ಆ.16 ರಂದು ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ; ಈ 5 ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಹಣಕಾಸು ನಷ್ಟ-horoscope unlucky zodiac signs due to sun transit in leo surya sankramana in simha rashi astrology prediction rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆ.16 ರಂದು ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ; ಈ 5 ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಹಣಕಾಸು ನಷ್ಟ

ಆ.16 ರಂದು ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ; ಈ 5 ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಹಣಕಾಸು ನಷ್ಟ

ಸೂರ್ಯ ಸಂಕ್ರಮಣ 2024: ಆಗಸ್ಟ್ 16 ರಂದು, ಸೂರ್ಯನು ಸಿಂಹ ರಾಶಿಗೆ ಚಲಿಸುತ್ತಾನೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ ತಂದರೆ, ಕೆಲವರು ಜೀವನದಲ್ಲಿ ಸಮಸ್ಯೆ ಹೊತ್ತು ತರುತ್ತಿದೆ. ಸೂರ್ಯ ಸಂಕ್ರಮಣದಿಂದ ಯಾವ ರಾಶಿಯವರು ಏನು ಸಮಸ್ಯೆ ಅನುಭವಿಸಲಿದ್ದಾರೆ ನೋಡೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಗ್ರಹವನ್ನು ಅದೃಷ್ಟ, ಶಕ್ತಿ ಮತ್ತು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಯಾವುದೇ ರಾಶಿಗೆ ಚಲಿಸಿದಾಗ ಅದು ಆ ರಾಶಿಯ ಮೇಲೆ ಮಾತ್ರವಲ್ಲದೆ ಇತರ ಚಿಹ್ನೆಗಳ ಮೇಲೂ ಪರಿಣಾಮ ಬೀರುತ್ತದೆ. ಆಗಸ್ಟ್‌ 16 ರಂದು ಸೂರ್ಯ ಸಿಂಹ ರಾಶಿಯಲ್ಲಿ ಪ್ರಯಾಣಿಸುತ್ತಾನೆ. ಸೂರ್ಯ ರಾತ್ರಿ 7:53 ಕ್ಕೆ ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನ ಈ ಸಂಕ್ರಮವು ಎಲ್ಲಾ 12 ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲವು ರಾಶಿಯವರು ಬಹಳ ಪ್ರಯೋಜನ ಪಡೆಯುತ್ತಾರೆ. ಕೆಲವರು ಆರೋಗ್ಯ, ಆರ್ಥಿಕ ವಿಚಾರದಲ್ಲಿ ಸಮಸ್ಯೆ ಅನುಭವಿಸುತ್ತಾರೆ. 
icon

(1 / 7)

ಕನ್ಯಾ ರಾಶಿ: ಕೆಲಸದಲ್ಲಿ ಒತ್ತಡ ಎದುರಿಸುತ್ತಾರೆ.  ಕೆಲಸದಲ್ಲಿ ಸ್ವಲ್ಪ ಒತ್ತಡವನ್ನು ಎದುರಿಸುತ್ತೀರಿ. ವ್ಯಾಪಾರದಲ್ಲಿ ಲಾಭ ನಷ್ಟ ಎರಡನ್ನೂ ಕಾಣುವಿರಿ. ನೀವು ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ, ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಾಂತಿ ಕೂಡ ಭಂಗವಾಗಬಹುದು. ಈ ಸಮಯದಲ್ಲಿ, ಹಣವನ್ನು ಉಳಿಸಲು ನೀವು ಹೆಚ್ಚು ಶ್ರಮಿ ಪಡಬೇಕಾಗಬಹುದು.  ಖರ್ಚುಗಳು ಹೆಚ್ಚಾಗಬಹುದು.  ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತೀರಿ. 
icon

(2 / 7)

ತುಲಾ ರಾಶಿ: ಈ ರಾಶಿಯವರು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಾರೆ.  ಶೀತ, ಕೆಮ್ಮು ಮತ್ತು ಉದರ ಸಂಬಂಧಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಘರ್ಷಣೆ ಉಂಟಾಗಬಹುದು. ವ್ಯಾಪಾರದಲ್ಲಿ ನಷ್ಟವಾಗಬಹುದು. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಕುಟುಂಬದಿಂದ ಬೆಂಬಲ ದೊರೆಯುವುದಿಲ್ಲ. ಇದರಿಂದ ನೀವು ನಿರಾಶರಾಗಬಹುದು.
icon

(3 / 7)

ಮಕರ ರಾಶಿ: ಈ ರಾಶಿಯವರು ಆರ್ಥಿಕ ನಷ್ಟವನ್ನು ಎದುರಿಸುತ್ತಾರೆ. ಸೂರ್ಯನ ಸಂಚಾರವು ಮಕರ ರಾಶಿಯವರಿಗೆ ಕಷ್ಟದ ದಿನಗಳನ್ನು ತರುತ್ತದೆ. ಈ ರಾಶಿಯವರು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಪಾಲುದಾರಿಕೆಯಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಸ್ಯೆಗಳಾಗಬಹುದು. ಒಳ್ಳೆಯ ಅವಕಾಶ ನಿಮ್ಮಿಂದ ಕೈ ತಪ್ಪಬಹುದು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಮತ್ತು ಅವರ ಅಭಿಪ್ರಾಯವನ್ನು ಕೇಳಿ. ಪ್ರೀತಿಯ ಜೀವನದಲ್ಲಿ ಸಮನ್ವಯದ ಕೊರತೆಯು ನಿಮ್ಮ ಸಂಗಾತಿಯೊಂದಿಗೆ ಜಗಳಕ್ಕೆ ಕಾರಣವಾಗಬಹುದು. ಆರೋಗ್ಯದ ಕಡೆ ಗಮನ ಕೊಡಿ. 
icon

(4 / 7)

ಕುಂಭ ರಾಶಿ: ಈ ರಾಶಿಯವರು ಒತ್ತಡಕ್ಕೆ ಒಳಗಾಗುತ್ತಾರೆ. ವೃತ್ತಿಯಲ್ಲಿ ನಿರಾಶೆ ಎದುರಿಸಬಹುದು. ವಿಶೇಷವಾಗಿ ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸಿದರೆ ನೀವು ಸ್ವಲ್ಪ ಸಮಯ ಕಾಯಬೇಕಾಗಬಹುದು. ವ್ಯಾಪಾರದಲ್ಲಿಯೂ ನೀವು ಅತ್ಯಲ್ಪ ಲಾಭವನ್ನು ಪಡೆಯುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುವುದಿಲ್ಲ, ಹಾಗಾಗಿ ಸದ್ಯಕ್ಕೆ ನೀವು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಕುಂಭ ರಾಶಿಯವರು ಆಯಾಸ ಮತ್ತು ಒತ್ತಡವನ್ನು ಅನುಭವಿಸಬಹುದು, ಆದ್ದರಿಂದ ನಿಮ್ಮ ಮನಸ್ಸನ್ನು ಧಾರ್ಮಿಕ ಕೆಲಸದಲ್ಲಿ ಕೇಂದ್ರೀಕರಿಸಿ. 
icon

(5 / 7)

ಮೀನ ರಾಶಿ: ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವೃತ್ತಿಯಲ್ಲಿ ಅನೇಕ ಏರಿಳಿತಗಳನ್ನು ಎದುರಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ,  ಸ್ವಲ್ಪ ಸಮಯ ಕಾಯಬೇಕು.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು