Kannada News  /  Astrology  /  Horoscope Today Astrology Prediction For 30th May 2023 Tuesday Astrology Zodiac Signs Astrology Remedies Rsm

Horoscope Today: ಈ ರಾಶಿಯ ಪಶುಸಂಗೋಪನೆ ಉದ್ಯಮದವರಿಗೆ ಇಂದು ಒಳ್ಳೆ ಲಾಭ ದೊರೆಯಲಿದೆ; ಮಂಗಳವಾರದ ರಾಶಿಫಲ

ಮಂಗಳವಾರದ ರಾಶಿಭವಿಷ್ಯ
ಮಂಗಳವಾರದ ರಾಶಿಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಮಂಗಳವಾರದ ರಾಶಿಭವಿಷ್ಯ.

ಇಂದಿನ ಪಂಚಾಂಗ: ಶ್ರೀ ಶೋಭಕೃತನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲ ಪಕ್ಷ-ಮಂಗಳವಾರ

ಟ್ರೆಂಡಿಂಗ್​ ಸುದ್ದಿ

ತಿಥಿ: ದಶಮಿ ಬೆಳಗ್ಗೆ0.9.46 ವರೆಗೆ ಇದ್ದು ನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ: ಹಸ್ತ ನಕ್ಷತ್ರವು ರಾತ್ರಿ 03.18ವರೆಗೆ ಇದ್ದು ನಂತರ ಚಿತ್ತ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ05.52-ಸೂರ್ಯಾಸ್ತ: ಸಂಜೆ6.42

ರಾಹುಕಾಲ: ಮಧ್ಯಾಹ್ನ03.32 ರಿಂದ 05.08 ವರೆಗೆ

ಮೇಷ

ಸಮಯ ವ್ಯರ್ಥಗೊಳಿಸದೆ ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ಹಿಂದಿನ ತಲೆಮಾರಿನ ಆಸ್ತಿಯಲ್ಲಿ ನಿಮಗೆ ಸುಲಭವಾಗಿ ಹೆಚ್ಚಿನ ಪಾಲು ದೊರೆಯುತ್ತದೆ. ಕಷ್ಟ ನಷ್ಟದಲ್ಲಿ ಇದ್ದವರಿಗೆ ಸೂಕ್ತ ಸಲಹೆಗಳನ್ನು ಕೊಟ್ಟು ಜನಪ್ರಿಯತೆ ಗಳಿಸುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಅರಿತು ಓದಿನಲ್ಲಿ ಮಗ್ನರಾಗುತ್ತಾರೆ. ಹೊಸ ವ್ಯಾಪಾರ ವಹಿವಾಟಿನ ಆರಂಭ ಸದ್ಯಕ್ಕೆ ಬೇಡ. ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಿ.

ಧಾರ್ಮಿಕ ಕೇಂದ್ರಕ್ಕೆ ಹಾಲು ಮತ್ತು ಕಲ್ಲು ಸಕ್ಕರೆಯನ್ನು ಕೊಟ್ಟು ದಿನದ ಕೆಲಸ ಆರಂಭಿಸಿ.

ವೃಷಭ

ಉದ್ಯೋಗದಲ್ಲಿ ಉನ್ನತಿ ಇದೆ. ಹಿರಿಯ ಅಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ವಿದ್ಯಾರ್ಥಿಗಳ ಮನದಲ್ಲಿ ಒಂದು ರೀತಿಯ ಭಯ ಆವರಿಸಿರುತ್ತದೆ. ಹೊಸ ವ್ಯಾಪಾರದ ಬದಲು ಹಳೆಯ ವ್ಯಾಪಾರವನ್ನು ಮುಂದುವರಿಸಿ. ದಂಪತಿಗಳ ನಡುವೆ ವಿರಸವಿರುತ್ತದೆ. ಭೂಮಿಗೆ ಸಂಬಂಧ ಪಟ್ಟ ವ್ಯವಹಾರಗಳಲ್ಲಿ ಕೊಂಚ ಎಚ್ಚರಿಕೆ ಇರಬೇಕು. ಅನಾವಶ್ಯಕವಾಗಿ ಹಣ ಖರ್ಚು ಮಾಡಬೇಡಿ. ದಿನದ ಅಂತ್ಯಕ್ಕೆ ಹಣದ ಅವಶ್ಯಕತೆ ಇರುತ್ತದೆ. ಭೂಮಿಯ ವ್ಯವಹಾರ ಸದ್ಯಕ್ಕೆ ಬೇಡ. ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇರುವೆಗಳಿಗೆ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ಮಿಥುನ

