ಕನ್ನಡ ಸುದ್ದಿ  /  Astrology  /  Horoscope Today Daily Horoscope Astrological Predictions For 6th June 2023 Tuesday Horoscope Janma Kundali Rsm

Horoscope Today: ಒಂದು ಬಟ್ಟಲು ಸಾಸಿವೆ ಎಣ್ಣೆಗೆ ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಇದೆ; ಮಂಗಳವಾರದ ರಾಶಿಫಲ ನೋಡಿ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

6 ಜೂನ್‌ 2023  ಮಂಗಳವಾರದ ರಾಶಿಫಲ
6 ಜೂನ್‌ 2023 ಮಂಗಳವಾರದ ರಾಶಿಫಲ

ಇಂದಿನ ಪಂಚಾಂಗ: ಸಂವತ್ಸರ-ಶೋಭಕೃತ ನಾಮ ಸಂವತ್ಸರ- ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಕೃಷ್ಣ ಪಕ್ಷ-ಮಂಗಳವಾರ

ತಿಥಿ: ತದಿಗೆ ರಾತ್ರಿ 03.21 ರವರೆಗೆ ಇದ್ದು ನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ: ಪೂರ್ವಾಷಾಢ ನಕ್ಷತ್ರವು ರಾತ್ರಿ 01.55ವರೆಗೆ ಇದ್ದು ನಂತರ ಉತ್ತರಾಷಾಢ ನಕ್ಷತ್ರ ಆರಂಭವಾಗುತ್ತವೆ. ರಾಹುಕಾಲ: ಮಧ್ಯಾಹ್ನ 03.34 ರಿಂದ ಸಂಜೆ 05.10

ಸೂರ್ಯೋದಯ: ಬೆಳಗ್ಗೆ 05.52-ಸೂರ್ಯಾಸ್ತ ಸಂಜೆ 06.45

ಮೇಷ

ನಿರೀಕ್ಷಿತ ವಿಚಾರಗಳು ನಿಮ್ಮ ಇಷ್ಟದಂತೆ ನಡೆಯುತ್ತವೆ. ಮನೆಯನ್ನು ವಿಸ್ತರಿಸುವ ಯೋಜನೆಗೆ ಕೈ ಹಾಕುವಿರಿ. ಉದ್ಯೋಗದಲ್ಲಿ ಕಾದು ನೋಡುವ ತಂತ್ರ ಉಪಯೋಗಿಸಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಎದುರಾಗದು. ವಿದ್ಯಾರ್ಥಿಗಳು ಆಟ ಪಾಠ ಎರಡನ್ನು ಸರಿ ಸಮನಾಗಿ ಸ್ವೀಕರಿಸುವುದು ಒಳ್ಳೆಯದು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಕೊಂಚ ನಿದಾನವಾಗಿ ಲಾಭ ದೊರೆಯುತ್ತದೆ. ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಅವಶ್ಯಕತೆ ಬಿದ್ದಲ್ಲಿ ನಿಮ್ಮ ಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ಮಾತಿನಲ್ಲಿ ನಯ ವಿನಯ ಇರಲಿ.

ಹೊಸ ಚರ್ಮದ ವಸ್ತುವನ್ನು ಖರೀದಿಸಬೇಡಿ.

ವೃಷಭ

ಮೌನ ಬಿಟ್ಟು ಮಾತನಾಡಿದರೆ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಮನದಲ್ಲಿ ಒಂದು ರೀತಿಯ ಭಯ ಇರುತ್ತದೆ. ಉದ್ಯೋಗದಲ್ಲಿ ಸಮಸ್ಯೆ ಇರದು. ಸಹೋದ್ಯೋಗಿಗಳ ಸಹಕಾರ ಇರುತ್ತದೆ. ಉನ್ನತ ಮಟ್ಟದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಆತಂಕದಿಂದ ಹೊರಬರಬೇಕು. ಉಳಿದಂತೆ ಯಾವುದೇ ತೊಂದರೆ ಇಲ್ಲ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗದು. ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ಕುಟುಂಬದ ಬಹುದಿನದ ವಿವಾದ ಒಂದನ್ನು ಬಗೆಹರಿಸುವಿರಿ.

