ಯುಗಾದಿ ಪ್ರೇಮ ಭವಿಷ್ಯ: ಸಿಂಹ ರಾಶಿಯವರಿಗೆ ಸಂತಾನದಿಂದ ಕುಟುಂಬದಲ್ಲಿ ಸಂತೋಷ ಇರುತ್ತೆ, ಕನ್ಯಾ ರಾಶಿಯ ದಂಪತಿ ಸ್ನೇಹಿತರಂತೆ ಬಾಳುತ್ತಾರೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಯುಗಾದಿ ಪ್ರೇಮ ಭವಿಷ್ಯ: ಸಿಂಹ ರಾಶಿಯವರಿಗೆ ಸಂತಾನದಿಂದ ಕುಟುಂಬದಲ್ಲಿ ಸಂತೋಷ ಇರುತ್ತೆ, ಕನ್ಯಾ ರಾಶಿಯ ದಂಪತಿ ಸ್ನೇಹಿತರಂತೆ ಬಾಳುತ್ತಾರೆ

ಯುಗಾದಿ ಪ್ರೇಮ ಭವಿಷ್ಯ: ಸಿಂಹ ರಾಶಿಯವರಿಗೆ ಸಂತಾನದಿಂದ ಕುಟುಂಬದಲ್ಲಿ ಸಂತೋಷ ಇರುತ್ತೆ, ಕನ್ಯಾ ರಾಶಿಯ ದಂಪತಿ ಸ್ನೇಹಿತರಂತೆ ಬಾಳುತ್ತಾರೆ

Ugadi Prema Bhavishya: ಯುಗಾದಿ ಪ್ರೇಮ ವರ್ಷ ಭವಿಷ್ಯ 2025. ಸಿಂಹ ರಾಶಿಯವರಿಗೆ ಸಂತಾನದಿಂದ ಸಂತೋಷ ಹೆಚ್ಚಾಗುತ್ತೆ, ಕನ್ಯಾ ರಾಶಿಯ ದಂಪತಿ ಸ್ನೇಹಿತರಂತೆ ಬಾಳುತ್ತಾರೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಯುಗಾದಿ ಪ್ರೇಮ ವರ್ಷ ಭವಿಷ್ಯ
ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಯುಗಾದಿ ಪ್ರೇಮ ವರ್ಷ ಭವಿಷ್ಯ

ಯುಗಾದಿ ಪ್ರೇಮ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಪ್ರೇಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಸಿಂಹದಿಂದ ವೃಶ್ಚಿಕದವರಿಗೆ ನಾಲ್ಕು ರಾಶಿಯವರ ಪ್ರೇಮ ವರ್ಷ ಭವಿಷ್ಯ ಇಲ್ಲಿದೆ.

ಸಿಂಹ ರಾಶಿ

ಶೃಂಗಾರಪ್ರಿಯರು. ದಂಪತಿಗಳಲ್ಲಿ ನಾನೇ ಶ್ರೇಷ್ಠ ಎಂಬ ಭಾವನೆ ಇರುತ್ತದೆ. ಗಂಡು ಮಕ್ಕಳಲ್ಲಿ ಹುಡುಗಾಟದ ಬುದ್ದಿ ಇರುತ್ತದೆ. ಉತ್ತಮ ಸಂಬಂಧ ಇದ್ದರೂ ಮುಂಗೋಪದಿಂದಾಗಿ ಪರಸ್ಪರ ಬೇಸರದಿಂದ ಬಾಳುತ್ತಾರೆ. ಕುಟುಂಬದವರ ಒಪ್ಪಿಗೆಯಂತೆ ವಿವಾಹವಾಗುವಿರಿ. ಒಬ್ಬರ ಮಾತನ್ನು ಒಬ್ಬರು ನಂಬುವುದಿಲ್ಲ. ಸಂಗಾತಿಯ ಒಳಿತಿಗಾಗಿ ಸುಳ್ಳನ್ನು ಹೇಳಲು ಸಿದ್ದರಾಗುವಿರಿ. ಪ್ರಣಯ ಸಲ್ಲಾಪಗಳಿಂದ ಜೀವನ ನಡೆಸುವಿರಿ. ನವವಿವಾಹಿತರ ನಡುವೆ ಮನಸ್ತಾಪ ಉಂಟಾಗಲಿದೆ. ಪ್ರೇಮವಿವಾಹದಲ್ಲಿ ನಂಬಿಕೆ ಇರುವುದಿಲ್ಲ. ಹಿರಿಯರ ಮಧ್ಯಸ್ಥಿಕೆಯಿಂದ ವೈವಾಹಿಕ ಜೀವನದಲ್ಲಿ ಅಸ್ಥಿರತೆ ಮನೆಮಾಡುತ್ತದೆ. ಸಂಧಾನದಿಂದ ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಸಂತಾನದಿಂದ ಕುಟುಂಬದ ಸಂತಸ ಮರಳುತ್ತದೆ.

