ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today; ಆತುರದ ನಿರ್ಧಾರಗಳಿಂದ ವಿವಾದಕ್ಕೆ ಸಿಲುಕುವಿರಿ, ಆಪ್ತರಿಂದ ಹಣದ ಸಹಾಯ ದೊರೆಯಲಿದೆ; ಇಂದಿನ ದಿನ ಭವಿಷ್ಯ

Horoscope Today; ಆತುರದ ನಿರ್ಧಾರಗಳಿಂದ ವಿವಾದಕ್ಕೆ ಸಿಲುಕುವಿರಿ, ಆಪ್ತರಿಂದ ಹಣದ ಸಹಾಯ ದೊರೆಯಲಿದೆ; ಇಂದಿನ ದಿನ ಭವಿಷ್ಯ

ಸೋಮವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ ವೃಷಭ ಮಿಥುನ ಕಟಕ ಸಿಂಹ ಕನ್ಯಾ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (September 25th, 2023, Daily Horoscope in Kannada).

ಸೆಪ್ಟೆಂಬರ್‌ 25ರ ದಿನಭವಿಷ್ಯ
ಸೆಪ್ಟೆಂಬರ್‌ 25ರ ದಿನಭವಿಷ್ಯ

ಸೋಮವಾರದ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (September 25th, 2023, Daily Horoscope in Kannada).

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸೋಮವಾರ

ತಿಥಿ: ಏಕಾದಶಿ ರಾತ್ರಿ 1.22 ರವರೆಗೂ ಇರುತ್ತದೆ. ಅನಂತರ ದ್ವಾದಶಿ ಆರಂಭವಾಗುತ್ತದೆ.

ನಕ್ಷತ್ರ: ಉತ್ತರಾಷಾಡ ನಕ್ಷತ್ರವು ಬೆಳಿಗ್ಗೆ 9.05 ರವರೆಗೂ ಇರುತ್ತದೆ. ಅನಂತರ ಶ್ರವಣ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 6.08

ಸೂರ್ಯಾಸ್ತ: ಸಂಜೆ 6.14

ರಾಹುಕಾಲ: ಬೆಳಿಗ್ಗೆ 7.30 ರಿಂದ ಬೆಳಿಗ್ಗೆ 09.00

ರಾಶಿ ಫಲಗಳು

ತುಲಾ

ಧಾರ್ಮಿಕ ಕೆಲಸ ಕಾರ್ಯಗಳನ್ನು ಆಯೋಜಿಸುವ ಕೆಲಸದಲ್ಲಿ ಲಾಭವಿದೆ. ಜನೋಪಕಾರಿ ಕೆಲಸಗಳನ್ನು ಮಾಡುವ ಕಾರಣ ಸಮಾಜದಲ್ಲಿ ಗೌರವಯುತ ಸ್ಥಾನವೂ ಲಭಿಸುತ್ತದೆ. ಕವಿಗಳು ಮತ್ತು ಕಲಾವಿದರಿಗೆ ರಾಷ್ಟ್ರಮಟ್ಟದ ಗೌರವ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಜವಾಬ್ದಾರಿಯು ಲಭಿಸುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಮನದ ಆಶೋತ್ತರಗಳು ಈಡೇರಲಿವೆ. ಅತಿಯಾದ ಆತುರದ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ವಿವಾದಕ್ಕೆ ಸಿಲುಕುವಿರಿ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗಾಗಿ ವಿದೇಶ ಪ್ರಯಾಣ ಮಾಡುವರು. ಹೊಸ ವ್ಯಾಪಾರವನ್ನು ಆರಂಭಿಸುವ ಅವಕಾಶ ದೊರೆಯುತ್ತದೆ.

ಹೀಗೆ ಮಾಡಿ: ಕೋತಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಡುನೀಲಿ

ವೃಶ್ಚಿಕ

ಗೌರವ ಘನತೆಗೆ ಹೆದರುವ ಕಾರಣ ಜಗಳ ಕದನಗಳನ್ನು ಬದಿಗಿಟ್ಟು ಬುದ್ಧಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅವಶ್ಯಕವಾದಾಗ ತಾಯಿಯವರು ಹಣದ ಸಹಾಯ ಮಾಡುತ್ತಾರೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಮಕ್ಕಳ ವಿಚಾರದಲ್ಲಿ ವಿವಾದವೊಂದು ಎದುರಾದರೂ ಸುಖಾಂತ್ಯಗೊಳ್ಳಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವರು. ಸರ್ಕಾರಿ ನೌಕರರಿಗೆ ಶುಭವರ್ತಮಾನ ಒಂದು ದೊರೆಯಲಿದೆ. ವ್ಯಾಪಾರಕ್ಕಿಂತಲೂ ನೌಕರಿ ಒಳ್ಳೆಯದು. ಹೈನುಗಾರಿಕೆಯಲ್ಲಿ ಹೆಚ್ಚಿನ ಮಟ್ಟದ ಯಶಸ್ಸನ್ನು ಗಳಿಸುವಿರಿ.

