ಕನ್ನಡ ಸುದ್ದಿ  /  Astrology  /  Horoscope Today Astrology Prediction For 17th May 2023 Wednesday Astrology Zodiac Signs Rsm

Horoscope Today: ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಜನರಿಂದ ಈ ರಾಶಿಯವರು ಬಹಳ ಎಚ್ಚರಿಕೆ ವಹಿಸಬೇಕು; ಬುಧವಾರದ ರಾಶಿಫಲ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಬುಧವಾರದ ರಾಶಿಭವಿಷ್ಯ.

17 ಮೇ 2023ರ ರಾಶಿಫಲ
17 ಮೇ 2023ರ ರಾಶಿಫಲ

ಇಂದಿನ ಪಂಚಾಂಗ: ಶ್ರೀ ಶೋಭಕೃತನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಬುಧವಾರ

ತಿಥಿ: ತ್ರಯೋದಶಿ ರಾತ್ರಿ10.07 ರವರೆಗೆ ನಂತರ ಚತುರ್ದಶಿ ಆರಂಭವಾಗುತ್ತದೆ

ನಕ್ಷತ್ರ: ರೇವತಿ ನಕ್ಷತ್ರ ಬೆಳಗ್ಗೆ07.38 ವರೆಗೆ ಇದ್ದು ನಂತರ ಅಶ್ವಿನಿ ನಕ್ಷತ್ರ ಆರಂಭವಾಗುತ್ತದೆ

ಸೂರ್ಯೋದಯ: ಬೆಳಗ್ಗೆ 05.53-ಸೂರ್ಯಾಸ್ತ: ಸಂಜೆ 6.37

ರಾಹುಕಾಲ: ಮಧ್ಯಾಹ್ನ12.20 ರಿಂದ 1.55 ವರೆಗೆ

ಮೇಷ

ಬಂಧು ಬಳಗದವರಿಂದ ದೂರ ಉಳಿಯಲು ಪರಸ್ಥಳಕ್ಕೆ ತೆರಳುವಿರಿ. ಸ್ವಗೃಹ ಭೂಲಾಭವಿದೆ. ಬೆಳಕು ಅಥವಾ ವಿಧ್ಯುತ್ ಸಂಬಂಧಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ವೃತ್ತಿಕ್ಷೇತ್ರದಲ್ಲಿ ವಿರೋಧ ಉಂಟಾದರೂ ಯಾವುದೇ ತೊಂದರೆ ಎದುರಾಗದು. ದುಡುಕಿನ ಮಾತು ಅಥವಾ ನಿರ್ಧಾರದಿಂದ ಕೂಡಿಟ್ಟ ಹಣ ವೆಚ್ಚವಾಗುತ್ತದೆ. ಆಪ್ತ ಸ್ನೇಹಿತನೊಬ್ಬನಿಗೆ ಅನಿವಾರ್ಯವಾಗಿ ಹಣದ ಸಹಾಯ ನೀಡಬೇಕಾಗುತ್ತದೆ. ಸೋದರಿಯರ ಸಹಾಯ ಸಹಕಾರ ಸದಾ ದೊರೆಯುತ್ತದೆ. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸವನ್ನು ತೊರೆಯಬೇಕು. ಸಿಡುಕಿನ ಬುದ್ಧಿ ಬೇಡ.

ಪುಟ್ಟ ಹೆಣ್ಣುಮಕ್ಕಳಿಗೆ ಸಿಹಿತಿಂಡಿ ನೀಡಿ ದೈನಂದಿನ ಕೆಲಸವನ್ನುಆರಂಭಿಸಿ.