ಕನ್ಯಾ ರಾಶಿ

ಸ್ಥಿರವಾದ ಮನಸ್ಸಿರುವುದಿಲ್ಲ. ಆದರೆ ಸಂಗಾತಿಯನ್ನು ಪ್ರೀತಿಯಿಂದ ಕಾಣುವುದಲ್ಲದೆ, ಗೌರವವನ್ನೂ ನೀಡುವಿರಿ. ಪತ್ನಿಯ ಟೀಕೆಗಳನ್ನು ಒಪ್ಪಿಕೊಳ್ಳಲಾಗದೆ ಹೋದರೂ, ಸಹಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಪರಸ್ಪವ ಪ್ರೀತಿ ವಿಶ್ವಾಸದ ಕೊರತೆ ಕಾಣುತ್ತದೆ. ಪ್ರೇಮ ವಿವಾಹದಲ್ಲಿ ನಂಬಿಕೆ ಇರುತ್ತದೆ. ಟೀಕಿಸುವ ಬುದ್ದಿಯು ಕುಟುಂಬದಲ್ಲಿ ಅಂತರವನ್ನು ಉಂಟುಮಾಡುತ್ತದೆ. ಹಿರಿಯರ ಮಾತಿನಿಂದ ಕುಟುಂಬದ ಸ್ವಾಸ್ಥ್ಯ ಕದಡುತ್ತದೆ. ಆಕರ್ಷಕವಾದ ಮಾತಿನ ಬಲವೇ ಕುಟುಂಬವನ್ನು ಒಂದುಮಾಡುತ್ತದೆ. ವದಂತಿಗಳನ್ನು ಕಡೆಗಣಿಸಿ ದಂಪತಿ ಒಂದಾಗುತ್ತಾರೆ. ಪ್ರೀತಿ ಪ್ರೇಮಕ್ಕಿಂತಲೂ ಸ್ನೇಹಿತರಂತೆ ಬಾಳುವಿರಿ. ಯಾವುದೇ ಸ್ವಾರ್ಥದ ಗುಣ ಇರುವುದಿಲ್ಲ. ಜೀವನದಲ್ಲಿನ ಬದಲಾವಣೆಗಳನ್ನು ಸಂತೋಷದಿಂದ ಒಪ್ಪಿಕೊಳ್ಳುವಿರಿ.

