ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಹೋಟೆಲ್‌ ಉದ್ಯಮದಲ್ಲಿ ಲಾಭ, ರಫ್ತು ವ್ಯವಹಾರದಲ್ಲಿ ಯಶಸ್ಸು; ಮಂಗಳವಾರ ನಿಮ್ಮ ರಾಶಿಫಲ ಹೇಗಿದೆ ಒಮ್ಮೆ ನೋಡಿ

Horoscope Today: ಹೋಟೆಲ್‌ ಉದ್ಯಮದಲ್ಲಿ ಲಾಭ, ರಫ್ತು ವ್ಯವಹಾರದಲ್ಲಿ ಯಶಸ್ಸು; ಮಂಗಳವಾರ ನಿಮ್ಮ ರಾಶಿಫಲ ಹೇಗಿದೆ ಒಮ್ಮೆ ನೋಡಿ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಮಂಗಳವಾರದ ರಾಶಿಭವಿಷ್ಯ ಇಲ್ಲಿದೆ.

ಮಂಗಳವಾರದ ರಾಶಿಫಲ
ಮಂಗಳವಾರದ ರಾಶಿಫಲ

ಇಂದಿನ ಪಂಚಾಂಗ: ಶ್ರೀ ಶೋಭಕೃತನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲ ಪಕ್ಷ- ಮಂಗಳವಾರ

ತಿಥಿ: ಚೌತಿ ರಾತ್ರಿ11.13 ವರೆಗೆ ನಂತರ ಪಂಚಮಿ ಆರಂಭವಾಗುತ್ತದೆ

ನಕ್ಷತ್ರ: ಆರಿದ್ರ ನಕ್ಷತ್ರವು ಬೆಳಗ್ಗೆ 11.26 ವರೆಗೆ ಇದ್ದು ನಂತರ ಪುನರ್ವಸು ನಕ್ಷತ್ರ ಆರಂಭವಾಗುತ್ತದೆ

ಸೂರ್ಯೋದಯ: ಬೆಳಗ್ಗೆ 05.52-ಸೂರ್ಯಾಸ್ತ ಸಂಜೆ 6.39

ರಾಹುಕಾಲ: ಮಧ್ಯಾಹ್ನ 3.31 ರಿಂದ ಸಂಜೆ 05.07

ಮೇಷ

ಸೋದರರ ನಡುವೆ ಮನಸ್ತಾಪ ಇರುತ್ತದೆ. ಬೇಡದ ವಿಚಾರಗಳಿಗೆ ವಾದ ಮಾಡಬೇಡಿ. ದುಡುಕಿನ ನಿರ್ಧಾರಗಳು ಬೇಡ. ಸೋದರಿಯರು ಮನೆ ಕೊಳ್ಳಲು ಸಹಾಯ ಮಾಡುವಿರಿ. ಅಧಿಕ ರಕ್ತದೊತ್ತಡ ಇರುವವರು ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳು ಹೆಚ್ಚನ ಪ್ರಯತ್ನದಿಂದ ಗುರಿ ತಲುಪಲಿದ್ದಾರೆ. ದೊಡ್ಡ ಕುಟುಂಬದವರ ಜೊತೆ ವೈವಾಹಿಕ ಸಂಬಂಧ ಬೆಳೆಯುತ್ತದೆ. ನೀವು ಹಠ ಸಾಧಕರು. ಸಮಾಜದ ಕೇಂದ್ರ ಬಿಂದುವಾಗುವಿರಿ. ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಲಿದೆ. ಸಮಾಜದ ಗಣ್ಯವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ.

ಮಕ್ಕಳಿಗೆ ಕಡ್ಲೆಬೇಳೆಯ ಸಿಹಿತಿಂಡಿಯನ್ನು ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ವೃಷಭ