ವೃಷಭ

ಮನಸ್ಸಿಲ್ಲದಿದ್ದರೂ ಇರುವ ಹಣವನ್ನು ಖರ್ಚು ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಬೇರೆಯವರ ಮಾತಿನ ಮೌಲ್ಯ ತಿಳಿಯಲು ಪ್ರಯತ್ನಿಸಿ. ವಿವಾಹದ ಮಾತುಕತೆ ಅಪೂರ್ಣವಾಗುತ್ತದೆ. ಜಾರಿಬಿದ್ದು ದೈಹಿಕವಾಗಿ ಪೆಟ್ಟು ತಿನ್ನುವಿರಿ. ಉದ್ಯೋಗವನ್ನು ಬದಲಾಯಿಸುವಿರಿ. ಆತ್ಮೀಯರೊಬ್ಬರು ಹಣಕಾಸಿನ ವಿಚಾರದಲ್ಲಿ ಸಮಸ್ಯೆಯನ್ನು ಉಂಟುಮಾಡಬಹುದು. ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶವೊಂದು ದೊರೆಯಲಿದೆ. ಸೋದರರ ಜೊತೆಯಲ್ಲಿ ಆಭರಣಗಳಿಗೆ ಸಂಬಂಧಿಸಿದ ವ್ಯಾಪಾರವನ್ನು ಆರಂಭಿಸುವಿರಿ. ಕೀಲು ನೋವಿನ ತೊಂದರೆಗೆ ನಾಟಿ ಔಷಧಿ ಪಡೆಯಲಿದ್ದೀರಿ.

ವಯೋವೃದ್ಧ ಮಹಿಳೆಯರಿಗೆ ಸಹಾಯ ಮಾಡುವ ಮೂಲಕ ದಿನದ ಕೆಲಸವನ್ನು ಆರಂಭಿಸಿ.

ಮಿಥುನ

ಚಾಡಿಮಾತನ್ನು ಕೇಳಿದಲ್ಲಿ ಕುಟುಂಬದ ಸ್ವಾಸ್ಥ್ಯ ಕೆಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ಕಸರತ್ತಿನ ಮೊರೆ ಹೋಗುವಿರಿ. ಉದ್ಯೋಗದಲ್ಲಿ ಬೇಸರಗೊಂಡು ವೃತ್ತಿ ಬದಲಾವಣೆ ಮಾಡುವಿರಿ. ವಿದ್ಯಾರ್ಥಿಗಳು ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕು. ತಾಯಿಯವರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಸ್ವಂತ ವ್ಯಾಪಾರವಿದ್ದಲ್ಲಿ ಆದಾಯದ ಕೊರತೆ ಇರುವುದಿಲ್ಲ. ವಿವಾಹದ ಮಾತುಕತೆ ನಡೆಯುತ್ತದೆ. ಪರೋಪಕಾರದ ಗುಣದಿಂದಾಗಿ ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ಗಳಿಸುವಿರಿ. ಕಷ್ಟಕಾಲಕ್ಕೆ ಹಣವನ್ನು ಉಳಿಸಿ.

ಪುಟ್ಟ ಬೆಳ್ಳಿಯ ವಸ್ತುವನ್ನು ಆತ್ಮೀಯರಿಗೆ ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಕಟಕ

ಆತ್ಮವಿಶ್ವಾಸದ ಕೊರತೆಯಿಂದ ಅಕಸ್ಮಿಕವಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಯಾರನ್ನೂ ಸುಲಭದಲ್ಲಿ ನಂಬದ ಕಾರಣ ಮಾನಸಿಕ ನೆಮ್ಮದಿ ಇರುವುದಿಲ್ಲ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಕಂಡು ಬರುತ್ತದೆ. ತಿರುಗಾಟದ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಸ್ನೇಹಿತರ ಜೊತೆಗೂಡಿ ಸಾರಿಗೆ ಸಂಸ್ಥೆಯನ್ನುಆರಂಭಿಸುವಿರಿ. ಹಣದ ತೊಂದರೆ ಬಾರದು. ವಿದ್ಯಾರ್ಥಿಗಳ ಆಸೆ ಸುಲಭವಾಗಿ ಈಡೇರುತ್ತದೆ. ಕಫದ ತೊಂದರೆ ಇರುತ್ತದೆ. ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ನಿರತರಾಗುವಿರಿ.

ಚಿಕ್ಕ ಮಕ್ಕಳಿಗೆ ಕುಡಿಯಲು ಕಾಯಿಸದ ಹಾಲನ್ನು ನೀಡಿ ನಿಮ್ಮ ಕೆಲಸವನ್ನು ಆರಂಭಿಸಿ.

