ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಬ್ರಹ್ಮಚಾರಿಗಳನ್ನು ಆಹ್ವಾನಿಸಿ ಆಹಾರ ನೀಡಿ ಸತ್ಕರಿಸಿದರೆ ಈ ರಾಶಿಯವರಿಗೆ ಎಲ್ಲವೂ ಶುಭವಾಗಲಿದೆ; ಬುಧವಾರದ ರಾಶಿಫಲ

Horoscope Today: ಬ್ರಹ್ಮಚಾರಿಗಳನ್ನು ಆಹ್ವಾನಿಸಿ ಆಹಾರ ನೀಡಿ ಸತ್ಕರಿಸಿದರೆ ಈ ರಾಶಿಯವರಿಗೆ ಎಲ್ಲವೂ ಶುಭವಾಗಲಿದೆ; ಬುಧವಾರದ ರಾಶಿಫಲ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ಬುಧವಾರದ ರಾಶಿಭವಿಷ್ಯ.

31 ಮೇ 2023ರ ರಾಶಿಫಲ
31 ಮೇ 2023ರ ರಾಶಿಫಲ (PC: Freepik)

ಇಂದಿನ ಪಂಚಾಂಗ: ಶ್ರೀ ಶೋಭಕೃತ ನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲ ಪಕ್ಷ-ಬುಧವಾರ

ತಿಥಿ: ಏಕಾದಶಿ ಬೆಳಗ್ಗೆ10.37 ವರೆಗೆ ಇದ್ದು ನಂತರ ದ್ವಾದಶಿ ಆರಂಭವಾಗುತ್ತದೆ.

ನಕ್ಷತ್ರ: ಚಿತ್ತ ನಕ್ಷತ್ರವು 04.28 ವರೆಗೆ ಇದ್ದು ನಂತರ ಸ್ವಾತಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.52 - ಸೂರ್ಯಾಸ್ತ: ಸಂಜೆ 6.42

ರಾಹುಕಾಲ: ಮಧ್ಯಾಹ್ನ12.20 ರಿಂದ ಮಧ್ಯಾಹ್ನ01.56 ವರೆಗೆ

ಮೇಷ

ಸೋದರಿಯ ಭೂ ವಿವಾದಕ್ಕೆ ಪರಿಹಾರವನ್ನು ಕಂಡುಹಿಡಿಯುವಿರಿ. ಕಾನೂನು ಪಾಲನಾ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಮಸ್ಯೆ ಉಂಟಾಗದು. ಮೃದುವಾದ ಬೆಲೆ ಬಾಳುವ ವಸ್ತುಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಪರೋಕ್ಷವಾಗಿ ನ್ಯಾಯ ಪಾಲನೆಯ ಕೆಲಸವನ್ನು ಮಾಡುವಿರಿ. ನರ ನಿಶ್ಚಕ್ತಿಯ ತೊಂದರೆ ಉಂಟಾಗಬಹುದು. ಒತ್ತಡದಲ್ಲಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಆತ್ಮೀಯರಿಗೆ ವ್ಯಾಪಾರದಲ್ಲಿ ಪಾಲುಗಾರಿಕೆ ನೀಡುವಿರಿ.

ಧಾರ್ಮಿಕ ಕೇಂದ್ರಕ್ಕೆ ಕಲ್ಲು ಸಕ್ಕರೆ ಜೇನುತುಪ್ಪ ನೀಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.

