ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಪುಟ್ಟ ಮಗುವೊಂದಕ್ಕೆ ಬೆಣ್ಣೆ ತಿನ್ನಿಸಿ ದಿನದ ಕೆಲಸ ಆರಂಭಿಸಿದರೆ ಈ ರಾಶಿಯವರ ಎಲ್ಲಾ ಕೆಲಸಗಳು ಸಕ್ಸಸ್‌; ಬುಧವಾರದ ಭವಿಷ್ಯ

Horoscope Today: ಪುಟ್ಟ ಮಗುವೊಂದಕ್ಕೆ ಬೆಣ್ಣೆ ತಿನ್ನಿಸಿ ದಿನದ ಕೆಲಸ ಆರಂಭಿಸಿದರೆ ಈ ರಾಶಿಯವರ ಎಲ್ಲಾ ಕೆಲಸಗಳು ಸಕ್ಸಸ್‌; ಬುಧವಾರದ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಬುಧವಾರದ ರಾಶಿಭವಿಷ್ಯ.

24 ಮೇ 2023 ಬುಧವಾರದ ರಾಶಿಫಲ
24 ಮೇ 2023 ಬುಧವಾರದ ರಾಶಿಫಲ

ಇಂದಿನ ಪಂಚಾಂಗ: ಶ್ರೀ ಶೋಭಕೃತ್‌ನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲ ಪಕ್ಷ-ಬುಧವಾರ

ತಿಥಿ: ಪಂಚಮಿ ರಾತ್ರಿ12.56 ವರೆಗೆ ನಂತರ ಷಷ್ಠಿ ಆರಂಭವಾಗುತ್ತದೆ

ನಕ್ಷತ್ರ: ಪುನರ್ವಸು ನಕ್ಷತ್ರವು ಮಧ್ಯಾಹ್ನ 01.39 ವರೆಗೆ ಇದ್ದು ನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52 - ಸೂರ್ಯಾಸ್ತ: ಸಂಜೆ 6.40

ರಾಹುಕಾಲ: ಮಧ್ಯಾಹ್ನ12.20 ರಿಂದ ಮಧ್ಯಾಹ್ನ 01.55

ಮೇಷ

ಸೋದರನ ಕಷ್ಟನಷ್ಟಗಳು ಕೊನೆಯಾಗಲು ಸಹಾಯ ಮಾಡುವಿರಿ. ಕೆಲಸದ ಒತ್ತಡ ಅತಿಯಾದ ಕಾರಣ ಮಾನಸಿಕ ನೆಮ್ಮದಿ ಇರುವುದಿಲ್ಲ. ಅತಿಯಾದ ಆತ್ಮವಿಶ್ವಾಸ ಒಳಿತಲ್ಲ. ತಂದೆಯಿಂದ ಹಣ ಅಥವ ಭೂಮಿಯ ಲಭ್ಯತೆ ಇದೆ. ಯಾತ್ರಾಸ್ಥಳಕ್ಕೆ ತೆರಳುವಿರಿ. ಚುರುಕಿನ ಜೊತೆಗೆ ಹಠದ ಸ್ವಭಾವ ಕೆಲಸ ಕಾರ್ಯಗಳಲ್ಲಿ ಜಯವನ್ನು ದೊರಕಿಸಿಕೊಡುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಾಣದು. ವಿದ್ಯಾರ್ಜನೆಯಲ್ಲಿ ಮುಂದಿರುತ್ತಾರೆ. ಸ್ವತಂತ್ರವಾಗಿ ನಿರ್ವಹಿಸುವ ಹಣಕಾಸಿನ ಸಂಸ್ಥೆಯಿಂದ ಲಾಭ ಇರುತ್ತದೆ.

ಬಡರೋಗಿಗಳಿಗೆ ಸಹಾಯ ಮಾಡಿ ಎಂದಿನ ಕೆಲಸ ಆರಂಭಿಸಿ.

ವೃಷಭ

ಆರಂಭದಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದರೂ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಾರೆ. ಮಗಳು ಅಥವಾ ಸೋದರಿಗೆ ಪ್ರಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ಧಾರ್ಮಿಕ ಕೆಲಸವೊಂದು ನಿಮ್ಮ ನೇತೃತ್ವದಲ್ಲಿ ಪೂರ್ಣಗೊಳ್ಳಲಿದೆ. ಉದ್ಯೋಗದಲ್ಲಿ ದೊಡ್ಡ ಬದಲಾವಣೆಗಳು ಇರುವುದಿಲ್ಲ. ಅತಿಯಾಸೆ ಇಲ್ಲದೆ ಜೀವನಾಧಾರಕ್ಕಾಗಿ ಚಿಕ್ಕ ಪುಟ್ಟ ವ್ಯಾಪಾರವನ್ನು ಮಾಡುವಿರಿ. ಉನ್ನತಾಧಿಕಾರಿಗಳ ಸಹಾಯ ಸಹಕಾರ ದೊರೆಯುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭಾಂಶ ದೊರೆಯುತ್ತದೆ.