ಸರ್ಕಾರದಿಂದ ಸಹಾಯ ದೊರೆಯುತ್ತದೆ. ಬಂಧು ಬಳಗದವರಿಂದ ದೂರ ಉಳಿಯುವಿರಿ. ವಿವಾಹದ ವಿಚಾರದಲ್ಲಿ ಕುಟುಂಬದಲ್ಲಿ ಬಿನ್ನಾಭಿಪ್ರಾಯ ಉಂಟಾಗುತ್ತದೆ. ವಾಹನಗಳ ವ್ಯಾಪಾರದ ಏಜೆನ್ಸಿಯಲ್ಲಿ ಲಾಭವಿರುತ್ತದೆ. ಪರಸ್ಥಳ ಅಥವಾ ವಿದೇಶದಲ್ಲಿನ ಉದ್ದಿಮೆಯಲ್ಲಿ ಪಾಲುಗಾರಿಕೆ ದೊರೆಯುವ ಸಾಧ್ಯತೆಗಳಿವೆ. ಮಾನಸಿಕ ಶಾಂತಿ ಇರುವುದಿಲ್ಲ. ತಂದೆ ಭೂಲಾಭವಿದೆ. ಹಠವಾದಿಗಳು. ವಿದ್ಯಾರ್ಥಿಗಳು ಆತಂಕದ ನಡುವೆಯು ವ್ಯಾಸಂಗದಲ್ಲಿ ತಲ್ಲೀನರಾಗುತ್ತಾರೆ. ಧಾರ್ಮಿಕ ಆಗು ಹೋಗುಗಳ ನಡುವೆ ವಿಶೇಷ ಆಸಕ್ತಿ ಇರುತ್ತದೆ.

ಕಪ್ಪು ಬಣ್ಣದ ಹಸುವಿಗೆ ಆಹಾರ ನೀಡಿದ ನಂತರ ದೈನಿಕ ದಿನಚರಿ ಆರಂಭಿಸಿ.

ಮಿಥುನ

ಸೋದರನ ವ್ಯಾಪಾರದಲ್ಲಿ ಸಹಕಾರ ನೀಡುವಿರಿ. ಸಮಾಜದಲ್ಲಿ ಉನ್ನತ ಸ್ಥಾನ ಮಾನ ಲಭಿಸುತ್ತದೆ. ಉನ್ನತ ದರ್ಜೆಯ ಜನರ ಸ್ನೇಹ ಸಂಪರ್ಕ ದೊರೆಯುತ್ತದೆ. ಕಿರಿಯ ಸೋದರ ಅಥವ ಸೋದರಿಗೆ ಹಣ ಅಥವ ಸ್ಥಿರಾಸ್ತಿಯೊಂದು ತಂದೆಯಿಂದ ದೊರೆಯುತ್ತದೆ. ನಿಮ್ಮ ಸ್ಥಿತಿ ಗತಿಗೆ ಸರಿಹೊಂದದ ಜನರಿಂದ ದೂರ ಉಳಿಯುವಿರಿ. ಉದ್ಯೋಗದಲ್ಲಿ ತೊಂದರೆ ಕಾಣದು. ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಾರೆ. ಸ್ವತಂತ್ರವಾಗಿ ನಡೆಸುವ ಸಹಕಾರಿ ಸಂಸ್ಥೆಯಿಂದ ಲಾಭವಿರುತ್ತದೆ. ಹೆದರಿಕೆಯ ಗುಣವಿರುತ್ತದೆ. ಮಾನಸಿಕ ನೆಮ್ಮದಿ ಇರದು.

ಕುಟುಂಬದ ಜನರಿಂದ ಶುಭಹಾರೈಕೆಯನ್ನು ಪಡೆದಲ್ಲಿ ಯಾವುದೇ ತೊಂದರೆ ಎದುರಾಗದು.

ಕಟಕ

ಕಷ್ಟ ನಷ್ಟಗಳನ್ನು ಲೆಕ್ಕಿಸದೆ ಮನೆತನದ ದೃಷಿ ಭೂಮಿಯನ್ನು ಅಭಿವೃದ್ಧಿಪಡಿಸುವಿರಿ. ಯಾರನ್ನೂ ತಪ್ಪಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ತಂದೆಯ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ರಾಜಶಾಸ್ತ್ರದಲ್ಲಿ ವಿದ್ಯಾರ್ಥಿಗಳು ವಿಶೇಷ ಪರಿಣತಿ ಪಡೆಯುತ್ತಾರೆ. ಪ್ರಸಿದ್ದ ಕಾಲೇಜಿನಲ್ಲಿ ಉದ್ಯೋಗ ಲಭಿಸುತ್ತದೆ. ಲೆಕ್ಕಾಚಾರದಲ್ಲಿ ಚತುರತೆ ತೋರುವಿರಿ. ತಂದೆ ತಾಯಿಗಳ ಬಗ್ಗೆ ಇದ್ದ ತಪ್ಪು ಕಲ್ಪನೆ ಮರೆಯಾಗುತ್ತದೆ. ಸಾಲ ನೀಡುವುದು ಅಥವಾ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಉತಮ ನಾಯಕರಾಗುವಿರಿ.

