ಯುಗಾದಿ ಆರೋಗ್ಯ ಭವಿಷ್ಯ: ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ, ಮೀನ ರಾಶಿಯವರ ಹೃದಯ ಸಂಬಂಧಿ ದೋಷ ನಿವಾರಣೆಯಾಗುತ್ತೆ
Ugadi Health Horscope: ಯುಗಾದಿ ಆರೋಗ್ಯ ವರ್ಷ ಭವಿಷ್ಯ 2025. ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ, ಮೀನ ರಾಶಿಯವರ ಹೃದಯ ಸಂಬಂಧಿ ದೋಷ ನಿವಾರಣೆಯಾಗುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಯುಗಾದಿ ಆರೋಗ್ಯ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಧನುದಿಂದ ಮೀನದವರಿಗೆ ನಾಲ್ಕು ರಾಶಿಯವರ ಆರೋಗ್ಯ ವರ್ಷ ಭವಿಷ್ಯ ಇಲ್ಲಿದೆ.
ಧನು ರಾಶಿ
ಉಷ್ಣದ ದೋಷ ಇರುತ್ತದೆ. ಚರ್ಮದ ದೋಷವಿರುತ್ತದೆ. ದೈಹಿಕ ಶಕ್ತಿ ಹೆಚ್ಚಾಗಿರುತ್ತದೆ. ಆದ್ದರಿಂದ ಅರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ಅಧಿಕ ರಕ್ತದ ಒತ್ತಡ ಇರುತ್ತದೆ. ಹಿರಿಯ ವ್ಯಕ್ತಿಗಳ ಆರೋಗ್ಯದಲ್ಲಿ ಬದಲಾವಣೆಗಳು ಇರಲಿವೆ. ಕಫದ ತೊಂದರೆ ಇರುತ್ತದೆ. ಮಲಬದ್ದತೆ ದೊಡ್ಡ ಸಮಸ್ಯೆ ಆಗುತ್ತದೆ. ಹೃದಯದ ಬಗ್ಗೆ ಎಚ್ಚರಿಕೆ ಇರಲಿ. ಮಾನಸಿಕ ನೆಮ್ಮದಿ ಇರದ ಕಾರಣ ಮನದಲ್ಲಿ ಭಯದ ವಾತಾವರಣ ಇರುತ್ತದೆ. ಸಮಯ ದೊರೆತಾಗ ದೈಹಿಕ ವ್ಯಾಯಾಮ ಮಾಡುವ ಕಾರಣ ಆರೋಗ್ಯವು ಒಂದೇ ರೀತಿ ಇರುವುದಿಲ್ಲ. ದೂರದೃಷ್ಟಿಯು ದೊಡ್ಡ ಸಮಸ್ಯೆ ಆಗುತ್ತದೆ. ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸುವಿರಿ.
ಮಕರ ರಾಶಿ
ಅತಿಯಾಗಿ ಆಹಾರ ಸೇವಿಸುವ ಹವ್ಯಾಸ ಇರುತ್ತದೆ. ಕರುಳಿನ ತೊಂದರೆಯಿಂದ ಬಳಲುವಿರಿ. ಮಧ್ಯವಯಸ್ಕರು ಹೃದಯದ ತೊಂದರೆ ಎದುರಿಸುವರು. ಆದರೆ ತೊಂದರೆ ಕಂಡುಬರುವುದಿಲ್ಲ. ಧೂಳಿನ ಸೋಂಕು ನೆಗಡಿಗೆ ಕಾರಣವಾಗುತ್ತದೆ. ಶೀತ ಇರದೆ ಹೋದರೂ ಅದರ ಭಯ ನಿಮ್ಮಲ್ಲಿರುತ್ತದೆ. ಹೆಣ್ಣುಮಕ್ಕಳ ಆರೋಗ್ಯದಲ್ಲಿ ಏರುಪೇರು ಇರಲಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದಿಲ್ಲ. ಇದರಿಂದ ಕಣ್ಣಿನ ದೋಷ ಉಂಟಾಗಲಿದೆ. ಎದೆಯ ನೋವು ಮತ್ತು ಸೊಂಟದ ನೋವು ಅತಿಯಾಗಿರುತ್ತದೆ. ಕೇವಲ ದೈಹಿಕ ವ್ಯಾಯಾಮ ಲಾಭದಾಯಕವಾಗುತ್ತದೆ. ಗರ್ಭಿಣಿಯರು ನಿಶ್ಯಕ್ತಿಯಿಂದ ಬಳಲುತ್ತಾರೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ಶ್ರಮದಾಯಕ ಉದ್ಯೋಗದ ಕಾರಣ ಕೈ ಕಾಲುಗಳಲ್ಲಿ ನೋವಿರುತ್ತದೆ.
