ಕನ್ನಡ ಸುದ್ದಿ  /  Astrology  /  Horoscope Today Astrology Prediction In Kannada 19 March 2024 Aries Taurus Gemini Cancer Daily Horoscope Sts

Horoscope Today: ವಂಶದ ಆಸ್ತಿಯಲ್ಲಿ ನ್ಯಾಯಯುತ ಪಾಲು, ವಿನೂತನ ಅವಕಾಶ ದೊರೆತು ಉದ್ಯೋಗ ಬದಲಾವಣೆ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಮಾರ್ಚ್​ 19, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (19 March 2024 Daily Horoscope).

ಮಾರ್ಚ್​ 19ರ ದಿನಭವಿಷ್ಯ
ಮಾರ್ಚ್​ 19ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (19 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಮಂಗಳವಾರ

ತಿಥಿ : ದಶಮಿ ರಾ.02.46 ರವರೆಗು ಇರುತ್ತದೆ. ಆನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ : ಪುನರ್ವಸು ನಕ್ಷತ್ರವು ರಾ.10.41 ರವರೆಗೆ ಇರುತ್ತದೆ. ಆನಂತರ ಪುಷ್ಯ ನಕ್ಷತ್ರವು ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.24

ಸೂರ್ಯಾಸ್ತ: ಸ.06.29

ರಾಹುಕಾಲ : ಮ.03.00 ರಿಂದ ಬೆ.04.30

ರಾಶಿ ಫಲಗಳು

ಮೇಷ

ಕುಟುಂಬದಲ್ಲಿನ ಬದಲಾವಣೆಗಳು ಅನುಕೂಲಕರ ವಾತಾವರಣವನ್ನು ಉಂಟುಮಾಡುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರ ನಿಮ್ಮದಾಗುತ್ತದೆ. ಸಹೋದ್ಯೋಗಿಗಳ ಸಹಕಾರ ಚೇತೋಹಾರಿ ಆಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಸಮಾಜದ ಗಣ್ಯರ ಸ್ನೇಹ ದೊರೆಯುತ್ತದೆ. ಜನೋಪಕಾರಿ ಕೆಲಸದಲ್ಲಿ ಭಾಗಿಯಾಗುವಿರಿ. ದೈನಂದಿನ ಜೀವನ ನಿರೀಕ್ಷಿಸಿದ ಮಾದರಿಯಲ್ಲಿ ನಡೆದರೂ ಮನದಲ್ಲಿ ಚಿಂತೆ ಇರುತ್ತದೆ. ವಿನೂತನ ಅವಕಾಶ ದೊರೆತು ಉದ್ಯೋಗವನ್ನು ಬದಲಾಯಿಸುವಿರಿ. ತಂದೆಯವರ ಜೊತೆಯಲ್ಲಿ ಹಣಕಾಸಿನ ವಿವಾದವಿರುತ್ತದೆ. ದಿನ ನಿತ್ಯ ಬಳಸುವ ವಾಹನದ ದುರಸ್ತಿಗೆ ಹಣ ಖರ್ಚಾಗಲಿದೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ವೃಷಭ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಲು ಕಾರಣರಾಗುವಿರಿ. ಉದ್ಯೋಗದಲ್ಲಿ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಸಮಯಕ್ಕೆ ತಕ್ಕಂತೆ ವರ್ತಿಸುವಕಾರಣ ವಾದ ವಿವಾದಗಳಿಂದ ದೂರ ಉಳಿಯುವಿರಿ. ಹಣಕಾಸಿನ ವಿಚಾರದಲ್ಲಿ ಸ್ವಂತ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳು ಇಚ್ಚಿಸಿದಂತೆ ನಡೆಯಲಿವೆ. ವಿದ್ಯಾರ್ಥಿಗಳ ದಿಟ್ಟತನ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಲಿದೆ. ಶಾಂತ ಸ್ವಭಾವದಿಂದ ಎದುರಾಗುವ ಚಿಕ್ಕ ಪುಟ್ಟ ತೊಂದರೆಗಳನ್ನು ಗೆಲ್ಲುವಿರಿ. ಹೊಸತನ್ನು ನಿರೀಕ್ಷಿಸುತ್ತಾ ಸಹೋದ್ಯೋಗಿಗಳನ್ನೂ ಹುರಿದುಂಬಿಸುವಿರಿ. ತಪ್ಪನ್ನು ಮನ್ನಿಸದೆ ನೇರ ಮತ್ತು ನಿಷ್ಠುರದ ಮಾತುಗಳನ್ನು ಆಡುವ ಕಾರಣ ಆತ್ಮೀಯರೊಬ್ಬರು ದೂರವಾಗಬಗುದು. ಹಣಕಾಸಿನ ವ್ಯವಹಾರಗಳಲ್ಲಿ ತೊಂದರೆ ಬಾರದು. ಧಾರ್ಮಿಕ ಕೇಂದ್ರಕ್ಕೆ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವಿರಿ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಹೊಗೆಯ ಬಣ್ಣ

