ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಯೋಗದ ಮೂಲಕ ಆರೋಗ್ಯದಲ್ಲಿ ಸ್ಥಿರತೆ, ವಾಹನ ಚಾಲನೆ ಮಾಡುವಾಗ ಎಚ್ಚರ; ಮೇ 9ರ ರಾಶಿಫಲ

Horoscope Today: ಯೋಗದ ಮೂಲಕ ಆರೋಗ್ಯದಲ್ಲಿ ಸ್ಥಿರತೆ, ವಾಹನ ಚಾಲನೆ ಮಾಡುವಾಗ ಎಚ್ಚರ; ಮೇ 9ರ ರಾಶಿಫಲ

9 ಮೇ 2024ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (9th May 2024 Daily Horoscope).

ಯೋಗದ ಮೂಲಕ ಆರೋಗ್ಯದಲ್ಲಿ ಸ್ಥಿರತೆ, ವಾಹನ ಚಾಲನೆ ಮಾಡುವಾಗ ಎಚ್ಚರ; ಮೇ 9ರ ರಾಶಿಫಲ
ಯೋಗದ ಮೂಲಕ ಆರೋಗ್ಯದಲ್ಲಿ ಸ್ಥಿರತೆ, ವಾಹನ ಚಾಲನೆ ಮಾಡುವಾಗ ಎಚ್ಚರ; ಮೇ 9ರ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(9th May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ: ಪಾಡ್ಯ ಬೆಳಗ್ಗೆ 06.55 ರವರೆಗೂ ಇರುತ್ತದೆ ನಂತರ ಉಪರಿ ಬಿದಿಗೆ ಇರುತ್ತದೆ.

ನಕ್ಷತ್ರ : ಕೃತ್ತಿಕಾ ನಕ್ಷತ್ರವು 12.54 ರವರೆಗೂ ಇದ್ದು ನಂತರ ರೋಹಿಣಿ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.56

ಸೂರ್ಯಾಸ್ತ: ಸಂಜೆ 06.35

ರಾಹುಕಾಲ: ಮಧ್ಯಾಹ್ನ 03.30 ರಿಂದ 05.03ವರೆಗೆ

ರಾಶಿಫಲ

ಧನಸ್ಸು

ಸ್ವಂತ ಪ್ರಯತ್ನದಿಂದ ಉದ್ಯೋಗದಲ್ಲಿನ ತೊಂದರೆಯನ್ನು ದೂರ ಮಾಡುವಿರಿ. ವಾಹನ ಚಾಲನೆಯಿಂದ ತೊಂದರೆ ಉಂಟಾಗಬಹುದು. ಕುಟುಂಬದಲ್ಲಿನ ಶಾಂತಿ ವಾತಾವರಣ ಹೊಸ ಆಸೆಗೆ ಕಾರಣವಾಗುತ್ತದೆ. ರಕ್ತಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ವಯಸ್ಸಿನ ತಾರತಮ್ಯ ಮಾಡದೆ ಎಲ್ಲರನ್ನೂ ಗೌರವದಿಂದ ನೋಡುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ವಿದ್ಯಾರ್ಥಿಗಳು ಕಷ್ಟದ ಪರಿವೇ ಇಲ್ಲದೆ ಅಭ್ಯಾಸದಲ್ಲಿ ನಿರತರಾಗುವಿರಿ. ಮನೆಯಲ್ಲಿ ನಡೆಯಬೇಕಿದ್ದ ವಿವಾಹವೊಂದು ಮುಂದಕ್ಕೆ ಹೋಗಲಿದೆ. ಅತಿಯಾದ ಆಸೆ ಇರದೆ ತೃಪ್ತಿಕರ ಜೀವನ ನಡೆಸುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಮನದಲ್ಲಿ ನಿರ್ವಿಕಾರ ಮನೋಭಾವನೆ ಉಂಟಾಗುತ್ತದೆ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಬೂದು

