ಕನ್ನಡ ಸುದ್ದಿ  /  Astrology  /  Horoscope Today Astrology Prediction 9 March 2024 Sagittarius Capricorn Aquarius Pisces Daily Horoscope Sts

Horoscope Today: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ, ದಂಪತಿಗಳ ನಡುವೆ ವಿರಸ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ

ಮಾರ್ಚ್​ 9, ಶನಿವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (9 March 2024 Daily Horoscope).

ಮಾರ್ಚ್​ 9ರ ದಿನಭವಿಷ್ಯ
ಮಾರ್ಚ್​ 9ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಶನಿವಾರ

ತಿಥಿ : ಚತುರ್ದಶಿ ಸ.05.44 ರವರೆಗು ಇದ್ದು ಆನಂತರ ಅಮಾವಾಸ್ಯೆ ಆರಂಭವಾಗುತ್ತದೆ.

ನಕ್ಷತ್ರ : ಧನಿಷ್ಠ ನಕ್ಷತ್ರವು ಬೆ.06.55 ರವರೆಗೆ ಇರುತ್ತದೆ. ಉಪರಿ ಶತಬಿಷ ನಕ್ಷತ್ರ ಇರುತ್ತದೆ.

ಸೂರ್ಯೋದಯ: ಬೆ.06.29

ಸೂರ್ಯಾಸ್ತ: ಸ.06.28

ರಾಹುಕಾಲ : ಬೆ.09.00 ರಿಂದ ಬೆ.10.30

ರಾಶಿ ಫಲಗಳು

ಧನಸ್ಸು

ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವಿರಿ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಸಮಸ್ಯೆಗಳಿಗೆ ಹೆದರದೆ ಪರಿಹಾರವನ್ನು ಕಂಡುಹಿಡಿಯುವಿರಿ. ಉದ್ಯೋಗದಲ್ಲಿ ಮರೆಯಾದ ಸಹಬಾಳ್ವೆ ಸಹಕಾರ ಮರಳುತ್ತದೆ. ಹಣಕಾಸಿನ ಕೊರತೆ ಕಾಣದು. ವ್ಯಾಪಾರಸ್ಥರು ಹೆಚ್ಚಿನ ಪರಿಶ್ರಮದಿಂದ ಸ್ಥಿರವಾದ ಆದಾಯ ಪಡೆಯುತ್ತಾರೆ. ನಿಮ್ಮಲ್ಲಿರುವ ವಿಶಾಲ ಮನೋಭಾವನೆ ಕೆಲವರ ಜೀವನ ರೂಪಿಸುತ್ತದೆ. ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರವು ಅವರ ಭವಿಷ್ಯವನ್ನು ರೂಪಿಸುತ್ತದೆ. ಉದ್ಯೋಗ ನಿಮಿತ್ತ ವಿದೇಶಪ್ರವಾಸ ಮಾಡಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಫಲರಾಗುವಿರಿ. ದುಡುಕುತನದ ಮಾತು ವಿವಾದಕ್ಕೆ ಕಾರಣವಾಗಬಲ್ಲದು. ಬಂಧು ಬಳಗದವರಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಮಕರ

ಕುಟುಂಬದ ಕೆಲಸಗಳ ಬಗ್ಗೆ ಗಮನ ನೀಡುವುದಿಲ್ಲ. ಉದ್ಯೋಗದಲ್ಲಿನ ನಿಧಾನಗತಿಯ ಪ್ರಗತಿ ಬೇಸರ ಮೂಡಿಸುತ್ತದೆ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಿಸುವ ನಿರ್ಧಾರ ತೆಗೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳು ಉತ್ತಮ ಆದಾಯದೊಂದಿಗೆ ನಡೆಯಲಿವೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉತ್ತಮ ಪ್ರಗತಿಯನ್ನು ಗಳಿಸುವರು. ವ್ಯವಸಾಯಕ್ಕೆ ಸಹಾಯಕವಾದ ಪರಿಕರಗಳ ಸರಬರಾಜಿನಲ್ಲಿ ಲಾಭವಿದೆ. ಸೋದರನಿಗೆ ವಿವಾಹ ನಿಶ್ಚಯವಾಗಲಿದೆ. ಕುಟುಂಬದ ದಿನನಿತ್ಯದ ನಿರ್ವಹಣೆ ನಿಮ್ಮ ಪಾಲಾಗುತ್ತದೆ. ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ. ಬೆಲೆಬಾಳುವ ವಸ್ತುಗಳಿಗೆ ಹಣ ಖರ್ಚಾಗುತ್ತದೆ. ಬರಿ ಮಾತಿನಿಂದ ಕೆಲಸ ಸಾಧಿಸುವಿರಿ. ಸಂಗೀತ ನಾಟ್ಯಗಳಲ್ಲಿ ಆಸಕ್ತಿ ಮೂಡುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಕುಂಭ

ಕುಟುಂಬದ ಒಗ್ಗಟ್ಟಿನಲ್ಲಿ ಬಿರುಕು ಮೂಡಲಿದೆ. ಸಹನೆಯಿಂದ ವಿಚಾರ ವಿನಿಮಯ ಮಾಡಿಕೊಂಡಲ್ಲಿ ಸಂತೋಷ ಮರುಕಳಿಸುತ್ತದೆ. ಉದ್ಯೋಗದಲ್ಲಿನ ಬದಲಾವಣೆಗಳು ಹೊಸ ನಿರೀಕ್ಷೆಯನ್ನು ಮೂಡಿಸುತ್ತವೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆದಾಯ ದೊರೆಯದು. ಮನದ ಯೋಜನೆಯನ್ನು ಯಾರಿಗೂ ಹೇಳುವುದಿಲ್ಲ. ಪಾಲುಗಾರಿಕೆಯ ವ್ಯವಹಾರದಲ್ಲಿ ಬಂಡವಾಳ ಹೂಡದಿರಿ. ಕುಟುಂಬದ ಆಸ್ತಿಯ ವಿವಾದ ನಿರ್ಣಾಯಕ ಹಂತ ತಲುಪಲಿದೆ. ವಿದ್ಯಾರ್ಥಿಗಳು ಚುರುಕಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಕಾರಣವಿಲ್ಲದೆ ದಂಪತಿಗಳ ನಡುವೆ ವಿರಸ ಉಂಟಾಗುತ್ತದೆ. ಹೊಸ ವಾಹನವನ್ನು ಕೊಳ್ಳುವಿರಿ. ಕುಟುಂಬದಲ್ಲಿ ಮಂಗಳಕಾರ್ಯಕ್ಕೆ ಸಹಕಾರ ನೀಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿಮಿಶ್ರಿತಬಿಳಿ ಬಣ್ಣ

ಮೀನ

ನೆಮ್ಮದಿಯಿಂದ ದಿನ ಕಳೆಯುವಿರಿ. ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ಬಗೆಹರಿಯುವುದು. ಉದ್ಯೋಗದಲ್ಲಿನ ಬದಲಾವಣೆಗಳು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಆಪ್ತರ ಸಹಕಾರ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಬರಿ ಮಾತಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲಬಲ್ಲಿರಿ. ಸಮಯದ ಅಭಾವದಿಂದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಮಕ್ಕಳ ಸಹಾಯದಿಂದ ಆರ್ಥಿಕ ಪ್ರಗತಿ ಸಾದಿಸುತ್ತಾರೆ. ವಿದ್ಯಾರ್ಥಿಗಳು ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಮಾಡಲಿದ್ದಾರೆ. ಯಂತ್ರ ವಾಹನಗಳ ವ್ಯಾಪಾರ ವಹಿವಾಹಿಟಿನಿಂದ ಲಾಭವಿದೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಬೇರೆಯವರ ಹಣಕಾಸಿನ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ ತೊಂದರೆ ಅನುಭವಿಸುವಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ :7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಹಾಲಿನ ಬಣ್ಣ

-----------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).