ಸಾಕು ಪ್ರಾಣಿಗಳಿಗೆ ಆಹಾರ ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಮಿಥುನ

ಸಮಾಜದ ಮುಖ್ಯಸ್ಥರಾಗುವಿರಿ. ಸ್ತಿರವಾದ ಮನಸ್ಸು ಇಲ್ಲದೆ ಹೋದರೂ ಕೆಲಸ ಕಾರ್ಯದಲ್ಲಿ ಹಿಂದೆ ಉಳಿಯುವುದಿಲ್ಲ. ಉತ್ತಮ ಆದಾಯ ಇರುವುದಾದರೂ ಖರ್ಚು ವೆಚ್ಚಗಳು ಸರಿ ಸಮಾನವಾಗಿರುತ್ತವೆ. ವಿದ್ಯಾರ್ಥಿಗಳು ಏಕಾಗ್ರಚಿತ್ತತೆಯನ್ನು ಬೆಳೆಸಿಕೊಳ್ಳಬೇಕು. ತಂದೆಯವರ ಅನುಜ್ಞೆ ಅಥವಾ ಸಹಾಯದಿಂದ ಮಾಡುವ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಕಾನೂನನ್ನು ಗೌರವಿಸಿ. ಅತಿಯಾಸೆಯಿಂದ ಅಪರಿಚಿತರೊಂದಿಗೆ ಹಣದ ವ್ಯವಹಾರವನ್ನು ಮಾಡದಿರಿ. ಕೃಷಿಯಾಧಾರಿತ ಕೆಲಸ ಕಾರ್ಯಗಳಲ್ಲಿ ಲಾಭವಿದೆ. ದೃಷ್ಠಿ ದೋಷದಿಂದ ಬಳಲುವಿರಿ. ಸಾಲದ ವ್ಯವಹಾರ ಬೇಡ.

11 ಕವಡೆಗಳನ್ನು ಉತ್ತರ ದಿಕ್ಕಿನಲ್ಲಿಟ್ಟು ಪೂಜಿಸಿ ಕೆಲಸ ಕಾರ್ಯಗಳನ್ನು ಆರಂಭಿಸಿರಿ.

ಕಟಕ

ಎಲ್ಲಾ ಅನುಕೂಲತೆಗಳು ಉಂಟಾದರೂ ಅಳುಕು ಮನಸ್ಸಿರುತ್ತದೆ. ತಂದೆಯವರ ಸಖ್ಯದಲ್ಲಿ ಸುಖಜೀವನ ನಡೆಸುವಿರಿ. ಕಾನೂನಿನ ಸಹಾಯದಿಂದ ವೃತ್ತಿ ಜೀವನದಲ್ಲಿನ ಸವಾಲನ್ನು ಗೆಲ್ಲುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ವಿದ್ಯಾರ್ಜನೆಯಲ್ಲಿ ತೊಂದರೆ ಉಂಟಾಗದು. ಆದಾಯದಲ್ಲಿ ತೊಂದರೆ ಬಾರದು. ಹಣ ಉಳಿತಾಯದ ಬಗ್ಗೆ ಯೋಚಿಸಿ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದಲ್ಲಿನ ಹಿರಿಯರಿಗೆ ಸಂಬಂಧಿಸಿದ ಮಂಗಳ ಕಾರ್ಯವೊಂದು ನಡೆಯುತ್ತದೆ. ಕಂತಿನ ವ್ಯಾಪಾರದಲ್ಲಿ ಲಾಭವಿದೆ.

ಕುಟುಂಬದವರಿಂದ ಕೊಂಚ ಹಣ ಪಡೆದು ದಿನದ ಕೆಲಸವನ್ನು ಆರಂಭಿಸಿ.

