Horoscope Today: ನಿಮ್ಮ ಬುದ್ಧಿಶಕ್ತಿ ದೊಡ್ಡ ವಿಪತ್ತಿನಿಂದ ಕಾಪಾಡುತ್ತದೆ, ಹಣದ ವಿವಾದದಲ್ಲಿ ಜಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ನಿಮ್ಮ ಬುದ್ಧಿಶಕ್ತಿ ದೊಡ್ಡ ವಿಪತ್ತಿನಿಂದ ಕಾಪಾಡುತ್ತದೆ, ಹಣದ ವಿವಾದದಲ್ಲಿ ಜಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

Horoscope Today: ನಿಮ್ಮ ಬುದ್ಧಿಶಕ್ತಿ ದೊಡ್ಡ ವಿಪತ್ತಿನಿಂದ ಕಾಪಾಡುತ್ತದೆ, ಹಣದ ವಿವಾದದಲ್ಲಿ ಜಯ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಫೆಬ್ರವರಿ 28, ಬುಧವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (28 February 2024 Daily Horoscope).

 ಫೆಬ್ರವರಿ 28ರ ದಿನಭವಿಷ್ಯ
ಫೆಬ್ರವರಿ 28ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 28 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಬುಧವಾರ

ತಿಥಿ : ಚೌತಿ ರಾ.12.44 ರವರೆಗು ಇದ್ದು ಆನಂತರ ಪಂಚಮಿ ಆರಂಭವಾಗುತ್ತದೆ.

ನಕ್ಷತ್ರ : ಚಿತ್ತೆ ನಕ್ಷತ್ರವು ದಿನ ಪೂರ್ತಿ ಇರುತ್ತದೆ.

ಸೂರ್ಯೋದಯ: ಬೆ.06.36

ಸೂರ್ಯಾಸ್ತ: ಸ.06.27

ರಾಹುಕಾಲ : ಮ.12.00ರಿಂದ ಮ.01.30

ಇಂದಿನ ವಿಶೇಷ : ಶ್ರೀ ಸಂಕಷ್ಟಹರ ಗಣಪತಿ ವ್ರತ

ರಾಶಿ ಫಲಗಳು

ಮೇಷ

ಮಾಡಲು ಅಸಾಧ್ಯವಾಗಿ ಉಳಿದಿದ್ದ ಕೆಲಸವೊಂದು ಸಂಗಾತಿಯ ಸಹಕಾರದಿಂದ ಕೈಗೂಡುವುದು. ಕುಟುಂಬದಲ್ಲಿ ಧನಾತ್ಮಕ ಚಿಂತನೆಗಳು ಇರಲಿವೆ. ಹೊಸ ಕೆಲಸಗಳನ್ನು ಆರಂಭಿಸುವ ಮುನ್ನ ಯೋಚಿಸಿ. ಉದ್ಯೋಗದಲ್ಲಿ ಯಾರನ್ನೂ ಟೀಕಿಸದೆ ಸ್ನೇಹದಿಂದ ವರ್ತಿಸಿ. ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ ಉಂಟಾಗದು. ಹಣಕಾಸಿನ ತೊಂದರೆ ಬಾರದು. ಆದರೆ ಅನಾವಶ್ಯಕ ಖರ್ಚಿನ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ತದೇಕಚಿತ್ತದಿಂದ ಓದಿನಲ್ಲಿ ಮಗ್ನರಾಗುತ್ತಾರೆ. ರೈತರಿಗೆ ಸಂತಸದ ದಿನ. ಪರಿಸ್ಥಿಯ ಒತ್ತಡಕ್ಕೆ ಒಳಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಯೋಗ ಪ್ರಾಣಾಯಾಮದ ತರಬೇತಿದಾರರಿಗೆ ವಿಶೇಷ ಗೌರವಾದರಗಳು ಲಭಿಸುತ್ತವೆ. ಆರೋಗ್ಯದ ಬಗ್ಗೆ ಗಮನವಿರಲಿ.

