ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ; ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದು ಜಾಗ್ರತೆಯಿಂದಿರಿ;ನವೆಂಬರ್ 11ರ ದಿನಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ; ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದು ಜಾಗ್ರತೆಯಿಂದಿರಿ;ನವೆಂಬರ್ 11ರ ದಿನಭವಿಷ್ಯ

ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ; ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದು ಜಾಗ್ರತೆಯಿಂದಿರಿ;ನವೆಂಬರ್ 11ರ ದಿನಭವಿಷ್ಯ

ನವೆಂಬರ್‌ 11ರ ದಿನ ಭವಿಷ್ಯ: ದ್ವಾದಶ ರಾಶಿಗಳಿಗೆ ಮಿಶ್ರಫಲವಿದೆ. ಹಣಕಾಸಿನ ವ್ಯವಹಾರವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಮಾನಸಿಕ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮೆಟ್ಟಿಲುಗಳನ್ನು ಹತ್ತುವಾಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ನವೆಂಬರ್‌ 11ರ ದಿನ ಭವಿಷ್ಯ
ನವೆಂಬರ್‌ 11ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ನವೆಂಬರ್‌ 11ರಂದು ಮೇಷದಿಂದ ಮೀನರಾಶಿವರೆಗೆ ದಿನಭವಿಷ್ಯ ಹೇಗಿದೆ ನೋಡಿ.

ಮೇಷ ರಾಶಿ: ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಕಾಣಲು ಕಚೇರಿಯಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಬದುಕಬೇಕು. ಇಂದು ಹಣಕಾಸಿನ ನಿವರ್ಹಣೆ ವಿಚಾರದಲ್ಲಿ ಎಚ್ಚರಿಕೆ ಇರಲಿ. ಪ್ರೇಮ ಸಂಬಂಧಗಳಲ್ಲಿ ಅನೇಕ ಸಕಾರಾತ್ಮಕ ಸಂಗತಿಗಳು ಕಂಡುಬರುತ್ತವೆ.

ವೃಷಭ ರಾಶಿ: ಉತ್ತಮ ನಾಳೆಗಾಗಿ ಇಂದು ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಉತ್ಪಾದಕತೆ ಮೇಲೆ ಕೇಂದ್ರೀಕರಿಸುವುದು ಮುಖ್ಯ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ.

ಮಿಥುನ ರಾಶಿ: ಇತ್ತೀಚೆಗೆ ಬ್ರೇಕಪ್ ಆಗಿರುವ ಮಿಥುನ ರಾಶಿಯವರಿಗೆ ದಿನದ ದ್ವಿತೀಯಾರ್ಧದಲ್ಲಿ ಆಸಕ್ತಿದಾಯಕ ವ್ಯಕ್ತಿಯ ಭೇಟಿಯಾಗಬಹುದು. ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ. ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ.

ಕಟಕ ರಾಶಿ: ಇಂದು ಧನಾತ್ಮಕ ಶಕ್ತಿ ತುಂಬಿದ ದಿನವಾಗಿರುತ್ತದೆ. ಕೆಲಸದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ವೆಚ್ಚಗಳನ್ನು ನಿಯಂತ್ರಿಸಿ. ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಸಾಕಷ್ಟು ನೀರು ಕುಡಿಯಿರಿ.

ಸಿಂಹ ರಾಶಿ: ಇಂದು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕು. ಕೆಲವು ಮ್ಯಾನೇಜರ್‌ಗಳು ಮತ್ತು ತಂಡದ ನಾಯಕರ ಜೀವನವು ಅಸ್ತವ್ಯಸ್ತವಾಗಿರುತ್ತದೆ. ಸಣ್ಣ ಪುಟ್ಟ ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು, ಆದರೆ ದೈನಂದಿನ ದಿನಚರಿಯು ಪರಿಣಾಮ ಬೀರುವುದಿಲ್ಲ.

