ಕನ್ನಡ ಸುದ್ದಿ  /  Astrology  /  Horoscope Today Astrology Prediction In Kannada 27 February 2024 Aries Taurus Gemini Cancer Daily Horoscope Sts

Horoscope Today: ಅನಿವಾರ್ಯವಾಗಿ ಜಮೀನೊಂದರ ಮಾರಾಟ, ಆತ್ಮೀಯರಿಂದ ಸಿಗಲಿದೆ ಹಣದ ಸಹಾಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಫೆಬ್ರವರಿ 27, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (27 February 2024 Daily Horoscope).

ಫೆಬ್ರವರಿ 27ರ ದಿನಭವಿಷ್ಯ
ಫೆಬ್ರವರಿ 27ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 27 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಮಂಗಳವಾರ

ತಿಥಿ : ತದಿಗೆ ತಿಥಿಯು ರಾ.11.05 ರವರೆಗು ಇದ್ದು ಆನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ : ಹಸ್ತ ನಕ್ಷತ್ರವು ಬೆ.05.05 ವರೆಗು ಇರುತ್ತದೆ. ಆನಂತರ ಚಿತ್ತೆ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.35

ಸೂರ್ಯಾಸ್ತ: ಸ.06.26

ರಾಹುಕಾಲ : ಮ.03.00 ರಿಂದ ಬೆ.04.30

ರಾಶಿ ಫಲಗಳು

ಮೇಷ

ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲಿವೆ. ನೆಮ್ಮದಿಯ ಜೀವನ ನಡೆಸುವಿರಿ. ಅಪರೂಪದ ಪ್ರತಿಭೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ತಾಯಿಗೆ ಭೂಮಿಯೊಂದು ಉಡುಗೊರೆಯಾಗಿ ಬರಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಆದಾಯವಿರುತ್ತದೆ. ಕೇಳುವುದೆಲ್ಲಾ ನಿಜ ಎಂದು ನಂಬದಿರಿ. ಉದ್ಯೋಗವನ್ನು ಬದಲಿಸುವ ಯೋಚನೆ ಮೂಡುತ್ತದೆ. ವಿದ್ಯಾರ್ಥಿಗಳು ಹಠದಿಂದ ಕಲಿಕೆಯಲ್ಲಿ ಮುಂದೆ ಇರುತ್ತಾರೆ. ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಗತ್ಯತೆ ಪೂರೈಸುವಷ್ಟು ಆದಾಯ ಇರುತ್ತದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ವಿವಾಹದ ಮಾತುಕತೆ ನಡೆಯಬಹುದು. ಸಮಯಕ್ಕೆ ಸರಿಯಾಗಿ ಆತ್ಮೀಯರಿಂದ ಹಣದ ಸಹಾಯ ದೊರೆಯಲಿದೆ.

ಪರಿಹಾರ : ತಾಯಿಯವರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಬಣ್ಣ

ವೃಷಭ

ತಂದೆಗೆ ಸೋದರರ ಜೊತೆಯಲ್ಲಿ ಮನಸ್ತಾಪ ಇರುತ್ತದೆ. ಕುಟುಂಬದಲ್ಲಿ ಆತಂಕದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿನ ಅಡಚಣೆ ಮರೆಯಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರದು. ವಿದ್ಯಾರ್ಥಿಗಳು ಗಂಭೀರತೆಯಿಂದ ತಮ್ಮ ಗುರಿ ಸಾಧಿಸಲಿದ್ದಾರೆ. ಸಂಬಂಧಿಯೊಬ್ಬರ ಭೂವಿವಾದವನ್ನು ಪರಿಹರಿಸುವಿರಿ. ರಾಜಕೀಯದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗುವಿರಿ. ಗೃಹಿಣಿಯರು ಆತಂಕದಿಂದ ಹೊರಬರಬೇಕು. ದೃಢವಾದ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ನಿರೂಪಿಸುವಿರಿ. ಮಧ್ಯವರ್ತಿಯಾಗಿ ಹಣದ ವ್ಯವಹಾರದಲ್ಲಿ ಹಣವನ್ನು ಸಂಪಾದಿಸುವಿರಿ. ಕಂತಿನ ವ್ಯಾಪಾರದಲ್ಲಿ ಲಾಭವಿರುತ್ತದೆ. ಸಾಧು ಸಂತರನ್ನು ಭೇಟಿ ಮಾಡುವಿರಿ. ಉತ್ತಮ ಆರೋಗ್ಯ ಇರಲಿದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ ಬಣ್ಣ