ಸಾಧ್ಯವಾದಷ್ಟು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಆಸ್ತಿ ವಿಚಾರದಲ್ಲಿ ಸೋದರ ಅಥವಾ ಸೋದರಿಯ ಜೊತೆ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡುಬರುತ್ತದೆ. ವಿಧ್ಯಾರ್ಥಿಗಳು ಮನಸ್ಸನ್ನು ಬದಲಿಸದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅನಿರೀಕ್ಷಿತ ಧನ ಲಾಭವಿರುತ್ತದೆ ಕುಟುಂಬದಲ್ಲಿ ಶಾಂತಿಯ ಕೊರತೆ ಕಂಡು ಬರುತ್ತದೆ. ಖರ್ಚು ವೆಚ್ಚಗಳನ್ನು ಸರಿದೂಗಿಸಲು ಹಣ ಸಂಪಾದನೆಯ ದಾರಿ ಹುಡುಕಲಿದ್ದೀರಿ. ಆತ್ಮೀಯರೊಂದಿಗೆ ಅಲ್ಪ ಪ್ರಮಾಣದ ವಿವಾದ ವಿರುತ್ತದೆ. ಸಂತಾನ ಲಾಭವಿದೆ. ತಂದೆಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ.

ಬಡ ದಂಪತಿಗಳಿಗೆ ಸಹಾಯ ಮಾಡುವ ಮೂಲಕ ದಿನದ ಕೆಲಸ ಆರಂಭಿಸಿ.

ಕಟಕ

ಆತ್ಮವಿಶ್ವಾಸದ ಕೊರತೆ ಇರುತ್ತದೆ. ತಪ್ಪು ನಿರ್ಧಾರದಿಂದ ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು. ವಿನಾಕಾರಣ ಯಾರೊಂದಿಗೂ ವಾದ ವಿವಾದ ಮಾಡದಿರಿ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು. ಸೋದರಿಗೆ ಉತ್ತಮ ಆದಾಯವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭಕ್ಕೆ ಕೊರತೆ ಇರದು. ನೀರಿನ ವ್ಯಾಪಾರದಲ್ಲಿ ಲಾಭವಿರುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಒಡವೆಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಸೋದರಿಯು ಹಣದ ಸಹಾಯ ಮಾಡುತ್ತಾಳೆ.

ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ .

ಸಿಂಹ

ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕುಟುಂಬದವರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಅವಶ್ಯಕತ ಇದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು. ವಿದ್ಯಾರ್ಥಿಗಳು ಶುಭ ಫಲಗಳನ್ನು ಪಡೆಯುತ್ತಾರೆ. ಕಾನೂನಿನ ಅನ್ವಯ ವ್ಯಾಪಾರವನ್ನು ಆರಂಭಿಸಬಹುದು. ಸ್ವಂತ ಮನೆಯನ್ನು ಕೊಳ್ಳುವ ಸಾಧ್ಯತೆಗಳಿವೆ. ತಂದೆಯವರ ಆರೋಗ್ಯದಲ್ಲಿ ಬದಲಾವಣೆ ಕಂಡು ಬರುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಹೊಸ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿರುತ್ತದೆ. ವಾದ ವಿವಾದವಿಲ್ಲದೆ ಸಮಸ್ಯೆಗಳನ್ನು ಬಗೆಹರಿಸಿ.

