ಉತ್ತರ ಫಲ್ಗುಣಿ ನಕ್ಷತ್ರ ವರ್ಷ ಭವಿಷ್ಯ 2025; ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತೀರಿ, ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉತ್ತರ ಫಲ್ಗುಣಿ ನಕ್ಷತ್ರ ವರ್ಷ ಭವಿಷ್ಯ 2025; ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತೀರಿ, ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ

ಉತ್ತರ ಫಲ್ಗುಣಿ ನಕ್ಷತ್ರ ವರ್ಷ ಭವಿಷ್ಯ 2025; ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತೀರಿ, ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ

Uttara Phalguni Nakshatra Bhavishya: ಉತ್ತರ ಫಲ್ಗುಣ ನಕ್ಷತ್ರದವರ ವರ್ಷ ಭವಿಷ್ಯ 2025. ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತೀರಿ, ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ. (ಬರಹ:ಎಚ್‌.ಸತೀಶ್, ಜ್ಯೋತಿಷಿ)

ಶ್ರೀ ವಿಶ್ವಾವಸು ಸಂವತ್ಸರ ಉತ್ತರ ಫಲ್ಗುಣಿ ನಕ್ಷತ್ರ ಭವಿಷ್ಯ
ಶ್ರೀ ವಿಶ್ವಾವಸು ಸಂವತ್ಸರ ಉತ್ತರ ಫಲ್ಗುಣಿ ನಕ್ಷತ್ರ ಭವಿಷ್ಯ

ಉತ್ತರ ಫಲ್ಗುಣಿ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 12ನೇಯದು ಉತ್ತರ ಅಥವಾ ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.

ಉತ್ತರ ಫಲ್ಗುಣಿ ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ

ಉತ್ತರ ಅಥವಾ ಉತ್ತರ ಫಲ್ಗುಣಿ ನಕ್ಷತ್ರದವರ ವಿಶ್ವಾವಸು ಸಂವತ್ಸರ ಭವಿಷ್ಯವನ್ನು ನೋಡುವುದಾದರೆ, ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಉತ್ತರ ನಕ್ಷತ್ರದ 1ನೇಯ ಪಾದವು ಸಿಂಹ ರಾಶಿಯಲ್ಲಿಯೂ ಉಳಿದ 3 ಪಾದಗಳು ಕನ್ಯಾರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಟೆ, ಟೊ, ಪ ಮತ್ತು ಪಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಉತ್ತರ ಫಲ್ಗುಣ ನಕ್ಷತ್ರವಾಗುತ್ತದೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಉತ್ತರ ಅಥವಾ ಉತ್ತರ ಫಲ್ಗುಣಿ ನಕ್ಷತ್ರದವರ ಭವಿಷ್ಯ

ತಂದೆ ತಾಯಿಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಉದ್ಯೋಗದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ. ಸೋದರದ ನಡುವೆ ಮನಸ್ತಾಪ ಉಂಟಾದರೂ ಮರೆತು ಬಾಳುವಿರಿ. ಧೈರ್ಯ ಸಾಹಸದ ಬುದ್ಧಿ ಇರುತ್ತದೆ. ರಹಸ್ಯವಾಗಿ ಇಡಬೇಕಾದ ವಿಚಾರವನ್ನು ಬಹಿರಂಗಪಡಿಸುವಿರಿ. ಸ್ವತಂತ್ರವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಬಂಧು-ಬಳಗದವರ ಜೊತೆ ಉತ್ತಮ ಅನುಬಂಧ ಇರುವುದಿಲ್ಲ. ಎಲ್ಲರೂ ನಿಮ್ಮನ್ನು ಗೌರವಿಸಬೇಕೆಂಬ ಭಾವನೆ ಇರುತ್ತದೆ. ಹೊಸ ವಿಚಾರಗಳನ್ನು ಕಲಿಯಬೇಕೆಂಬ ಆಸೆ ನಿಮ್ಮಲ್ಲಿ ಇರುತ್ತದೆ. ವಿದೇಶಿ ಭಾಷೆಗಳ ಬಗ್ಗೆ ಉತ್ತಮ ಜ್ಞಾನ ಬೆಳೆಸಿಕೊಳ್ಳುವಿರಿ. ಬರವಣಿಗೆಯನ್ನೇ ಉದ್ಯೋಗವಾಗಿರಿಸಿಕೊಂಡಲ್ಲಿ ಸಮಾಜದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆಯು ಹೆಚ್ಚುತ್ತದೆ. ಮನೆಗೆ ಆಗಮಿಸುವ ಅತಿಥಿಗಳನ್ನು ಪ್ರೀತಿ ಗೌರವದಿಂದ ಕಾಣುವಿರಿ.