ಮಿಥುನ

ಒಲ್ಲದ ಮನಸ್ಸಿನಿಂದ ಮಾಡಿದ ಕೆಲಸದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿರುತ್ತದೆ. ಇದರಿಂದ ಕುಟುಂಬದಲ್ಲಿ ಶಾಂತಿ ಮರೆಯಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಆದಾಯ ದೊರೆಯಲಿದೆ. ಸಿಡುಕುತನದ ಕಾರಣ ಒಂಟಿತನ ಅನುಭವಿಸುವಿರಿ. ಟೀಕೆ ಮಾಡುವುದನ್ನು ಕಡಿಮೆ ಮಾಡಿರಿ. ಮನಸ್ಸು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಅನಿವಾರ್ಯವಾಗಿ ಜಮೀನೊಂದನ್ನು ಮಾರಾಟಮಾಡಿ ಹೊಸ ಮನೆಕೊಳ್ಳುವ ಸಾಧ್ಯತೆ ಇದೆ. ಸೋದರನ ಜೀವನದಲ್ಲಿ ಹೊಸ ತಿರುವು ದೊರೆಯಲಿದೆ. ತಾನಾಗಿಯೇ ದೊರೆವ ಹಣದ ಸಹಾಯವನ್ನು ತಿರಸ್ಕರಿಸುವಿರಿ. ಸ್ವಂತ ಬಳಕಾಗಿ ಬೃಹತ್ ವಾಹನವನ್ನು ಕೊಳ್ಳುವಿರಿ. ಧಾರ್ಮಿಕ ಸ್ಥಳದ ಅಭಿವೃದ್ಧಿಗಾಗಿ ಹಣ ವಿನಿಯೋಗಿಸುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕಟಕ

ಜವಾಬ್ದಾರಿಯಿಂದ ಕುಟುಂಬದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಸಂತೃಪ್ತಿಯ ವಾತಾವರಣ ಇರಲಿದೆ. ಸದಾ ಕಾಲ ಯಾವುದಾದರೊಂದು ಕೆಲಸದಲ್ಲಿ ತಲ್ಲೀನರಾಗುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಉದ್ಯೋಗದಲ್ಲಿನ ಅಧಿಕಾರ ನಿಮ್ಮದಾಗುತ್ತದೆ. ಎಲ್ಲರೂ ಆತ್ಮೀಯರಾಗಿ ನಿಮ್ಮೊಡನೆ ಇರಲಿದ್ದಾರೆ. ವಿದ್ಯಾರ್ಥಿಗಳು ಆತ್ಮಸ್ತೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ರಾಜಕೀಯ ಪ್ರವೇಶಿಸುವ ಆಶಯ ಇದ್ದಲ್ಲಿ ಪ್ರಯತ್ನಿಸಬಹುದು. ವ್ಯವಸಾಯಕ್ಕೆ ಅವಶ್ಯಕವಾದ ಯಂತ್ರೋಪಕರಣಗಳ ಸರಬರಾಜಿನಲ್ಲಿ ಹಣಗಳಿಸುವಿರಿ. ಅತಿಥಿ ಸತ್ಕಾರದಲ್ಲಿ ಸಂತಸ ಕಾಣುವಿರಿ. ಉತ್ತಮ ಆರೋಗ್ಯ ಇರಲಿದೆ.

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ ಬಣ್ಣ

-------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).