Horoscope Today: ಅಪರಿಚಿತರೊಂದಿಗೆ ಹಣದ ವ್ಯವಹಾರ ಸಲ್ಲ, ಸಂತೋಷಕೂಟ ಏರ್ಪಡಿಸುವಿರಿ; ಸಿಂಹದಿಂದ ವೃಶ್ಚಿಕರಾಶಿವರೆಗಿನ ರಾಶಿಭವಿಷ್ಯ
9 ಏಪ್ರಿಲ್ 2024 ಮಂಗಳವಾರ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದಾನೆ. ಆಯಾ ರಾಶಿಗಳ ಜನರು ಮಾಡುವ ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳ ಫಲಗಳು ಸಿಗುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನ ಭವಿಷ್ಯ ಇಲ್ಲಿದೆ. (9th April 2024 Daily Horoscope)
ಇಂದಿನ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಸಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀಲವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th April 2024 Horoscope)
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಮಂಗಳವಾರ
ತಿಥಿ: ಪಾಡ್ಯ ರಾತ್ರಿ 10.01ರವರೆಗೂ ಇರುತ್ತದೆ. ಅನಂತರ ಬಿದಿಗೆ ಆರಂಭವಾಗುತ್ತದೆ.
ನಕ್ಷತ್ರ: ರೇವತಿ ನಕ್ಷತ್ರವು ಬೆಳಿಗ್ಗೆ 8.22ರವರೆಗೂ ಇರುತ್ತದೆ. ಅನಂತರ ಅಶ್ವಿನಿ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆಳಿಗ್ಗೆ 6.10
ಸೂರ್ಯಾಸ್ತ: ಸಂಜೆ 6.31
ರಾಹುಕಾಲ: ಬೆಳಿಗ್ಗೆ 3.00 ರಿಂದ ಮಧ್ಯಾಹ್ನ 4.30
ಸಿಂಹ
ಎಂದಿನಂತೆ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಕಲಿಕೆಯಲ್ಲಿ ಮುನ್ನಡೆಯುತ್ತಾರೆ. ಮಗಳು ಅಥವಾ ಸೋದರಿಗೆ ಪ್ರಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸಮಾಜದ ಮುಖ್ಯಸ್ಥರ ಸ್ಥಾನ ದೊರೆಯಲಿದೆ. ಉದ್ಯೋಗದಲ್ಲಿನ ಬದಲಾವಣೆಯನ್ನು ನಿಮ್ಮ ಅನುಕೂಲಕ್ಕಾಗಿ ಬದಲಾಯಿಸುವಿರಿ. ಕುಟುಂಬಕ್ಕೆ ಸೇರಿದ ವಿವಾದಿತ ಆಸ್ತಿ ಮರಳಿ ಕೈ ಸೇರುತ್ತದೆ. ಧಾರ್ಮಿಕ ಕಾರ್ಯವೊಂದರ ನೇತೃತ್ವ ವಹಿಸುವಿರಿ. ಜೀವನಾಧಾರಕ್ಕಾಗಿ ಸಣ್ಣ ಬಂಡವಾಳದ ವ್ಯಾಪಾರವನ್ನುಆರಂಭಿಸುವಿರಿ. ಉದ್ಯೋಗದಲ್ಲಿ ಉನ್ನತಾಧಿಕಾರಿಗಳ ಸಹಾಯ ಸಹಕಾರ ದೊರೆಯುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭಾಂಶ ದೊರೆಯುತ್ತದೆ. ಹೆಣ್ಣುಮಕ್ಕಳಿಗೆ ಸಂತಸದ ವಾರ್ತೆಯೊಂದು ಕೇಳಿ ಬರಲಿದೆ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ : ಕೇಸರಿ ಬಣ್ಣ
ಕನ್ಯಾ
