉದ್ಭವಿಸಿದರೂ ಅದರಿಂದ ಪಾರಾಗುವಿರಿ. ಹೆಚ್ಚಿನ ಹಣದ ನಿರೀಕ್ಷೆಯಿಂದ ಉದ್ಯೋಗವನ್ನು ಬದಲಿಸುವಿರಿ. ವಿದ್ಯಾರ್ಥಿಗಳು ವಿಶೇಷವಾದ ಜ್ಞಾನಾರ್ಜನೆಗಾಗಿ ವಿದೇಶಕ್ಕೆ ತೆರಳುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಗಡಿಬಿಡಿಯ ನಿರ್ಧಾರಗಳನ್ನು ಕೈಗೊಳ್ಳದಿರಿ. ಹಣಕಾಸಿನ ವ್ಯವಹಾರಗಳ ಬಗ್ಗೆ ದೃಢವಾದ ನಿಶ್ಚಯ ತೆಗೆದುಕೊಳ್ಳುವಿರಿ. ಮನೆಯಲ್ಲಿ ಶಾಂತಿ ಹಾಗೂ ಸಾಮರಸ್ಯಕ್ಕೆ ಕಾರಣರಾಗುವಿರಿ. ಕೋಪವನ್ನು ಮರೆತರೆ ಆತ್ಮೀಯರ ಸಹವಾಸ ದೊರೆಯುತ್ತದೆ. ವೈವಾಹಿಕ ಜೀವನದಲ್ಲಿನ ವಿವಾದ ಬಗೆಹರಿಯುತ್ತದೆ. ಮನೆಯನ್ನು ಕೂಳ್ಳುವ ಸಾಧ್ಯತೆ ಇದೆ. ಸೋದರಿಯಿಂದ ಹಣದ ಸಹಾಯ ದೊರೆಯುತ್ತದೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮಕರ

ಆಶಾವಾದಿಗಳಾದ ಕಾರಣ ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಬದಲಾದ ಉದ್ಯೋಗದಲ್ಲಿ ಉಜ್ವಲವಾದ ಭವಿಷ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗಳು ಸಾಫಲ್ಯಗೊಳ್ಳುತ್ತವೆ. ವಿದ್ಯಾರ್ಥಿಗಳು ಭರವಸೆಗಳು ಮತ್ತು ಆಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಆರ್ಥಿಕ ಪರಿಸ್ಥಿತಿ ಕ್ರಮೇಣವಾಗಿ ಸಹಜಸ್ಥಿತಿಗೆ ಮರಳುತ್ತದೆ. ದಿನ ನಿತ್ಯದ ಯೋಜನೆ ರೂಪಿಸಲು ಆತ್ಮೀಯರೊಬ್ಬರು ಸಹಾಯ ಮಾಡುತ್ತಾರೆ. ಸಂಗಾತಿಯೊಡನೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಕುಟುಂಬದೊಂದಿಗೆ ಕಿರುಪ್ರವಾಸ ಕೈಗೊಳ್ಳುವಿರಿ. ಮಕ್ಕಳ ವಿಚಾರದಲ್ಲಿನ ಒತ್ತಡ ದೂರವಾಗುವುದು. ಮನೆಯಲ್ಲಿ ಆಂತರಿಕ ಬದಲಾವಣೆಯನ್ನು ಮಾಡುವಿರಿ. ವಾಹನವನ್ನು ಬದಲಾವಣೆ ಮಾಡುವಿರಿ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಕುಂಭ

ನಿಮ್ಮಲ್ಲಿ ವಿಶೇಷವಾದ ಚೈತನ್ಯ ಮನೆಮಾಡಿರುತ್ತದೆ. ಕುಟುಂಬದಲ್ಲಿನ ನಿರೀಕ್ಷೆಗಳು ಕಾರ್ಯರೂಪಕ್ಕೆ ಬರಲಿವೆ. ಉದ್ಯೋಗದಲ್ಲಿನ ಜಾವಾಬ್ದಾರಿ ಪೂರೈಸಲು ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಕುಟುಂಬದ ಹಿರಿಯರ ಸೇವಾಮನೋಭಾವ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕಟ್ಟಿದ ಕನಸು ನನಸಾಗಲಿದೆ. ಸಹೋದ್ಯೋಗಿಯೊಬ್ಬರು ಅಮೂಲ್ಯವಾದ ಉಡುಗೊರೆ ನೀಡಲಿದ್ದಾರೆ. ಆತ್ಮೀಯರ ಜೊತೆಯಲ್ಲಿ ಉದ್ಧಿಮೆಯೊಂದನ್ನು ಆರಂಭಿಸಲಿದ್ದೀರಿ. ಚೆನ್ನಾಗಿ ಮಾತನಾಡಿ ಸ್ವಂತ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಯಾರಿಗಾದರೂ ಭಾಷೆ ನೀಡುವ ಮೊದಲು ಯೋಚಿಸಿ ಮತ್ತು ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ. ಮನೆಯ ದುರಸ್ತಿಗೆ ಹಣದ ಕೊರತೆ ಇರಲಿದೆ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಮೀನ

ಕುಟುಂಬದಲ್ಲಿ ಪರಸ್ಪರ ಆತ್ಮೀಯತೆ ಇರುತ್ತದೆ. ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚುತ್ತದೆ. ವ್ಯಾಪಾರ ವ್ಯವಹಾರದಲ್ಲಿ ತೃಪ್ತಿ ಮತ್ತು ಉತ್ತಮ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಮನರಂಜನೆಯಲ್ಲಿ ಹೆಚ್ಚು ಸಮಯ ಕಳೆಯಲಿದ್ದಾರೆ. ಅನಾವಶ್ಯಕವಾಗಿ ಖರ್ಚುವೆಚ್ಚಗಳು ಹೆಚ್ಚಲಿವೆ. ಕುಟುಂಬದ ಸದಸ್ಯರ ಭಾವನೆಗಳನ್ನು ನೋಯಿಸದಿರಿ. ಕೋಪವನ್ನು ನಿಯಂತ್ರಿಸಿ ಶಾಂತಿ ಸಂಯಮದಿಂದ ವರ್ತಿಸಿ. ಕುಟುಂಬದವರ ಜೊತೆಯಲ್ಲಿ ಯಾತ್ರಾ ಸ್ಥಳಕ್ಕೆ ಭೇಟಿ ನೀಡಬಹುದು. ಪ್ರಯಾಣದಿಂದ ಲಾಭವಿದೆ. ಸ್ವಂತ ವಾಹನಲಾಭವಿದೆ. ಮನೆಯಲ್ಲಿನ ಸಾಕು ಪ್ರಾಣಿಗಳ ಬಗ್ಗೆ ಎಚ್ಚರಿಕೆ ಇರಲಿ. ಅಜೀರ್ಣದ ಸಮಸ್ಯೆ ಬಹುವಾಗಿ ಕಾಡಲಿದೆ. ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಬೆಳ್ಳಿಯ ಬಣ್ಣ

------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.