ಕನ್ನಡ ಸುದ್ದಿ  /  Astrology  /  Horoscope Today Astrology Prediction In Kannada 25 February 2024 Aries Taurus Gemini Cancer Daily Horoscope Sts

Horoscope Today: ಸ್ನೇಹಿತರ ಸಹಕಾರದಿಂದ ಉತ್ತಮ ಆದಾಯ, ಆರೋಗ್ಯದ ಬಗ್ಗೆ ಇರಲಿ ಎಚ್ಚರ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಫೆಬ್ರವರಿ 25, ಭಾನುವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (25 February 2024 Daily Horoscope).

ಫೆಬ್ರವರಿ 25ರ ದಿನಭವಿಷ್ಯ
ಫೆಬ್ರವರಿ 25ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 25 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಭಾನುವಾರ

ತಿಥಿ : ಪಾಡ್ಯ ತಿಥಿಯು ಸಂಜೆ 06.58 ರವರೆಗು ಇದ್ದು ಆನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ : ಪುಬ್ಬ ನಕ್ಷತ್ರವು ರಾತ್ರಿ 12.04 ವರೆಗು ಇರುತ್ತದೆ. ಆನಂತರ ಉತ್ತರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.34

ಸೂರ್ಯಾಸ್ತ: ಸ.06.26

ರಾಹುಕಾಲ : ಸಂ.04.30 ರಿಂದ ಸ.06.00

ರಾಶಿ ಫಲಗಳು

ಮೇಷ

ಕುಟುಂಬದಲ್ಲಿ ಹೊಸ ಕೆಲಸಗಳ ಆರಂಭದ ಕಾರಣ ಉತ್ಸಾಹ ಮನೆ ಮಾಡಿರುತ್ತದೆ. ಅನಾವಶ್ಯಕ ಚಿಂತೆ ಇರುತ್ತದೆ. ಬಳಿ ಇರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಇಚ್ಛೆಗೆ ವಿರೋಧವಾಗಿ ಕೆಲಸ ಕಾರ್ಯಗಳು ನಡೆಯಬಹುದು. ವಾದ ಮಾಡದೆ ಶಾಂತಿ ಸಂಧಾನದಿಂದ ವಿವಾದಗಳಿಂದ ದೂರ ಉಳಿಯುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಆದಾಯ ಇರುವುದಿಲ್ಲ. ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ತಪ್ಪು ನಿರ್ಧಾರವನ್ನು ತೆಗೆದುಕೊಂಡು ವಿವಾದಕ್ಕೆ ಸಿಲುಕುವರು. ಹಣವನ್ನು ಯೋಚಿಸದೆ ಖರ್ಚು ಮಾಡುವಿರಿ. ಕುಟುಂಬ ಸದಸ್ಯರಿಗೆ ಪ್ರಮುಖ ವಿಷಯಗಳ ಬಗ್ಗೆ ತಿಳಿಸುವುದಿಲ್ಲ . ಅನಾವಶ್ಯಕವಾಗಿ ಸಂಗಾತಿಯನ್ನು ಟೀಕಿಸುವುದನ್ನು ತಪ್ಪಿಸಿ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಳದಿ ಬಣ್ಣ

ವೃಷಭ

ಕುಟುಂಬದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವಿರಿ. ಇದರಿಂದ ಕುಟುಂಬದಲ್ಲಿ ಹೊಸ ನಿರೀಕ್ಷೆಗಳು ಮೂಡಲಿವೆ. ಉದ್ಯೋಗದಲ್ಲಿ ಉಂಟಾಗುವ ಗಮನಾರ್ಹ ಬದಲಾವಣೆಗಳು ನಿಮ್ಮ ಪರವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ನೇಹಿತರ ಸಹಕಾರದಿಂದ ಉತ್ತಮ ಆದಾಯವನ್ನು ಗಳಿಸುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸವಲ್ಲದೆ ಬೇರಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಶ್ಚಯವಾಗಿದ್ದ ವಿವಾಹವು ಮುಂದೂಡಲ್ಪತ್ತದೆ. ಹಳೆಯದಾದ ಹಣಕಾಸಿನ ವಿವಾದವು ತೊಂದರೆ ಉಂಟು ಮಾಡಬಲ್ಲದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಹಣವನ್ನು ಪಡೆಯಬೇಕಾದ ಪರಿಸ್ಥಿತಿ ಉಂಟಾಗಬಹುದು. ಸಂಗಾತಿಗಾಗಿ ಅವರು ಮೆಚ್ಚಿದ ಒಡವೆಗೆ ಹೆಚ್ಚಿನ ಹಣ ಬೇಕಾಗಬಹುದು.

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ಹಸಿರು ಬಣ್ಣ

ಮಿಥುನ

ಅನಗತ್ಯ ಯೋಜನೆಗಳು ಕುಟುಂಬದಲ್ಲಿ ಬಿಗುವಿನ ವಾತಾವರಣವನ್ನು ಉಂಟು ಮಾಡಲಿದೆ. ಉದ್ಯೋಗದಲ್ಲಿ ಪ್ರತಿಯೊಂದು ವಿಚಾರವನ್ನು ಗಮನವಿರಿಸಿ ನೋಡಬೇಕು. ದುಡುಕಿನಲ್ಲಿ ತೊಂದರೆ ಅನುಭವಿಸಬೇಕಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಆದಾಯವು ದೊರೆಯುವುದಿಲ್ಲ. ಅನಿವಾರ್ಯವಾಗಿ ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನಕ್ಕೆ ಬೇರೆಯವರನ್ನು ಅವಲಂಬಿಸುತ್ತಾರೆ. ಆದರೆ ಕಲಿಕೆಯಲ್ಲಿ ಮುಂದಿರುತ್ತಾರೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿ. ಪ್ರತಿಯೊಂದು ಮಾತಿಗೂ ತಪ್ಪಾದ ಅರ್ಥವನ್ನು ಕಲ್ಪಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯಲಿದೆ. ಆತ್ಮೀಯರ ಜೊತೆಯಲ್ಲಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.

ಪರಿಹಾರ : ಕೈ ಅಥವ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕಟಕ

ಕುಟುಂಬದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಸಣ್ಣಪುಟ್ಟ ಕೆಲಸಕಾರ್ಯಗಳಿಗೂ ಬೇರೆಯವರನ್ನು ಆಶ್ರಯಿಸುವಿರಿ. ಉದ್ಯೋಗದಲ್ಲಿ ಕೆಲವರಿಂದ ವಿರೋಧವನ್ನು ಎದುರಿಸಬೇಕಾಗಬಹುದು. ಚುರುಕಿನಿಂದ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವನ್ನು ಗಳಿಸುವಿರಿ. ಅನಾವಶ್ಯಕ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವುದಿಲ್ಲ. ಮನಮೆಚ್ಚುವ ಜನರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ವೈವಾಹಿಕ ಜೀವನದಲ್ಲಿ ಸಂಗಾತಿಯ ಮಾತಿಗೆ ವಿಶೇಷವಾದ ಮನ್ನಣೆ ನೀಡುವಿರಿ. ಸೃಜನಶೀಲ ಕೆಲಸದಲ್ಲಿ ತೊಡಗುವಿರಿ. ಆರೋಗ್ಯದಲ್ಲಿ ಉಂಟಾಗುವ ತೊಂದರೆಯನ್ನು ಸರಿಪಡಿಸಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೇರಳೆ ಬಣ್ಣ

---------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).