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ವೃಷಭ

ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ತಪ್ಪು ನಿರ್ಧಾರದಿಂದ ಕುಟುಂಬದಲ್ಲಿ ಒತ್ತಡದ ವಾತಾವರಣ ಇರಲಿದೆ. ಅನಿರೀಕ್ಶಿತ ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಕಣ್ಣಿನ ತೊಂದರೆ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ. ತಪ್ಪು ಕಲ್ಪನೆಯಿಂದ ನೆರೆಹೊರೆಯವರ ಜೊತೆಯಲ್ಲಿ ವಾದ ವಿವಾದವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತಂದೆಯವರ ಸಹಾಯ ನಿಮಗಿರುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧ್ಯವ್ಯ ಇರುತ್ತದೆ. ವಿದ್ಯೆಗಿಂತಲೂ ಬುದ್ಧಿಶಕ್ತಿ ದೊಡ್ಡ ವಿಪತ್ತಿನಿಂದ ಕಾಪಾಡುತ್ತದೆ. ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳು ಉನ್ನತ ಮಟ್ಟ ತಲುಪಲಿದ್ದಾರೆ. ಅನಾಥಾಶ್ರಮದಲ್ಲಿ ಆಹಾರದ ವ್ಯವಸ್ಥೆ ಮಾಡುವಿರಿ. ಮನದಲ್ಲಿ ಅಳುಕಿನ ಭಾವನೆ ಇರಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಎಲೆಹಸಿರು ಬಣ್ಣ

ಮಿಥುನ

ಅದೃಷ್ಟವಿದೆ. ಆದರೆ ದೊರೆವ ಅವಕಾಶಗಳನ್ನು ಸಮರ್ಥಕವಾಗಿ ಬಳಸಿಕೊಳ್ಳಬೇಕು. ಹಣಕಾಸಿನ ತೊಂದರೆ ಬಾರದು. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಮಾತಿನಲ್ಲಿ ನಯವಿರಲಿ. ಭೂವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ಮನರಂಜನೆಯನ್ನು ಕಡಿಮೆ ಮಾಡುವುದು ಒಳಿತು. ಕಾನೂನು ಚೌಕಟ್ಟಿನಲ್ಲಿ ಮಾಡುವ ಲೇವಾ ದೇವಿ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಖರ್ಚು ಹೆಚ್ಚಾದಲ್ಲಿ ಸಹನೆ ಮರೆತು ಉದ್ವೇಗದಿಂದ ವರ್ತಿಸುವಿರಿ. ಸಂಗಾತಿಗಾಗಿ ಆಭರಣವನ್ನು ಕೊಳ್ಳುವಿರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಕಟಕ

ಅಂಜಿಕೆಯಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕುಟುಂಬದಲ್ಲಿ ಪರಸ್ಪರ ಸಹಕಾರದ ಗುಣ ಇರುತ್ತದೆ. ಮನಸ್ಸು ಮಾಡಿದರೆ ನಿಮಗೆ ಯಾವ ಕೆಲಸವೂ ಅಸಾಧ್ಯವಾಗದು. ವ್ಯಾಪಾರ ವ್ಯವಹಾರದಲ್ಲಿ ಆತುರದಿಂದ ತೊಂದರೆ ಎದುರಿಸಬೇಕಾಗುತ್ತದೆ. ಉದ್ಯೋಗವನ್ನು ಬದಲಾಯಿಸುವ ವಿಚಾರ ಮುಂದೂಡುವಿರಿ. ವಿದ್ಯಾರ್ಥಿಗಳು ಸುಲಭವಾಗಿ ಶುಭ ಫಲಗಳನ್ನು ಪಡೆಯಲಿದ್ದಾರೆ. ಹಣಕಾಸಿನ ವಿವಾದವೊಂದರಲ್ಲಿ ಕಾನೂನಿನ ಮೂಲಕ ಜಯ ಗಳಿಸುವಿರಿ. ದಂಪತಿಗಳ ನಡುವೆ ಹೊಂದಾಣಿಕೆಯ ಕೊರತೆ ಇರುತ್ತದೆ. ಆತ್ಮೀಯರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ಕೃಷಿ ಕಾರ್ಯದಲ್ಲಿ ಆಸಕ್ತಿ ಇರುತ್ತದೆ. ಕಷ್ಟದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ.

ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

---------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.