ಕನ್ಯಾ ರಾಶಿ: ಇಂದು ಜಗಳವಾಡುವುದನ್ನು ತಪ್ಪಿಸಬೇಕು. ಕಚೇರಿ ರಾಜಕಾರಣದಲ್ಲಿ ಸಿಲುಕಿಕೊಳ್ಳಬೇಡಿ. ನಿಮ್ಮ ಕೆಲಸದ ಮೇಲೆ ಗಮನವಿರಲಿ. ಆರೋಗ್ಯಕರ ಆಹಾರವನ್ನು ಅನುಸರಿಸಿ ಮತ್ತು ಪ್ರತಿದಿನ ವ್ಯಾಯಾಮ ಮಾಡಿ. ನಿಮ್ಮ ಸಂಗಾತಿಯನ್ನು ಸಂತೋಷವಾಗಿರಿಸಿಕೊಳ್ಳಿ.

ತುಲಾ ರಾಶಿ: ಇಂದು ನಿಮ್ಮ ಕಾರ್ಯಕ್ಷಮತೆಯತ್ತ ಗಮನ ಹರಿಸಬೇಕು. ವ್ಯಾಪಾರ ಮಾಡುವಾಗ ಜಾಗರೂಕರಾಗಿರಿ. ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡುವ ಮೂಲಕ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು. ಆರೋಗ್ಯಕ್ಕೆ ಆದ್ಯತೆ ನೀಡಿ.

ವೃಶ್ಚಿಕ ರಾಶಿ: ಇಂದು ಬಹಳ ರೊಮ್ಯಾಂಟಿಕ್ ದಿನವಾಗಿರುತ್ತದೆ. ಕೆಲವರು ತಮ್ಮ ಸಂಗಾತಿಯಿಂದ ಉಡುಗೊರೆ ಅಥವಾ ಡೇಟಿಂಗ್‌ಗೆ ಹೋಗುವಂತಹ ಸರ್ಪ್ರೈಸ್ ಪಡೆಯುವ ಸಾಧ್ಯತೆ ಇದೆ. ಕೆಲಸದ ಕಾರಣದಿಂದಾಗಿ ನೀವು ತೊಂದರೆ ಅನುಭವಿಸಬಹುದು. ಆರೋಗ್ಯದ ಕಡೆ ಗಮನ ಕೊಡಿ.

ಧನು ರಾಶಿ: ಇಂದು ವೈವಾಹಿಕ ಸಂಬಂಧಗಳಿಂದ ದೂರವಿರಬೇಕು. ಸಂದರ್ಶನದಲ್ಲಿ ತೇರ್ಗಡೆಯಾಗುವ ಮೂಲಕ ಕೆಲವರು ಆಫರ್ ಲೆಟರ್ ಪಡೆಯಬಹುದು. ಮೆಟ್ಟಿಲುಗಳನ್ನು ಬಳಸುವಾಗ ಜಾಗರೂಕರಾಗಿರಿ. ತಾಯಿಯ ಆರೋಗ್ಯದ ಕಡೆ ಗಮನ ಹರಿಸಬೇಕು.

ಮಕರ ರಾಶಿ: ಇಂದು ತಮ್ಮ ಸೃಜನಶೀಲತೆಯನ್ನು ಸುಧಾರಿಸುವತ್ತ ಗಮನ ಹರಿಸಬೇಕು. ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಅಗತ್ಯಗಳನ್ನು ಪೂರೈಸಲು ಹಣದ ಅಗತ್ಯವಿರುತ್ತದೆ. ಹೊರಗಿನ ಆಹಾರವನ್ನು ಹೆಚ್ಚು ತಿನ್ನುವುದನ್ನು ತಪ್ಪಿಸಿ.

ಕುಂಭ ರಾಶಿ: ಇಂದು ಧನಾತ್ಮಕ ಚಿಂತನೆಯ ಜನರೊಂದಿಗೆ ಸ್ವಲ್ಪ ಸಮಯ ಕಳೆಯಬೇಕು. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಹೂಡಿಕೆಯಿಂದ ದೂರವಿರಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯುವುದು ಉತ್ತಮ.

ಮೀನ ರಾಶಿ: ಇಂದು ಲವ್‌ ಪ್ರಪೋಸ್ ಮಾಡಲು ಉತ್ತಮ ದಿನ. ಕಚೇರಿಯಲ್ಲಿ ತಂಡದ ಸದಸ್ಯರನ್ನು ನಿರ್ವಹಿಸುವಾಗ ಜಾಗರೂಕರಾಗಿರಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಆದ್ದರಿಂದ, ಆಹಾರ ಪದ್ಧತಿಗೆ ಗಮನ ಕೊಡುವುದು ಮುಖ್ಯ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.