Horoscope Today: ಉದ್ಯೋಗದಲ್ಲಿನ ತೊಂದರೆ ಮರೆಯಾಗುವುದು, ಕುಟುಂಬದಲ್ಲಿ ಅಶಾಂತಿ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಉದ್ಯೋಗದಲ್ಲಿನ ತೊಂದರೆ ಮರೆಯಾಗುವುದು, ಕುಟುಂಬದಲ್ಲಿ ಅಶಾಂತಿ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

Horoscope Today: ಉದ್ಯೋಗದಲ್ಲಿನ ತೊಂದರೆ ಮರೆಯಾಗುವುದು, ಕುಟುಂಬದಲ್ಲಿ ಅಶಾಂತಿ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಫೆಬ್ರವರಿ 22, ಗುರುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (22 February 2024 Daily Horoscope).

ಫೆಬ್ರವರಿ 22ರ ದಿನಭವಿಷ್ಯ
ಫೆಬ್ರವರಿ 22ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 22 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಗುರುವಾರ

ತಿಥಿ : ತ್ರಯೋದಶಿ ತಿಥಿಯು ಹಗಲು 01.29 ರವರೆಗು ಇದ್ದು ಆನಂತರ ಚತುರ್ದಶಿ ಆರಂಭವಾಗುತ್ತದೆ.

ನಕ್ಷತ್ರ : ಪುಷ್ಯ ನಕ್ಷತ್ರವು ಸ.05.00 ವರೆಗು ಇರುತ್ತದೆ. ಆನಂತರ ಆಶ್ಲೇಷ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.40

ಸೂರ್ಯಾಸ್ತ: ಸ.06.23

ರಾಹುಕಾಲ : ಮ. 01.30ರಿಂದ ಮ. 03.00

ರಾಶಿ ಫಲಗಳು

ಮೇಷ

ಕ್ರಿಯಾಶೀಲರಾದ ನೀವು ಸಮಯವನ್ನು ವ್ಯರ್ಥಮಾಡದೇ ಕೆಲಸ ಕಾರ್ಯದಲ್ಲಿ ನಿರತರಾಗುವಿರಿ. ವಾದ ವಿವಾದಗಳನ್ನು ಇಷ್ಟ ಪಡುವುದಿಲ್ಲ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮದಾಗಲಿದೆ. ಸಹೋದ್ಯೋಗಿಗಳ ನಡುವೆ ವಿವಾದವೊಂದು ಉಂಟಾಗುತ್ತದೆ. ಯಂತ್ರ ಅಥವಾ ವಾಹನದಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಗೃಹಬಳಕೆಯ ಪದಾರ್ಥಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉನ್ನತದ ಅಧ್ಯಯನದ ಅವಕಾಶ ದೊರೆಯುತ್ತದೆ. ದುಡುಕಿನ ಮಾತಿನಿಂದ ವಿವಾದ ಉಂಟಾಗುತ್ತದೆ. ನೆಮ್ಮದಿಯ ಜೀವನ ಇರುತ್ತದೆ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು ಬಣ್ಣ

ವೃಷಭ

ಬೇರೆಯವರ ಮಾತನ್ನು ಕೇಳದೆ ಜೀವನದಲ್ಲಿ ಮುಂದುವರಿಯುವಿರಿ. ನಿಮ್ಮಲಿನ ಅಸಹಕಾರ ಕುಟುಂಬದಲ್ಲಿ ಬೇಸರ ನಿರ್ಮಾಣವಾಗುತ್ತದೆ. ಉದ್ಯೋಗದಲ್ಲಿನ ತೊಂದರೆ ಮರೆಯಾಗಿ ಆತ್ಮವಿಶ್ವಾಸ ಮೂಡುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಸೋದರನ ಭೂವಿವಾದವು ಕೊನೆಗೊಳ್ಳಲು ಕಾರಣರಾಗುವಿರಿ. ವಾಣಿಜ್ಯ ಸಂಸ್ಥೆಯೊಂದರ ಚುಕ್ಕಾಣಿ ಹಿಡಿಯುವಿರಿ. ವಿದ್ಯಾರ್ಥಿಗಳು ಮನಸ್ಸನ್ನು ಬದಲಾಯಿಸದೇ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಮನೆಗೆ ಸಂಬಂಧಿಸಿದ ಹೊಸ ಪರಿಕರಿಗಾಗಿ ಹೆಚ್ಚಿನ ಹಣ ಖರ್ಚುಮಾಡುವಿರಿ. ಮನೆತನಕ್ಕೆ ಸೇರಿದ ಹಳೆಯ ಮನೆಯಲ್ಲಿ ನೆಲೆಸಲು ಇಷ್ಟ ಪಡುವಿರಿ. ಹಿಂದಿನ ಪರಂಪರೆಯನ್ನು ಉಳಿಸುವ ಕೆಲಸಗಳನ್ನು ಮಾಡುವಿರಿ.