ಕಪ್ಪು ಬಿಳಿ ಮಿಶ್ರವರ್ಣದ ನೆಲಹಾಸವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಮಿಥುನ

ತಂದೆಯವರ ಆರೋಗ್ಯ ಸುಧಾರಣೆಗಾಗಿ ಹಣವನ್ನು ಖರ್ಚು ಮಾಡುವಿರಿ. ಅವಶ್ಯವಿರುವಷ್ಟು ಹಣ ಸಂಪಾದಿಸುವ ಬುದ್ದಿಶಕ್ತಿ ನಿಮಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ಗೌರವ ಲಭಿಸುತ್ತದೆ. ಯಾವುದೇ ಸಮಸ್ಯೆಯಾದರೂ ಜನ ಸಾಮಾನ್ಯರು ನಿಮ್ಮನ್ನು ಆಶ್ರಯಿಸುತ್ತಾರೆ. ಸಮಾಜದ ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಹಣದ ವಿಚಾರದಲ್ಲಿ ದುರಾಸೆ ಇರುವುದಿಲ್ಲ. ವಿದ್ಯಾರ್ಥಿಗಳು ಸಹಜ ರೀತಿಯಲ್ಲಿ ವ್ಯಾಸಂಗದಲ್ಲಿ ತೊಡಗುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ತೋರುವುದಿಲ್ಲ. ಯಾರಿಂದಲೂ ಹಣದ ಸಹಾಯ ಪಡೆಯುವುದಿಲ್ಲ.

ಧಾರ್ಮಿಕ ಕೇಂದ್ರಕ್ಕೆ ಸಾಸಿವೆ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಕಟಕ

ದಿನಪೂರ್ತಿ ಸಂತಸದಿಂದ ಕಾಲ ಕಳೆಯುವಿರಿ. ವೃಥಾ ಸಮಯವನ್ನು ವ್ಯರ್ಥ ಮಾಡದೆ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿರತರಾಗಿರುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಅತಿಯಾದ ಆತ್ಮವಿಶ್ವಾಸ ಒತ್ತಡಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ವ್ಯಾಸಂಗದಲ್ಲಿ ತೊಡಗುತ್ತಾರೆ. ದ್ರವರೂಪದ ಆಹಾರದ ವ್ಯಾಪಾರ ಹೊಸ ಹುರುಪನ್ನು ನೀಡುತ್ತದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಿದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವಿರಿ.

ಪುಟ್ಟ ಮಕ್ಕಳಿಗೆ ಕುಡಿಯಲು ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಸಿಂಹ

ತಂದೆ ತಾಯಿಗಳ ಧೀರ್ಘಕಾಲದ ಪ್ರವಾಸಕ್ಕೆ ಹಣವನ್ನು ನೀಡುವಿರಿ. ಸುಲಭವಾಗಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ತೆಗೆದುಕೊಂಡ ತೀರ್ಮಾನಗಳನ್ನು ಯಾವ ಕಾರಣಕ್ಕೂ ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿನ ನಿಮ್ಮ ಆಶೋತ್ತರಗಳು ಈಡೇರುತ್ತವೆ. ತಾತನಿಂದ ಹಣದ ಸಹಾಯ ದೊರೆಯುತ್ತದೆ . ಜನ ಸಾಮಾನ್ಯರಿಗೆ ಕಾನೂನು ಸಲಹೆ ನೀಡಲು ಸಂಸ್ಥೆಯಿಂದ ಆರಂಭಿಸುವಿರಿ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಸಂಗಾತಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಅಧ್ಯಯನ ಮಾಡುತ್ತಾರೆ. ಹಣದ ಬಗ್ಗೆ ಆಸೆ ಇರದು.

ಜಪಸರ ಧರಿಸಿ ದಿನದ ಕೆಲಸ ಆರಂಭಿಸುವುದು ಒಳ್ಳೆಯದು.

ಕನ್ಯಾ

ಯಾವುದೇ ಕಷ್ಟದ ಸಂದರ್ಭದಲ್ಲೂ ಆತ್ಮಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. ಆತ್ಮೀಯರೊಬ್ಬರ ಸಹಾಯ ಸಹಕಾರ ಸದಾಕಾಲ ದೊರೆಯುತ್ತದೆ. ಉದ್ಯೋಗದಲ್ಲಿ ನಷ್ಟವಾಗದೆ ಹೋದರು ಮನದಲ್ಲಿ ಆತಂಕದ ಭಾವನೆ ಇರುತ್ತದೆ. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಸಿನಿಂದ ಅಧ್ಯಯನದಲ್ಲಿ ತಲ್ಲೀನರಾಗಬೇಕು. ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗುತ್ತವೆ. ಆತ್ಮೀಯರ ಜೊತೆ ನಡೆಸುವ ಪಾಲುಗಾರಿಕೆಯ ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭವಿದೆ. ಭೂ ವ್ಯವಹಾರ ಒಳ್ಳೆಯದಲ್ಲ. ವಾಸ ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಬ್ಯಾಂಕ್ ವ್ಯವಹಾರ ಒಂದರಲ್ಲಿ ಹಿನ್ನಡೆ ಉಂಟಾಗಬಹುದು.