ಸಮಾಜದಲ್ಲಿ ವಿಶೇಷ ಗೌರವ ಮತ್ತು ಸ್ಥಾನಮಾನ ಲಭಿಸುತ್ತದೆ. ಗಲಿಬಿಲಿಯ ಮನಸ್ಸಿನ ನಡುವೆಯೂ ಕೆಲಸ ಕಾರ್ಯದಲ್ಲಿ ತೊಂದರೆ ಕಂಡುಬರದು. ಉತ್ತಮ ಆದಾಯ ಇದ್ದರೂ ಖರ್ಚು ವೆಚ್ಚಗಳು ನಿಯಂತ್ರಿಸಲಾರಿರಿ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಲಿದ್ದಾರೆ. ತಂದೆಯವರ ಜೊತೆಯಲ್ಲಿ ಮಾಡುವ ವ್ಯಾಪಾರದಲ್ಲಿ ಹೇರಳ ಲಾಭ ದೊರೆಯುತ್ತದೆ. ಕಾನೂನಿಗೆ ಸಂಬಂಧಿಸಿದ ಉದ್ಯೋಗವನ್ನು ಆಯ್ಕೆ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಅಪರಿಚಿತರೊಂದಿಗೆ ಹಣದ ವ್ಯವಹಾರವನ್ನು ಮಾಡದಿರಿ. ಕೃಷಿಯಾಧಾರಿತ ಕೆಲಸ ಕಾರ್ಯಗಳಲ್ಲಿ ಲಾಭವಿದೆ. ದೃಷ್ಟಿದೋಷದಿಂದ ಬಳಲುವಿರಿ. ಸಾಲದ ವ್ಯವಹಾರ ಬೇಡ. ಹೊಸ ವಾಹನ ಕೊಳ್ಳುವಿರಿ.
ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ತುಲಾ
ಅನುಕೂಲತೆಗಳ ನಡುವೆಯೂ ಆತಂಕದಿಂದ ದಿನ ಕಳೆಯುವಿರಿ. ಮಕ್ಕಳ ಆಟ ಪಾಠಗಳಿಂದ ಮನಸ್ಸಿಗೆ ಸಂತೋಷ ಉಂಟಾಗಲಿದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಮನಸ್ಸಿನಲ್ಲಿ ತಳಮಳ ಇರುತ್ತದೆ. ಸಂಗಾತಿಯ ಮಾರ್ಗದರ್ಶನದಲ್ಲಿ ಸುಖ ಜೀವನ ನಡೆಸುವಿರಿ. ವೃತ್ತಿಜೀವನದಲ್ಲಿನ ಸವಾಲನ್ನು ಕಾನೂನಿನ ಮೂಲಕ ಗೆಲ್ಲುವಿರಿ. ಧಾರ್ಮಿಕ ಕಾರ್ಯಕ್ರಮದ ಕಾರಣ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಆದಾಯದಲ್ಲಿ ತೊಂದರೆ ಬಾರದು. ಹಣ ಉಳಿತಾಯದ ಬಗ್ಗೆ ಯೋಚಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಇರುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಕುಟುಂಬದಲ್ಲಿ ಸಂತೋಷಕೂಟವನ್ನು ಏರ್ಪಡಿಸುವಿರಿ.
ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕೆಂಪುಬಣ್ಣ
ವೃಶ್ಚಿಕ
ಕುಟುಂಬದ ಹಿರಿಯರ ಮನಸ್ಥಿತಿಯನ್ನು ಅರಿತುಕೊಂಡು ನಡೆಯುವಿರಿ. ನಿಮ್ಮ ಮನದ ಆಸೆ ಆಕಾಂಕ್ಷೆಗಳು ಈಡೇರಲಿವೆ. ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳಿಗೆ ಅಧ್ಯಯನ ಮುಗಿವ ಮುನ್ನವೇ ಉದ್ಯೋಗ ದೊರೆಯಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಗಣ್ಯ ವ್ಯಕ್ತಿಗಳ ಆಸರೆ ನಿಮಗೆ ದೊರೆಯುತ್ತದೆ. ರಾಜಕೀಯದಲ್ಲಿ ನಿರೀಕ್ಷಿತ ಸ್ಥಾನಮಾನ ದೊರೆಯುತ್ತದೆ. ತಂದೆಯವರಿಗೆ ವಂಶದ ಆಸ್ಥಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಯಾರೊಂದಿಗೂ ಸಿಡುಕಿನಿಂದ ವರ್ತಿಸದಿರಿ.
ಪರಿಹಾರ: ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 85468 65832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಗೌರಿವಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).