ಪರಿಹಾರ : ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಕಪ್ಪು ಬಣ್ಣ

ಮಿಥುನ

ದೃಡವಾದ ತೀರ್ಮಾನಗಳಿಂದ ಕುಟುಂಬಲ್ಲಿ ನೆಮ್ಮದಿ ಇರುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಆರಂಭದಲ್ಲಿ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಹನೆ ಕಳೆದುಕೊಂಡು ಹೊಸ ಕೆಲಸ ಆರಂಭಿಸುವಿರಿ. ವಾಸಸ್ಥಳವನ್ನು ಬದಲಿಸುವಿರಿ. ಸಮಯ ಹೊಂದಾಣಿಕೆಯ ವೇಳೆ ಸ್ವಾರ್ಥದ ಗುಣ ಪ್ರದರ್ಶಿಸುವಿರಿ. ಉದ್ಯೋಗದಲ್ಲಿ ನಿರಾಳ ಮನೋಭಾವ ಇರುತ್ತದೆ. ಅನುಕೂಲಕ್ಕೆ ತಕ್ಕಂತೆ ಮನಸ್ಸನ್ನು ಬದಲಾಯಿಸಬಲ್ಲಿರಿ. ವಿದ್ಯಾರ್ಥಿಗಳಿಗೆ ನಾಯಕನ ಸ್ಥಾನ ಮಾನ ದೊರೆಯುತ್ತದೆ. ಕಣ್ಣಿನ ದೋಷ ಇರುತ್ತದೆ. ಸೋದರರ ಜೊತೆಯಲ್ಲಿ ಸಣ್ಣಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಚಿಕ್ಕ ಪುಟ್ಟ ತಪ್ಪುಗಳನ್ನೂ ದೊಡ್ಡವಿವಾದವನ್ನಾಗಿ ಮಾಡುವಿರಿ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಕಟಕ

ಆತ್ಮಸ್ಥೈರ್ಯದಿಂದ ದೈನಂದಿನ ಕೆಲಸದಲ್ಲಿ ಮುಂದುವರೆಯಿರಿ. ಜವಾಬ್ದಾರಿಯು ದೊಡ್ಡದಾದರೂ ಅಳುಕುಭಾವನೆ ಬೇಡ. ಆದರೆ ಚಿಕ್ಕ ಪುಟ್ಟ ಕೆಲಸಗಳಿಗೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬೇಕು. ಉದ್ಯೋಗದಲ್ಲಿ ನಿಮ್ಮ ಅವಶ್ಯಕತೆ ಬಹಳಷ್ಟಿದೆ. ಆತುರದಿಂದ ಹಣದ ವಿವಾದದಲ್ಲಿ ಸಿಲುಕಬಹುದು ಜಾಗ್ರತೆ ಇರಲಿ. ಹೆಚ್ಚಿನ ನಿರೀಕ್ಷೆ ಇರುವ ಕಾರಣ ವೃತ್ತಿ ಬದಲಾವಣೆ ಮಾಡುವಿರಿ. ಆತುರದಲ್ಲಿ ವಿವೇಚನೆ ಇಲ್ಲದೆ ಮಾತನಾಡುವಿರಿ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಛಾಯಾಚಿತ್ರಕಲೆಯನ್ನು ಬಲ್ಲವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಅಧಿಕಾರ ದೊರೆಯುತ್ತದೆ. ಸೋದರನಿಗೆ ವಾಹನದಿಂದ ತೊಂದರೆ ಆಗಬಹುದು. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

--------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.