ನಿಮ್ಮಯಲ್ಲಿ ಚೌಕಾಕಾರದ ಬೆಳ್ಳಿಯ ವಸ್ತುವಿದ್ದಲ್ಲಿ ಒಳ್ಳೆಯದು..

ತುಲಾ

ಯಾವುದೇ ಆತಂಕವಿಲ್ಲದೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಎಲ್ಲಾ ರೀತಿಯ ಅನುಕೂಲತೆಗಳು ದೊರೆಯಲಿವೆ. ನಿಮ್ಮ ಕಷ್ಟದ ವೇಳೆಯಲ್ಲಿಯೂ ಬೇರೆಯವರಿಗೆ ಸಹಾಯ ಮಾಡುವಿರಿ. ವಿದ್ಯಾರ್ಥಿಗಳ ಕ್ರೀಡಾಮನೋಭಾವನೆ ಯಶಸ್ಸಿಗೆ ಕಾರಣವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೇರಳ ಲಾಭ ಗಳಿಸುವಿರಿ.. ಕುಟುಂಬದ ಸೌಹಾರ್ದತೆಗೆ ಕಾರಣರಾಗುವಿರಿ. ಆರೋಗ್ಯದ ಬಗ್ಗೆ ಗಮನ ಕೊಡಿ. ಸಂಗೀತ ನಾಟ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಿರಿ. ಸಾಲದ ವ್ಯವಹಾರ ಬೇಡ. ಕುಟುಂಬದ ಹಿರಿಯರ ಹಣದ ಕೊರತೆಯನ್ನು ನಿವಾರಿಸುವಿರಿ.

ಜಪಸರವನ್ನು ದಾನ ನೀಡಿ ದಿನದ ಕೆಲಸವನ್ನು ಆರಂಭಿಸಿ.

ವೃಶ್ಚಿಕ

ಯಾರ ಮಾತನ್ನು ಸುಲಭವಾಗಿ ನಂಬುವುದಿಲ್ಲ. ಮಗಳ ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ವಿರೋಧ ಎದುರಿಸಬೇಕಾಗುತ್ತದೆ. ನಿಮಗೆ ನಿಶ್ಯಕ್ತಿ ಅಥವಾ ರಕ್ತದ ದೋಷದ ತೊಂದರೆ ಇರುತ್ತದೆ. ಕುಟುಂಬದಲ್ಲಿ ಬೇಸರದ ಸನ್ನಿವೇಶ ಹೆದರಿಸುವಿರಿ. ಉದ್ಯೋಗದಲ್ಲಿ ದುಡುಕಿನ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳ ಹಾದಿ ಸುಗಮವಾಗಿರುತ್ತದೆ. ಮಾತಿನ ಭಯದಲ್ಲಿ ವಿವಾದದಲ್ಲಿ ಸಿಲುಕುವಿರಿ. ಬಾಯಿ ಅಥವಾ ಗಂಟಲಿಗೆ ಸಂಬಂಧಿಸಿದ ಅನಾರೋಗ್ಯ ಉಂಟಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಕಡಿಮೆ ಲಾಭ ದೊರೆಯುತ್ತವೆ.

ನೀಲಿ ಬಣ್ಣದ ಬಟ್ಟೆಯಿಂದ ದೂರ ಇದ್ದಷ್ಟೂಒಳ್ಳೆಯದು.

ಧನಸ್ಸು

ಮನಸ್ಸು ಹತೋಟಿಯಲ್ಲಿ ಇರುವುದು ಅವಶ್ಯಕ. ಮಾತಿನಲ್ಲೇ ನಿಮ್ಮ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುವಿರಿ. ಕೋಪ ಬಂದಷ್ಟೇ ಬೇಗ ಶಾಂತರಾಗುವಿರಿ. ನಿಮ್ಮ ಮಾತಿನಂತೆ ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅತಿಯಾದ ನಿಧಾನಗತಿಯ ತೀರ್ಮಾನಗಳು ತೊಂದರೆ ನೀಡಬಹುದು. ವಿದ್ಯಾರ್ಥಿಗಳು ಗುರಿ ಸಾಧನೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ . ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ತೊಂದರೆ ಎದುರಾಗದು. ಕುಟುಂಬದ ಶಾಂತಿ ಯುತ ಜೀವನಕ್ಕೆ ಕಾರಣರಾಗುವಿರಿ.