ಸಿಂಹ

ಧೈರ್ಯ ಸಾಹಸದ ಗುಣ ಕುಟುಂಬದ ಆಚ್ಚರಿಗೆ ಕಾರಣವಾಗುತ್ತದೆ. ಸೋಲನ್ನು ಗೆಲುವಾಗಿ ಪರಿವರ್ತಿಸುವ ಕಲೆ ತಿಳಿದಿರುತ್ತದೆ. ಉದ್ಯೋಗದಲ್ಲಿ ಅಧಿಕಾರಯುತ ಸ್ಥಾನ ಮಾನ ಲಭಿಸುತ್ತದೆ. ಸಮಾಜದ ಓರೆಕೊರೆ ತಿದ್ದುವ ಜವಾಬ್ದಾರಿಯುತ ಕೆಲಸವನ್ನು ಮಾಡುವಿರಿ. ವಿದ್ಯಾರ್ಥಿಗಳು ಸದಾಕಾಲ ಮುಂಚೂಣಿಯಲ್ಲಿ ಇರುತ್ತಾರೆ. ಅದೃಷ್ಟ ಸದಾ ಬೆನ್ನಿಗಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರವನ್ನು ಆರಂಭಿಸುವಿರಿ. ದುಬಾರಿ ಬೆಲೆಯ ಪೋಷಾಕಿನ ಏಜೆನ್ಸಿ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ.

ಓದುವ ಮಕ್ಕಳಿಗೆ ಪುಸ್ತಕ,ಲೇಖನಿಗಳನ್ನು ನೀಡಿ ನಿಮ್ಮ ಕೆಲಸ ಆರಂಭಿಸಿ.

ಕನ್ಯಾ

ಬೇಡದ ವಿಚಾರಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ತಾಯಿಯವರಿಗೆ ವೈರಾಗ್ಯದ ಭಾವನೆ ಬರುತ್ತದೆ. ಸಾಲವಾಗಿ ನೀಡಿದ ಹಣದ ಕೊಂಚ ಪಾಲು ಕೈಸೇರುತ್ತದೆ. ಹಣದ ಕೊರತೆಯನ್ನು ನೀಗಿಸಲು ಸ್ವಂತ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಇರುತ್ತದೆ. ವಿದ್ಯುತ್ ಉಪಕರಣಗಳ ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳು ಮನಸ್ಸಿಟ್ಟು ವ್ಯಾಸಂಗದಲ್ಲಿ ತೊಡಗಬೇಕು. ಕಲುಷಿತ ಆಹಾರ ಸೇವನೆಯಿಂದ ತೊಂದರೆ ಉಂಟಾಗಬಹುದು. ಹೊಸ ವ್ಯಾಪಾರವನ್ನು ಆರಂಭಿಸದಿರಿ. ವಸ್ತ್ರ ವ್ಯಾಪಾರದಲ್ಲಿ ಲಾಭವಿದೆ.

ನೀಲಿ ಬಟ್ಟೆಯನ್ನು ಧರಿಸಿದಲ್ಲಿ ಲಾಭದಾಯಕ ಫಲಗಳು ದೊರೆಯುತ್ತವೆ.

ತುಲಾ

ಸರಿ ತಪ್ಪನ್ನು ಸುಲಭವಾಗಿ ಅರಿಯುವಿರಿ. ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರುತ್ತದೆ. ಕಾನೂನು ಪ್ರಕ್ರಿಯೆಯೊಂದರಲ್ಲಿ ಜಯ ಗಳಿಸುವಿರಿ. ಐಷಾರಾಮಿ ಬೃಹತ್ ವಾಹನದ ತಯಾರಿಕಾ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕುಟುಂಬದಲ್ಲಿ ಬೇಸರದ ಸನ್ನಿವೇಷವೊಂದು ನಡೆಯುತ್ತದೆ. ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಜನರಬಗ್ಗೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಶುಭವಿದೆ. ಅನಿರೀಕ್ಷಿತವಾಗಿ ದೊಡ್ಡ ವಾಣಿಜ್ಯ ಸಂಸ್ಥೆಯ ಒಡೆತನ ದೊರೆಯುತ್ತದೆ. ಶಾಂತಿ ಸಂಧಾನಗಳಲ್ಲಿ ಯಶಸ್ವಿಯಾಗುವಿರಿ. ವಿಶ್ರಾಂತಿ ಇಲ್ಲದೆ ಜರ್ಜರಿತಗೊಳ್ಳುವಿರಿ.