ಸಿಂಹ

ಕುಟುಂಬದ ಹಿರಿಯರ ಆಸೆ ಆಕಾಂಕ್ಷೆಗಳನ್ನು ಪೂರೈಸುವಿರಿ. ಹಣದ ತೊಂದರೆ ಬಾರದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಾರೆ. ಉದ್ಯೋಗದಲ್ಲಿ ಅತ್ಯುನ್ನತ ಮಟ್ಟ ತಲುಪುವಿರಿ. ಗಣ್ಯ ವ್ಯಕ್ತಿಗಳ ಆಸರೆ ನಿಮಗೆ ದೊರೆಯುತ್ತದೆ. ರಾಜಕೀಯದಲ್ಲಿ ನಿರೀಕ್ಷಿತ ಸ್ಥಾನ ದೊರೆಯುತ್ತದೆ. ತಂದೆಯವರಿಗೆ ವಂಶದ ಆಸ್ಥಿಯಲ್ಲಿ ಹೆಚ್ಚಿನ ಪಾಲು ದೊರೆಯುತ್ತದೆ. ವಾಣಿಜ್ಯ ಬೆಳೆಗಳ ಮೂಲಕ ರೈತರು ಹೆಚ್ಚಿನ ಲಾಭ ದೊರೆಯುತ್ತದೆ. ಸಿಡುಕಿನ ಬುದ್ಧಿ ತೋರದಿರಿ. ಸಮಾಜಸೇವೆಯಲ್ಲಿ ಕುಟುಂಬದ ಜವಾಬ್ದಾರಿಯನ್ನು ಮರೆಯದಿರಿ.

ಧಾರ್ಮಿಕ ಗುರುಗಳ ಆಶೀರ್ವಾದ ಪಡೆದ ನಂತರ ದೈನಂದಿನ ಕೆಲಸವನ್ನು ಆರಂಭಿಸಿ.

ಕನ್ಯಾ

ಪ್ರಯತ್ನಕ್ಕೆ ತಕ್ಕಂತ ಫಲಿತಾಂಶ ದೊರಕುತ್ತದೆ. ದೃಢವಾದ ಮನಸ್ಸಿನಿಂದ ಕೆಲಸ ಕಾರ್ಯದಲ್ಲಿ ತೊಡಗಿದಲ್ಲಿ ಯಾವುದೇ ತೊಂದರೆ ಉಂಟಾಗದು. ತಪ್ಪನ್ನು ಮಾಡಿ ಬೇರೆಯವರನ್ನು ದೂರುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಆದರೆ ದುಡುಕಿನ ಮಾತಿನಿಂದ ಕೆಟ್ಟ ಹೆಸರು ಗಳಿಸುವಿರಿ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ವರ್ತಿಸಬೆಕು. ಪಾಲುಗಾರಿಕೆಯ ವ್ಯಾಪಾರದಿಂದ ಆದಾಯ ಗಳಿಸುವಿರಿ. ಓದುವ ಜನತೆಗೆ ಅನುಕೂಲವಾಗಲು ಖಾಸಗಿ ಗ್ರಂಥಾಲಯ ಆರಂಭಿಸುವಿರಿ. ಆರೋಗ್ಯ ಕಾಪಾಡಿಕೊಳ್ಳಿರಿ. ಪಾಲುಗಾರಿಕೆ ವ್ಯಾಪಾರದಲ್ಲಿ ಲಾಭವಿರುತ್ತದೆ.

ಕೆಂಪು ದಾರದಲ್ಲಿ ಮನೆದೇವರ ಡಾಲರ್ ಧರಿಸಿದಲ್ಲಿ ಶುಭಫಲಗಳು ಹೆಚ್ಚಾಗಲಿವೆ.

ತುಲಾ

ಸೋದರಿಯ ಜೀವನದಲ್ಲಿನ ಕಷ್ಟ ನಷ್ಟಗಳು ದೂರವಾಗಲು ಕಾರಣರಾಗುವಿರಿ. ಸ್ವಂತ ಮನೆಯಿದ್ದರೂ ಪರಸ್ಥಳದಲ್ಲಿ ನೆಲೆಸುವಿರಿ. ತಂದೆಯವರಿಂದ ಭೂಮಿಯೊಂದು ಉಡುಗೊರೆಯಾಗಿ ದೊರೆಯಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ವ್ಯವಸಾಯದಲ್ಲಿ ಲಾಭಾಂಶ ಇರುತ್ತದೆ. ಮನಸ್ಸಿಗೆ ಬಂದ ಕೆಲಸ ಮಾಡುವಿರಿ. ಯಾರ ಸಲಹೆಯನ್ನೂ ಒಪ್ಪುವುದಿಲ್ಲ. ವಿದ್ಯಾರ್ಥಿಗಳು ಸುಲಭ ರೀತಿಯಲ್ಲಿ ಗುರಿ ತಲುಪುವರು. ಕೊನೆಯಿರದ ಕೆಲಸ ಕಾರ್ಯಗಳಿಂದ ದೈಹಿಕವಾಗಿ ಬಳಲುವಿರಿ. ಸಾಲದ ವ್ಯವಹಾರ ಮಾಡದಿರಿ, ವಿವಾದ ಬೇಡ.

ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಸಹಾಯ ಮಾಡಿದಲ್ಲಿ ಶುಭ ಫಲ ಪಡೆಯುವಿರಿ.

ವೃಶ್ಚಿಕ

ಮುಂಗೋಪದಿಂದ ಜನರೊಂದಿಗೆ ವಾದ ವಿವಾದದಲ್ಲಿ ತೊಡಗುವಿರಿ. ರಕ್ತದ ದೋಷವಿದ್ದಲ್ಲಿ ಎಚ್ಚರಿಕೆಯನ್ನು ವಹಿಸಿ. ತಪ್ಪು ಅಭಿಪ್ರಾಯದಿಂದ ಕುಟುಂಬದಲ್ಲಿ ವಿವಾದ ಉಂಟಾಗುತ್ತದೆ. ಅನಪೇಕ್ಷಿತ ಬೆಳವಣಿಗೆಯಿಂದ ಉದ್ಯೋಗ ಬದಲಾಯಿಸುವಿರಿ. ವಿದ್ಯಾರ್ಥಿಗಳು ಹೊಂದಾಣಿಕೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ರೋಷಾ ದ್ವೇಷದಿಂದ ಏನನ್ನೂ ಸಾಧಿಸಲಾರಿರಿ. ಲೋಹದ ವ್ಯಾಪಾರ ವ್ಯವಹಾರದಿಂದ ಆದಾಯ ಹೆಚ್ಚುತ್ತದೆ. ಹಳೆಯದ ಕಾಲದ ಮನೆಯನ್ನು ಕೊಂಡು ನವೀಕರಿಸುವ ಪ್ರಯತ್ನ ಮಾಡುವಿರಿ. ಕಿರಿ ಸೋದರ ಅಥವಾ ಕಿರಿ ಸೋದರಿಯ ಸಹಾಯದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ.

ಜೇನು ಸೇವಿಸಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ಧನಸ್ಸು

ಎಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಮಾನಸಿಕ ಒತ್ತಡದಿಂದ ದೂರವಾದಲ್ಲಿ ವಿದ್ಯಾರ್ಥಿಗಳು ಹೊಸ ಸಾಧನೆ ಮಾಡಬಲ್ಲರು. ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗುತ್ತದೆ. ಹಿರಿಯ ಸೋದರನ ಸಹಾಯ ಸಹಕಾರ ದೊರೆಯುತ್ತದೆ. ಆದಾಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಮಾತಿನ ಬಲದಿಂದಲೇ ಕೆಲಸ ಸಾಧಿಸುವಿರಿ. ಉಷ್ಣದ ತೊಂದರೆ ಇರುತ್ತದೆ. ಅಗ್ನಿಮಾಂಧ್ಯ ದೋಷದಿಂದ ಬಳಲುವಿರಿ. ಕುಟುಂಬದಲ್ಲಿ ನೀರಸ ವಾತಾವರಣ ಇರುತ್ತದೆ.

ಹೆಸರು ಕಾಳಿನಿಂದ ಮಾಡಿದ ಸಿಹಿತಿಂಡಿಯನ್ನು ಮಕ್ಕಳಿಗೆ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಮಕರ

ಕಷ್ಟದ ಕೆಲಸಗಳನ್ನು ಸುಲಭವಾಗಿ ಪೂರೈಸುವ ಚಾತುರ್ಯತೆ ನಿಮಗಿರುತ್ತದೆ. ತಾಂತ್ರಿಕ ಪರಿಜ್ಞಾನ ಮತ್ತು ಪರಿಕಲ್ಪನೆಗಳಿಗೆ ಯೋಗ್ಯ ಸ್ಥಾನ ಮಾನ ಗೌರವಗಳು ಲಭಿಸುತ್ತವೆ. ದೊಡ್ಡ ಮನೆತನದವರ ಮಕ್ಕಳೊಂದಿಗೆ ವಿವಾಹದ ಮಾತುಕತೆ ನಡೆಯುತ್ತದೆ. ಮಾತಿನಿಂದಾಗಿ ತೊಂದರೆಗೆ ಸಿಲುಕುವಿರಿ. ಕುಟುಂಬದ ಯಾವುದೇ ಕೆಲಸವಾದರೂ ಸಂಪೂರ್ಣ ಜವಾಬ್ದಾರಿಯನ್ನು ಹೊರುವಿರಿ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ತೊಂದರೆ ಇರದು . ವಿದ್ಯಾರ್ಥಿಗಳು ಸಂತಸದ ಸುದ್ದಿಯೊಂದನ್ನು ಕೇಳಲಿದ್ದಾರೆ.