ಮಕರ

ಕಲಿತ ವಿದ್ಯೆಗಿಂತ ಬುದ್ಧಿಶಕ್ತಿಯು ಆಪತ್ತಿನಿಂದ ಕಾಪಾಡುತ್ತದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ರೀತಿಯ ಪ್ರಯತ್ನ ಮಾಡುವಿರಿ. ಬೇಸಾಯದಲ್ಲಿ ಲಾಭವಿದೆ. ಅತಿಯಾದ ನಿಧಾನತೆ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ. ಸಾಧ್ಯವಾದಷ್ಟೂ ವೇಗವಾಗಿ ಕೆಲಸ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿರಿ. ಮನಸ್ಸಿಟ್ಟು ಕೆಲಸ ಮಾಡುವ ಕಾರಣ ಉದ್ಯೋಗದಲ್ಲಿ ಗೌರವಾದರಗಳು ಲಭಿಸುತ್ತವೆ. ವಿದ್ಯಾರ್ಥಿಗಳು ಓದಿನಲ್ಲಿ ಸದಾ ಮುಂದಿರುತ್ತಾರೆ. ತಿನ್ನುವ ಹವ್ಯಾಸ ಬದಲಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ವಾಹನಗಳ ದುರಸ್ತಿ ಮತ್ತು ಮಾರಾಟದಲ್ಲಿ ಲಾಭವಿರುತ್ತದೆ. ತಾಯಿಯ ಬೆಂಬಲ ಸದಾ ಇರುತ್ತದೆ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಆಕಾಶ ನೀಲಿ

ಕುಂಭ

ಪ್ರೀತಿಯ ಮಾತಿನಿಂದಲೇ ಜನರ ಮನಸ್ಸನ್ನು ಗೆಲ್ಲಬಲ್ಲಿರಿ. ವಿವಾದ ಬಯಸದೆ ತಪ್ಪಿಲ್ಲದಿದ್ದರೂ ಅಪವಾದವೊಂದನ್ನು ಒಪ್ಪಿಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ನಿಮ್ಮದಾಗುತ್ತದೆ. ಸಮಾಜದ ನಾಯಕ ಸ್ಥಾನವನ್ನು ಅಲಂಕರಿಸುವಿರಿ. ಸೋದರರೊಬ್ಬರಿಗೆ ಹಣದ ಸಹಾಯ ಮಾಡುವಿರಿ. ವೃತ್ತಿಯಲ್ಲಿ ಬೇಸರವಿರುತ್ತದೆ. ವೈಭವದ ಜೀವನವನ್ನು ನಡೆಸುವಿರಿ. ವಿವಾಹದಲ್ಲಿದ್ದ ವಿವಾದವು ದೂರವಾಗುತ್ತದೆ. ವೃತ್ತಿಯಲ್ಲಿ ಆಂತರಿಕ ಬದಲಾವಣೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಅಪರೂಪದ ಅವಕಾಶ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಹಿರಿಯರ ಮಾತಿನಂತೆ ನಡೆದುಕೊಂಡಲ್ಲಿ ಯಾವುದೇ ತೊಂದರೆ ಬಾರದು. ಆರೋಗ್ಯದ ಬಗ್ಗೆ ಗಮನವಿರಲಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ಮೀನ

ಹಣಕಾಸಿನ ತೊಂದರೆಯಿಂದ ಪಾರಾಗುವಿರಿ. ಅಗೋಚರ ವಿಚಾರಗಳ ಬಗ್ಗೆ ಭಯವಿರುತ್ತದೆ. ಉದ್ಯೋಗದಲ್ಲಿ ಉತ್ತಮ ಬದಲಾವಣೆಯೊಂದು ಕಂಡು ಬರುತ್ತದೆ. ಚರ್ಮದ ದೋಷದಿಂದ ಬಳಲುವಿರಿ. ದೃಢವಾದ ನಿಲುವಿನಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಿರಿ. ವಿದ್ಯಾರ್ಥಿಗಳು ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ. ಸ್ವತಂತ್ರವಾಗಿ ಮಾಡುವ ವ್ಯಾಪಾರದಲ್ಲಿ ಲಾಭವಿದೆ. ಯೋಗ ಪ್ರಾಣಾಯಾಮದ ಅಭ್ಯಾಸದಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ. ಸೋದರರಿಗೆ ಹಣದ ಸಹಾಯ ಮಾಡುವಿರಿ. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭವಿರುತ್ತದೆ. ಉತ್ತಮ ಆದಾಯ ಇರುವ ಕಾರಣ ಹಣವನ್ನು ಉಳಿಸುವ ಯೋಜನೆ ರೂಪಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಎಲೆ ಹಸಿರು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).