ಉತ್ತರ ನಕ್ಷತ್ರದ 1ನೇ ಪಾದ ಅಥವಾ ಹೆಸರು ಟೆ ಅಕ್ಷರದಿಂದ ಆರಂಭವಾಗಿರುವವರ ಭವಿಷ್ಯ

ಸಂಕಷ್ಟದ ಸಂದರ್ಭದಲ್ಲಿಯೂ ಸಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನಿಜವನ್ನು ನುಡಿದು ಸಂಭ್ರಮಗೊಳ್ಳುವಿರಿ. ಯಾವುದೇ ಭೇದ ಭಾವ ತೋರದೆ ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುವಿರಿ. ಆದರೆ ಕೋಪಗೊಂಡಲ್ಲಿ ಎಲ್ಲರೊಂದಿಗೆ ಕಠಿಣವಾಗಿ ವರ್ತಿಸುವಿರಿ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬಾಳುವಿರಿ. ಬೇರೆಯವರ ತಪ್ಪನ್ನು ಮನ್ನಿಸಿ ಅವರಿಗೆ ಸರಿದಾರಿಯನ್ನು ತೋರುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವುದಿಲ್ಲ. ನಿಮ್ಮ ಹಠದ ಗುಣವು ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಬಯಸುವಿರಿ. ಅಧಿಕಾರ ಇಲ್ಲದೆ ಹೋದರು ಅಧಿಕಾರಿಗಳಿಗೆ ಸರಿಸಮನಾದ ಸ್ಥಾನಮಾನವು ನಿಮಗೆ ದೊರೆಯುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವುದಿಲ್ಲ.

ಉತ್ತರ ನಕ್ಷತ್ರದ 2ನೇ ಪಾದ ಅಥವಾ ಹೆಸರು ಟೊ ಅಕ್ಷರದಿಂದ ಆರಂಭವಾಗಿರುವವರ ಭವಿಷ್ಯ

ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವಿರಿ. ಯಾವುದೇ ರೀತಿಯ ಕೆಲಸ ಕಾರ್ಯಗಳು ನಿರ್ವಹಿಸುವಲ್ಲಿ ಹಿಂಜರಿಯುವುದಿಲ್ಲ. ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವುದಿಲ್ಲ. ನೋಡಲು ಸರಳವಾಗಿ ಕಂಡರೂ ಮನಸ್ಸಿನಲ್ಲಿ ಅನೇಕ ಆಸೆ ಆಕಾಂಕ್ಷಿಗಳು ಇರುತ್ತವೆ. ಮನದಲ್ಲಿ ಅಳುಕಿನ ಭಾವನೆ ಇದ್ದರೂ ತೋರ್ಪಡಿಸಿಕೊಳ್ಳುವುದಿಲ್ಲ. ಬುದ್ಧಿವಂತಿಕೆಯಿಂದ ಸಮಯ ಸಂದರ್ಭವನ್ನು ಅನುಸರಿಸಿ ಬಾಳುವಿರಿ. ಯಾವುದೇ ತೊಂದರೆ ಎದುರಾದರೂ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲು ಸಫಲರಾಗುವಿರಿ. ಪರೋಪಕಾರದ ಗುಣವಿದ್ದರೂ ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಪ್ರಥಮ ಆದ್ಯತೆಯನ್ನು ನೀಡುವಿರಿ. ಹಣಕಾಸಿನ ವಿಚಾರದಲ್ಲಿ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ. ಒತ್ತಡದಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ.

