ತ್ರಿಗ್ರಾಹಿ ಯೋಗ ತರಲಿದೆ ಅದೃಷ್ಟ: ಈ 3 ರಾಶಿಯವರ ಆರ್ಥಿಕ ಜೀವನ ಬದಲಾಗುತ್ತೆ, ಹಣಕಾಸಿನ ಸಮಸ್ಯೆಗಳು ಇರಲ್ಲ
Trigrahi Yoga 2025: ವೇದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರಲ್ಲಿ ಮುಖ್ಯ ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಲಿದೆ. ಗ್ರಹಗಳ ಸಂಚಾರ, ಸಂಯೋಗದ ಕಾರಣದಿಂದಾಗಿ ಬಲಿಷ್ಠವಾದ ಯೋಗಗಳು ಉಂಟಾಗಲಿವೆ. ಇವುಗಳ ಪೈಕಿ ತ್ರಿಗ್ರಾಹಿ ಯೋಗ ಕೂಡ ಒಂದು. ಮೀನ ರಾಶಿಯಲ್ಲಿ ಶನಿ, ಬುಧ ಹಾಗೂ ಸೂರ್ಯನ ಸಂಯೋಗದಿಂದ ತ್ರಿಗ್ರಾಹಿ ಯೋಗ ನಿರ್ಮಾಣವಾಗಲಿದೆ.
ವೇದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025 ರಲ್ಲಿ ಮುಖ್ಯ ಗ್ರಹಗಳ ಬದಲಾವಣೆ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರ, ಸಂಯೋಗದ ಕಾರಣದಿಂದಾಗಿ ಬಲಿಷ್ಠ ಯೋಗಗಳು ಉಂಟಾಗಲಿವೆ. ಇವುಗಳ ಪೈಕಿ ತ್ರಿಗ್ರಾಹಿ ಯೋಗ ಕೂಡ ಒಂದಾಗಿದೆ. ಮೀನ ರಾಶಿಯಲ್ಲಿ ಶನಿ, ಬುಧ ಮತ್ತು ಸೂರ್ಯನ ಸಂಯೋಗದಿಂದ ತ್ರಿಗ್ರಾಹಿ ಯೋಗ ನಿರ್ಮಾಣವಾಗಲಿದೆ.
ತ್ರಿಗ್ರಾಹಿ ಯೋಗದಿಂದ ಯಾರಿಗೆಲ್ಲಾ ಲಾಭವಿದೆ
2025ರ ಮಾರ್ಚ್ ನಲ್ಲಿ ನಿರ್ಮಾಣವಾಗಲಿರುವ ತ್ರಿಗ್ರಾಹಿ ಯೋಗ ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದಿದೆ. ತ್ರಿಗ್ರಾಹಿ ಯೋಗದ ಕಾರಣದಿಂದಾಗಿ ಕೆಲವು ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನ ಲಾಭಗಳು ಇರುತ್ತವೆ. ಸಂಪತ್ತಿನ ಖಜಾನೆ ತುಂಬಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗಿ ನೆಮ್ಮದಿಯ ಜೀವನ ನಡೆಸುತ್ತಾರೆ. ಆ ಅದೃಷ್ಟದ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮೀನ ರಾಶಿಯಲ್ಲಿ ಉಂಟಾಗಲಿರುವ ತ್ರಿಗ್ರಾಹಿ ಯೋಗದ ಕಾರಣದಿಂದಾಗಿ ಮಿಥುನ ರಾಶಿಯವರಿಗೆ ಹೆಚ್ಚಿನ ಅದೃಷ್ಟ ಬರಲಿದೆ. ಈ ರಾಶಿಯ 10ನೇ ಮನೆಯಲ್ಲಿ ಯೋಗವು ನಿರ್ಮಾಣವಾಗಲಿದೆ. ಇದರ ಕಾರಣವಾಗಿ ವ್ಯಾಪಾರಿಗಳಿಗೆ ಸಾಕಷ್ಟು ಲಾಭಗಳು ಇರುತ್ತವೆ. ಉದ್ಯೋಗಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನಿರುದ್ಯೋಗಿಗಳು ಉದ್ಯೋಗ ಪಡೆಯುವ ಸಾಧ್ಯತೆ ಇದೆ. ವ್ಯಾಪಾರಿಗಳು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಪೂರ್ವಜರ ಆಸ್ತಿಯಲ್ಲಿ ಪಾಲನ್ನು ಪಡೆಯುತ್ತೀರಿ. ಆಸ್ತಿಗಳಿಂದ ಹೆಚ್ಚು ಲಾಭಗಳಿವೆ. ಪ್ರಮುಖ ಕೆಲಸ ಕಾರ್ಯಗಳಿಗೆ ಅಡ್ಡಿ ಆಂತಕಗಳು ದೂರವಾಗುತ್ತವೆ. ಕಾರಣಾಂತರಗಳಿಂದ ತಡವಾಗಿದ್ದ ಹಣ ನಿಮ್ಮ ಕೈಸೇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ತ್ರಿಗ್ರಾಹಿ ಯೋಗದ ಕಾರಣದಿಂದ ಹಲವು ರೀತಿಯ ಪ್ರಯೋಜನಗಳಿವೆ. ಈ ರಾಶಿಯ ನಾಲ್ಕನೇ ಮನೆಯಲ್ಲಿ ತ್ರಿಗ್ರಾಹಿ ಯೋಗ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಆಕಸ್ಮಿಕ ಧನ ಲಾಭಗಳು ಇರುತ್ತವೆ. ವಾಹನ, ಆಸ್ತಿಗಳನ್ನು ಖರೀದಿಸುವ ಅವಕಾಶ ಇದೆ. ಮನೆ ನಿರ್ಮಾಣ ಮಾಡುವ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ಕೆಲವೊಂದು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.
ಮೀನ ರಾಶಿ
ಇದೇ ರಾಶಿಯಲ್ಲಿ ತ್ರಿಗ್ರಾಹಿ ಯೋಗ ನಿರ್ಮಾಣವಾಗುತ್ತಿದೆ. ಇದರಿಂದ ಈ ರಾಶಿಯವರಿಗೆ ಭಾರಿ ಅದೃಷ್ಟ ತರಲಿದೆ, ಆರ್ಥಿಕ ಜೀವನ ಉತ್ತಮ ರೀತಿಯಲ್ಲಿ ಬದಲಾಗುತ್ತದೆ. ಈ ಸಮಯದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಯಶಸ್ಸಿನಿಂದ ಆತ್ಮವಿಶ್ವಾಸಕ್ಕೆ ಕೊರತೆಯೇ ಇರುವುದಿಲ್ಲ. ಅವಿವಾಹಿತಕರು ಶೀಘ್ರದಲ್ಲೇ ಸಿಹಿ ಸುದ್ದಿ ಪಡೆಯುತ್ತಾರೆ. ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ವ್ಯಾಪಾರಿಗಳಿಗೆ ಲಾಭಗಳಿರುತ್ತವೆ. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಹೊಂದಾಣಿಕೆ ಇರುತ್ತದೆ. ಹೊಸ ವ್ಯಾಪಾರ ಆರಂಭಿಸುವ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)