ಕನ್ನಡ ಸುದ್ದಿ  /  Astrology  /  Horoscope Today Astrology Prediction In Kannada 14 March 2024 Aries Taurus Gemini Cancer Daily Horoscope Sts

Horoscope Today: ನಿರೀಕ್ಷೆಗೂ ಮೀರಿದ ಶುಭಫಲ ಸಿಗುವುದು, ಬೇರೆಯವರ ಮನಸ್ಸನ್ನು ಅರಿತು ನಡೆದುಕೊಳ್ಳಿ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಮಾರ್ಚ್​ 14, ಗುರುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (14 March 2024 Daily Horoscope).

ಮಾರ್ಚ್​ 14ರ ದಿನಭವಿಷ್ಯ
ಮಾರ್ಚ್​ 14ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (14 March 2024 Daily Horoscope).

ರಾಶಿ ಫಲಗಳು

ಮೇಷ

ಆರೋಗ್ಯವನ್ನು ಸರಿ ಹಾದಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ದೈನಂದಿನ ರೀತಿ ನೀತಿಗಳನ್ನು ಬದಲಿಸಿಕೊಳ್ಳುವಿರಿ. ಮುಂಗೋಪವಿರುತ್ತದೆ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆಯನ್ನು ನೀಡುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡವು ಹೆಚ್ಚಾಗಿರುತ್ತದೆ. ಸಂಪಾದಿಸಿದ ಹಣವನ್ನು ಖರ್ಚು ಮಾಡಲು ಮನಸ್ಸಿರುವುದಿಲ್ಲ. ಕುಟುಂಬದ ಕೆಲಸ ಕಾರ್ಯಗಳು ಯಶಸ್ವಿಯಾಗುವ ಕಾರಣ ಸಂತೋಷ ತುಂಬಿರುತ್ತದೆ. ಅನಾವಶ್ಯಕವಾಗಿ ಸಣ್ಣಪುಟ್ಟ ವಿಚಾರಗಳಿಗೂ ವಾದ ವಿವಾದಗಳು ಇರಲಿವೆ. ಉದ್ಯೋಗದಲ್ಲಿ ನಿಮ್ಮ ಮಾರ್ಗದರ್ಶನದಲ್ಲಿ ಮಾಡಿದ ಪ್ರಾಜೆಕ್ಟ್​​​ನಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಆತ್ಮೀಯರೊಂದಿಗೆ ಸಂತೋಷದಿಂದ ದಿನ ಕಳೆಯುವಿರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ವೃಷಭ

ಮನದಲ್ಲಿರುವ ಯೋಚನೆಗಳನ್ನು ಮರೆತು ಎಲ್ಲರೊಂದಿಗೆ ನಗುನಗುತ್ತಾ ಬಾಳುವಿರಿ. ಆತ್ಮೀಯರು ಆಯೋಜಿಸಿದ ಕಾರ್ಯಕ್ರಮದ ಜವಾಬ್ದಾರಿ ದೊರೆಯಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಹಣಕಾಸಿನ ವಿಚಾರದಲ್ಲಿ ತೊಂದರೆ ಕಾಣಬಹುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಂಗಾತಿಗೆ ವಿಶೇಷವಾದ ಗೌರವ ಮತ್ತು ಉನ್ನತ ಹುದ್ದೆ ದೊರೆಯುತ್ತವೆ. ಸಂಗಾತಿಯಿಂದ ಸಂಪೂರ್ಣ ಸಹಾಯ ದೊರೆಯಲಿದೆ. ಹೊಗಳಿಕೆಗೆ ಮರುಳಾಗಬೇಡಿರಿ. ಮನದಲ್ಲಿರುವ ಯೋಚನೆಗೆ ಮಾತಿನ ರೂಪವನ್ನು ನೀಡುವಿರಿ. ಹೊಗಳಿಕೆ ಮತ್ತು ಅನುಕೂಲತೆಯನ್ನು ನಿರೀಕ್ಷಿಸುತ್ತ ಕೆಲಸದಲ್ಲಿ ಭಾಗವಹಿಸುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನೆಮ್ಮದಿಯಿಂದ ಬಾಳುತ್ತಾರೆ. ನಿರೀಕ್ಷೆಗೂ ಮೀರಿದ ಶುಭಫಲಗಳು ದೊರೆಯುವುದು.

ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಗುಲಾಬಿ ಬಣ್ಣ

ಮಿಥುನ

ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಆದರೆ ಸರಿಯಾದ ಕ್ರಮದಿಂದ ಉತ್ತಮ ಆರೋಗ್ಯ ಗಳಿಸುವಿರಿ. ಆತ್ಮೀಯರೊಂದಿಗೆ ದೀರ್ಘ ಕಾಲದ ಪ್ರವಾಸ ಮಾಡುವಿರಿ. ನಿಮ್ಮ ಮನಸ್ಸನ್ನು ಗೆದ್ದಿರುವ ಅಮೂಲ್ಯವಾದ ವಸ್ತುಗಳನ್ನು ಕಾಪಾಡಿಕೊಳ್ಳಿ. ಮನಸ್ಸಿಲ್ಲದೆ ಹೋದರು ದೂರದ ಸಂಬಂಧಿ ಒಬ್ಬರಿಗೆ ಹಣದ ಸಹಾಯ ಮಾಡುವಿರಿ. ಮಕ್ಕಳ ವಿಚಾರದಲ್ಲಿ ವಿನಾಕಾರಣ ಯೋಚನೆ ಇರಲಿದೆ. ಮಕ್ಕಳೊಂದಿಗೆ ಪ್ರೀತಿಯಿಂದ ಬಾಳುವಿರಿ. ನಂಬಿಸಿ ಮೋಸ ಮಾಡುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬದವರ ಒತ್ತಡದಿಂದ ಕೆಲಸವೊಂದನ್ನು ನಿರ್ವಹಿಸಬೇಕಾಗುತ್ತದೆ. ಮನರಂಜನಾ ಮಾಧ್ಯಮದಲ್ಲಿ ಇರುವವರಿಗೆ ವಿಶೇಷ ಹಾಗೂ ಉತ್ತಮ ಅವಕಾಶಗಳು ದೊರೆಯಲಿದೆ.

ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ :7

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಕಟಕ

ನಿಮ್ಮ ಮಾತನ್ನು ಯಾರೂ ಕೇಳಲಾರರು. ಇದರಿಂದ ಮನದಲ್ಲಿ ಬೇಸರ ಮೂಡುತ್ತದೆ. ನಿಮ್ಮ ನಿರ್ಧಾರ ಮತ್ತು ಆಡುವ ಮಾತುಗಳು ಸರಿಯಾಗಿರುತ್ತದೆ ಎಂಬ ಭಾವನೆ ಇರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು. ಬೇರೆಯವರ ಮನಸ್ಸನ್ನು ಅರಿತು ನಡೆದುಕೊಳ್ಳಿ. ಕುಟುಂಬದಲ್ಲಿ ಹಬ್ಬದ ವಾತಾವರಣ ಇರಲಿದೆ. ಕೆಲವೊಮ್ಮೆ ಏನೂ ತಿಳಿಯದಂತೆ ಇರುವುದು ಒಳ್ಳೆಯದು. ಸಣ್ಣ ಪುಟ್ಟ ವಿಚಾರಗಳಿಗೂ ವಿವಾದಾತ್ಮಕ ಹೇಳಿಕೆ ನೀಡುವಿರಿ. ಕುಟುಂಬದವರು ನಿಮ್ಮ ತಪ್ಪನ್ನು ಬದಿಗಿಟ್ಟು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಆತ್ಮೀಯರೊಬ್ಬರ ಆರೋಗ್ಯದಲ್ಲಿ ದಿಢೀಡೀರ್ ಕುಸಿತ ಕಂಡುಬಂದರೂ ತೊಂದರೆ ಕಾಣದು.

ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಬೂದು ಬಣ್ಣ

----------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).