ಶ್ರವಣ ನಕ್ಷತ್ರ ವರ್ಷ ಭವಿಷ್ಯ 2025: ಪ್ರಯತ್ನದಿಂದ ನಿರೀಕ್ಷಿತ ಗುರಿ ತಲುಪುತ್ತೀರಿ, ಹಣಕಾಸಿನ ತೊಂದರೆ ಇರುವುದಿಲ್ಲ
Shravana Nakshatra Bhavishya: ಶ್ರವಣ ನಕ್ಷತ್ರದವರ ವರ್ಷ ಭವಿಷ್ಯ 2025. ಪ್ರಯತ್ನದಿಂದ ನಿರೀಕ್ಷಿತ ಗುರಿ ತಲುಪುತ್ತೀರಿ, ಹಣಕಾಸಿನ ತೊಂದರೆ ಇರುವುದಿಲ್ಲ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಶ್ರವಣ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 22ನೇಯದಾದ ಶ್ರವಣ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಶ್ರವಣ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಶ್ರವಣ ನಕ್ಷತ್ರದ ಎಲ್ಲಾ 4 ಪಾದಗಳು ಮಕರ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಶಿ, ಶು, ಶೆ ಮತ್ತು ಶೊ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಶ್ರವಣ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಶ್ರವಣ ನಕ್ಷತ್ರದವರ ಭವಿಷ್ಯ
ಸುಲಭವಾಗಿ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಆದರೆ ಬೇರೆಯವರು ಆರಂಭಿಸಿದ ಕೆಲಸ ಕಾರ್ಯದಲ್ಲಿ ಪಾಲ್ಗೊಂಡು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ತಮ್ಮ ಬಗ್ಗೆ ಎಲ್ಲರೊಂದಿಗೆ ಹೇಳಿಕೊಳ್ಳುವುದರಲ್ಲಿ ಸಂತಸ ಪಡುತ್ತಾರೆ. ಕೆಲವೊಮ್ಮೆ ಇವರ ಮಾತುಗಳು ಹಾಸ್ಯಸ್ಪದವಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಗೌರವ ಲಭಿಸುತ್ತದೆ. ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಆಪ್ತರಿಂದ ಕೆಲವೊಮ್ಮೆ ತೊಂದರೆ ಆಗುವ ಸಾಧ್ಯತೆಗಳು ಇರುತ್ತವೆ. ಉತ್ತಮ ಆರೋಗ್ಯವಿರುತ್ತದೆ. ದೀರ್ಘಕಾಲದ ಪ್ರವಾಸದಲ್ಲಿ ಆಸಕ್ತಿ ಮೂಡುತ್ತದೆ. ದಂಪತಿ ನಡುವೆ ಉತ್ತಮ ಅನುಬಂಧ ಉಂಟಾಗುತ್ತದೆ. ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸದಿದ್ದಲ್ಲಿ ತೊಂದರೆ ಉಂಟಾಗುತ್ತದೆ. ಕುಟುಂಬದವರೊಡನೆ ನಡೆಸುವ ಪಾಲುಗಾರಿಕೆಯ ವ್ಯಾಪಾರವು ಲಾಭದಾಯಕವಾಗಿರುತ್ತದೆ.
ಶ್ರವಣ ನಕ್ಷತ್ರದ 1ನೇ ಪಾದ ಅಥವಾ ಹೆಸರು ಶಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಕೆಲಸ ಕಾರ್ಯಗಳನ್ನು ನಿಧಾನಗತಿಯಲ್ಲಿ ಆರಂಭಿಸುವಿರಿ. ಅನಾವಶ್ಯಕವಾದ ಮಾತುಕತೆಯಿಂದ ಆತ್ಮೀಯರ ವಿರೋಧವನ್ನು ಎದುರಿಸುವಿರಿ. ಆತ್ಮವಿಶ್ವಾಸದ ಕೊರತೆ ನಿಮ್ಮಲ್ಲಿರುತ್ತದೆ. ಸಣ್ಣಪುಟ್ಟ ಕೆಲಸ ಕಾರ್ಯಗಳು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಪದೇ ಪದೆ ಆಡಿದ ಮಾತುಗಳನ್ನೇ ಆಡಿ ಬೇರೆಯವರಿಗೆ ಬೇಸರ ಉಂಟುಮಾಡುವಿರಿ. ಭರದಲ್ಲಿ ನಿಮ್ಮಲ್ಲಿನ ದೌರ್ಬಲ್ಯಗಳನ್ನು ಎಲ್ಲರಿಗೂ ತಿಳಿಸುವಿರಿ. ಅನಾವಶ್ಯಕವಾಗಿ ಉದ್ಯೋಗವನ್ನು ಬದಲಾಯಿಸುವಿರಿ. ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳುವ ಗುರಿ ಇರುವುದಿಲ್ಲ. ಸಮಯ ಸಂದರ್ಭದಲ್ಲಿ ಹೊಂದಿಕೊಂಡು ಬಾಳುವಿರಿ. ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುವಿರಿ.