ಧಾರ್ಮಿಕ ಗುರುಗಳ ಆಶೀರ್ವಾದದಿಂದ ಶುಭಫಲಗಳು ದೊರೆಯುತ್ತವೆ

ಕನ್ಯಾ

ಅನಾವಶ್ಯಕವಾಗಿ ಕೆಲಸ ಕಾರ್ಯಗಳನ್ನು ಮುಂದೂಡಬೇಡಿ. ಹೆಚ್ಚಿನ ಪ್ರಯಾಸವಿಲ್ಲದೆ ಹಣ ಸಂಪಾದಿಸುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆ ಗಳಿಸುವಿರಿ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯಿಂದ ಹೊರಬಂದು ವಿದ್ಯಾಭ್ಯಾಸದಲ್ಲಿ ಮುಂದುವರೆಯಬೇಕಾಗುತ್ತದೆ. ಸ್ವಂತ ಶಾಲಾ ಕಾಲೇಜನ್ನು ಆರಂಭಿಸುವ ಆಸೆ ಇದ್ದರೆ ಸಾಧ್ಯವಾಗುತ್ತದೆ. ಕುಟುಂಬದಲ್ಲಿನ ಭೂವಿವಾದಕ್ಕೆ ಪರಿಹಾರವನ್ನು ಕಂಡುಹಿಡಿಯುವಿರಿ. ತಾಯಿಯವರ ಜೊತೆಗೂಡಿ ಚಿಕ್ಕ ವ್ಯಾಪಾರ ಆರಂಭಿಸಿ. ಆತ್ಮೀಯ ಸ್ನೇಹಿತರೊಬ್ಬರು ತಮ್ಮ ಉದ್ಯಮದಲ್ಲಿ ಪಾಲುದಾರಿಕೆ ನೀಡುತ್ತಾರೆ. ಸಾಲದ ವ್ಯವಹಾರ ಬೇಡ.

ಕುಟುಂಬದ ಹಿರಿಯರ ಆಶೀರ್ವಾದದಿಂದ ಶುಭ ಫಲಗಳು ದೊರೆಯುತ್ತವೆ.

ತುಲಾ

ವ್ಯಾಪಾರಿ ಸಂಸ್ಥೆಯೊಂದನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಜನಸೇವೆ ಮಾಡುವ ಆಶಯ ನಿಮಗಿರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಗಣ್ಯವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ಕ್ರಿಯಾಶೀಲ ಬುದ್ಧಿ ಸಮಾಜದ ಮುಖ್ಯಸ್ಥಾನ ಸ್ಥಾನಮಾನ ನೀಡುತ್ತದೆ. ಆಸೆ ಇದ್ದಲ್ಲಿ ರಾಜಕೀಯ ಪ್ರವೇಶಿಸಲು ಗಣ್ಯ ವ್ಯಕ್ತಿಗಳ ಸಹಕಾರ ದೊರೆಯುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಷ್ಟವಾಗಬಹುದು.

ಹಿರಿಯರ ಆಶೀರ್ವಾದದೊಂದಿಗೆ ದಿನದ ಕೆಲಸವನ್ನು ಆರಂಭಿಸಿ

ವೃಶ್ಚಿಕ

ಪ್ರತಿ ವಿಚಾರದಲ್ಲೂ ಮುಂಗೋಪದಿಂದ ವರ್ತಿಸುವಿರಿ. ಸಂಗಾತಿಯ ಬುದ್ಧಿವಂತಿಕೆ ನಿಮ್ಮನ್ನು ಸಮಸ್ಯೆಯಿಂದ ಪಾರು ಮಾಡುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ . ಕುಟುಂಬದಲ್ಲಿ ಸಾಮರಸ್ಯ ಏರ್ಪಡುತ್ತದೆ. ಉದ್ಯೋಗದಲ್ಲಿ ಆತಂಕದ ವಾತಾವರಣ ಇದ್ದರೂ ತೊಂದರೆ ಆಗದು. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಬೇಕು. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭವಿದೆ. ಭೂವಿವಾದಗಳನ್ನು ಬಗೆಹರಿಸುವ ಸೇವಾವೃತ್ತಿ ಹೆಚ್ಚು ಲಾಭದಾಯಕ. ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಕಸರತ್ತಿನ ಅವಶ್ಯಕತೆ ಇದೆ. ಮಾಂಸಾಹಾರ ಸೇವಿಸದಿರಿ, ದೇವರ ಧ್ಯಾನ ಮಾಡಿ.

ಧನಸ್ಸು

ಶುದ್ಧ ಮನಸ್ಸಿನಿಂದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕಷ್ಟ ನಷ್ಟಗಳಿಗೆ ಸಹಾಯ ಮಾಡುವ ಮನಸ್ಸಿರುತ್ತದೆ . ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ವಂಶದ ಹಿರಿಯರಿಂದ ಆಸ್ತಿ ಅಂತಸ್ತು ಲಭಿಸುತ್ತದೆ. ವಿವಿಧ ರೀತಿಯಲ್ಲಿ ಆದಾಯವನ್ನು ಗಳಿಸಿ ಶಾಂತಿಯಿಂದ ಬಾಳುವಿರಿ. ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡುತ್ತಾರೆ. ಸೋದರನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ವ್ಯಾಪಾರವನ್ನು ಆರಂಭಿಸಲು ಇದು ಉತ್ತಮ ಸಮಯವಲ್ಲ. ಸಹನೆಯಿಂದ ವರ್ತಿಸಿ. ಆತ್ಮೀಯರ ಸಹಾಯ ಪಡೆಯಿರಿ.

