ಕನ್ನಡ ಸುದ್ದಿ  /  Astrology  /  Horoscope Today Astrology Prediction In Kannada 5 March 2024 Aries Taurus Gemini Cancer Daily Horoscope Sts

Horoscope Today: ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ, ಹಣ ಉಳಿತಾಯ ಯೋಜನೆ ರೂಪಿಸುವಿರಿ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ

ಮಾರ್ಚ್​ 5, ಮಂಗಳವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (5 March 2024 Daily Horoscope).

ಮಾರ್ಚ್​ 5ರ ದಿನಭವಿಷ್ಯ
ಮಾರ್ಚ್​ 5ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (5 March 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಮಂಗಳವಾರ

ತಿಥಿ : ದಶಮಿ ರಾ.01.24 ರವರೆಗು ಇದ್ದು ಆನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ : ಮೂಲ ನಕ್ಷತ್ರವು ಹ.11.12 ರವರೆಗೆ ಇರುತ್ತದೆ. ಆನಂತರ ಪೂರ್ವಾಷಾಡ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.33

ಸೂರ್ಯಾಸ್ತ: ಸ.06.27

ರಾಹುಕಾಲ : ಬೆ.03.00 ರಿಂದ ಬೆ.04.30

ರಾಶಿ ಫಲಗಳು

ಮೇಷ

ಅನಾವಶ್ಯಕ ಮಾನಸಿಕ ಒತ್ತಡ ಇರಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಸೋಲು ಗೆಲುವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಲು ಪ್ರಯತ್ನಿಸಿ. ಕುಟುಂಬ ನಿರ್ವಹಣೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಮಕ್ಕಳ ಕಾರಣದಿಂದಾಗಿ ಕುಟುಂಬದಲ್ಲಿ ಸಂತಸ ಇರಲಿದೆ. ಹೊಸ ವಿಚಾರ ತಿಳಿಯುವ ತವಕದಲ್ಲಿ ವೇಳೆ ಕಳೆಯುವಿರಿ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗಲಿವೆ. ವ್ಯಾಪಾರ ವ್ಯವಹಾರದಲ್ಲಿ ಹಿರಿಯರ ಸಹಾಯದಿಂದ ಸಮಸ್ಯೆಯಿಂದ ಪಾರಾಗುವಿರಿ. ಮನರಂಜನೆಗಾಗಿ ಹಣ ವೆಚ್ಚವಾಗಲಿದೆ. ಆತ್ಮೀಯರ ಮನೆಗೆ ಭೇಟಿ ನೀಡುವಿರಿ. ವಿದ್ಯಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ಸಾಗುತ್ತಾರೆ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ..

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಬಣ್ಣ

ವೃಷಭ

ನಿಸ್ವಾರ್ಥದ ಬುದ್ಧಿಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ವಂಶದ ಹಿರಿಯರ ಆಗಮನ ಹೊಸ ಚೇತನವನ್ನು ನೀಡುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಿಂದ ಉದ್ದೇಶಿತ ಗುರಿ ತಲುಪುವಿರಿ. ಮುಂದಿನ ಜೀವನಕ್ಕಾಗಿ ಹಣವನ್ನು ಸಂಹ್ರಹಿಸುವಿರಿ. ವ್ಯಾಪಾರ ವಹಿವಾಟಿನಲ್ಲಿ ನಿರೀಕ್ಷಿತ ಲಾಭ ಇರದಿದ್ದರೂ ತೊಂದರೆ ಬಾರದು. ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದಾಗಿ ನಿರೀಕ್ಷಿತ ಮಟ್ಟ ತಲುಪಲಿದ್ದಾರೆ. ಸಾಮಾನ್ಯ ಮಟ್ಟದ ಜೀವನ ನಡೆಸಲು ಅನುವಾಗುವಿರಿ. ಕುಟುಂಬದ ಮುಖ್ಯ ಸ್ಥಾನ ಅಲಂಕರಿಸುವಿರಿ. ಕುಟುಂಬದಲ್ಲಿ ವಿವಾಹಕಾರ್ಯವೊಂದು ನಡೆಯಲಿದೆ. ಆತ್ಮೀಯರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ಸಂಗಾತಿಯೊಂದಿಗೆ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ ಬಣ್ಣ

ಮಿಥುನ

ಕುಟುಂಬದಲ್ಲಿ ಗಾಂಭೀರ್ಯ ಮನೆಮಾಡಲಿದೆ. ಉದ್ಯೋಗದಲ್ಲಿ ಅನಿಶ್ಚಿತ ವಾತಾವರಣ ನಿರ್ಮಾಣವಾಗುತ್ತದೆ. ದೃಢವಾದ ನಿರ್ಧಾರದಿಂದ ಸಮಸ್ಯೆಯನ್ನು ಪರಿಹರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ವಿದ್ಯಾರ್ಥಿಗಳು ವಿದ್ಯೆಯ ಜೊತೆಯಲ್ಲಿ ಉತ್ತ್ಗಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳುತ್ತಾರೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಗಂಭೀರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಹೆಚ್ಚಿನ ಅಧ್ಯಯನದ ಸಲುವಾಗಿ ವಿದೇಶಕ್ಕೆ ತೆರಳಬಹುದು. ಸಹೋದರಿಯ ಕೌಟುಂಬಿಕ ಕಲಹಕ್ಕೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವಿರಿ. ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಹಣದ ಲಾಭವಾಗುವ ಸಾಧ್ಯತೆ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಯುವಿಹಾರಕ್ಕೆ ತೆರಳುವಿರಿ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕಟಕ

ಹೊಂದಾಣಿಕೆಯ ಗುಣದಿಂದ ಕುಟುಂಬದಲ್ಲಿನ ಶಾಂತಿಯನ್ನು ಕಾಪಾಡುವಿರಿ. ಎಲ್ಲರೊಂದಿಗೆ ಮನದಲ್ಲಿನ ಯೋಚನೆಯನ್ನು ಹಂಚಿಕೊಳ್ಳುವಿರಿ. ಮೇಲಧಿಕಾರಿಗಳ ಮನೋಭಾವನೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವಿರಿ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸುವ ಯೋಜನೆ ರೂಪಿಸುವಿರಿ. ಮನಗೆದ್ದವರಿಗೆ ಹಣವನ್ನು ಸಂಪಾದಿಸುವ ಮಾರ್ಗವನ್ನು ತೋರುವಿರಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಮಾತ್ರ ಗಮನ ನೀಡುವಿರಿ. ಸಮಯವನ್ನು ಆಧರಿಸಿ ಯಾವುದಾದರೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸಂಗಾತಿಯಿಂದ ವಿಶೇಷವಾದ ಕೊಡುಗೆ ಸಿಗಬಹುದು. ಕಲುಷಿತ ನೀರಿನ ಸೇವನೆಯಿಂದ ಸೋಂಕು ಉಂಟಾಗಬಹುದು.

ಪರಿಹಾರ : ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ ಬಣ್ಣ

-----------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).