Horoscope Today: ಅವಿವಾಹಿತರಿಗೆ ವಿವಾಹ ಯೋಗ, ಬೇರೆಯವರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾಗದಿರಿ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ
ಮಾರ್ಚ್ 25, ಸೋಮವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (25 March 2024 Daily Horoscope).

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (25 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಸೋಮವಾರ
ತಿಥಿ : ಹುಣ್ಣಿಮೆ ಹ.11.18 ರವರೆಗು ಇರುತ್ತದೆ. ಆನಂತರ ಪಾಡ್ಯ ಆರಂಭವಾಗಲಿದೆ.
ನಕ್ಷತ್ರ : ಉತ್ತರ ನಕ್ಷತ್ರವು ಬೆ. 09.43 ರವರೆಗು ಇರುತ್ತದೆ. ಆನಂತರ ಹಸ್ತ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆ.06.21
ಸೂರ್ಯಾಸ್ತ: ಸ.06.30
ರಾಹುಕಾಲ : ಬೆ. 07.30 ರಿಂದ ಬೆ. 09.00
ರಾಶಿ ಫಲಗಳು
ಮೇಷ
ತಪ್ಪು ಕಲ್ಪನೆಯಿಂದ ಕುಟುಂಬದಲ್ಲಿ ಆತಂಕದ ಭಾವನೆ ಇರುತ್ತದೆ. ಉದ್ಯೋಗದಲ್ಲಿ ಸಮರ್ಪಣಾ ಮನೋಭಾವನೆ ತೋರುವಿರಿ. ಇದರ ಫಲವಾಗಿ ಉನ್ನತ ಸ್ಥಾನ ಲಭಿಸುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಕಷ್ಟವಾದರೂ ನಿರೀಕ್ಷಿಸಿದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಹೊಸ ಭರವಸೆಗಳಿಂದ ಆತ್ಮೀಯರ ಭೇಟಿಗೆ ತೆರಳುತ್ತಾರೆ. ಆವಿಷ್ಕಾರದ ಮನೋಭಾವನೆ ಇರುವ ಕಾರಣ ಬಿಡುವು ಇರುವುದಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ವರ್ತಿಸುವ ಕಾರಣ ವಿವಾದಗಳಿಂದ ದೂರ ಉಳಿಯುವಿರಿ. ತಾಯಿಯವರ ಸಲಹೆ ತೊಂದರೆಯಿಂದ ಪಾರುಮಾಡುತ್ತದೆ. ಎಲ್ಲರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುವಿರಿ. ಅವಶ್ಯಕತೆ ಇದ್ದಲ್ಲಿ ಸೋದರರಿಗೆ ಹಣದ ಸಹಾಯ ಮಾಡುವಿರಿ.
ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ವೃಷಭ
ಕುಟುಂಬದಲ್ಲಿ ಬೇಸರದ ಸನ್ನಿವೇಶ ಎದುರಾದರೂ ನಿಮ್ಮಿಂದಾಗಿ ಸಂತಸ ನೆಲೆಸುತ್ತದೆ. ಆತ್ಮೀಯರೊಬ್ಬರ ಸಹಾಯದಿಂದ ನಿಮ್ಮ ಮನ ಒಪ್ಪುವ ಉದ್ಯೋಗ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಮಾತಿನ ಮೂಲಕ ಜನರ ಮನಸ್ಸನ್ನು ಗೆಲ್ಲುವಿರಿ. ಪಾಲುಗಾರಿಕೆಯ ವ್ಯಾಪಾರವಿದ್ದಲ್ಲಿ ಹಣದ ವ್ಯವಹಾರದ ಮೆಲೆ ಹಿಡಿತ ಸಾಧಿಸುವಿರಿ. ವಿದ್ಯಾರ್ಥಿಗಳು ಯಶಸ್ಸಿನ ವಿಶ್ವಾಸದಲ್ಲಿ ಇರಲಿದ್ದಾರೆ. ಭೂವ್ಯವಹಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ ಎಚ್ಚರಿಕೆ ಇರಲಿ. ರಕ್ತ ಸಂಬಂಧಿಯೊಬ್ಬರು ನಿಮ್ಮ ಆಶ್ರಯ ಬಯಸಿ ಬರಬಹುದು. ಅವಿವಾಹಿತರಿಗೆ ವಿವಾಹ ಯೋಗವಿದೆ. ಯಾರೊಬ್ಬರನ್ನೂ ಸುಲಭವಾಗಿ ನಂಬದೆ ಸ್ವಂತ ಪ್ರರಿಶ್ರಮವನ್ನು ಆಧರಿಸುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಎಳನೀರು ಮತ್ತು ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಹಳದಿ ಬಣ್ಣ
ಮಿಥುನ
ತಪ್ಪು ಅಭಿಪ್ರಾಯಗಳು ಮನೆಯನ್ನು ಆವರಿಸಿಕೊಳ್ಳುತ್ತದೆ. ಮುಖ್ಯವಾದ ಸ್ವಂತ ಕೆಲಸವು ಅಪೂರ್ಣಗೊಳ್ಳಲಿದೆ. ಉದ್ಯೋಗದಲ್ಲಿ ದೊರೆಯಬೇಕಾಗಿದ್ದ ವಿಶೇಷ ಸ್ಥಾನಮಾನದ ಬಗ್ಗೆ ಚರ್ಚೆ ನಡೆಯಲಿದೆ. ವ್ಯಾಪಾರ ವ್ಯವಹಾರದ ಆದಾಯದಲ್ಲಿ ಕುಸಿತ ಕಂಡುಬರಲಿದೆ. ಖರ್ಚು ವೆಚ್ಚಗಳು ಹೆಚ್ಚಲಿವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪ್ರವಾಸದಲ್ಲಿ ನಿರತಾರಾಗುತ್ತಾರೆ. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ವಹಿವಾಟನ್ನು ಆರಂಭಿಸುವ ಸೂಚನೆಗಳಿವೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಸಾಕ್ಷೀದಾರರಾಗದಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಹಿರಿಯರಿಂದ ಉಡುಗೊರೆಯಾಗಿ ಆಸ್ತಿ ದೊರೆಯುತ್ತದೆ. ದೇವಾಲಯದ ಜೀರ್ಣೋದ್ದಾರ ಕೆಲಸದಲ್ಲಿ ಭಾಗಿಯಾಗುವಿರಿ.
ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಕಟಕ
ಮಕ್ಕಳ ಜವಾಬ್ದಾರಿ ಕಡಿಮೆಯಾದ ಕಾರಣ ಕುಟುಂಬದಲ್ಲಿ ಆತ್ಮೀಯತೆ ಇರಲಿದೆ. ಉದ್ಯೋಗದಲ್ಲಿ ಸಮಯ ವ್ಯರ್ಥವಾಗುತ್ತದೆ. ಎಲ್ಲರ ಮನಸ್ಸನ್ನು ಅರ್ಥಮಾಡಿಕೊಂಡರೆ ತೊಂದರೆ ಬಾರದು. ಹಿರಿಯರ ಅನುಭವದಿಂದ ಪಾಠ ಕಲಿಯುವಿರಿ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಪೂರ್ಣಗೊಳಿಸಿ ನೆಮ್ಮದಿಯಿಂದ ಬಾಳುವಿರಿ. ಮನಸ್ಸಿದ್ದಲ್ಲಿ ಉದ್ಯೋಗವನ್ನು ಬದಲಾಯಿಸಬಹುದು. ಬೇಸರ ಕಳೆಯಲು ಮನರಂಜನಾ ಸ್ಥಳಕ್ಕೆ ತೆರಳುವಿರಿ. ಮಕ್ಕಳಿಗೆ ಸಂಗೀತ ನಾಟ್ಯದಲ್ಲಿ ಆಸಕ್ತಿ ಮೂಡಲಿದೆ. ಪಾಲುಗಾರಿಕೆಯಲ್ಲಿ ಷೇರಿನ ವ್ಯವಹಾರ ಆರಂಭಿಸಿದಲ್ಲಿ ಲಾಭವಿದೆ. ನಡೆಯಲು ಅಶಕ್ತರಾದವರಿಗೆ ಸಹಾಯ ಮಾಡುವಿರಿ. ಆತುರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರಿ.
ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನೀಲಿ ಬಣ್ಣ
-------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