ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ, ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವು ನಿಶ್ಚಿತ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ, ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವು ನಿಶ್ಚಿತ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ, ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವು ನಿಶ್ಚಿತ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಜುಲೈ 9ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ).

ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ, ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವು ನಿಶ್ಚಿತ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ, ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವು ನಿಶ್ಚಿತ; ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ದಿನಪೂರ್ತಿ ಚೌತಿ ಇರುತ್ತದೆ

ನಕ್ಷತ್ರ: ಆಶ್ಲೇಷ ನಕ್ಷತ್ರವು ಬೆಳಗ್ಗೆ 07.34 ರವರೆಗೂ ಇದ್ದು ನಂತರ ಮಖ ನಕ್ಷತ್ರ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 05.59

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: 03.40 ರಿಂದ 05.16

ರಾಶಿಫಲ

ಮೇಷ

ನಿಮ್ಮ ಮಕ್ಕಳು ಉತ್ತಮ ನಡೆನುಡಿಯಿಂದ ಸಮಾಜದಲ್ಲಿ ನಿಮಗೆ ವಿಶೇಷ ಗೌರವ ತಂದುಕೊಡುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತಕ್ಕಂತಹ ಉದ್ಯೋಗ ದೊರೆಯುತ್ತದೆ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಅಭ್ಯಾಸದಲ್ಲಿ ನಿರತರಾಗುತ್ತಾರೆ. ಉದ್ಯೋಗದಲ್ಲಿ ಉತ್ತಮ ಅಧಿಕಾರ ದೊರೆಯುತ್ತದೆ. ತಂದೆ ಮಕ್ಕಳ ನಡುವೆ ವಿಶೇಷ ಅನುಬಂಧ ಇರುತ್ತದೆ. ಕುಟುಂಬದ ಸಂತಸದಲ್ಲಿ ಎಲ್ಲರ ಕೊಡುಗೆ ದೊರೆಯುತ್ತದೆ. ಉತ್ತಮ ಆದಾಯ ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಹೆಣ್ಣುಮಕ್ಕಳು ಜೀವನದಲ್ಲಿ ಉತ್ತಮ ಸೌಲಭ್ಯಗಳಿಂದ ಬಾಳುತ್ತಾರೆ. ಕುಟುಂಬದ ಹಣಕಾಸಿನ ಜವಾಬ್ದಾರಿಯನ್ನು ಗೃಹಿಣಿಯರು ನಿರ್ವಹಿಸುವಲ್ಲಿ ಯಶಸ್ಸನ್ನು ಕಾಣುತ್ತಾರೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಚಿಂತೆ ಇಲ್ಲದೆ ಸಂತಸದಿಂದ ಬಾಳುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೆಂಪು

ವೃಷಭ

ನವ ವಿವಾಹಿತರ ಜೀವನವು ಸುಖ ಸಂತೋಷದಿಂದ ಕೂಡಿರುತ್ತದೆ. ದಂಪತಿ ಮಧ್ಯೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ. ಮಕ್ಕಳ ಬಗ್ಗೆ ಅವರ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವಿರಿ. ನಿಮ್ಮ ಮಕ್ಕಳಿಗೆ ಉದ್ಯೋಗದಲ್ಲಿ ವಿಶೇಷ ಗೌರವ ಲಭಿಸುತ್ತದೆ. ಹೆಣ್ಣುಮಕ್ಕಳ ದಾಂಪತ್ಯದಲ್ಲಿ ಅನಾವಶ್ಯಕ ವಾದ ವಿವಾದಗಳು ಕಂಡು ಬರಲಿವೆ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒಲವು ತೋರುವಿರಿ. ತಂದೆಯವರ ಉದ್ಯೋಗದಲ್ಲಿ ವಿಶೇಷ ಬದಲಾವಣೆಗಳು ಕಂಡು ಬರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ಗಣ್ಯ ವ್ಯಕ್ತಿಗಳ ಸಹಾಯ ಸದಾ ಕಾಲ ನಿಮಗಿರುತ್ತದೆ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಿತ್ತಳೆ

ಮಿಥುನ

ನಿಮ್ಮ ಬುದ್ಧಿವಂತಿಕೆಯಿಂದ, ಎದುರಾಗುವ ಆಪತ್ತಿನಿಂದ ಪಾರಾಗುವಿರಿ. ಗುರು ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಯಾರನ್ನೂ ಅವಲಂಬಿಸದೆ ಸ್ವಂತ ಪರಿಶ್ರಮದಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಖ್ಯಾತ ಸಂಸ್ಥೆಯಿಂದ ಕಾರ್ಯ ನಿರ್ವಹಣೆಯ ಜವಾಬ್ದಾರಿ ಪಡೆಯುವಿರಿ. ಉದ್ಯೋಗ ಬದಲಿಸುವ ಸೂಚನೆಗಳಿವೆ. ತಂದೆ ಮಕ್ಕಳ ಜೊತೆ ವಾದ ವಿವಾದಗಳಿದ್ದರೂ ಯಶಸ್ಸು ಗಳಿಸುವಿರಿ. ಕೆಲಸದ ಸಮಯದಲ್ಲಿ ಒಗ್ಗಟ್ಟಿನಿಂದ ಮುಂದುವರೆಯುವಿರಿ. ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಯಾವುದೇ ಲೋಪವಿಲ್ಲದೆ ಮಾಡುವಿರಿ. ಮಧ್ಯ ವಯಸ್ಸಿನವರಿಗೆ ಸಾಧಾರಣ ಮಟ್ಟದ ಯಶಸ್ಸು ದೊರೆಯುತ್ತದೆ. ಸೋದರನಿಗೆ ಅಂಜಿಕೆಯ ಸ್ವಭಾವವಿದ್ದು ಕೆಲಸ ಕಾರ್ಯಗಳಲ್ಲಿ ತಡವಾದ ಫಲಿತಾಂಶ ದೊರೆಯುತ್ತದೆ. ನಿಮ್ಮ ನಡೆ ನುಡಿಯಿಂದ ಕೆಲವರಿಗೆ ತಪ್ಪು ಅಭಿಪ್ರಾಯ ಉಂಟಾಗುತ್ತದೆ.

ಪರಿಹಾರ : ಜೇನು ಸೇವಿಸಿ ನೀರು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಳದಿ

ಕಟಕ

ಕೌಟುಂಬಿಕ ವಿಚಾರದಲ್ಲಿ ನಿಮ್ಮ ಮಾತೇ ಅಂತಿಮವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ನಿಶ್ಚಿತ ಗೆಲುವು ದೊರೆಯುತ್ತದೆ. ಮಕ್ಕಳಿಗೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸುವಿರಿ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಏಕಾಂಗಿಯಾಗಿ ಅಭ್ಯಾಸದಲ್ಲಿ ತೊಡಗುತ್ತಾರೆ. ಕುಟುಂಬದ ಹಿರಿಯರ ಅನುಭವದಿಂದ ಎದುರಾಗುವ ಅಡ್ಡಿ ಆತಂಕಗಳಿಂದ ಪಾರಾಗುವಿರಿ. ಶಾಸ್ತ್ರ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ ಮೂಡುತ್ತದೆ. ಮಾಡುವ ಪ್ರತಿ ತಪ್ಪುಗಳಿಗೂ ಸಮಜಾಯಿಸಿ ನೀಡಿ ಸಂದಿಗ್ದತೆಯಿಂದ ಪಾರಾಗುವಿರಿ. ಯುವಕ ಯುವತಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಸಮಾಜದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಿರಿ. ಮನಸ್ಸಿನಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಭಿಸಿ. .

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.