ಹಳದಿ ಬಣ್ಣದಉಡುಪುಗಳನ್ನು ಧರಿಸುವುದರಿಂದ ಈ ದಿನ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಮಕರ

ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವುದರಿಂದ ಯಾವುದೇ ತೊಂದರೆ ಬಾರದು. ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ವೈಯಕ್ತಿಕ ಕಾರಣಗಳಿಂದ ಉದ್ಯೋಗವನ್ನು ಬದಲಿಸುವಿರಿ. ಬರಬೇಕಿತ್ತ ದೊಡ್ಡ ಮಟ್ಟದ ಹಣವು ಕೊಂಚ ನಿಧಾನವಾಗಿ ಕೈ ಸೇರುತ್ತದೆ. ತಂದೆಗೆ ಸೇರಿದ ಆಸ್ತಿಯಲ್ಲಿ ಸಿಂಹ ಪಾಲು ದೊರೆಯುತ್ತದೆ . ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಅಭ್ಯಾಸದಲ್ಲಿ ತೊಡಗಬೇಕು. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಸ್ವಂತ ಉದ್ಯಮವಿದ್ದಲ್ಲಿ ಆದಾಯದಲ್ಲಿ ಕ್ರಮೇಣವಾಗಿ ಏರಿಕೆ ಕಂಡು ಬರುತ್ತದೆ.

ಪಂಚ ಲೋಹದ ಕಡಗ ಅಥವಾ ಉಂಗುರವನ್ನು ಧರಿಸಿ ಕೆಲಸವನ್ನು ಆರಂಭಿಸಿ.

ಕುಂಭ

ಕೆಲಸ ಕಾರ್ಯಗಳಲ್ಲಿ ತೊಡಗಲು ಮನಸ್ಸಿರುವುದಿಲ್ಲ. ದೈನಂದಿನ ಕೆಲಸಗಳಲ್ಲಿ ಕೊಂಚ ಹಿನ್ನಡೆ ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರಯತ್ನ ಅತಿ ಮುಖ್ಯವಾಗುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಉಂಟು ಮಾಡುವಿರಿ. ವಿದ್ಯಾರ್ಥಿಗಳು ಗುರುಹಿರಿಗಳ ಆದೇಶದಂತೆ ನಡೆಯುವುದು ಒಳ್ಳೆಯದು. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರಗಳಲ್ಲಿ ಆದಾಯವು ಮಧ್ಯಮ ಗತಿಯಲ್ಲಿ ಇರುತ್ತವೆ. ವಂಶದ ಆಸ್ತಿಯ ವಿಚಾರದಲ್ಲಿ ವಿವಾದವನ್ನು ಎದುರಾಗಬಹುದು.

ಐದು ವರ್ಷದ ಒಳಗಿನ ಮಕ್ಕಳಿಗೆ ತಿನ್ನಲು ಸಿಹಿ ನೀಡಿ ದಿನದ ಕೆಲಸ ಆರಂಭಿಸಿ.

ಮೀನ

ಪದೇ ಪದೇ ಮನಸ್ಸನ್ನು ಬದಲಾಯಿಸದಿರಿ. ಸೋದರಿಯ ಜೊತೆಯಲ್ಲಿ ಚಿಕ್ಕ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡು ಬರದು. ಇರುವ ಹಣವನ್ನೆಲ್ಲ ಖರ್ಚು ಮಾಡಿ ದಿನದ ಕೊನೆಗೆ ತಾಯಿಯಿಂದ ಹಣವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯ ಅರಿವು ಇರುತ್ತದೆ. ಪ್ರಾಣಿಗಳಿಂದ ಅಪಾಯವಾಗಬಹುದು ಎಚ್ಚರಿಕೆ ಇರಲಿ. ಸಾಲದ ವ್ಯವಹಾರದಿಂದ ದೂರವಿರಿ . ಗಂಟಲಿನಲ್ಲಿ ಊತದ ತೊಂದರೆ ಕಂಡು ಬರಬಹುದು.

ಕೇಸರಿ ಬಣ್ಣದ ವಸ್ತ್ರವನ್ನು ದಾನ ಮಾಡಿ ದಿನದ ಕೆಲಸ ಆರಂಭಿಸಿ.

ವಿಭಾಗ