ಧಾರ್ಮಿಕ ಕೇಂದ್ರಕ್ಕೆ ತುಪ್ಪವನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ವೃಶ್ಚಿಕ

ಅನ್ನನಾಳದ ಸೊಂಕು ಉಂಟಾಗಬಹುದು. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಗೆ ಸಿಲುಕುವಿರಿ. ಬಂದು ಬಳಗದವರ ಜೊತೆಯಲ್ಲಿ ಉತ್ತಮ ಭಾಂದವ್ಯ ಇರುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳನ್ನು ಎದುರಿಸುವಿರಿ. ದುಡುಕುತನದಿಂದ ಇರುವ ಉದ್ಯೋಗವನ್ನು ಬಿಡದಿರಿ. ಕುಟುಂಬದವರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸಿ, ಭಾಗಶ: ಯಶಸ್ವಿಯಾಗುವಿರಿ. ಶಾಂತಿಯಿಂದ ವರ್ತಿಸಿ. ವಿದ್ಯಾರ್ಥಿಗಳು ಅಡ್ಡಿ ಆತಂಕಗಳನ್ನು ಎದುರಿಸಿದ ನಂತರ ಸಾಮಾನ್ಯ ಯಶಸ್ಸನ್ನು ಕಾಣುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಬೇಡ.

ಬೆಳ್ಳಿಯ ಚಿಕ್ಕ ಗುಂಡನ್ನು ಸದಾ ಬಳಿಯಲ್ಲಿ ಇಟ್ಟುಕೊಂಡಿರಿ.

ಧನಸ್ಸು

ವಿಶೇಷವಾದ ಜ್ಞಾನದಿಂದ ಸಮಯಕ್ಕೆ ತಕ್ಕಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಬಂಧು ಬಳಗದಲ್ಲಿ ನೀವು ಅನಿವಾರ್ಯ ವ್ಯಕ್ತಿಯಾಗುವಿರಿ. ಅನ್ಯರಿಗೆ ಅಸಾಧ್ಯವಾಗುವ ಕೆಲಸ ಕಾರ್ಯಗಳು ನಿಮಗೆ ಸುಲಭ ಸಾಧ್ಯವಾಗುತ್ತವೆ. ವಿಧ್ಯಾರ್ಥಿಗಳು ಅತೀವ ಸಾಧನೆಯನ್ನು ಮಾಡುತ್ತಾರೆ. ವೃತ್ತಿ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ. ಸಮಾಜಸೇವೆಯಲ್ಲಿ ತೊಡಗುವಿರಿ. ರಾಜಕೀಯ ರಂಗದಲ್ಲಿ ಹೆಸರು ಗಳಿಸುವಿರಿ. ಹಣದ ತೊಂದರೆ ಬಾರದು. ಆದಾಯವನ್ನು ಹೆಚ್ಚಿಸಿಕೊಳ್ಳಲು ವ್ಯಾಪಾರವೊಂದನ್ನು ಆರಂಭಿಸಿ ಯಶಸ್ಸನ್ನು ಗಳಿಸುವಿರಿ. ಸಾಲದ ವ್ಯವಹಾರ ಬೇಡ.

ಹಳದಿ ವಸ್ತ್ರಗಳನ್ನು ಧರಿಸುವುದರಿಂದ ಶುಭದಾಯಕ ಫಲಗಳನ್ನು ಪಡೆಯುವಿರಿ.