ವೃಷಭ

ಹಣಕಾಸಿನ ಸಂಸ್ಥೆಯಲ್ಲಿ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗದಿರಿ. ತಂದೆಯವರು ಮಾಡುತ್ತಿದ್ದ ಉದ್ಯೋಗ ಅಥವಾ ವ್ಯಾಪಾರವನ್ನು ಮುಂದುವರಿಸುವಿರಿ. ವಿದ್ಯಾರ್ಥಿಗಳಿಗೆ ಶುಭ ವರ್ತಮಾನವಿದೆ. ವೈಭವದ ವಸ್ತುಗಳ ಮಾರಾಟದಲ್ಲಿ ನಿರೀಕ್ಷಿತ ಲಾಭ ದೊರಕುತ್ತದೆ. ಕುಟುಂಬದ ಸದಸ್ಯರ ಜೊತೆ ವ್ಯಾಪಾರವನ್ನು ಮಾಡಿ. ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡಬೇಡಿ. ವಾಹನಗಳ ದುರಸ್ತಿಯ ಸೇವಾ ಕೇಂದ್ರವನ್ನು ಆರಂಭಿಸುವಿರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ವಿವಾದವಿರುತ್ತದೆ.

ಬ್ರಹ್ಮಚಾರಿಗಳಿಗೆ ಆಹಾರ ನೀಡಿ ದಿನಚರಿಯನ್ನು ಆರಂಭಿಸಿ .

ಮಿಥುನ

ವಾಸ ಸ್ಥಳವನ್ನು ಬದಲಾಯಿಸುವಿರಿ. ಸ್ಥಿರವಾದ ಮನಸ್ಸಿರುವುದಿಲ್ಲ . ಯಾವುದೇ ಕೆಲಸವಾದರೂ ಬೇಸರದಿಂದಲೇ ಆರಂಭಿಸುವಿರಿ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ದ್ರವರೂಪದ ವಸ್ತುವಿನ ವ್ಯಾಪಾರ ವ್ಯವಹಾರದಿಂದ ಉತ್ತಮ ಆದಾಯ ಇರುತ್ತದೆ. ಹಣಕಾಸಿನ ವ್ಯವಹಾರ ಒಂದರಲ್ಲಿ ಮನಸ್ತಾಪ ಉಂಟಾಗಬಹುದು. ವಿದ್ಯಾರ್ಥಿಗಳು ಕಷ್ಟಪಟ್ಟು ವ್ಯಾಸಂಗದಲ್ಲಿ ಮುಂದುವರೆಯಬೇಕು. ಯಂತ್ರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭವಿದೆ. ಸ್ವಂತ ವ್ಯಾಪಾರದ ಬಗ್ಗೆ ಮನಸ್ಸಿದ್ದರೂ ಸಾಧ್ಯವಾಗದು. ಕುಟುಂಬದ ಹಿರಿಯರ ಆದೇಶದಂತೆ ಹಣದ ನಿರ್ವಹಣೆ ಮಾಡಿ.

ದಂತದ ವಸ್ತುವನ್ನು ಬಳಸದಿರಿ .

ಕಟಕ

ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಇರುವ ಮನೆ ಮೇಲೆ ಮಹಡಿಯನ್ನು ನಿರ್ಮಿಸಲಿದ್ದೀರಿ. ವೈಭವದ ವಾಹನವನ್ನು ಕೊಳ್ಳುವಿರಿ. ಸುಖಕರ ಜೀವನ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಆತುರದ ನಿರ್ಧಾರ ಬೇಡ. ವಿದ್ಯಾರ್ಥಿಗಳು ಶುಭ ಫಲಗಳನ್ನು ಪಡೆಯುತ್ತಾರೆ. ಅನಿರೀಕ್ಷಿತ ಧನ ಲಾಭವಿದೆ. ಕಾನೂನಿನ ಬಗ್ಗೆ ಜ್ಞಾನವಿರುತ್ತದೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿಆಸಕ್ತಿ ಇರುವುದಿಲ್ಲ. ಸಾಲದ ವ್ಯವಹಾರ ಬೇಡ. ಹಿರಿಯ ಸೋದರ ಅಥವಾ ಸೋದರಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಸಿಂಹ

ಜನಸೇವೆ ಮಾಡುವಲ್ಲಿ ಸದಾ ನಿರತರಾಗಿರುವಿರಿ . ಬುದ್ಧಿವಂತಿಕೆಯ ಮಾತುಕತೆ ಅನೇಕ ವಿವಾದಗಳಿಗೆ ಅಂತ್ಯ ಹಾಡುತ್ತದೆ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇರದು. ನಿಮ್ಮ ಮಾತಿಗೆ ಎಲ್ಲರೂ ಗೌರವವನ್ನು ನೀಡುತ್ತಾರೆ. ಸೋದರಿಗೆ ವೈವಾಹಿಕ ಸಮಸ್ಯೆಯೊಂದು ಎದುರಾಗಬಹುದು .ಭೂ ವಿವಾದ ಇರುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ವಹಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬೋಧನಾ ಕೇಂದ್ರದಿಂದ ಉತ್ತಮ ಆದಾಯ ದೊರೆಯುತ್ತದೆ .ಕುಟುಂಬದ ವಯೋವೃದ್ಧರ ಆರೋಗ್ಯದ ಕಡೆ ಗಮನ ನೀಡಿ. ಬೇವಿನ ಮರವನ್ನು ಪೂಜಿಸಿ ದಿನದ ಕೆಲಸವನ್ನು ಆರಂಭಿಸಿ .

ಕನ್ಯಾ

ಹಣಕಾಸಿನ ಲೆಕ್ಕಾಚಾರದ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ . ತಂದೆಯವರು ಮಾಡುವ ವ್ಯಾಪಾರ ವ್ಯವಹಾರಕ್ಕೆ ಸಹಾಯ ನೀಡುವಿರಿ . ಸಂಚಾರಕ್ಕೆ ಸಂಬಂಧಿಸಿದ ವ್ಯಾಪಾ್ರದಲ್ಲಿ ಹೆಚ್ಚಿನ ಲಾಭ ಇರುತ್ತದೆ. ಉದ್ಯೋಗದಲ್ಲಿ ಅನಾವಶ್ಯಕ ವಾದ ವಿವಾದಗಳು ಕಂಡುಬರುತ್ತದೆ . ಉದ್ಯೋಗದಲ್ಲಿ ಪ್ರಮೋಷನ್‌ ದೊರೆತು ಪರಸ್ಥಳಕ್ಕೆ ವರ್ಗವಾಗಬಹುದು. ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯುತ್ತವೆ ಸಾಧ್ಯವಾದಷ್ಟು ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸಬೇಡಿ . ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ.

ಹೆಣ್ಣು ಮಕ್ಕಳಿಗೆ ಸಿಹಿ ತಿಂಡಿ ನೀಡಿ ದಿನಗಳ ಕೆಲಸವನ್ನು ಆರಂಭಿಸಿ.

ತುಲಾ

ಕಲಾವಿದರಿಗೆ ವಿಶೇಷ ಗೌರವಾದರಗಳು ಲಭಿಸುತ್ತವೆ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಿಸಬೇಕಾಗುತ್ತದೆ. ಯಂತ್ರ ಸಂಬಂಧಿ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ವಿದ್ಯಾರ್ಥಿಗಳು ಅಡಚಣೆಯೊಂದನ್ನು ಎದುರಿಸಬೇಕಾಗುತ್ತದೆ . ವಾದ ವಿವಾದಗಳನ್ನು ಎದುರಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅಲ್ಪಮಟ್ಟಿನ ಲಾಭ ದೊರೆಯುತ್ತದೆ . ಸಮಾಜದಲ್ಲಿ ಉನ್ನತ ಮಟ್ಟದ ಗೌರವವನ್ನು ಗಳಿಸುವಿರಿ. ಸ್ವಗೃಹ ಭೂಲಾಭವಿದೆ. ಅನಾವಶ್ಯಕ ಅಲೆದಾಟವಿರುತ್ತದೆ. ಛಾಯಾಚಿತ್ರಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಆರಂಭಿಸುವಿರಿ.

