ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ, ಭೂವಿವಾದದಲ್ಲಿ ಸಂಬಂಧಿಕರೊಂದಿಗೆ ಶತ್ರುತ್ವ: ಮೇ 9ರ ದಿನ ಭವಿಷ್ಯ

Horoscope Today: ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ, ಭೂವಿವಾದದಲ್ಲಿ ಸಂಬಂಧಿಕರೊಂದಿಗೆ ಶತ್ರುತ್ವ: ಮೇ 9ರ ದಿನ ಭವಿಷ್ಯ

9 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (9th May 2024 Daily Horoscope).

 ಮೇ 9ರ ದಿನ ಭವಿಷ್ಯ
ಮೇ 9ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ: ಪಾಡ್ಯ ಬೆಳಗ್ಗೆ 06.55 ರವರೆಗೂ ಇರುತ್ತದೆ ನಂತರ ಉಪರಿ ಬಿದಿಗೆ ಇರುತ್ತದೆ.

ನಕ್ಷತ್ರ : ಕೃತ್ತಿಕಾ ನಕ್ಷತ್ರವು 12.54 ರವರೆಗೂ ಇದ್ದು ನಂತರ ರೋಹಿಣಿ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.56

ಸೂರ್ಯಾಸ್ತ: ಸಂಜೆ 06.35

ರಾಹುಕಾಲ: ಮಧ್ಯಾಹ್ನ 03.30 ರಿಂದ 05.03ವರೆಗೆ

ರಾಶಿಫಲ

ಸಿಂಹ

ಆಸಕ್ತಿಯಿಂದ ಹೊಸ ವಿಚಾರಗಳನ್ನು ಕಲಿಯುವಿರಿ. ಮಾನಸಿಕವಾಗಿ ಸದೃಢರಾದ ನೀವು ಎಲ್ಲರೊಂದಿಗೆ ಸ್ನೇಹ ಪ್ರೀತಿಯಿಂದ ಬಾಳುವಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾದಲ್ಲಿ ಮಾನಸಿಕವಾಗಿ ಕುಗ್ಗುವಿರಿ. ಆತ್ಮವಿಶ್ವಾಸ ಮೂಡುತ್ತದೆ. ಉದ್ಯೋಗದಲ್ಲಿ ವಿಶೇಷವಾದ ಬದಲಾವಣೆ ನಿಮಗೆ ಸಹಕಾರಿಯಾಗಿರುತ್ತದೆ. ಉತ್ತಮ ಆದಾಯ ಇರುವುದಿಲ್ಲ. ಆದರೂ ಹಣದ ತೊಂದರೆ ಬಾರದು. ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಸಹನೌಕರರನ್ನು ಕಾಪಾಡುವ ಹೊಣೆ ಹೊರುವಿರಿ. ನಿಮ್ಮಲ್ಲಿನ ನಾಯಕತ್ವದ ಗುಣದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವಿಶೇಷ ಸಾಧನೆ ಮಾಡಲಿದ್ದಾರೆ. ಭೂವ್ಯವಹಾರದಲ್ಲಿ ಉತ್ತಮ ಲಾಭವಿದೆ. ಸಂತೋಷ ಕೂಟ ಭಾಗಿಯಾಗುವಿರಿ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ತಿಳಿ ಹಸಿರು

ಕನ್ಯಾ

ಹೆತ್ತವರಿಗೆ ಸಂಬಂಧಿಸಿದಂತೆ ಸಂಗಾತಿಯೊಂದಿಗೆ ವಾದ ವಿವಾದ ಇರುತ್ತದೆ. ಅನಾರೋಗ್ಯದ ಸಮಸ್ಯೆ ಇರುವುದಿಲ್ಲ. ಸೋದರಿಯ ಜೀವನದಲ್ಲಿನ ಹಣದ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಇಲ್ಲದ ಕಾರಣ ಬೇಸರ ಉಂಟಾಗುತ್ತದೆ. ಕುಟುಂಬದಲ್ಲಿ ಘಟನೆಯೊಂದು ನಡೆಯಲಿದೆ. ಕುಟುಂಬದಲ್ಲಿ ವಿವಾಹದ ಸಂಭ್ರಮ ನೆಲೆಸುತ್ತದೆ. ಸುಖ ಸೌಹಾರ್ದತೆ ಇರುತ್ತದೆ. ಸಂಚಾರದಿಂದ ಲಾಭ ಗಳಿಸುವಿರಿ. ವಯೋವೃದ್ಧರಿಗೆಗೆ ಕಫದ ತೊಂದರೆ ಇರುತ್ತದೆ. ಹಣದ ಕೊರತೆ ಎದುರಾಗುತ್ತದೆ. ಭೂವಿವಾದದಲ್ಲಿ ಸಂಬಂಧಿಕರೊಂದಿಗೆ ಶತ್ರುತ್ವ ಉಂಟಾಗುತ್ತದೆ. ಪದೇ ಪದೇ ಮನಸ್ಸನ್ನು ಬದಲಾಯಿಸುವಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ನಸು ಗೆಂಪು