ಐದು ಜನ ಮಕ್ಕಳಿಗೆ ಕುಡಿವ ಹಾಲು ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಸಿಂಹ

ಗಣಿತಶಾಸ್ತ್ರದಲ್ಲಿ ವಿಶೇಷ ಪರಿಣತಿಯನ್ನು ಪಡೆಯುವಿರಿ. ಅಪರೂಪದ ಕಲಾಪ್ರೌಢಿಮೆ ಮನೆಮಾಡಿರುತ್ತದೆ. ಶಿಕ್ಷಕ ವೃತ್ತಿಯ ಜೊತೆ ಜೊತೆಯಲ್ಲಿ ನಟನೆಯಲ್ಲಿಯೂ ಉತ್ತಮ ಸಾಧನೆ ತೋರುವಿರಿ. ವೃತ್ತಿ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು. ಸಂಗಾತಿಯೊಡನೆ ವೈಭೋಗದ ಜೀವನ ನಡೆಸುವಿರಿ. ಕುಟುಂಬದಲ್ಲಿ ಮನಸ್ತಾಪಗಳು ಉಂಟಾದರೂ ಅದು ಕ್ಷಣಿಕ ಮಾತ್ರ. ವಿದ್ಯಾರ್ಥಿಗಳು ಓದು ಬರಹದಲ್ಲಿ ಸದಾ ಮುಂದಿರುತ್ತಾರೆ. ವೈಭವೋಪೇತ ವಾಹನವನ್ನು ಕೊಳ್ಳುವಿರಿ. ಬೃಹತ್ ವ್ಯಾಪಾರ ಸಂಸ್ಥೆಗೆ ಅಡಿಗಲ್ಲು ಹಾಕುವಿರಿ.

ಕತ್ತಿನಲ್ಲಿ ಬೆಳ್ಳಿಯ ಸರವನ್ನು ಧರಿಸಿ ದಿನದ ಕೆಲಸದಲ್ಲಿ ತೊಡಗಿ.

ಕನ್ಯಾ

ಯಾರಿಗೂ ತಿಳಿಯಂತೆ ಹಣ ಸಂಪಾದಿಸುವಿರಿ. ಎಲ್ಲರನ್ನೂ ವಿಶ್ವಾಸದಿಂದ ನೋಡುವಿರಿ. ಬೃಹತ್ ಯಂತ್ರಗಳ ದುರಸ್ತಿಯಲ್ಲಿ ಆದಾಯವಿರುತ್ತದೆ. ಜೀವನ ನಿರ್ವಹಣೆಗೆ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸುವಿರಿ. ದುಡುಕಿನ ಮಾತಿನ ಕಾರಣ ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ಕುಟುಂಬದ ವಿವಾಹವೊಂದರಲ್ಲಿ ಮನಸ್ತಾಪ ಉಂಟಾಗುತ್ತದೆ. ಎರಡು ಮಾರ್ಗಗಳಲ್ಲಿ ಹಣವನ್ನು ಸಂಪಾದಿಸುವಿರಿ. ವಿದ್ಯಾರ್ಥಿಗಳಿಗೆ ಶುಭವಿದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಲಾಭವಿರುತ್ತದೆ. ತಂದೆಯ ಜೊತೆಯಲ್ಲಿ ಸೌಹಾರ್ದಯುತ ಸಂಬಂಧ ಇರದು.

ಗುರುಗಳ ಭಾವಚಿತ್ರವನ್ನು ನಿಮ್ಮ ಬಳಿ ಇಟ್ಟು ಮಾಡುವ ಕೆಲಸದಲ್ಲಿ ಲಾಭವಿರುತ್ತದೆ.

ತುಲಾ

ತ್ಯಾಗ ಪ್ರೀತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದರಾಗುವಿರಿ. ಮಾಡದ ತಪ್ಪೊಂದನ್ನು ಒಪ್ಪಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸುಖಮಯ ದಾಂಪತ್ಯ ಇರುತ್ತದೆ. ಚಿಕ್ಕ ಪುಟ್ಟ ಕೆಲಸವಾದರೂ ಅತಿ ಶ್ರದ್ದೆಯಿಂದ ಮಾಡುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ಲಭಿಸುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಉನ್ನತ ಸ್ಥಾನ ತಲುಪುತ್ತಾರೆ. ಸೋದರನೊಂದಿಗೆ ವಿರಸದ ಸನ್ನಿವೇಶ ಎದುರಾಗುತ್ತದೆ. ಜನತೆಗೆ ಒಳಿತಾಗುವ ವ್ಯಾಪಾರ ವ್ಯವಹಾರವನ್ನು ಆರಂಭಿಸುವಿರಿ.

