Horoscope today: ಈ ರಾಶಿಯವರ ಆದಾಯದಲ್ಲಿ ಹೆಚ್ಚಳ, ಮಕ್ಕಳಿಂದ ಶುಭ ಸುದ್ದಿ; ಆಗಸ್ಟ್ 21ರ ದಿನಭವಿಷ್ಯ
Summary: Horoscope Today August 21: 2024 ಆಗಸ್ಟ್ 21ರ ಬುಧವಾರ ನಿಮ್ಮ ದಿನಭವಿಷ್ಯ ಹೇಗಿದೆ? ಯಾವೆಲ್ಲಾ ರಾಶಿಯವರಿಗೆ ಶುಭಫಲಗಳಿವೆ? ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೀಗಿದೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಈ ದಿನ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಆದಾಯವು ಖರ್ಚಿಗೆ ದಾರಿಮಾಡಿಕೊಡಲಿದೆ. ನಿರ್ಣಾಯಕ ಸಮಯದಲ್ಲಿ ಹಣ ಲಭ್ಯವಾಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸುವಿರಿ. ವೃತ್ತಿಯಲ್ಲಿ ಒತ್ತಡ ತಡೆದುಕೊಳ್ಳುವ ಶಕ್ತಿ ಇರುತ್ತದೆ. ವ್ಯಾಪಾರಿಗಳು ಅಗತ್ಯ ಪಾವತಿಗಳನ್ನು ಮಾಡುತ್ತಾರೆ. ಭವಿಷ್ಯಕ್ಕಾಗಿ ಹೊಸ ಯೋಜನೆಗಳನ್ನು ಸಿದ್ಧಪಡಿಸುವಿರಿ. ಸೂರ್ಯನ ಆರಾಧನೆಯು ಪ್ರಯೋಜನಕಾರಿಯಾಗಿದೆ.
ವೃಷಭ ರಾಶಿ: ದೈಹಿಕ ಅಸ್ವಸ್ಥತೆಯಿಂದಾಗಿ ಆಗಾಗ ಒತ್ತಡ ಇರುತ್ತದೆ. ವೃತ್ತಿ, ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಪ್ರಯಾಣ ಸಾಧ್ಯತೆ ಇದೆ. ಖರ್ಚು ಮತ್ತು ಆದಾಯ ಒಂದೇ ರೀತಿ ಇರುತ್ತದೆ. ಅನಗತ್ಯ ಖರ್ಚುಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಿ. ಶತ್ರುಗಳಿಂದ ದೂರವಿರಿ. ಹನುಮಾನ್ ಚಾಲೀಸಾ ಪಠಿಸಿ. ಒಳ್ಳೆಯದಾಗುತ್ತವೆ.
ಮಿಥುನ ರಾಶಿ: ಇಂದು ವ್ಯಾಪಾರ ಮಾಡುವವರು ಉತ್ತಮ ಲಾಭ ಪಡೆಯುತ್ತಾರೆ. ಕೆಲವು ಪ್ರಮುಖ ಕೆಲಸಗಳಲ್ಲಿ ನೀವು ಯಶಸ್ಸು ಸಾಧಿಸಬಹುದು. ಕುಟುಂಬ ಮಿಲನದ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಪ್ರಯಾಣದ ಯೋಜನೆ ರೂಪಿಸುವ ಸಾಧ್ಯತೆಯಿದೆ. ಕೆಲವರಿಗೆ ಆಸ್ತಿ ಸಂಪಾದಿಸುವ ಅವಕಾಶವಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಕರ್ಕಾಟಕ ರಾಶಿ: ಇಂದು ನಿಮಗೆ ಶುಭದಿನ. ಹಣದ ಹರಿವು ನಿಮಗೆ ಉತ್ತಮವಾಗಿರುತ್ತದೆ. ವೃತ್ತಿಪರ ರಂಗದಲ್ಲಿ ನಿಮ್ಮ ಮೌಲ್ಯವನ್ನು ನೀವು ಸಾಬೀತುಪಡಿಸುತ್ತೀರಿ. ಕುಟುಂಬ ಸದಸ್ಯರನ್ನು ಭೇಟಿ ಮಾಡುವಿರಿ. ಕೆಲವರು ವಿದೇಶ ಪ್ರವಾಸಕ್ಕೆ ಯೋಜಿಸಬಹುದು. ನಿಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, ನೀವು ಇಂದು ಉತ್ತಮವಾಗಿ ಕಾರ್ಯನಿರ್ವಹಿಸಬಹುದು.