ಹಳದಿ ಬಟ್ಟೆ ಧರಿಸಿ ಮಾಡುವ ಕೆಲಸದಲ್ಲಿ ಲಾಭವಿದೆ.

ಮಕರ

ಯಾವುದೇ ಅಂಜಿಕೆ ಇಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇರದು. ಅವಕಾಶವಿದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು. ವಿದ್ಯಾರ್ಥಿಗಳಿಗೆ ಶುಭದಿನ. ಲೋಹಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ವಂಶದ ಆಸ್ತಿಯಲ್ಲಿನ ವಿವಾದದಲ್ಲಿ ಪರಿಹಾರ ದೊರೆಯುತ್ತದೆ. ಮಾತನಾಡುವ ಮುನ್ನ ಒಮ್ಮೆ ಯೋಚಿಸುವುದು ಒಳಿತು.

ಬೆಲ್ಲ ಮತ್ತು ಕಪ್ಪು ಎಳ್ಳಿನಿಂದ ಮಾಡಿದ ಸಿಹಿಯನ್ನು ತಿಂದು ದಿನದ ಕೆಲಸ ಆರಂಭಿಸಿ.

ಕುಂಭ

ಕುಟುಂಬದ ಎಲ್ಲರೂ ನಿಮ್ಮ ಮಾತನ್ನು ಒಪ್ಪುತ್ತಾರೆ. ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ. ವಿದ್ಯಾರ್ಥಿಗಳು ಮನರಂಜನೆಯನ್ನು ಬಿಟ್ಟು ವ್ಯಾಸಂಗದಲ್ಲಿ ತೊಡಗಬೇಕು . ಗೃಹ ಕೈಗಾರಿಕೆಯಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ .ಅವಶ್ಯಕವಾದ ವಿಚಾರವನ್ನು ರಹಸ್ಯವಾಗಿರಿ. ಕುಟುಂಬದ ವಿವಾದವನ್ನು ಬಗೆ ಹರಿಸುವಿರಿ. ಮಕ್ಕಳ ಬಟ್ಟೆಗಳ ತಯಾರಿಕಾ ಸಂಸ್ಥೆಯಲ್ಲಿ ಅಥವಾ ಬೇಸಾಯದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಪಶು ಸಂಗೋಪನೆಯಲ್ಲಿ ಆರ್ಥಿಕ ಲಾಭವಿದೆ. ಹೈನುಗಾರಿಕೆಯಲ್ಲಿ ಎಲ್ಲರ ಸಹಾಯ ದೊರೆಯುತ್ತದೆ.

ಮರಕ್ಕೆ ನೀರು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ಮೀನ

ಬುದ್ಧಿವಂತಿಕೆ ಮತ್ತು ವಿಶ್ವಾಸದಿಂದ ಹಣಕಾಸು ಸಂಸ್ಥೆಯನ್ನು ಆರಂಭಿಸುವಿರಿ. ಉದ್ಯೋಗ ಮತ್ತು ವ್ಯಾಪಾರವನ್ನು ಒಮ್ಮೆಲೇ ಸಮರ್ಥವಾಗಿ ನಿರ್ವಹಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ಸಂಸಾರದಲ್ಲಿಅಸಹಜ ಘಟನೆಯೊಂದು ನಡೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಭೂಮಿಗೆ ಸಂಬಂಧಿಸಿದ ವ್ಯಾಪಾರ ವಹಿಸಿ ವಹಿವಾಟಿನಲ್ಲಿ ವಿರೋಧವಿಸುತ್ತದೆ. ಸ್ವಂತ ಬಳಕೆಗೆ ಬೃಹತ್ ವಾಹನವನ್ನು ಕೊಳ್ಳುವಿರಿ. ಇರುವ ಮನೆಯನ್ನು ವಿಸ್ತರಿಸುವಿರಿ. ವೃದ್ದಾಶ್ರಮದ ನಿರ್ವಹಣೆಯ ಜವಾಬ್ದಾರಿ ನಿಮಗೆ ದೊರೆಯುತ್ತದೆ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ ನಂತರ ದಿನಚರಿಯನ್ನು ಆರಂಭಿಸಿ .

ವಿಭಾಗ