ಹೀಗೆ ಮಾಡಿ: ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ವಾಯುವ್ಯ

ಅದೃಷ್ಟದ ಬಣ್ಣ: ನೇರಳೆ

ಧನಸ್ಸು

ಯಾವುದೇ ವಿಚಾರದಲ್ಲಿ ನಿರ್ದಿಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುವಿರಿ. ತಂದೆಯವರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣದ ಅಗತ್ಯ ಇರುತ್ತದೆ. ಪ್ರಖ್ಯಾತ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಭೋದನಾ ಕೇಂದ್ರವನ್ನು ಆರಂಭಿಸುವ ಅವಕಾಶ ದೊರೆಯಲಿದೆ. ತಿನ್ನುವುದರಲ್ಲಿ ಇತಿಮಿತಿ ಇಲ್ಲದ ಕಾರಣ ಅಜೀರ್ಣದ ತೊಂದರೆ ಉಂಟಾಗಲಿದೆ. ಪಾಲುಗಾರಿಕೆ ವ್ಯಾಪಾರದಲ್ಲಿ ಲಾಭವಿದೆ. ಸೇವಾವೃತ್ತಿಯಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ವಿದೇಶಪ್ರಯಾಣ ಯೋಗವಿದೆ. ಕಡಿಮೆ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ.

ಹೀಗೆ ಮಾಡಿ: ಪಾರಿವಾಳಕ್ಕೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ ಮತ್ತು ಕೆಂಪು

ಮಕರ

ಪ್ರತಿಯೊಂದು ವಿಚಾರದಲ್ಲಿಯೂ ಭಾಗವಹಿಸುವ ಕಾರಣ ಎಲ್ಲರ ಮನಗೆಲ್ಲುವಿರಿ. ಬೇರೆಯವರಿಗೆ ತಲೆಬಾಗಿಸದ ನೀವು ಜೀವನೋಪಾಯಕ್ಕಾಗಿ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗಸ್ಥರಾದಲ್ಲಿ ಆತ್ಮೀಯರಿಂದಲೇ ವಿರೋಧವನ್ನು ಎದುರಿಸಬೇಕಾಗುತ್ತದೆ. ಆತುರದ ನಿರ್ಧಾರದಿಂದ ವಿವಾದವೊಂದನ್ನು ಎದುರಿಸುವಿರಿ. ಹಣಕಾಸಿನ ವಿಚಾರದಲ್ಲಿ ತಂದೆಯೊಡನೆ ಮನಸ್ತಾಪ ಉಂಟಾಗುತ್ತದೆ. ಯಾರನ್ನೂ ಅನುಮಾನದಿಂದ ನೋಡದಿರಿ. ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ಹೇರಳ ಲಾಭವು ದೊರೆಯುತ್ತದೆ. ಹೊಸ ವಾಹನವನ್ನು ಕೊಳ್ಳುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ.

ಹೀಗೆ ಮಾಡಿ: ಜೇನುತುಪ್ಪವನ್ನು ಸೇವಿಸಿ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ

ಕುಂಭ

ದೃಢವಾದ ನಿಶ್ಚಯದಿಂದಾಗಿ ಬಹುದಿನದ ಕೌಟುಂಬಿಕ ವಿವಾದವು ಕೊನೆಗೊಳ್ಳುತ್ತದೆ. ಮನೋವಿಜ್ಞಾನಿಗಳು ವಿದೇಶದಲ್ಲಿ ಉನ್ನತ ಅಧ್ಯಯನ ನಡೆಸಲು ಅವಕಾಶವನ್ನು ಪಡೆಯಲಿದ್ದಾರೆ. ವಿಶ್ರಾಂತಿ ಇಲ್ಲದ ದುಡಿಮೆ ಇರುವ ಕಾರಣ ನಿಮ್ಮ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ದೇವಾಲಯದ ಜೀರ್ಣೋದ್ದಾರ ಕಾರ್ಯದಲ್ಲಿ ಯಶಸ್ಸನ್ನು ಗಳಿಸುವಿರಿ. ಹಣದ ಕೊರತೆ ಕಂಡುಬರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಿಂದ ಉತ್ತಮ ಆದಾಯ ದೊರೆಯುತ್ತದೆ. ಪಾಲುಗಾರಿಕೆ ಅಥವ ಕಂತು ವ್ಯಾಪಾರದಲ್ಲಿ ಲಾಭವಿದೆ. ಆಪ್ತರಿಂದ ಹಣದ ಸಹಾಯ ದೊರೆಯುತ್ತದೆ.

ಹೀಗೆ ಮಾಡಿ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ

ಮೀನ

ಕುಟುಂಬದ ಒಳಗೂ ಹೊರಗೂ ನಾಯಕರಂತೆ ಜೀವನ ನಡೆಸುವಿರಿ. ಮಕ್ಕಳ ಸಲುವಾಗಿ ಜೀವನದ ಹಾದಿಯನ್ನು ಬದಲಿಸಿಕೊಳ್ಳುವಿರಿ. ಮಗಳಿಗೆ ಸಂಬಂಧದಲ್ಲಿ ವಿವಾಹವಾಗಲಿದೆ. ಉತ್ತಮ ನಿರ್ಣಯವನ್ನು ತೆಗೆದುಕೊಳ್ಳುವ ಕಾರಣ ಹಣದ ತೊಂದರೆ ಎದುರಾಗದು. ಖರ್ಚು ವೆಚ್ಚಗಳ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಸರಿಯಾದ ಸಮಯದಲ್ಲಿ ಅಭಿಪ್ರಾಯವನ್ನು ತಿಳಿಸದ ಕಾರಣ ಲಾಭದಾಯಕ ಅವಕಾಶವೊಂದನ್ನು ಕಳೆದುಕೊಳ್ಳುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ಬಡವರಿಗೆ ಸಹಾಯ ಮಾಡುವಲ್ಲಿ ನಿರತರಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ.

ಹೀಗೆ ಮಾಡಿ: ಕೆಂಪು ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಬಿಳಿ

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.