ಸಿಂಹ ರಾಶಿ: ಇಂದು ಕೆಲವರು ತಮ್ಮ ಸಾಲಗಳನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ನಿಮ್ಮ ಪ್ರಯತ್ನಗಳಲ್ಲಿ ನಿಮ್ಮ ಕುಟುಂಬದಿಂದ ಹೆಚ್ಚಿನ ಬೆಂಬಲವನ್ನು ನೀವು ಕಾಣುತ್ತೀರಿ. ನೀವು ಹತ್ತಿರದ ಯಾರೊಂದಿಗಾದರೂ ಪ್ರವಾಸಕ್ಕೆ ಹೋಗಬಹುದು. ಆಸ್ತಿ ನಿರ್ಧಾರವು ನಿಮ್ಮ ಪರವಾಗಿ ಬರಬಹುದು.
ಕನ್ಯಾ ರಾಶಿ: ಇಂದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆ ದೂರವಾಗುತ್ತವೆ. ಇಂದು ಹೂಡಿಕೆ ಮಾಡುವ ಮೂಲಕ ಬಹುಪಾಲು ಆದಾಯ ಗಳಿಸುವ ಸಾಧ್ಯತೆಯಿದೆ. ಇಂದು ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ಯಾವುದಾದರೂ ಹೊಸ ಕೆಲಸವನ್ನು ಮಾಡಲು ನಿರ್ಧರಿಸುತ್ತೀರಿ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಇಂದು ಉತ್ತಮ ದಿನವಾಗಲಿದೆ.
ತುಲಾ ರಾಶಿ: ಇಂದು ನಿಮ್ಮ ಆದಾಯ ಹೆಚ್ಚಿಸಲು ನೀವು ಅನೇಕ ಮೂಲಗಳನ್ನು ಪಡೆಯಬಹುದು. ಕೆಲವು ಯೋಜನೆಗಳಿಗೆ ನೀವು ಕೊಡುಗೆ ನೀಡಬೇಕಾಗಬಹುದು. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಪ್ರಯಾಣ ಮಾಡುವವರಿಗೆ ಈ ದಿನವು ಉತ್ತಮವಾಗಿರುತ್ತದೆ. ಇಂದು ನೀವು ಆಸ್ತಿ ಸಂಬಂಧಿತ ವಿಷಯಗಳನ್ನು ಹೊರತುಪಡಿಸಿ ಎಲ್ಲದರಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ.
ವೃಶ್ಚಿಕ ರಾಶಿ: ಇಂದು ನೀವು ಕಾಯಿಲೆಗಳಿಂದ ಪರಿಹಾರ ಪಡೆಯಬಹುದು. ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಖ್ಯಾತಿ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರ ಅನುಮಾನಾಸ್ಪದ ಸ್ವಭಾವವು ನಿಮ್ಮನ್ನು ಚಿಂತೆಗೀಡುಮಾಡಬಹುದು. ಪ್ರಯಾಣದ ಮೂಲಕ ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ.
ಧನು ರಾಶಿ: ಆರೋಗ್ಯವು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಈ ದಿನವು ಅನುಕೂಲಕರವಾಗಿ ಕಾಣುತ್ತದೆ. ಉತ್ತಮ ಲಾಭವನ್ನು ಗಳಿಸುವಿರಿ. ಕುಟುಂಬದಲ್ಲಿ ನೀವು ನಿರೀಕ್ಷಿಸಿದ್ದನ್ನು ಪಡೆಯಬಹುದು. ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳುವವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಕರ: ಆರ್ಥಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಅಲ್ಪ ದೂರದ ಪ್ರಯಾಣದ ಸಂಭವವಿರಬಹುದು. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಸಲು ಅವಕಾಶವನ್ನು ಪಡೆಯಬಹುದು. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಕುಂಭ ರಾಶಿ: ಈ ದಿನ ನೀವು ದೊಡ್ಡ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ದಿನವು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ವೃತ್ತಿಪರ ರಂಗದಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅನುಕೂಲಕರ ದಿನ. ಮನೆಕೆಲಸ ಅಥವಾ ಸಂಬಂಧಿತ ವಿಷಯಗಳಿಗೆ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಮಕ್ಕಳಿಂದ ನೀವು ಶುಭ ಸುದ್ದಿ ಪಡೆಯಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮೀನ ರಾಶಿ: ಆರೋಗ್ಯ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಮೂಲದಿಂದ ಹಣವನ್ನು ಪಡೆಯಲು ಸಂತೋಷಪಡುತ್ತೀರಿ. ಕುಟುಂಬದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಉದ್ಯೋಗ ಸಂಬಂಧಿತ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.