ತುಲಾ ರಾಶಿ

ದಂಪತಿಯಲ್ಲಿ ವಿಮರ್ಶನಾ ಗುಣವಿರುತ್ತದೆ. ಇದು ಕೆಲವೊಮ್ಮೆ ದಾಂಪತ್ಯದ ಹಾದಿಯನ್ನು ತಪ್ಪಿಸುತ್ತದೆ. ಪರಸ್ಪರ ನಂಬಿಕೆಯು ಕಡಿಮೆಯಾಗುತ್ತದೆ. ಕ್ರಮೇಣವಾಗಿ ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಪ್ರೇಮ ವಿವಾಹದಲ್ಲಿ ನಂಬಿಕೆ ಇರುವುದಿಲ್ಲ. ಪತಿಯ ಮನಸ್ಸಿಗೆ ಪತ್ನಿಯು ಸ್ಪಂದಿಸುತ್ತಾರೆ. ಆದರೆ ಪತ್ನಿಯನ್ನು ನಿಂದಿಸುವ ಬುದ್ದಿ ಪತಿಗೆ ಇರುತ್ತದೆ. ಇದರಿಂದ ದಂಪತಿ ನಡುವೆ ಅನ್ಯೋನ್ಯತೆ ಕಡಿಮೆ ಆಗಲಿದೆ. ಜೂನ್ ತಿಂಗಳಿನಿಂದ ಧನಾತ್ಮಕ ಬದಲಾವಣೆಗಳು ಜೀವನದಲ್ಲಿ ಉಂಟಾಗಲಿವೆ. ಮನಸ್ಸಿನ ಭಾವನೆಗಳನ್ನು ಗೌರವಿಸುವಿರಿ. ದೈಹಿಕ ಆಕರ್ಷಣೆಗೆ ಒಳಗಾಗುವುದಿಲ್ಲ. ಪರಿಚಯ ಇರುವವರ ಜೊತೆ ವಿವಾಹವಾಗುತ್ತದೆ. ಕ್ರಮೇಣವಾಗಿ ಸಮರ್ಪಣಾ ಮನೋಭಾವನೆ ಬೆಳೆಯುತ್ತದೆ. ಪ್ರಾಮಾಣಿಕತೆಯ ಪ್ರತಿರೂಪದಂತೆ ಜೀವನ ನಡೆಸುತ್ತಾರೆ.

ವೃಶ್ಚಿಕ ರಾಶಿ

ಕೋಪದಲ್ಲಿ ಸಂಗಾತಿಯನ್ನು ನಿಂದಿಸುವಿರಿ. ಈ ಕಾರಣದಿಂದ ಪರಸ್ಪರ ಪ್ರೀತಿ ವಿಶ್ವಾಸ ಕಡಿಮೆ ಆಗುತ್ತದೆ. ಮಧ್ಯವಯಸ್ಕರು ತಡವಾಗಿ ಆತ್ಮೀಯರ ಜೊತೆ ವಿವಾಹವಾಗುತ್ತಾರೆ. ದಂಪತಿ ನಡುವೆ ಪ್ರೀತಿಗಿಂತಲೂ ಮೋಹವೇ ಹೆಚ್ಚಾಗಿರುತ್ತದೆ. ಮೊದಲು ವಿವಾದವನ್ನು ಎದುರಿಸಿ ನಂತರ ಪ್ರೇಮವಿವಾಹವು ನಡೆಯುತ್ತದೆ. ನವವಿವಾಹಿತರ ನಡುವೆ ಅಭಿಪ್ರಾಯ ಬೇಧವಿರುತ್ತದೆ. ಕುಟುಂಬದ ಹಿರಿಯರ ಬುದ್ದಿವಾದದಿಂದ ಪರಸ್ಥಿತಿಯು ತಿಳಿಯಾಗುತ್ತದೆ. ದೂರವಾಗಿದ್ದ ದಂಪತಿ ಮತ್ತೆ ಜೊತೆಯಾಗುವ ಘಳಿಗೆ ಎದುರಾಗುತ್ತದೆ. ಸಮಯವನ್ನು ಗೌರವಿಸಿ ಮನಸ್ತಾಪವನ್ನು ಮರೆಯಬೇಕಾಗುತ್ತದೆ. ದಂಪತಿ ನಡುವೆ ಉತಮ ಭಾವನೆ ಮೂಡುತ್ತದೆ. ಆರೋಗ್ಯದಲ್ಲಿನ ತೊಂದರೆ ಕುಟುಂಬದಲ್ಲಿ ಆತಂಕವನ್ನು ಉಂಟುಮಾಡುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.