ತುಲಾ

ಗೆಲ್ಲುವ ಗುರಿಯಿಂದಲೇ ಕೆಲಸ ಕಾರ್ಯಗಳನ್ನು ಅರಂಭಿಸುವಿರಿ. ನಿಮ್ಮಲ್ಲಿನ ಕ್ರೀಡಾ ಮನೋಭಾವನೆ ನಿಮ್ಮನ್ನು ಸದಾ ಕಾಯುತ್ತದೆ. ಆತುರದಿಂದ ಹಣಕಾಸಿನ ವಿವಾದಕ್ಕೆ ಸಿಲುಕುವಿರಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ಸಮಾಜಸೇವೆಯಲ್ಲಿ ತಲ್ಲೀನರಾಗುವಿರಿ. ಬಡವರ ಏಳಿಗೆಗಾಗಿ ಸಂಘ ಸಂಸ್ಥೆಯೊಂದನ್ನು ಆರಂಭಿಸುವಿರಿ. ನಿರೀಕ್ಷೆ ತಲುಪದ ಕಾರಣ ವಿದ್ಯಾರ್ಥಿಗಳಿಗೆ ನಿರಾಸೆಯ ದಿನವಾಗಲಿದೆ. ಇರುವ ಹಣವನ್ನೆಲ್ಲಾ ಖರ್ಚು ಮಾಡಿವವರೆಗೂ ನಿದ್ದೆಯೂ ಮಾಡುವುದಿಲ್ಲ. ಹೊಗಳಿಕೆಗೆ ಮರುಳಾಗಿ ಮೋಸ ಹೋಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕ ಜೀವನದ ಮನಸ್ತಾಪಗಳಿಂದ ದೂರ ಉಳಿಯುವಿರಿ. ನಿದ್ದೆಯ ಮಂಪರು ನಿಮ್ಮನ್ನು ಕಾಡಲಿದೆ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ವೃಶ್ಚಿಕ

ಕಷ್ಟದಲ್ಲಿರುವ ಗೆಳೆಯರಿಗೆ ಸಹಾಯ ಮಾಡುವಿರಿ. ಅತಿಯಾದ ಕೋಪ ಬಂದರೂ ತಪ್ಪಾಗಿ ನಡೆದುಕೊಳ್ಳುವುದಿಲ್ಲ. ಆಪ್ತರಾದರೂ ಮಾಡುವ ತಪ್ಪನ್ನು ಮನ್ನಿಸುವುದಿಲ್ಲ. ಮಾಡಿದ ತಪ್ಪನ್ನು ಅರಿತುಕೊಂಡು ತಾವಾಗಿಯೇ ಸರಿದಾರಿಯನ್ನುಆಯ್ದುಕೊಳ್ಳುವಿರಿ. ಬಹುಬೇಗ ಹೊಗಳಿಕೆಗೆ ಮರುಳಾಗುವಿರಿ. ಉದ್ಯೋಗದಲ್ಲಿ ವಿವಾದ ಎದುರಾದರೂ ಯಾವುದೇ ತೊಂದರೆ ಆಗದು. ಸಂಸಾರದಲ್ಲಿ ಒಮ್ಮತದ ವಾತಾವರಣ ಇರುವುದಿಲ್ಲ. ಬಹುದಿನದ ಕನಸಾದ ವಿಚಾರವೊಂದು ನಿಜವಾಗಲಿದೆ. ಸೋದರನಿಗೆ ವಿವಾಹ ಯೋಗವಿದೆ. ವೈಭವದ ಜೀವನಕ್ಕಾಗಿ ಅತಿಯಾಗಿ ಹಣವನ್ನು ಖರ್ಚು ಮಾಡುವಿರಿ. ಸಂಗಾತಿಯೊಂದಿಗೆ ಉತ್ತಮ ಸಂಬಂಧವಿರುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಭಾವ ಮೈದುನರಿಗೆ ಸಹಾಯ ಮಾಡುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).