ಮಕರ

ಅದೃಷ್ಟವಿಲ್ಲ, ಆದರೆ ಯಶಸ್ಸು ದೊರೆವ ತನಕ ಕೈಹಿಡಿದ ಕೆಲಸವನ್ನು ಬಿಡುವುದಿಲ್ಲ. ಸಾಧ್ಯ ಎನಿಸುವ ಕೆಲಸಗಳನ್ನು ಮಾತ್ರ ಮಾಡುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯದೆ ಹೋದರೂ ಯಾವುದೇ ತೊಂದರೆ ಆಗದು. ಮಾತು ಕಡಿಮೆ ಮಾಡಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಮನಸ್ಸು ಒಳ್ಳೆಯದಾದರೂ ದುಡುಕುತನದ ಮಾತಿನಿಂದ ವೈರತ್ವವನ್ನು ಎದುರಿಸುವಿರಿ. ಅತಿಯಾದ ನಿದ್ದೆ ಮತ್ತು ಅತಿಯಾದ ಭೋಜನ ಕೆಲಸ ಕಾರ್ಯಗಳನ್ನು ನಿರ್ವಹಿಸಲಾರದಂತೆ ಮಾಡುತ್ತದೆ. ಕಬ್ಬಿಣಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ.

ಹರಿದು ಸರಿಪಡಿಸಿದ ಉಡುಪು ಧರಿಸಬೇಡಿ, ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ.

ಕುಂಭ

ಮೌನವಾಗಿದ್ದುಕೊಂಡು ಯಾವುದೇ ಕೆಲಸವನ್ನು ಸಾಧಿಸಬಲ್ಲಿರಿ. ನಿಮ್ಮ ಯೋಚನೆ ಅಥವಾ ಯೋಜನೆಯನ್ನು ಅರಿಯಲು ಯಾರಿಂದಲೂ ಸಧ್ಯವಿಲ್ಲ. ಜೀವನದಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ. ಬರವಣಿಗೆಯಲ್ಲಿ ಮತ್ತು ಅಭಿನಯ ಕ್ಷೇತ್ರದಲ್ಲಿ ಇದ್ದಲ್ಲಿ ಅವಕಾಶದ ಜೊತೆಯಲ್ಲಿ ಉತ್ತಮ ಆದಾಯವೂ ದೊರೆಯುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಾಹನದಿಂದ ತೊಂದರೆ ಉಂಟಾಗಬಹುದು. ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಬಣ್ಣ ಅಥವಾ ಎಣ್ಣೆಗೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭವಿದೆ. ಪಾಲುಗಾರಿಕೆ ವ್ಯಾಪಾರದಲ್ಲಿ ಲಾಭವಿದೆ.

ನೀಲಿ ಅಥವಾ ಕಪ್ಪು ಬಣ್ಣದ ಧಿರಿಸಿನಿಂದ ಶುಭಫಲಗಳು ದೊರೆಯುತ್ತವೆ.

ಮೀನ

ಕೆಲಸ ಕಾರ್ಯಗಳನ್ನು ಅರೆ ಮನಸ್ಸಿನಿಂದ ಮಾಡುವಿರಿ. ಕುಟುಂಬದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸುವಿರಿ. ಕಷ್ಟದ ಸನ್ನಿವೇಶದಲ್ಲಿ ಸ್ನೇಹಿತರೊಬ್ಬರ ಸಲಹೆ ಸಹಾಯ ದೊರೆಯುತ್ತದೆ. ಅಪರಿಚಿತರೊಂದಿಗೆ ಹಣದ ವ್ಯವಹಾರ ಮಾಡದಿರಿ. ತಾಯಿಯ ಆರೋಗ್ಯದ ಕಡೆ ಗಮನವಿರಲಿ. ದೂರದ ಸಂಚಾರದಿಂದ ದೈಹಿಕವಾಗಿ ಬಳಲುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಹಣದ ತೊಂದರೆ ಬಾರದು. ವಿದ್ಯಾರ್ಥಿಗಳಿಗೆ ಶುಭವಿದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಉಪ ವೃತ್ತಿಯೊಂದನ್ನು ಆರಂಭಿಸಿ ಯಶಸ್ಸನ್ನು ಕಾಣುವಿರಿ. ಜನೋಪಯೋಗಿ ಕೆಲಸವನ್ನು ಆರಂಭಿಸುವಿರಿ.

ಕೆಂಪು ಬಣ್ಣದ ವಸ್ತ್ರ ಧರಿಸದಿರಿ.

ವಿಭಾಗ