ಯುಗಾದಿ ಪ್ರೇಮ ಭವಿಷ್ಯ: ಮೇಷ ರಾಶಿಯ ಪ್ರೇಮಿಗಳಿಗೆ ಮದುವೆಯಾಗುತ್ತೆ, ವೃಷಭ ರಾಶಿಯವರಿಗೆ ಹೊಂದಾಣಿಕೆ ಕೊರತೆ ಇರಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಯುಗಾದಿ ಪ್ರೇಮ ಭವಿಷ್ಯ: ಮೇಷ ರಾಶಿಯ ಪ್ರೇಮಿಗಳಿಗೆ ಮದುವೆಯಾಗುತ್ತೆ, ವೃಷಭ ರಾಶಿಯವರಿಗೆ ಹೊಂದಾಣಿಕೆ ಕೊರತೆ ಇರಲಿದೆ

ಯುಗಾದಿ ಪ್ರೇಮ ಭವಿಷ್ಯ: ಮೇಷ ರಾಶಿಯ ಪ್ರೇಮಿಗಳಿಗೆ ಮದುವೆಯಾಗುತ್ತೆ, ವೃಷಭ ರಾಶಿಯವರಿಗೆ ಹೊಂದಾಣಿಕೆ ಕೊರತೆ ಇರಲಿದೆ

Ugadi Prema Bhavishya: ಯುಗಾದಿ ಪ್ರೇಮ ವರ್ಷ ಭವಿಷ್ಯ 2025. ಮೇಷ ರಾಶಿಯ ಪ್ರೇಮಿಗಳಿಗೆ ಮದುವೆಯಾಗುತ್ತೆ, ವೃಷಭ ರಾಶಿಯ ದಂಪತಿಗೆ ಹೊಂದಾಣಿಕೆ ಕೊರತೆ ಇರುತ್ತೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಯುಗಾದಿ ಪ್ರೇಮ ಭವಿಷ್ಯ
ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಯುಗಾದಿ ಪ್ರೇಮ ಭವಿಷ್ಯ

ಯುಗಾದಿ ಪ್ರೇಮ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಪ್ರೇಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಮೇಷದಿಂದ ಕಟಕದವರಿಗೆ ನಾಲ್ಕು ರಾಶಿಯವರ ಪ್ರೇಮ ವರ್ಷ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಮೇಷ ರಾಶಿಯವರ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರುತ್ತದೆ. ಆತ್ಮೀಯರ ಸಹಾಯದಿಂದ ಸಂಬಂಧಿಕರ ಅಥವಾ ಪರಿಚಯದವರ ಜೊತೆಯಲ್ಲಿ ವಿವಾಹವಾಗುತ್ತದೆ. ಕುಟುಂಬದಲ್ಲಿ ಪರಸ್ಪರ ವಿರೋಧವಿದ್ದರೂ ದಿನದಿಂದ ದಿನಕ್ಕೆ ಅನ್ಯೋನ್ಯತೆ ಮೂಡುತ್ತದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣ ಹೆಣ್ಣುಮಕ್ಕಳ ಮನಸ್ಸನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಇದರಿಂದ ನವ ವಿವಾಹಿತರಿಗೆ ತೊಂದರೆ ಇರುತ್ತದೆ. ದಂಪತಿ ನಡುವೆ ಉತ್ತಮ ಮನೋಭಾವನೆ ಇರುತ್ತದೆ. ಉದ್ಯೋಗದ ಸಲುವಾಗಿ ದಂಪತಿ ದೂರ ಉಳಿಯಬೇಕಾಗುತ್ತದೆ. ಜೂನ್ ತಿಂಗಳ ನಂತರ ಬೇಸರದ ವಾತಾವರಣವಿದ್ದರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರಿಂದ ಪ್ರೀತಿ ವಿಶ್ವಾಸವು ಹೆಚ್ಚುತ್ತದೆ. ಪ್ರೇಮ ವಿವಾಹವಾಗಲು ಹಿರಿಯರ ಅಸಮಾಧಾನ ಇರುತ್ತದೆ. ಆದರೆ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ವಿವಾಹವಾಗಲು ಸಾಧ್ಯವಾಗುತ್ತದೆ.

