Horoscope Today: ಹಿರಿಯರ ಸಲಹೆಯಂತೆ ನಡೆದರೆ ತೊಂದರೆ ತಾಪತ್ರಯಗಳು ದೂರ, ಕೆಲಸ ಕಾರ್ಯಗಳಲ್ಲಿ ಜಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಹಿರಿಯರ ಸಲಹೆಯಂತೆ ನಡೆದರೆ ತೊಂದರೆ ತಾಪತ್ರಯಗಳು ದೂರ, ಕೆಲಸ ಕಾರ್ಯಗಳಲ್ಲಿ ಜಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

Horoscope Today: ಹಿರಿಯರ ಸಲಹೆಯಂತೆ ನಡೆದರೆ ತೊಂದರೆ ತಾಪತ್ರಯಗಳು ದೂರ, ಕೆಲಸ ಕಾರ್ಯಗಳಲ್ಲಿ ಜಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಮಾರ್ಚ್​ 23, ಶನಿವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (23 March 2024 Daily Horoscope).

ಮಾರ್ಚ್​ 23ರ ದಿನಭವಿಷ್ಯ
ಮಾರ್ಚ್​ 23ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (23 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಶನಿವಾರ

ತಿಥಿ : ತ್ರಯೋದಶಿ ಬೆ. 07.08 ರವರೆಗು ಇರುತ್ತದೆ. ಆನಂತರ ಚತುರ್ದಶಿ ಆರಂಭವಾಗಲಿದೆ.

ನಕ್ಷತ್ರ : ಪುಬ್ಬ ನಕ್ಷತ್ರವು ದಿನಪೂರ್ತಿ ಇರಲಿದೆ.

ಸೂರ್ಯೋದಯ: ಬೆ.06.22

ಸೂರ್ಯಾಸ್ತ: ಸ.06.30

ರಾಹುಕಾಲ : ಬೆ.09.00 ರಿಂದ ಬೆ.10.30

ರಾಶಿ ಫಲಗಳು

ಮೇಷ

ನಿಮ್ಮ ಕಟು ನಿರ್ಧಾರಗಳು ಕುಟುಂಬದ ಕಷ್ಟನಷ್ಟಗಳನ್ನು ಕೊನೆಗೊಳಿಸುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಸದಾ ಇರಲಿದೆ. ಆದ್ದರಿಂದ ದೈಹಿಕವಾಗಿ ಬಳಲುವಿರಿ. ವ್ಯಾಪಾರ ವ್ಯವಹಾರವು ಲಾಭದಾಯಕವಾಗಿರುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭಾಂಶ ದೊರೆಯಲಿದೆ. ವಿದ್ಯಾರ್ಥಿಗಳು ವಿಶ್ವಾಸದಿಂದ ಹೊಸತನದ ನಿರೀಕ್ಷೆಯಲ್ಲಿ ಇರುತ್ತಾರೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ತಂದೆಯಿಂದ ಹಣದ ಅನುಕೂಲತೆ ಉಂಟಾಗುತ್ತದೆ. ಕುಟುಂಬದವರ ಜೊತೆಗೂಡಿ ಯಾತ್ರಾಸ್ಥಳಕ್ಕೆ ತೆರಳುವಿರಿ. ಹಠದಿಂದಾಗಿ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ವಿಫಲರಾಗುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ವೃಷಭ

ಕುಟುಂಬದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಾರವು. ಉದ್ಯೋಗದಲ್ಲಿ ತಪ್ಪಿಲ್ಲದೇ ಹೋದರೂ ವಾದ ವಿವಾದಗಳನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಕಡಿಮೆ ಆಗಲಿದೆ. ಅನಿರೀಕ್ಷಿತವಾದ ಖರ್ಚುವೆಚ್ಚಗಳನ್ನು ಕಡಿತಗೊಳಿಸುವಿರಿ. ವಿದ್ಯಾರ್ಥಿಗಳು ಆತಂಕದಿಂದ ದೂರವಾಗಿ ಸಹಜಸ್ಥಿತಿಗೆ ಮರಳುತ್ತಾರೆ. ವೇಳೆ ಕಳೆಯಲು ಮಕ್ಕಳು ತಾತ್ಕಾಲಿಕವಾದ ಉದ್ಯೋಗದಲ್ಲಿ ತೊಡಗುತ್ತಾರೆ. ಸಮಾಜದಲ್ಲಿನ ಗೌರವವನ್ನು ಉಳಿಸಿಕೊಳ್ಳುವಿರಿ. ಸ್ವತಂತ್ರವಾಗಿ ಧಾರ್ಮಿಕ ಕೆಲಸವನ್ನು ಮಾಡುವಿರಿ. ಅತಿಯಾಸೆ ಇಲ್ಲದೆ ಅಲ್ಪ ತೃಪ್ತಿಯೊಂದಿಗೆ ಜೀವನ ಸಾಗಿಸುವಿರಿ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ತಾಯಿಯವರ ಮನದ ಆಸೆಯನ್ನು ಕಾರ್ಯರೂಪಕ್ಕೆ ತರುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಮಣ್ಣಿನ ಬಣ್ಣ

ಮಿಥುನ

ಕುಟುಂಬದ ಆಧಾರಸ್ತಂಭವಾಗಿ ಎಲ್ಲರ ಮನಗೆಲ್ಲುವಿರಿ. ಜವಾಬ್ದಾರಿಗಳನ್ನು ನೀವಾಗಿಯೇ ಒಪ್ಪಿಕೊಳ್ಳುವಿರಿ. ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಾಯಿಸದಿರಿ. ದೃಢವಾದ ಮನಸ್ಸಿನ ಕಾರಣ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ. ಮುಂದಿನ ದಿನಗಳಿಗಾಗಿ ಹಣವನ್ನು ಉಳಿಸಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರದಲ್ಲಿ ಬಂಡವಾಳದ ಕೊರತೆ ಇರುತ್ತದೆ. ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲಿದ್ದಾರೆ. ಸಮಾಜದ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ಆತ್ಮೀಯರಿಗೆ ನೀಡಿದ್ದ ಹಣ ಮರಳಿ ಕೈಸೇರುತ್ತದೆ. ಉತ್ತಮ ಅವಕಾಶಗಳು ಹೊಸ ಆಸೆಗೆ ಕಾರಣವಾಗಲಿದೆ. ಹಿರಿಯರ ಸಲಹೆಯಂತೆ ನಡೆದರೆ ತೊಂದರೆ ತಾಪತ್ರಯಗಳು ದೂರವಾಗುತ್ತವೆ. ಕುಟುಂಬದ ಹೆಣ್ಣುಮಕ್ಕಳಿಗೆ ಉಡುಗೊರೆ ನೀಡುವಿರಿ.

ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಕಟಕ

ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಮಕ್ಕಳಿಂದ ಸಂತೋಷದ ವಾತಾವರಣ ಉಂಟಾಗುತ್ತದೆ. ಉದ್ಯೋಗದಲ್ಲಿನ ಅನುಕೂಲತೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿ. ಎಲ್ಲರ ಬೆಂಬಲ ಇದ್ದರೂ ಅಳುಕಿನ ಮನಸ್ಸಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಸಂತಸದ ಜೀವನ ನಡೆಸುವರು. ಕಾನೂನಿನ ಸಹಾಯದಿಂದ ವೃತ್ತಿಯಲ್ಲಿನ ಸವಾಲನ್ನು ಗೆಲ್ಲುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ಹಣ ಉಳಿಸುವ ಯೋಚನೆ ಮಾಡುವಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಕಂತಿನ ವ್ಯಾಪಾರದಲ್ಲಿ ಲಾಭವಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಧಾರ್ಮಿಕ ಕೇಂದ್ರಕ್ಕೆ ಎಲ್ಲರಜೊತೆಯಲ್ಲಿ ತೆರಳುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

--------------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.