ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಾಧಿಕಾರ, ವೃಷಭ, ಮಿಥುನ, ಕಟಕ ರಾಶಿಯವರಿಗೇನು ರಾಶಿಫಲ ಇಂದು, ಇಲ್ಲಿದೆ ವಿವರ

Horoscope Today: ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಾಧಿಕಾರ, ವೃಷಭ, ಮಿಥುನ, ಕಟಕ ರಾಶಿಯವರಿಗೇನು ರಾಶಿಫಲ ಇಂದು, ಇಲ್ಲಿದೆ ವಿವರ

Horoscope Today June 26 (ಜೂನ್ 26ರ ರಾಶಿ ಭವಿಷ್ಯ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಾಧಿಕಾರ, ವೃಷಭ, ಮಿಥುನ, ಕಟಕ ರಾಶಿಯವರಿಗೇನು ರಾಶಿಫಲ ಇಂದು? ಇಂದಿನ ದಿನಭವಿಷ್ಯ ಇಲ್ಲಿದೆ. (26th June 2024 Horoscope).

ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಾಧಿಕಾರ, ವೃಷಭ, ಮಿಥುನ, ಕಟಕ ರಾಶಿಯವರಿಗೇನು ರಾಶಿಫಲ ಇಂದು, ಇಲ್ಲಿದೆ ವಿವರ.
ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಾಧಿಕಾರ, ವೃಷಭ, ಮಿಥುನ, ಕಟಕ ರಾಶಿಯವರಿಗೇನು ರಾಶಿಫಲ ಇಂದು, ಇಲ್ಲಿದೆ ವಿವರ.

ಇಂದಿನ ದಿನ ಭವಿಷ್ಯ (ಜೂನ್ 26ರ ರಾಶಿ ಭವಿಷ್ಯ): 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (26th June 2024 Horoscope)

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಬುಧವಾರ

ತಿಥಿ : ಪಂಚಮಿ ರಾ.10.44 ರವರೆಗು ಇದ್ದು ಆನಂತರ ಷಷ್ಥಿ ಆರಂಭವಾಗುತ್ತದೆ.

ನಕ್ಷತ್ರ : ಧನಿಷ್ಠ ನಕ್ಷತ್ರವು ಹ. 03.22 ರವರೆಗೆ ಇದ್ದು ಆನಂತರ ಶತಭಿಷ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ ಬೆ.05.55

ಸೂರ್ಯಾಸ್ತ ಸ.06.48

ರಾಹುಕಾಲ : ಹ. 12.26 ರಿಂದ ಹ. 02.02

ಮೇಷ

ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುವುದಿಲ್ಲ. ದೀರ್ಘ ಕಾಲದ ವಿಶ್ರಾಂತಿಯನ್ನು ಬಯಸುವಿರಿ. ದುಡುಕಿನಿಂದ ಆದ ತಪ್ಪನ್ನು ಸರಿಪಡಿಸಿಕೊಂಡು ಮುಂದುವರೆಯುವಿರಿ. ನಿಮ್ಮಲ್ಲಿ ಉತ್ತಮ ಆಡಳಿತದ ಮನೋಭಾವನೆ ಕಂಡುಬರುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭ್ಯವಾಗುತ್ತದೆ. ಕಷ್ಟ ನಷ್ಟದಿಂದ ಪಾರಾಗಲು ಸುಳ್ಳನ್ನು ಹೇಳಲು ಹಿಂಜರಿಯುವುದಿಲ್ಲ. ಎಲ್ಲರಿಂದ ಹೊಗಳಿಕೆಯನ್ನು ನಿರೀಕ್ಷಿಸುವಿರಿ. ಹೊಗಳಿಕೆಗೆ ಮರುಳಾಗಿ ಸೋತು ಬಂದವರಿಗೆ ಸಹಾಯ ಮಾಡುವಿರಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮದಲ್ಲದ ತಪ್ಪನ್ನು ಒಪ್ಪಿಕೊಳ್ಳುವಿರಿ. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಗುಟ್ಟಾಗಿ ಮನೆಯ ಹಿರಿಯರಿಂದ ಹಣವನ್ನು ಪಡೆಯುವಿರಿ. ಅತಿಯಾದ ಜ್ವರದಿಂದ ಬಳಲುವ ಸಾಧ್ಯತೆಗಳಿವೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ

ವೃಷಭ

ಬಾಳ ಸಂಗಾತಿಗೆ ಬೇಸರ ಉಂಟುಮಾಡುವ ಕೆಲಸವನ್ನು ಮಾಡುವಿರಿ. ಅನಿವಾರ್ಯವಾಗಿ ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡುವಿರಿ. ಗೃಹಿಣಿಯರಿಗೆ ಮಕ್ಕಳಿಂದ ವಿಶೇಷವಾದಂತಹ ಅನುಕೂಲ ಉಂಟಾಗುತ್ತದೆ. ನಿಶ್ಚಯವಾಗಿದ್ದ ವಿವಾಹವು ವಿವಾದಗಳ ನಡುವೆ ನಡೆಯುತ್ತದೆ. ನಿಮ್ಮ ಕರ್ತವ್ಯ ನಿಷ್ಠೆಗೆ ತಕ್ಕಂತೆ ಫಲಗಳು ದೊರೆಯುವುದಿಲ್ಲ. ಆಪತ್ತಿನಲ್ಲಿ ಇದ್ದವರಿಗೆ ಸಹಾಯವನ್ನು ಮಾಡುವಿರಿ. ಧರ್ಮ ಗುರುಗಳ ಕೃಪೆ ದೊರೆಯುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಮಕ್ಕಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಹಣದ ಕೊರತೆ ಇರುತ್ತದೆ. ಸಹೋದ್ಯೋಗಿಗಳನ್ನು ಅನಾವಶ್ಯಕವಾಗಿ ನಿಂದಿಸುವಿರಿ. ಕುಟುಂಬಕ್ಕೆ ಸೇರಿದ ಅನೇಕ ರಹಸ್ಯಗಳು ತಿಳಿದಿರುತ್ತವೆ. ವೇದ ವೇದಾಂತದಲ್ಲಿ ಆಸಕ್ತಿ ಮೂಡುತ್ತದೆ. ಜನರಿಗೆ ಅಗತ್ಯವಾದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಸಂತಸ ಕಾಣುವಿರಿ. ಮನಸ್ಸಿನಲ್ಲಿ ಅಸುರಕ್ಷಿತ ಭಾವನೆ ನೆಲೆಸಿರುತ್ತದೆ.

ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮಿಥುನ

ನಿಮ್ಮದುಡಿಮೆ ಆದರೆ ಬೇರೆಯವರಿಗೆ ಅದರ ಫಲ ದೊರೆಯುತ್ತದೆ. ಇದರಿಂದಾಗಿ ಮಾನಸಿಕವಾಗಿ ನೋವನ್ನು ಅನುಭವಿಸುವಿರಿ. ನಿಮ್ಮಲ್ಲಿ ವಿಶೇಷ ಬುದ್ಧಿವಂತಿಕೆ ಮತ್ತು ಜ್ಞಾನವಿದ್ದರೂ ಅಪಕೀರ್ತಿಯನ್ನು ಎದುರಿಸಬೇಕಾಗುತ್ತದೆ. ಶಾಂತಿ ಸಹನೆಯಿಂದ ಇರುವ ಕಾರಣ ಅಧಿಕಾರಿಗಳ ಗಮನ ಸೆಳೆಯುವಿರಿ. ಮಕ್ಕಳಿಂದ ಉತ್ತಮ ಸಹಾಯ ಸಹಕಾರಗಳನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ದಂಪತಿಗಳ ನಡುವೆ ಪರಸ್ಪರ ತಾತ್ಸಾರದ ಸ್ವಭಾವ ಇರುತ್ತದೆ. ಮಕ್ಕಳ ಮೇಲೆ ನಂಬಿಕೆ ವಿಶ್ವಾಸ ಮೂಡುತ್ತದೆ. ಯುವಕರು ಕಷ್ಟವನ್ನು ಎದುರಿಸಲಾರದೆ ಉದ್ವೇಗದಿಂದ ವರ್ತಿಸುತ್ತಾರೆ. ನಿಮ್ಮ ಮನಸ್ಸನ್ನು ಗೆದ್ದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಕಷ್ಟ ನಷ್ಟಗಳ ಜೊತೆಯಲ್ಲಿಯೇ ಸುಖ ಸಂತೋಷಗಳು ಜೀವನದಲ್ಲಿ ಇರಲಿವೆ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಕಟಕ

ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೇಹಾಲಸ್ಯ ಹೆಚ್ಚುತ್ತದೆ. ಸುಖ ನಿದ್ರೆಯನ್ನು ಬಯಸುವಿರಿ. ಜನೋಪಕಾರಿ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವಿರಿ. ನಿಮ್ಮ ಕಷ್ಟದ ವೇಳೆ ನಿಮ್ಮ ವಾಹನವೇ ನಿಮಗೆ ಆಸರೆಯಾಗಲಿದೆ. ಕುಟುಂಬದಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಶುಭ ಕಾರ್ಯವನ್ನು ನೆರವೇರಲಿದೆ. ಸಮಾಜದಲ್ಲಿ ನಿಮಗೆ ಉನ್ನತ ಗೌರವ ದೊರೆಯಲಿದೆ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಇರುತ್ತದೆ. ನಿಮ್ಮ ಮಗನು ನಿಮಗೆ ಬೇಸರವಾಗುವಂತಹ ಕೆಲಸವನ್ನು ಮಾಡಬಹುದು. ಮಧ್ಯ ವಯಸ್ಕರಿಗೆ ವಿವಾಹ ಯೋಗವಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಹೆಚ್ಚಿನ ಶ್ರಮಪಡಬೇಕಾಗುತ್ತದೆ. ನವ ದಂಪತಿಗಳಿಗೆ ವಿಶೇಷವಾದಂತಹ ಶುಭಫಲಗಳು ದೊರೆಯಲಿವೆ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 11

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.