ಯಾವುದೇ ರೀತಿಯ ಜಪಸರ ಧರಿಸಿದಲ್ಲಿ ತೊಂದರೆ ಇರುತ್ತದೆ, ಎಚ್ಚರಿಕೆ ಇರಲಿ.

ಕುಂಭ

ವಿದ್ಯಾರ್ಥಿಗಳು ಕಷ್ಟದಿಂದ ಗುರಿ ತಲುಪುವರು. ಮನೆತನದ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ತಂದೆ ಮತ್ತು ತಾಯಿಯವರಿಂದ ಹಣದ ಸಹಾಯ ಸಹಕಾರ ಇರುವ ಕಾರಣ ನೆಮ್ಮದಿಯಿಂದ ಇರುವಿರಿ. ಸರ್ಕಾರಿ ನೌಕರಿ ದೊರೆಯಬಹುದು. ಸರ್ಕಾರದ ಸಹಕಾರ ಸಂಸ್ಥೆಯ ಒಡೆತನ ದೊರೆಯುತ್ತದೆ. ತಂದೆಯವರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಹೆದರಿಕೆಯ ಗುಣವಿರುತ್ತದೆ. ಸ್ವಂತ ವ್ಯಾಪಾರವೊಂದನ್ನು ಆರಂಭಿಸಿ ಯಶಸ್ಸನ್ನು ಪಡೆಯುವಿರಿ. ಹಣ್ಣಿನ ವ್ಯಾಪಾರದಲ್ಲಿ ಲಾಭವಿದೆ. ಮೌನಿಯಾಗಿದ್ದುಕೊಂಡು ಮನದಾಸೆಯನ್ನು ಈಡೇರಿಸಿಕೊಳ್ಳುವಿರಿ.

ಪುಟ್ಟ ಮಗುವೊಂದಕ್ಕೆ ಬೆಣ್ಣೆ ತಿನ್ನಿಸಿ ದಿನದ ಕೆಲಸ ಆರಂಭಿಸಿ.

ಮೀನ

ಕೊಟ್ಟ ಮಾತನ್ನು ತಪ್ಪುವುದಿಲ್ಲ. ಕೈಹಿಡಿದ ಕೆಲಸದಲ್ಲಿ ಯಶಸ್ಸು ದೊರೆಯುವವರೆಗೂ ವಿಶ್ರಮಿಸುವುದಿಲ್ಲ. ಜನ ಮೆಚ್ಚುವಂತೆ ಮಾತನಾಡುವ ಕಲೆ ನಿಮಗಿದೆ. ವಿವಾದದಿಂದ ದೂರ ಉಳಿಯುವಿರಿ. ಸಮಾಜದ ಲೋಪ ದೋಷವನ್ನು ತಿದ್ದುವ ಜವಾಬ್ದಾರಿ ಮ್ಮದಾಗುತ್ತದೆ. ನಾನಾ ರೀತಿಯ ಕೆಲಸವನ್ನು ಸುಲಭವಾಗಿ ಮಾಡಬಲ್ಲಿರಿ. ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಅಧ್ಯಯನದ ಅವಕಾಶ ಪಡೆಯುತ್ತಾರೆ. ಸಮಾಜ ಸೇವಾ ಕೇಂದ್ರವನ್ನು ಆರಂಭಿಸುವಿರಿ. ಮಾಹಿತಿ ತಂತ್ರಜ್ಞಾನವನ್ನು ಬಲ್ಲವರಿಗೆ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸ್ವಂತ ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ.

ಕೆಂಪು ಬಣ್ಣದ ಒಡವೆ ವಸ್ತ್ರವನ್ನು ಧರಿಸಿದಲ್ಲಿ ಜಯ ದೊರೆಯುತ್ತದೆ.

ವಿಭಾಗ