ಐಷಾರಾಮಿ ವಾಹನ ಕೊಳ್ಳುವಿರಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಐಷಾರಾಮಿ ವಾಹನ ಕೊಳ್ಳುವಿರಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಐಷಾರಾಮಿ ವಾಹನ ಕೊಳ್ಳುವಿರಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಜುಲೈ 9ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ).

ಐಷಾರಾಮಿ ವಾಹನ ಕೊಳ್ಳುವಿರಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ
ಐಷಾರಾಮಿ ವಾಹನ ಕೊಳ್ಳುವಿರಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th July 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ದಿನಪೂರ್ತಿ ಚೌತಿ ಇರುತ್ತದೆ

ನಕ್ಷತ್ರ: ಆಶ್ಲೇಷ ನಕ್ಷತ್ರವು ಬೆಳಗ್ಗೆ 07.34 ರವರೆಗೂ ಇದ್ದು ನಂತರ ಮಖ ನಕ್ಷತ್ರ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 05.59

ಸೂರ್ಯಾಸ್ತ: ಸಂಜೆ 06.49

ರಾಹುಕಾಲ: 03.40 ರಿಂದ 05.16

ರಾಶಿಫಲ

ಸಿಂಹ

ಮನಸ್ಸಿಗೆ ಸರಿ ಎನಿಸಿದರೂ ಬೇರೆಯವರ ಸಲಹೆ ಒಪ್ಪುವುದಿಲ್ಲ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದ ಹಿರಿಯರಿಗೆ ಲಾಭವಿದೆ. ದಂಪತಿಗಳು ಕುಟುಂಬದ ಸೌಖ್ಯಕ್ಕಾಗಿ ಶ್ರಮಪಡುತ್ತಾರೆ. ತಂದೆಗೆ ಸಂಬಂಧಪಟ್ಟ ಐಶ್ವರ್ಯದ ಅಲ್ಪ ಭಾಗವು ಪರರ ಪಾಲಾಗುತ್ತದೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ಎದುರಾಗಲಿವೆ. ಕಲಾ ಮಾಧ್ಯಮದಲ್ಲಿ ವಿಶೇಷ ಪಾಂಡಿತ್ಯವುಳ್ಳ ಜನರಿಗೆ ಹಣಕಾಸಿನ ಅನುಕೂಲತೆ ಇರುತ್ತದೆ. ರುಚಿಕರವಾದ ಭೋಜನದಿಂದ ಸಂತೃಪ್ತಿ ಹೊಂದುವಿರಿ. ಕುಟುಂಬದ ಸ್ತ್ರೀಯರಿಗೆ ಬೇಕಾದ ಅಲಂಕಾರದ ಪದಾರ್ಥಗಳಿಗೆ ಹೆಚ್ಚಿನ ಹಣ ವೆಚ್ಚವಾಗುತ್ತದೆ. ತಂದೆಯವರನ್ನು ಕುಟುಂಬದ ಎಲ್ಲರನ್ನೂ ಗೌರವವಿಸುತ್ತಾರೆ. ಸೋದರಿ ಅಥವಾ ಮಗಳಿಗೆ ಅನಾರೋಗ್ಯವಿರುತ್ತದೆ. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಪರಿಹಾರ : ಕೈ ಅಥವ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ ಬಣ್ಣ

ಕನ್ಯಾ

ಹೆಣ್ಣು ಮಕ್ಕಳಿಂದ ಕುಟುಂಬದ ಸದಸ್ಯರು ಸಂತೋಷದಿಂದ ಇರುತ್ತಾರೆ. ಎರಡು ಅಥವಾ ಅದಕ್ಕಿಂತಲೂ ಹೆಚ್ಚಿನ ಮೂಲದಿಂದ ಆದಾಯ ದೊರೆಯುತ್ತದೆ. ಅನಾವಶ್ಯಕವಾದ ವಾದ ವಿವಾದಗಳಲ್ಲಿ ಪಾಲ್ಗೊಳ್ಳುವಿರಿ. ತಂದೆಯವರ ಆದಾಯ ಹೆಚ್ಚಾಗುತ್ತದೆ. ಗುಟ್ಟಾಗಿ ಹಣವನ್ನು ಸಂಪಾದಿಸುವ ಚಾತುರ್ಯತೆ ನಿಮ್ಮಲ್ಲಿರುತ್ತದೆ. ಮೈ ಮರೆತರೆ ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವಿರಿ. ಆತುರದ ನಿರ್ಧಾರದಿಂದ ಮಧ್ಯ ವಯಸ್ಕರು ದೊಡ್ಡ ಆಪತ್ತನ್ನು ಎದುರಿಸುತ್ತಾರೆ. ಸ್ವಾರ್ಥರಹಿತ ಗುಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ವಿಶಾಲವಾದ ಮನೆಗೆ ವಾಸ ಸ್ಥಳ ಬದಲಿಸುವಿರಿ. ಐಷಾರಾಮಿ ವಾಹನ ಕೊಳ್ಳುವಿರಿ. ಮಕ್ಕಳಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ. ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುವಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಗುಲಾಬಿ

