Horoscope Today: ಕುಟುಂಬದಲ್ಲಿ ಸಂಭ್ರಮದ ವಾತಾವರಣ, ಸಾಕು ಪ್ರಾಣಿಗಳಿಂದ ತೊಂದರೆ ಸಾಧ್ಯತೆ; ಮೇಷದಿಂದ ಕಟಕ ರಾಶಿಯವರೆಗಿನ ದಿನಭವಿಷ್ಯ
ಮಾರ್ಚ್ 9, ಶನಿವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (9 March 2024 Daily Horoscope).

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (9 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ಶನಿವಾರ
ತಿಥಿ : ಚತುರ್ದಶಿ ಸ.05.44 ರವರೆಗು ಇದ್ದು ಆನಂತರ ಅಮಾವಾಸ್ಯೆ ಆರಂಭವಾಗುತ್ತದೆ.
ನಕ್ಷತ್ರ : ಧನಿಷ್ಠ ನಕ್ಷತ್ರವು ಬೆ.06.55 ರವರೆಗೆ ಇರುತ್ತದೆ. ಉಪರಿ ಶತಬಿಷ ನಕ್ಷತ್ರ ಇರುತ್ತದೆ.
ಸೂರ್ಯೋದಯ: ಬೆ.06.29
ಸೂರ್ಯಾಸ್ತ: ಸ.06.28
ರಾಹುಕಾಲ : ಬೆ.09.00 ರಿಂದ ಬೆ.10.30
ರಾಶಿ ಫಲಗಳು
ಮೇಷ
ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಕಂಡುಬರುತ್ತದೆ. ಉದ್ಯೋಗದಲ್ಲಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಂಡಲ್ಲಿ ವಿಶೇಷವಾದ ಅನುಕೂಲತೆ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಜವಾಬ್ದಾರಿ ಹೆಚ್ಚುತ್ತದೆ. ವಿದ್ಯಾರ್ಥಿಗಳು ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ತೆಗೆದುಕೊಳ್ಳುತ್ತಾರೆ. ಸ್ವಂತ ಬಳಕೆಗೆ ಹೊಸ ವಾಹನವನ್ನು ಕೊಳ್ಳುವಿರಿ. ವಾಸವಿರುವ ಮನೆಯನ್ನು ವಿಸ್ತರಿಸುವಿರಿ. ಸಾಕು ಪ್ರಾಣಿಗಳಿಂದ ತೊಂದರೆ ಉಂಟಾಗಬಹುದು. ಕೃಷಿಕರಿಗೆ ಉತ್ತಮ ಆದಾಯ ದೊರೆಯಲಿದೆ. ವಾಹನಗಳ ಮಾರಾಟದಲ್ಲಿ ಲಾಭ ಇರುತ್ತದೆ. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ. ಹಿರಿಯ ಸೋದರಿಯ ಸಹಕಾರ ಇರುತ್ತದೆ.
ಪರಿಹಾರ : ಜೇನುತುಪ್ಪ ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಹಸಿರು ಬಣ್ಣ
ವೃಷಭ
ಕುಟುಂಬದಲ್ಲಿನ ಒತ್ತಡವು ಕಡಿಮೆ ಆಗುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಅಡಚಣೆಯೊಂದು ಎದುರಾಗುತ್ತದೆ. ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆದಾಯ ತೃಪ್ತಿಕರವಾಗಿರುತ್ತದೆ. ವಿದ್ಯಾರ್ಥಿಗಳು ಹಠದ ಗುಣದಿಂದ ವಿದ್ಯಾಭ್ಯಾಸದಲ್ಲಿ ಶ್ರದ್ಧೆ ತೋರುತ್ತಾರೆ. ಹಣದ ಕೊರತೆ ಕಡಿಮೆ ಮಾಡಲು ಉಪವೃತ್ತಿಯೊಂದನ್ನು ಆರಂಭಿಸುವಿರಿ. ಅನಗತ್ಯವಾಗಿ ಉದ್ಯೋಗವನ್ನು ಬದಲಾಯಿಸುವಿರಿ. ಸೋದರನ ಹಣದ ವಿವಾದ ಪರಿಹರಿಸಲು ಹೋಗಿ ಕಷ್ಟಕ್ಕೆ ಸಿಲುಕುವಿರಿ. ಮಕ್ಕಳು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊಸ ಜವಾಬ್ದಾರಿಯೊಂದು ವಿಶ್ರಾಂತಿ ಇಲ್ಲದಂತೆ ಮಾಡುತ್ತದೆ.
ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಇಂದಿನ ಕೆಲಸವನ್ನು ಆರಂಬಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ನೀಲಿ ಬಣ್ಣ
ಮಿಥುನ
ಮಕ್ಕಳ ಆಗಮನದಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಒತ್ತಡದ ನಡುವೆಯೂ ಯಶಸ್ಸನ್ನು ಕಾಣುವಿರಿ. ವ್ಯಾಪಾರ ವ್ಯವಹಾರದಲ್ಲಿ ನಿರಾತಂಕದ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಂದುವರೆಯುವರು. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ತೊಂದರೆ ಆಗಬಹುದು. ಹಿರಿಯ ಅಧಿಕಾರಿಗಳು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ನಿಮ್ಮ ಮಧ್ಯಸ್ಥಿಕೆಯಿಂದ ಉದ್ಯೋಗದಲ್ಲಿನ ಸಮಸ್ಯೆಯೊಂದು ಪರಿಹಾರವಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ. ಹಣದ ಕೊರತೆ ಉಂಟಾಗಬಹುದು.
ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ಕಟಕ
ದುಡುಕುತನದಿಂದ ಕುಟುಂಬದಲ್ಲಿ ವಿವಾದವೊಂದವನ್ನು ಎದುರಿಸುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ಜವಾಬ್ದಾರಿ ಹೆಚ್ಚುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆದಾಯದ ಕೊರತೆ ಇರುವುದಿಲ್ಲ. ಹಣದ ವಿಚಾರದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳದಿರಿ. ವಿದ್ಯಾರ್ಥಿಗಳು ಚುರುಕಿನಿಂದ ಅಧ್ಯಯನದಲ್ಲಿ ಮುಂದುವರೆಯುತ್ತಾರೆ. ಕಂತು ವ್ಯಾಪಾರದಲ್ಲಿ ಉತ್ತಮ ಗಳಿಕೆ ಇರುತ್ತದೆ. ವಯೋವೃದ್ದರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಸಂಗಾತಿಯ ಜೊತೆಯಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ತಾಯಿಗೆ ಅಜೀರ್ಣದ ತೊಂದರೆ ಉಂಟಾಗಬಹುದು, ರಕ್ತದ ಒತ್ತಡ ಇದ್ದಲ್ಲಿ ವೈದ್ಯರನ್ನು ಭೇಟಿಮಾಡಿ. ಪ್ರಯೋಜನವಿಲ್ಲದ ಓಡಾಟ ಕೋಪಕ್ಕೆ ಕಾರಣವಾಗುತ್ತದೆ. ದೇವಾಲಯದ ಪುನರುಜ್ಜೀವನ ಕಾಯಕದಲ್ಲಿ ಭಾಗವಹಿಸುವಿರಿ.
ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
-----------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