ಕುಟುಂಬದ ಹಿರಿಯರಿಗೆ ಕೆಂಪು ಬಣ್ಣದ ಬಟ್ಟೆ ಕೊಡಿಸಿ ದಿನದ ಕೆಲಸ ಆರಂಭಿಸಿ

ವೃಶ್ಚಿಕ

ಕುಟುಂಬದ ಕೆಲಸದ ಸಲುವಾಗಿ ಪರಸ್ಥಳಕ್ಕೆ ತೆರಳುವಿರಿ. ಆತ್ಮೀಯ ಸ್ನೇಹಿತರ ಜೊತೆಯಲ್ಲಿ ವಿವಾದ ಉಂಟಾಗುತ್ತದೆ. ಭೂವಿವಾದವೊಂದು ಪರಿಹಾರಗೊಳ್ಳಲಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ಶುಭ ಸಮಾಚಾರವೊಂದು ಬರಲಿದೆ. ಸಿಡುಕುತನ ಬಿಟ್ಟು ನಗುನಗುತ್ತಾ ಜನರೊಂದಿಗೆ ಬೆರೆಯಿರಿ. ಗುರುಪೀಠದಲ್ಲಿ ಉದ್ಯೋಗ ದೊರೆಯುತ್ತದೆ. ವಿದ್ಯಾರ್ಥಿಗಳು ಸಹನೆಯಿಂದ ಕಾರ್ಯ ಸಾಧಿಸಬೇಕು. ಮನೆಯಲ್ಲಿ ಬಳಸುವ ಸಿಸಿ ಕ್ಯಾಮೆರಾದಂಥಹ ರಕ್ಷಣಾ ಪದಾರ್ಥಗಳ ಮಾರಾಟ ಮತ್ತು ಅಡವಳಿಕೆಯಲ್ಲಿ ಹೇರಳ ಲಾಭ ಗಳಿಸುವಿರಿ.

ಮುತ್ತಿರುವ ಸರವನ್ನು ಧರಿಸಿದ ನಂತರ ದಿನದ ಕೆಲಸ ಆರಂಭಿಸಿ.

ಧನಸ್ಸು

ಯಾವುದೇ ಕೆಲಸದಲ್ಲಾದರೂ ಯಶಸ್ಸನ್ನು ನಿರೀಕ್ಷಿಸುವಿರಿ. ಸದಾ ಶಾಂತಚಿತ್ತರಾದರೂ ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ಸೂಕ್ಷ್ಮ ಮನಸ್ಸಿನವರಾದ ನೀವು ಎಲ್ಲರ ಪ್ರೀತಿ ಗಳಿಸುವಿರಿ. ವೃತ್ತಿಯಲ್ಲಿ ಬೇಸರವಿರುತ್ತದೆ. ಹೋಟೆಲ್ ವ್ಯವಹಾರದಲ್ಲಿ ಲಾಭವಿರುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ಜಯ ಗಳಿಸುವಿರಿ. ಹೆಚ್ಚಿನ ಆದಾಯವನ್ನು ನಿರೀಕ್ಷಿಸದೆ ಮನಸ್ಸಿನ ಸಂತೋಷಕ್ಕಾಗಿ ವ್ಯಾಪಾರ ಆರಂಭಿಸುವಿರಿ. ಮಿತಿ ಮೀರಿದ ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳಿ. ವಿದ್ಯಾರ್ಥಿಗಳಿಗೆ ಶುಭವಿದೆ. ಸ್ಥಿರವಾದ ಮನಸ್ಸಿರಲಿ. ಸ್ವತಂತ್ರವಾಗಿ ನಡೆಸುವ ವ್ಯಾಪಾರದಲ್ಲಿ ಲಾಭವಿದೆ.

ಜಪಸರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಮಕರ

ಕಷ್ಟಪಟ್ಟು ಕೈಹಿಡಿದ ಕೆಲಸ ಕಾರ್ಯಗಳನ್ನು ಸಾಧಿಸಿ ತೋರಿಸುವಿರಿ. ಮನಸ್ಸನ್ನು ಸದಾ ಕಾಲ ಬದಲಿಸುವ ಕಾರಣ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ವಿವಾಹ ಯೋಗವಿದೆ. ತಪ್ಪು ಕಲ್ಪನೆಯಿಂದ ನೆಮ್ಮದಿಯನ್ನು ಕೆಡಿಸಿಕೊಳ್ಳುವಿರಿ. ಧಾರ್ಮಿಕ ಗುರುಗಳನ್ನು ಭೇಟಿ ಮಾಡುವಿರಿ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ಒತ್ತಾಯ ಪೂರ್ವಕವಾಗಿ ವೃತ್ತಿ ಬದಲಾವಣೆ ಮಾಡುವಿರಿ. ಕುಟುಂಬದಲ್ಲಿ ಶಾಂತಿ ಸೌಹಾರ್ದತೆ ಇರುವುದಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ವ್ಯಾಸಂಗದಲ್ಲಿ ಮುಂದುವರಿಯಬೇಕು. ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಇರದು.

ಹಸು ಕರುವಿಗೆ ಹುಲ್ಲಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.

ಕುಂಭ

ಅತಿಯಾಗಿ ಮಾತನಾಡದೆ ಮೌನದಿಂದ ಕೆಲಸ ಸಾಧಿಸುವಿರಿ. ಉದ್ಯೋಗದಲ್ಲಿ ಪರಿಪೂರ್ಣತೆ ಇರುವುದಿಲ್ಲ. ಕೆಲಸದ ಒತ್ತಡವನ್ನು ತಡೆಯಲಾರದೆ ಉದ್ಯೋಗವನ್ನು ಬದಲಾಯಿಸುವಿರಿ. ಸೋದರ ವೃಂದದಲ್ಲಿ ವಿರಸ ವಿವಾದಗಳು ಇರುತ್ತವೆ. ಸಂಗಾತಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಿರೋಧ ಕಂಡುಬರುತ್ತವೆ. ವಿದ್ಯಾರ್ಥಿಗಳು ಆಳವಾದ ಅಧ್ಯಯನದಲ್ಲಿ ತೊಡಗುತ್ತಾರೆ. ಆದಾಯದಲ್ಲಿ ಸ್ಥಿರತೆ ಇರದು. ಬೇರೊಬ್ಬರ ಸುಖ ಜೀವನಕ್ಕಾಗಿ ದುಡಿದ ಹಣವನ್ನು ವಿನಿಯೋಗಿಸುವಿರಿ. ಮುದ್ರಣಕ್ಕೆ ಸಹಾಯ ಎನಿಸುವ ಸೇವಾ ವೃತ್ತಿಯನ್ನು ಆರಂಭಿಸುವಿರಿ.

ಕಂದು ಬಣ್ಣದ ಹಸುವಿಗೆ ಆಹಾರ ನೀಡಿದ ನಂತರ ಕೆಲಸವನ್ನು ಆರಂಭಿಸಿ.

ಮೀನ

ಅತಿಯಾದ ಆಸೆ ಇರದು ಆದರೆ ಅಲ್ಪ ತೃಪ್ತಿಯೂ ಇರದು. ಸೋದರರ ಜೊತೆಯಲ್ಲಿ ಹೊಂದಾಣಿಕೆ ಇರದು. ಹಣದ ಅವಶ್ಯಕತೆ ಹೆಚ್ಚಾಗಿರುವ ಕಾರಣ ವಂಶದವರು ಮಾಡುತ್ತಿದ್ದ ವ್ಯಾಪಾರವನ್ನು ಮುಂದುವರಿಯುವಿರಿ. ಮುಖ್ಯ ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಭೂ ಲಾಭವಿದೆ. ವಾಸಸ್ಥಳ ಬದಲಾಯಿಸುವಿರಿ. ತಂದೆಯವರಿಗೆ ಅನಾರೋಗ್ಯವಿರುತ್ತದೆ. ವಿದೇಶ ಪ್ರಯಾಣ ಮಾಡುವಿರಿ. ಸಮಾಜ ಸೇವೆಯಲ್ಲಿ ತೊಡಗುವಿರಿ. ಧಾರ್ಮಿಕ ದೇಂದ್ರದ ಆಡಳಿತಾಧಿಕಾರ ದೊರೆಯುತ್ತದೆ. ಸಿದ್ಧಪಡಿಸಿದ ಉಡುಪುಗಳ ರಫ್ತಿನ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಅನಾಥಾಶ್ರಮಕ್ಕೆ ಆಹಾರ ಧಾನ್ಯವನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ವಿಭಾಗ