ವೃಷಭ ರಾಶಿ

ಮನಸ್ಸಿನಲ್ಲಿ ದೊಡ್ಡ ಮಟ್ಟದ ಆಸೆ ಆಕಾಂಕ್ಷಿಗಳು ಮನೆ ಮಾಡಿರುತ್ತವೆ. ಅತಿಯಾದ ಆಸೆಯಿಂದಾಗಿ ದಂಪತಿ ನಡುವೆ ಹೊಂದಾಣಿಕೆಯ ಕೊರತೆ ಕಂಡುಬರುತ್ತದೆ. ಹೆಣ್ಣು ಮಕ್ಕಳ ನಿರೀಕ್ಷೆಯು ಈಡೇರದೆ ಹೋದರು ದಾಂಪತ್ಯ ಜೀವನದಲ್ಲಿ ಬದಲಾವಣೆಯಾಗದು. ಆದರೆ ಪುರುಷರ ಮನಸ್ಸನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಮೇ ನಂತರ ಅವಿವಾಹಿತರಿಗೆ ವಿವಾಹ ಯೋಗವಿರುತ್ತದೆ. ಹಿರಿಯರ ಒಪ್ಪಿಗೆಯಂತೆ ವಿವಾಹವಾಗುವ ಕಾರಣ ಸುಖ ಸಂತೋಷದ ಜೀವನ ನಡೆಸುವಿರಿ. ಮಕ್ಕಳು ಪ್ರೇಮ ವಿವಾಹವಾಗುವ ಸಾಧ್ಯತೆಗಳಿವೆ. ಹೊಸತನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ದಂಪತಿ ನಡುವೆ ಬೇಸರದ ಸನ್ನಿವೇಶಗಳು ಪದೇ ಪದೆ ಎದುರಾಗಲಿದೆ.

ಮಿಥುನ ರಾಶಿ

ಹಿರಿಯರ ಆದೇಶದಂತೆ ಕೌಟುಂಬಿಕ ಜೀವನದಲ್ಲಿ ಬದಲಾವಣೆಗಳನ್ನು ಮಾಡುವಿರಿ. ದಂಪತಿ ನಡುವೆ ಇದ್ದ ಅಸಮಾಧಾನವು ಕ್ರಮೇಣವಾಗಿ ದೂರವಾಗಲಿದೆ. ಪ್ರೀತಿ ವಿಶ್ವಾಸ ಹೆಚ್ಚುವ ಕಾರಣ ಮಕ್ಕಳ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಕಂಡುಬರುತ್ತವೆ. ವಿವಾಹವಾಗುವ ವೇಳೆ ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ನೋವಿನಲ್ಲೂ ಸಂತಸದ ಜೀವನ ನಡೆಸುವಿರಿ. ಆರೋಗ್ಯದಲ್ಲಿನ ಏರಿಳಿತ ದಂಪತಿಯಲ್ಲಿ ಅಂತರವನ್ನು ಸೃಷ್ಟಿಸುತ್ತದೆ. ಆದರೆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವ ಕಾರಣ ದಾಂಪತ್ಯ ಜೀವನವು ಪ್ರೀತಿ ವಿಶ್ವಾಸಗಳಿಂದ ಕೂಡಿರುತ್ತವೆ. ವದಂತಿಗಳನ್ನು ನಂಬಿ ಪರಸ್ಪರ ಒಬ್ಬರನ್ನೊಬ್ಬರು ಅನುಮಾನಿಸುತ್ತಾರೆ.

ಕಟಕ ರಾಶಿ

ಕೌಟುಂಬಿಕ ಜೀವನದಲ್ಲಿ ಅನಾವಶ್ಯಕವಾದ ತಿರುವುಗಳು ಕಂಡುಬರುತ್ತವೆ. ಪ್ರೀತಿ ಪ್ರೇಮವನ್ನೇ ಜೀವನ ಎಂದು ತಿಳಿದಿರುತ್ತಾರೆ. ಹಳೆಯ ದ್ವೇಷವನ್ನು ಮರೆತು ದಂಪತಿ ಸಂತೋಷದಿಂದ ಬಾಳುತ್ತಾರೆ. ಪರಸ್ಪರ ಒಬ್ಬರ ಬಗ್ಗೆ ಒಬ್ಬರಿಗೆ ವಿಶ್ವಾಸವಿರುತ್ತದೆ. ಇನ್ನೊಬ್ಬರ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಅವಿವಾಹಿತರಿಗೆ ಉತ್ತಮ ಸಂಗಾತಿ ದೊರೆಯಲಿದ್ದಾರೆ. ಸಂಬಂಧದಲ್ಲಿ ವಿವಾಹವಾದಲ್ಲಿ ವಿವಾದ ಉಂಟಾಗಲಿದೆ. ಆದ್ದರಿಂದ ಕುಟುಂಬದ ವಿರೋಧದ ನಡುವೆಯೂ ನಿಮ್ಮನ್ನು ಒಪ್ಪಿದವರೊಂದಿಗೆ ವಿವಾಹವಾಗುವಿರಿ. ಆರೋಗ್ಯದ ಬಗ್ಗೆ ಗಮನ ನೀಡಿದರೆ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಸಮೃದ್ಧಿಯಾಗಿರುತ್ತದೆ. ಆತುರದ ನಿರ್ಧಾರದಿಂದ ತೊಂದರೆ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.