ಧಾರ್ಮಿಕ ಕೇಂದ್ರಕ್ಕೆ ಹಳದಿ ಬಟ್ಟೆ ಮತ್ತು ಕಡಲೆ ಬೇಳೆ ನೀಡಿ ಕೆಲಸವನ್ನು ಆರಂಭಿಸಿ .

ವೃಶ್ಚಿಕ

ಮನದಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ . ಆಯುರ್ವೇದತಹ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಅರಿವು ಇರುತ್ತದೆ . ಉದ್ಯೋಗದಲ್ಲಿ ಒಳಿತನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಒಳಿತಿದೆ. ದೊಡ್ಡಮಟ್ಟದ ವ್ಯಾಪಾರ ಒಂದರಲ್ಲಿ ವಿವಾದವನ್ನು ಎದುರಿಸಬೇಕಾಗುತ್ತದೆ. ಹಣದ ಕೊರತೆಯನ್ನು ಕಡಿಮೆ ಮಾಡಲು ಕಮಿಷನ್ ಆಧಾರದಲ್ಲಿ ಮಾಡುವ ವ್ಯವಹಾರವನ್ನು ಆರಂಭಿಸುವಿರಿ. ಕೃಷಿ ಕಾರ್ಮಿಕರಿಗೆ ಒಳ್ಳೆಯ ದಿನ.

ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸ ಆರಂಭಿಸಿ.

ಧನಸ್ಸು

ಹಠದ ಬುದ್ಧಿಯಿಂದಾಗಿ ಕುಟುಂಬದಲ್ಲಿ ಅಸಹನೆ ಉಂಟಾಗುತ್ತದೆ. ನಿಮ್ಮದೇ ದುಡುಕಿನ ಬುದ್ಧಿಯಿಂದ ಉದ್ಯೋಗದಲ್ಲಿ ಒತ್ತಡದ ಸನ್ನಿವೇಶವನ್ನು ಎದುರಿಸುವಿರಿ . ಹಿರಿಯ ಅಧಿಕಾರಿಗಳ ಸಹಾಯ ಸಹಕಾರ ಲಭಿಸುತ್ತದೆ. ನೀರು ಅಥವಾ ವಾಹನದ ಕಂಟಕವಿದೆ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳಿಗೆ ಶುಭವಿದೆ. ಆತ್ಮೀಯರ ಸಲಹೆಯನ್ನು ಆಲಿಸುವುದು ಒಳ್ಳೆಯದು. ತಾತ ಅಥವಾ ಅಜ್ಜಿಯಿಂದ ಹಣದ ಸಹಾಯ ದೊರೆಯುತ್ತದೆ. ಬೆಳೆ ಬಾಳುವ ವಸ್ತುಗಳ ವ್ಯಾಪಾರದಿಂದ ಲಾಭಗಳಿಸುವಿರಿ. ಯಾರೊಬ್ಬರನ್ನೂ ನೀವು ಸುಲಭವಾಗಿ ನಂಬುವುದಿಲ್ಲ.

ಯಾವುದೇ ಕಾರಣಕ್ಕೂ ದಂತದ ವಸ್ತುಗಳನ್ನು ಬಳಸದಿರಿ.

ಮಕರ

ಬಂಧು ಬಳಗದಿಂದ ದೂರ ಇರುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಸಹಕಾರ ದೊರೆಯುತ್ತದೆ . ತಂದೆಯವರಿಗೆ ಅನಾರೋಗ್ಯವಿರುತ್ತದೆ . ಉದ್ಯೋಗದಲ್ಲಿ ಉನ್ನತಿ ದೊರೆಯುತ್ತದೆ . ಬಟ್ಟೆ ಮತ್ತು ಟೈಲರಿಂಗ್ ವಸ್ತುಗಳ ವ್ಯಾಪಾರ ಹಾಗೂ ಸರಬರಾಜಿನಲ್ಲಿ ಉತ್ತಮ ಆದಾಯ ದೊರೆಯುತ್ತದೆ . ತೋಟಗಾರಿಕೆಯಿಂದ ಆದಾಯವಿರುತ್ತದೆ . ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯುತ್ತವೆ. ವೈಜ್ಞಾನಿಕ ಅನ್ವೇಷಣೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ವಿದೇಶ ವಿದೇಶದಲ್ಲಿ ಅವಕಾಶ ದೊರೆಯುತ್ತದೆ.

