Horoscope Today: ಉದ್ಯೋಗದಲ್ಲಿ ಬಡ್ತಿ ದೊರೆತು ದೂರದ ಊರಿಗೆ ವರ್ಗಾವಣೆಗೊಳ್ಳಲಿದ್ದೀರಿ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ
9 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (9th May 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th May 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಗುರುವಾರ
ತಿಥಿ: ಪಾಡ್ಯ ಬೆಳಗ್ಗೆ 06.55 ರವರೆಗೂ ಇರುತ್ತದೆ ನಂತರ ಉಪರಿ ಬಿದಿಗೆ ಇರುತ್ತದೆ.
ನಕ್ಷತ್ರ : ಕೃತ್ತಿಕಾ ನಕ್ಷತ್ರವು 12.54 ರವರೆಗೂ ಇದ್ದು ನಂತರ ರೋಹಿಣಿ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.56
ಸೂರ್ಯಾಸ್ತ: ಸಂಜೆ 06.35
ರಾಹುಕಾಲ: ಮಧ್ಯಾಹ್ನ 03.30 ರಿಂದ 05.03ವರೆಗೆ
ರಾಶಿಫಲ
ಮೇಷ
ದಿನದ ಆರಂಭದಲ್ಲಿ ಎದುರಾಗುವ ಅಡಚಣೆಗಳಿಗೆ ಪರಿಹಾರ ಕಂಡುಹಿಡಿಯುವಿರಿ. ವಿದ್ಯಾರ್ಥಿಗಳ ನಿರೀಕ್ಷೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಂಬಂಧವಿಲ್ಲದ ವಿಚಾರಗಳಿಗೆ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತದೆ. ರಕ್ತಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ತಂದೆಗೆ ಸಂಬಂಧಿಸಿದ ಭೂ ವಿವಾದವಿರುತ್ತದೆ. ಸತ್ಯಾಸತ್ಯತೆಗಳ ಅರಿವಿದ್ದರೂ ಮೌನವಹಿಸುವಿರಿ. ಹಿರಿಯರ ಜೊತೆ ವಾದ ಮಾಡದ ಕಾರಣ ಉದ್ಯೋಗದಲ್ಲಿ ನೆಮ್ಮದಿ ಕಾಣುವಿರಿ. ಹವ್ಯಾಸಕ್ಕೆಂದು ಆರಂಭಿಸಿದ ವ್ಯಾಪಾರದಲ್ಲಿ ಲಾಭವಿದೆ. ವಿದೇಶಕ್ಕೆ ತೆರಳುವ ಅವಕಾಶವನ್ನು ಬಳಸಿಕೊಳ್ಳುವಿರಿ. ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಭೂವಿವಾದದಲ್ಲಿ ಆತ್ಮೀಯರ ಕೋಪಕ್ಕೆ ಗುರಿಯಾಗುವಿರಿ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಬಿಳಿ
ವೃಷಭ
ಯಾವುದೇ ಕೆಲಸವನ್ನು ಆರಂಭಿಸುವ ಇಚ್ಚೆ ಇರುವುದಿಲ್ಲ. ಮುಖ್ಯವಾದ ಕೆಲಸ ಕಾರ್ಯಗಳನ್ನು ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ಹಟದಲ್ಲಿ ತಪ್ಪುಮಾಡಿ ನಂತರ ಪಶ್ಚಾತಾಪ ಪಡುವಿರಿ. ಇರುವ ಹಣವನ್ನೆಲ್ಲಾ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ಪರಸ್ಥಳಕ್ಕೆ ತೆರಳುವಿರಿ. ವಿದ್ಯಾರ್ಥಿಗಳು ಸಂತಸದಿಂದ ಇರುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಭೂವಿವಾದವೊಂದು ಕಾನೂನಿನ ಸಹಾಯದಿಂದ ನಿಮ್ಮ ಪರವಾಗುತ್ತದೆ. ಹಣದ ಕೊರತೆಯನ್ನು ನೀಗಿಸಲು ಬಿಡುವಿನ ವೇಳೆ ಉಪವೃತ್ತಿಯೊಂದನ್ನು ಮಾಡುವಿರಿ. ಮಕ್ಕಳಿಂದ ಹಣದ ಸಹಾಯವಿದೆ. ಏಕಾಂಗಿತನವನ್ನು ಇಷ್ಟಪಡುವಿರಿ. ಸಾಕುಪ್ರಾಣಿಗಳ ಬಗ್ಗೆ ಪ್ರೀತಿ ಅನುಕಂಪ ಇರುತ್ತದೆ.
ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಬೂದು
ಮಿಥುನ
ಅನಿರೀಕ್ಷಿತ ಘಟನೆಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡಲಿದೆ. ಕುಟುಂಬದ ಕೆಲವೊಂದು ವಿಚಾರಗಳು ಬೇಸರ ಉಂಟುಮಾಡಲಿವೆ. ದಾಂಪತ್ಯದಲ್ಲಿದ್ದ ಮನಸ್ತಾಪ ಕೊನೆಯಾಗುವುದು. ಆತ್ಮೀಯರ ಸಹಾಯದಿಂದ ವೈಭವಯುತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಣಕಾಸಿನ ಸಂಸ್ಥೆಯೊಂದರ ಒಡೆತನ ನಿಮ್ಮದಾಗಲಿದೆ. ಹೊಸ ವಾಹನ ಕೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಬೇಸರದ ವಾತಾವರಣ ಇರುತ್ತದೆ. ಅಧಿಕಾರಿಗಳಿಗೆ ಕಾರ್ಮಿಕ ವಲಯದಿಂದ ವಿರೋಧ ಉಂಟಾಗುತ್ತದೆ. ಶಾಂತ ಸ್ವಭಾವಿಗಳಾದರೂ ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ವಿವಾದವೊಂದು ದೂರವಾಗಿ ತಾಯಿ ಹೆಸರಿಗೆ ಹಣ ಸಂದಾಯವಾಗುತ್ತದೆ.
ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕಂದು
ಕಟಕ
ಆತುರದ ನಿರ್ಧಾರ ಕೆಲಸ ಕಾರ್ಯದ ಹಾದಿ ತಪ್ಪಿಸುತ್ತದೆ. ಬುದ್ಧಿವಂತಿಕೆಯಿಂದ ವಾದ ವಿವಾದದಿಂದ ದೂರ ಉಳಿಯ್ಕುವಿರಿ. ಸಣ್ಣ ಪುಟ್ಟ ವಿಚಾರವಾದರೂ ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಮಾಡಿದ ತಪ್ಪುಗಳಿಂದ ಪಾಠವನ್ನು ಕಲಿಯುವಿರಿ. ಸಂಗಾತಿಯ ತಪ್ಪು ಕಲ್ಪನೆಯಿಂದ ಹಣಕಾಸಿನ ತೊಂದರೆ ಉಂಟಾಗಲಿದೆ. ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಲಿದ್ದಾರೆ. ಯಾರಲ್ಲೂ ತಾರತಮ್ಯ ಮಾಡದೆ ನೆಮ್ಮದಿಯಿಂದ ಬಾಳುವಿರಿ. ಉದ್ಯೋಗದಲ್ಲಿ ಉನ್ನತ ಗೌರವ ದೊರೆಯುತ್ತವೆ. ಕುಟುಂಬದಲ್ಲಿ ಯಾವುದೇ ಬದಲಾವಣೆ ಉಂಟಾಗದು. ಸಂಗಾತಿಯೊಡನೆ ಉತ್ತಮ ಸ್ನೇಹಿತರಂತೆ ಬಾಳುವಿರಿ. ಹಣದ ತೊಂದರೆ ಇರುವುದಿಲ್ಲ. ಸಾಲವಾಗಿ ನೀಡಿದ ಹಣ ಮರಳಿ ನಿಮ್ಮ ಕೈಸೇರುವುದು.
ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಪ್ಪು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).