ತುಲಾ

ಘಟನೆಯೊಂದು ನಿಮ್ಮ ಮನಸ್ಸನ್ನು ಘಾಸಿಗೊಳಿಸುತ್ತವೆ. ನಿಮಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ. ಸೋದರ ಅಥವಾ ಸೋದರಿಯ ಮಾತನ್ನು ಒಪ್ಪಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದಂಪತಿಗಳ ನಡುವೆ ಪ್ರತಿಯೊಂದು ವಿಚಾರಗಳಿಗೂ ಅನಾವಶ್ಯಕ ಚರ್ಚೆಗಳಾಗುತ್ತವೆ. ಕುಟುಂಬದ ಹಿರಿಯರಿಗೆ ವಿಶೇಷ ವ್ಯಕ್ತಿಯೊಬ್ಬರ ಪರಿಚಯವಾಗುತ್ತದೆ. ತಂದೆಯವರಿಗೆ ಅವರ ರಕ್ತ ಸಂಬಂಧಿಕರೇ ವಿರೋಧಿಗಳಾಗಿ ಬದಲಾಗುತ್ತಾರೆ. ವಿರೋಧಿಗಳ ಪ್ರಯತ್ನಗಳು ನಿಮ್ಮಿಂದ ವಿಫಲವಾಗುತ್ತದೆ. ಕುಟುಂಬದ ಸ್ವಂತ ಆಸ್ತಿಯ ವಿಚಾರದಲ್ಲಿ ವಿರೋಧಿಗಳಿರುತ್ತಾರೆ. ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ನರ ನಿಶ್ಯಕ್ತಿಯಿಂದ ತೊಂದರೆ ಅನುಭವಿಸುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ : ಬಿಳಿಬಣ್ಣ

ವೃಶ್ಚಿಕ

ಸೋದರನಿಗೆ ಹಣಕಾಸಿನ ವಿಚಾರದಲ್ಲಿ ಮೋಸವಾಗಬಹುದು. ತಂದೆಯವರು ವಯಸ್ಸನ್ನು ಮರೆತು ಶ್ರಮಪಟ್ಟು ದುಡಿಯುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ನಡೆಯುವ ಪಕ್ಷಪಾತದ ಧೋರಣೆಯಿಂದ ಬೇಸರಗೊಳ್ಳುವಿರಿ. ವೃತ್ತಿಕ್ಷೇತ್ರದಲ್ಲಿ ಬಹು ಮುಖ್ಯ ವ್ಯಕ್ತಿಗಳ ಸಂಪರ್ಕ ದೊರೆಯುತ್ತದೆ. ಪರಿಶ್ರಮಕ್ಕೆ ತಕ್ಕಂತಹ ಫಲಿತಾಂಶ ದೊರೆಯುವುದಿಲ್ಲ. ಸೇವಾಪೂರ್ವಕ ವೃತ್ತಿಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಸಹಾಯ ಬೇಡಿ ಬಂದವರಿಗೆ ನಿರಾಸೆ ಮಾಡುವುದಿಲ್ಲ. ನಿಮ್ಮಿಂದ ದೂರವಾಗಿದ್ದ ಸಂಬಂಧಿಕರು ಮರಳಿ ಬರುತ್ತಾರೆ. ಮನಸ್ಸಿನಲ್ಲಿ ಇರುವ ಆಸೆಗಳನ್ನೆಲ್ಲಾ ಮರೆತು ಸರಳ ಜೀವನ ನಡೆಸುವಿರಿ. ತೋಟಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಭೂ ವಿವಾದವೊಂದು ಎದುರಾಗಲಿದೆ ಎಚ್ಚರಿಕೆ ಇರಲಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಬೂದು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.