ಶ್ರವಣ ನಕ್ಷತ್ರದ 2ನೇ ಪಾದ ಅಥವಾ ಹೆಸರು ಶು ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಅನಾವಶ್ಯಕವಾಗಿ ಯಾರೊಂದಿಗೂ ಮಾತನಾಡುವುದಿಲ್ಲ. ವಿಶಾಲವಾದ ಮನಸ್ಸಿರುತ್ತದೆ. ಬಂಧು ಬಳಗದವರನ್ನು ಸಮಾನವಾದ ಭಾವನೆಯಿಂದ ಕಾಣುವಿರಿ. ಮೌನವಾಗಿದ್ದು, ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಸೋಲಿನ ವೇಳೆಯಲ್ಲಿಯೂ ಹಠ ಬಿಡುವುದಿಲ್ಲ. ಪ್ರಯತ್ನದಿಂದ ನಿರೀಕ್ಷಿತ ಗುರಿ ತಲುಪುತ್ತಾರೆ. ವಿಶಾಲವಾದ ಮನಸ್ಸಿರುತ್ತದೆ. ಪರೋಪಕಾರದ ಗುಣವಿರುತ್ತದೆ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಸ್ವತಂತ್ರವಾಗಿ ಯಾವುದೇ ಕೆಲಸವನ್ನು ನಿರ್ವಹಿಸುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆದಾಯ ಕೊರತೆ ಕಂಡು ಬರುದಿಲ್ಲ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಸಂತೋಷದ ಜೀವನ ನಡೆಸುತ್ತಾರೆ. ಹಣವನ್ನು ಉಳಿಸಿಕೊಳ್ಳಲು ಗುರು ಹಿರಿಯರ ಸಲಹೆಯನ್ನು ಪಡೆಯುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ಗಂಟಲಿಗೆ ಸಂಬಂಧಿಸಿದ ದೋಷವಿರುತ್ತದೆ.
ಶ್ರವಣ ನಕ್ಷತ್ರದ 3ನೇ ಪಾದ ಅಥವಾ ಹೆಸರು ಶೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಸಾಧಕ ಬಾಧಕಗಳನ್ನು ಅರಿಯುವಿರಿ. ಒಳ್ಳೆಯ ವಿಚಾರಗಳನ್ನು ತಿಳಿಯುವುದಲ್ಲದೆ ಬೇರೆಯವರಿಗೆ ಕಲಿಸುವ ಪ್ರಯತ್ನ ಮಾಡುವಿರಿ. ಆದರೆ ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ಸ್ಥಿರವಾದ ಮನಸ್ಥಿತಿ ಇದ್ದಲ್ಲಿ ನಿಮಗೆ ಅಸಾಧ್ಯವಾದ ವಿಚಾರ ಯಾವುದು ಇರುವುದಿಲ್ಲ. ಸ್ತ್ರೀಯರಿಗೆ ವಿಶೇಷವಾದ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಕುಟುಂಬದ ಗೌರವ ಘನತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುವಿರಿ. ನೀವು ಇರುವ ಕಡೆ ಹಾಸ್ಯಕ್ಕೆ ಬರವಿರುವುದಿಲ್ಲ. ಮನಸ್ಸಿನಲ್ಲಿ ವೈರಾಗದ ಭಾವನೆ ಮೂಡುತ್ತದೆ. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ಉತ್ತಮ ಆದಾಯ ಇರುತ್ತದೆ. ನಿಧಾನ ಗತಿಯಲ್ಲಿ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಿರಿ.
ಶ್ರವಣ ನಕ್ಷತ್ರದ 4ನೇ ಪಾದ ಅಥವಾ ಹೆಸರು ಶೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಮುಗುಳ್ನಗೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಮನಸ್ಸಿನಲ್ಲಿ ಯಾವುದೇ ಯೋಚನೆ ಇರುವುದಿಲ್ಲ. ಆತುರದಲ್ಲಿ ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಸ್ತ್ರೀಯರಾಗಲಿ ಪುರುಷರಾಗಲಿ ದೈಹಿಕ ವ್ಯಾಯಾಮದಿಂದ ಉತ್ತಮ ದೈಹಿಕ ಬಲವನ್ನು ಗಳಿಸುವಿರಿ. ಕುಟುಂಬದ ಯಾವುದೇ ಸಮಸ್ಯೆಗಳಿದ್ದರೂ ಸುಲಭವಾಗಿ ಪರಿಹರಿಸಬಲ್ಲಿರಿ. ಆದರೆ ಉದ್ಯೋಗವೇ ನಿಮಗೆ ದೊಡ್ಡ ಸಮಸ್ಯೆಯಾಗುತ್ತದೆ. ರೋಗಿಗಳ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ತಂದೆ ಅಥವಾ ತಾಯಿಯವರು ಆರಂಭಿಸುವ ವ್ಯಾಪಾರ ವ್ಯವಹಾರವೇ ನಿಮಗೆ ಜೀವನಧಾರವಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ನಿರೀಕ್ಷಿತ ಪರಿವರ್ತನೆಗಳು ಕಂಡುಬರುತ್ತವೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
