Horoscope Today: ಕುಟುಂಬದಲ್ಲಿ ಶಾಂತಿ ಸಾಮರಸ್ಯ, ವಿದ್ಯಾರ್ಥಿಗಳಿಗೆ ಶುಭ ಫಲ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಕುಟುಂಬದಲ್ಲಿ ಶಾಂತಿ ಸಾಮರಸ್ಯ, ವಿದ್ಯಾರ್ಥಿಗಳಿಗೆ ಶುಭ ಫಲ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

Horoscope Today: ಕುಟುಂಬದಲ್ಲಿ ಶಾಂತಿ ಸಾಮರಸ್ಯ, ವಿದ್ಯಾರ್ಥಿಗಳಿಗೆ ಶುಭ ಫಲ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

8 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (8th May 2024 Daily Horoscope).

ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (8th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ: ಅಮಾವಾಸ್ಯೆ ಬೆಳಗ್ಗೆ 08.42 ರವರೆಗೂ ಇದ್ದು ನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ: ಭರಣಿ ನಕ್ಷತ್ರವು 01.49 ರವರೆಗೂ ಇದ್ದು ನಂತರ ಕೃತ್ತಿಕಾ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ05.56

ಸೂರ್ಯಾಸ್ತ: ಸಂಜೆ 06.35

ರಾಹುಕಾಲ: 12.20 ರಿಂದ 01.55

ರಾಶಿಫಲ

ಮೇಷ

ಕೋಪಿಷ್ಠರಾದರೂ ಕುಟುಂಬದವರ ಜೊತೆಯಲ್ಲಿ ಶಾಂತಿಯಿಂದ ವರ್ತಿಸುವಿರಿ. ಬಂಧುಬಳಗದವರ ಆಗಮನದಿಂದ ಖರ್ಚು ವೆಚ್ಚಗಳು ಹೆಚ್ಚಲಿದೆ. ನಿಮ್ಮನ್ನು ಹೊಗಳಿ ಕೆಲಸ ಮಾಡಿಸಿಕೊಳ್ಳುವ ಜನರಿದ್ದಾರೆ ಎಚ್ಚರಿಕೆ ಇರಲಿ. ಅವಶ್ಯಕತೆ ಇದ್ದಷ್ಟು ಮಾತನಾಡಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿ ಪಡೆಯುವಿರಿ. ಮನೆಯ ಹಣದ ಅವಶ್ಯಕತೆ ಹೆಚ್ಚುವ ಕಾರಣ ಮಾನಸಿಕ ನೆಮ್ಮದಿ ಇರುವುದಿಲ್ಲ. ಕಷ್ಟಪಷ್ಟು ಕೂಡಿಟ್ಟ ಹಣವನ್ನು ಖರ್ಚು ಮಾಡುವಿರಿ. ವಿದ್ಯಾರ್ಥಿಗಳ ಸಾಧನೆ ಕುಟುಂಬದಲ್ಲಿ ಸಂತಸ ಮೂಡಿಸುತ್ತದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ತೋರುವಿರಿ. ಮಕ್ಕಳಿಗೆ ಬೆಳ್ಳಿ ಅಥವ ಚಿನ್ನದ ಒಡವೆಗಳ ಉಡುಗೊರೆ ನೀಡುವಿರಿ. ಅನಾವಶ್ಯಕ ಓಡಾಟ ಇರುತ್ತದೆ.

ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಆಕಾಶ ನೀಲಿ

ವೃಷಭ

ಹಿರಿಯರಿಂದ ಸ್ಫೂರ್ತಿಗೊಂಡು ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉತ್ತಮ ಆರೋಗ್ಯಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಖರ್ಚು ಹೆಚ್ಚಾಗುವ ಕಾರಣ ಆದಾಯದಲ್ಲಿ ಕೊರತೆ ಕಂಡು ಬರುತ್ತದೆ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳು ಹೊಸ ಆಸೆಗೆ ಕಾರಣವಾಗುತ್ತದೆ. ಹಿರಿಯರ ಆರೋಗ್ಯ ಸುಧಾರಿಸಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಕುಟುಂಬದಲ್ಲಿ ಶಾಂತಿ ಸಾಮರಸ್ಯ ನೆಲೆಸಿರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಭಕ್ಕೆ ಕೊರತೆ ಇರದು. ಒತ್ತಡಕ್ಕೆ ಮಣಿದು ಷೇರಿನಲ್ಲಿ ತೊಡಗಿಸಿದ ಹಣ ಉಪಯೋಗಕ್ಕೆ ಬರುತ್ತದೆ.

ಪರಿಹಾರ : ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 3

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಕೆಂಪು

ಮಿಥುನ

ಸ್ನೇಹ ಪ್ರೀತಿಗೆ ಸೋಲುವಿರಿ. ತೆಗೆದುಕೊಳ್ಳುವ ತೀರ್ಮಾನವನ್ನು ಬದಲಿಸುವಿರಿ. ಜನ ಸೇವೆ ಮಾಡುವ ಆಸೆ ಇರುತ್ತದೆ. ದೃಢವಾದ ತೀರ್ಮಾನವನ್ನು ತೆಗೆದುಕೊಂಡಲ್ಲಿ ಯಾವುದೇ ತೊಂದರೆ ಎದುರಾಗದು. ಕುಟುಂಬದಲ್ಲಿ ಪ್ರೀತಿ ವಿಶ್ವಾಸದ ವಾತಾವರಣವಿರುತ್ತದೆ. ಸ್ವಂತಕ್ಕಾಗಿ ಹೆಚ್ಚಿನ ಹಣ ಖರ್ಚಾಗಲಿದೆ. ಬಡವರಿಗೆ ನೀಡುವಷ್ಟು ಹಣ ಉಳಿಸಲು ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡು ಬರುತ್ತದೆ. ಹೆಚ್ಚಿನ ಪ್ರಯತ್ನದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯಲಿವೆ. ಸಾಲದ ವ್ಯವಹಾರ ಮಾಡದಿರಿ. ಸಂಘ ಸಂಸ್ಥೆಯ ಒಡೆತನ ನಿಮಗೆ ಲಭಿಸಲಿದೆ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಎಲೆ ಹಸಿರು

ಕಟಕ

ಯಾರೊಬ್ಬರ ಸಹಾಯವಿಲ್ಲದೆ ಸ್ವತಂತ್ರವಾಗಿ ಕೆಲಸವನ್ನು ಮಾಡಬಲ್ಲ ಚಾತುರ್ಯ ಇರುತ್ತದೆ. ಯೋಚಿಸದೆ ತೆಗೆದುಕೊಳ್ಳುವ ತೀರ್ಮಾನಗಳಿಂದ ತೊಂದರೆ ಉಂಟಾಗಲಿದೆ. ಅವಸರದ ನಿರ್ಧಾರಗಳು ನಿಮ್ಮ ಸಾಧನೆಗೆ ಅಡ್ಡಗಾಲಾಗುತ್ತದೆ. ಕೆಲಸ ಕಾರ್ಯದ ಬಗ್ಗೆ ಕೀಳರಿಮೆ ಇರುವುದಿಲ್ಲ. ಸಮಾಜದಲ್ಲಿ ಉನ್ನತ ಗೌರವ ದೊರೆಯುತ್ತವೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣವಿರುತ್ತದೆ. ಸಂಗಾತಿಯೊಡನೆ ಸುಖಮಯ ಜೀವನ ನಡೆಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡು ಬಾರದು. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯ ಬಗ್ಗೆ ವಿಶ್ವಾಸವಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸಾಲದ ವ್ಯವಹಾರದಲ್ಲಿ ಒತ್ತಡ ಹೆಚ್ಚುತ್ತದೆ.

ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.