ವಾಹನವನ್ನು ಶುಚಿಗೊಳಿಸಿದ ನಂತರ ದಿನದ ಕೆಲಸ ಆರಂಭಿಸಿ

ಕುಂಭ

ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಪ್ರತಿಫಲ ದೊರೆಯುತ್ತದೆ . ಉದ್ಯೋಗದಲ್ಲಿ ಯಾವುದೇ ಹಿನ್ನಡೆ ಇರುವುದಿಲ್ಲ . ಉಡುಪುಗಳನ್ನು ಸಿದ್ಧಪಡಿಸಿ ಹೊರ ದೇಶಗಳಿಗೆ ರಫ್ತು ಮಾಡುವ ವ್ಯಾಪಾರವನ್ನು ಆರಂಭಿಸುವಿರಿ . ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡುತ್ತಾರೆ. ಯಾಂತ್ರಿಕ ಜ್ಞಾನವನ್ನು ಹೊಂದಿರುವವರು ವಿದೇಶದಲ್ಲಿ ಉದ್ಯೋಗ ಗಳಿಸುತ್ತಾರೆ. ಸತತ ಕೆಲಸ ಕಾರ್ಯಗಳಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ . ಕಾನೂನಿನ ಅನುಮತಿ ಪಡೆದು ಹಣಕಾಸಿನ ವ್ಯವಹಾರದ ಸಂಸ್ಥೆಯನ್ನು ಆರಂಭಿಸಲಿದ್ದೀರಿ.

ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಶುಭ ಫಲಗಳನ್ನು ಪಡೆಯಬಹುದು.

ಮೀನ

ಅನಾಥಾಶ್ರಮ ಅಥವಾ ವೃದ್ಧಾಶ್ರಮದ ನಿರ್ವಹಣೆಯ ಜವಾಬ್ದಾರಿ ನಿಮಗೆ ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರವಿರುತ್ತದೆ. ಉದ್ಯೋಗವನ್ನು ಬದಲಿಸುವ ಯೋಚನೆ ಮಾಡುವಿರಿ . ವಂಶದ ಆಸ್ತಿಯಲ್ಲಿ ನಿಮಗೆ ಸಿಂಹ ಪಾಲು ದೊರೆಯುತ್ತದೆ . ವಿದ್ಯಾರ್ಥಿಗಳು ಸುಲಭ ರೀತಿಯಲ್ಲಿ ಕಾರ್ಯ ಸಾಧಿಸುತ್ತಾರೆ . ಕೃಷಿ ಕಾರ್ಯಕ್ಕೆ ಬೇಕಾದ ಉಪಕರಣಗಳ ಮಾರಾಟದಲ್ಲಿ ತೊಡಗುವಿರಿ . ಸಾಲ ಕೊಡುವುದಾಗಲಿ ಪಡೆಯುವುದಾಗಲಿ ಒಳ್ಳೆಯದಲ್ಲ . ಬಹುದಿನದ ಹಿಂದೆ ನಡೆಯಬೇಕಿದ್ದ ಮಂಗಳ ಕಾರ್ಯವೊಂದು ನಿಮ್ಮ ಸಹಕಾರದಿಂದ ನಡೆಯಲಿದೆ.

ಕೆಂಪು ಬಟ್ಟೆ ಧರಿಸುವುದರಿಂದ ಉತ್ತಮ ಪರಿಣಾಮ ಫಲಿತಾಂಶಗಳನ್ನು ಪಡೆಯಬಹುದು.

ವಿಭಾಗ