ಮಿಥುನ

ಕುಟುಂಬದ ಕೆಲಸ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡುವಿರಿ. ಉದ್ಯೋಗದಲ್ಲಿ ಯಶಸ್ಸಿನ ಜೊತೆಯಲ್ಲಿ ಶಾಂತಿ-ನೆಮ್ಮದಿ ಲಭಿಸುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಡ್ಡಿ ಆತಂಕವನ್ನು ಎದುರಿಸುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಅನುಕೂಲವೆನಿಸುವ ಕೆಲಸವೊಂದನ್ನು ಮಾಡುವಿರಿ. ಹೊಸ ವಾಹನವನ್ನು ಕೊಳ್ಳುವಿರಿ. ಖರ್ಚು ವೆಚ್ಚಗಳು ಮಿತಿ ಮೀರಿದಲ್ಲಿ ಸಹನೆ ಕಳೆದುಕೊಳ್ಳುವಿರಿ. ಸಂಘ ಸಂಸ್ಥೆಯ ಆಡಳಿತದಲ್ಲಿ ವಿವಾದವೊಂದನ್ನು ಎದುರಿಸಬೇಗಾಗುತ್ತದೆ. ಅರೆಮನಸ್ಸಿನಿಂದ ಕೆಲಸ ಮಾಡಿದರೂ ಯಶಸ್ವನ್ನು ಗಳಿಸುವಿರಿ. ಸೋದರಿಗೆ ಹಣದ ಸಹಾಯವನ್ನು ಮಾಡಬೇಕಾಗುತ್ತದೆ. ಸಕಾರಾತ್ಮಕ ಶಕ್ತಿಯಿಂದ ದಿನದ ಕೆಲಸ ಆರಂಭಿಸಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ಕಟಕ

ಕುಟುಂಬದಲ್ಲಿ ಪರಸ್ಪರ ನಂಬಿಕೆಯ ಗುಣ ಇರುತ್ತದೆ. ಒಗ್ಗಟ್ಟಿನಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಲಭಿಸುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಏಕಾಂಗಿತನ ತೊರೆದು ಸ್ನೇಹಿತರ ಸಲಹೆ ಒಪ್ಪಬೇಕು. ಸಂಗಾತಿಯ ಮಾತನ್ನು ಕೇಳಿದಲ್ಲಿ ಹಣದ ವಿಚಾರದಲ್ಲಿ ತೊಂದರೆ ಬಾರದು. ಮನೆಯ ಮುಖ್ಯ ವಿಚಾರದಲ್ಲಿ ತಾಯಿಯವರ ತೀರ್ಮಾನವೇ ಅಂತಿಮವಾಗುತ್ತದೆ. ಹಣದ ವಿವಾದವೊಂದು ಕಾನೂನಿನ ಮೂಲಕ ಪರಿಹಾರಗೊಳ್ಳುತ್ತದೆ. ವಂಶದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಯಾತ್ರಾಸ್ಥಳಗಳಿಗೆ ಪ್ರವಾಸಗಳನ್ನು ಆಯೋಜಿಸುವ ವ್ಯವಹಾರದಲ್ಲಿ ಲಾಭವಿರುತ್ತದೆ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ .

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ರಕ್ತದ ಬಣ್ಣ

--------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).