ಕುಂಭ ರಾಶಿ
ಕಲುಷಿತ ನೀರಿನ ಸೇವನೆಯಿಂದ ತೊಂದರೆಗೆ ಒಳಗಾಗುತ್ತಾರೆ. ಮುಂಗೈ ಮತ್ತು ಮುಂಗಾಲುಗಳಲ್ಲಿ ಹೆಚ್ಚಿನ ಮಟ್ಟದ ನೋವು ಇರಲಿದೆ. ಇವರಿಗೆ ಮಧುಮೇಹದಂತಹ ತೊಂದರೆಗಳು ಇರಲಿವೆ. ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರಿಗೆ ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಇರದು. ಆದರೆ ದೇಹದ ತೂಕವು ಅತಿಯಾಗುತ್ತದೆ. ಇದರಿಂದ ದೈಹಿಕಶಕ್ತಿ ಕಡಿಮೆ ಆಗಲಿದೆ. ಒಳ ಅಂಗಾಂಗಗಳಲ್ಲಿ ತೊಂದರೆ ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ಹೆಣ್ಣು ಮಕ್ಕಳಿಗೆ ಋತುಚಕ್ರಕ್ಕೆ ಸಂಬಂಧಿಸಿದ ತೊಂದರೆ ಉಂಟಾದರೂ ಬಗೆಹರಿಯುತ್ತದೆ. ಯೋಚನೆ ಮಾಡುವುದನ್ನು ಕಡಿಮೆ ಮಾಡದೆ ಹೋದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಗಂಟಲ ಊತದಿಂದ ಬಳಲುವಿರಿ.
ಮೀನ ರಾಶಿ
ವಯೋವೃದ್ಧರ ಆರೋಗ್ಯವು ಸರಿ ಇರುವುದಿಲ್ಲ. ಚರ್ಮದ ಮೇಲೆ ಕಪ್ಪು ಕಲೆಗಳು ಮೂಡುತ್ತವೆ. ಸಣ್ಣಪುಟ್ಟ ಅನಾರೋಗ್ಯದ ದೋಷಗಳು ಸದಾ ಇರುತ್ತವೆ. ಆತ್ಮವಿಶ್ವಾಸದ ಕೊರತೆಯಿಂದ ಮಾಸಿಕ ಚಿಂತೆ ಹೆಚ್ಚುತ್ತದೆ. ಹೃದಯಕ್ಕೆ ಸಂಬಂಧಿಸಿದ ದೋಷವಿರುತ್ತದೆ. ಅಧಿಕ ಮಟ್ಟದ ತೊಂದರೆ ಇರುತ್ತದೆ. ಹಲ್ಲಿನ ನೋವು ಬಾಧಿಸುತ್ತದೆ. ಹಲ್ಲಿನ ನೋವು ಉಂಟಾಗುವ ಕಾರಣ ವಿಶೇಷವಾದ ಚಿಕಿತ್ಸೆ ಬೇಕಾಗುತ್ತದೆ. ಹೆಣ್ಣು ಮಕ್ಕಳಿಗೆ ಎದೆಯ ಭಾಗದಲ್ಲಿ ಗಂಟುಗಳು ಮೂಡಲಿವೆ. ಇದರ ಬಗ್ಗೆ ಜಾಗೃತಿ ವಹಿಸುವುದು ಬಲು ಮುಖ್ಯ. ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಬಾಯಿಯಲ್ಲಿನ ಹುಣ್ಣು ಅಥವಾ ಗಂಟಲಿನ ಹುಣ್ಣು ದೊಡ್ಡ ಸಮಸ್ಯೆಯನ್ನು ಉಂಟುಮಾಡಲಿದೆ. ಕೈಕಾಲಿಗೆ ಪೆಟ್ಟಾಗಲಿದೆ. ಉತ್ತಮ ಆರೋಗ್ಯಕ್ಕೆ ಆದ್ಯತೆ ನೀಡುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