ಉತ್ತರ ನಕ್ಷತ್ರದ 3ನೇ ಪಾದ ಅಥವಾ ಹೆಸರು ಪ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ನಿಮ್ಮಲ್ಲಿ ಸಾತ್ವಿಕ ಗುಣಸ್ವಭಾವವಿರುತ್ತದೆ. ಬೇರೆಯವರ ಮನಸ್ಸಿಗೆ ಬೇಸರ ಉಂಟು ಮಾಡುವ ಕೆಲಸವನ್ನು ಮಾಡುವುದಿಲ್ಲ. ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಕಠಿಣವಾದ ವಿಚಾರಗಳನ್ನು ಸುಲಭವಾಗಿ ಕಲಿಯಬಲ್ಲಿರಿ. ವಿದ್ಯಾರ್ಥಿಗಳಿಗೆ ಗುರು ಹಿರಿಯರ ಸಲಹೆಯು ದೊರೆಯುತ್ತದೆ. ನಿಮ್ಮಲ್ಲಿರುವ ಅನ್ವೇಷಣಾ ಗುಣವು ಕೆಲಸದ ಒತ್ತಡವನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸವಾದರೂ ಗೌರವದ ಭಾವನೆಯಿಂದ ಕಾಣುವಿರಿ. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಸ್ವಾರ್ಥದ ಬುದ್ಧಿ ನಿಮ್ಮಲ್ಲಿ ಇರುವುದಿಲ್ಲ. ಕಲಾವಿದರಿಗೆ ಅಪರೂಪದ ಅವಕಾಶಗಳು ದೊರೆಯುತ್ತವೆ. ನಾಯಕತ್ವದ ಗುಣ ಬೆಳೆಸಿಕೊಳ್ಳುವಿರಿ. ಸ್ವಂತ ವ್ಯಾಪಾರ, ವ್ಯವಹಾರದಲ್ಲಿ ಆತ್ಮೀಯರ ಸಹಭಾಗಿತ್ವ ಇರುತ್ತದೆ. ಸುಲಭವಾಗಿ ಹಣವನ್ನು ಗಳಿಸಿದರೂ ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ.

ಉತ್ತರ ನಕ್ಷತ್ರದ 4ನೇ ಪಾದ ಅಥವಾ ಹೆಸರು ಪಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಕುಟುಂಬದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಪತಿ-ಪತ್ನಿಯರ ನಡುವೆ ಉತ್ತಮ ಒಡನಾಟ ಕಂಡು ಬರುತ್ತದೆ. ಮೊದಲ ಆದ್ಯತೆಯನ್ನು ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಬೇರೆಯವರ ವಿಚಾರಗಳಲ್ಲಿ ಅನಾವಶ್ಯಕವಾಗಿ ಪಾಲ್ಗೊಳ್ಳುವುದಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಯೋಜನೆಯನ್ನು ರೂಪಿಸುವಿರಿ. ಸರಳವಾದ ವ್ಯಾಪಾರ ವ್ಯವಹಾರ ನಿಮ್ಮ ಜೀವನಕ್ಕೆ ಆಧಾರ ಸ್ತಂಭವಾಗುತ್ತದೆ. ವಿದ್ಯಾರ್ಥಿಗಳು ಕುಟುಂಬದ ಪ್ರತಿಷ್ಠೆಗಾಗಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳನ್ನು ಗೆಲ್ಲುವಿರಿ. ಅಧಿಕಾರದ ವ್ಯಾಮೋಹ ನಿಮಗೆ ಇರುವುದಿಲ್ಲ. ಹೊಸ ಜನರ ಜೊತೆಯಲ್ಲಿ ಹೊಂದಿಕೊಂಡು ಬಾಳುವಿರಿ. ಆತುರ ಪಡದೆ ಉತ್ತಮ ಅವಕಾಶಗಳಿಗಾಗಿ ಕಾಯುವಿರಿ. ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ಪ್ರಯಾಣದ ವೇಳೆ ಎಚ್ಚರಿಕೆ ಇರಲಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.