ಮೀನ ರಾಶಿಯಲ್ಲಿ ಮುಖಾಮುಖಿಯಾಗಲಿರುವ ಶುಕ್ರ-ಸೂರ್ಯ; 12 ರಾಶಿಯವರಿಗೆ ಹೀಗಿವೆ ಶುಭ ಫಲಿತಾಂಶಗಳು
Venus Sun Transit: ಮಾರ್ಚ್ 19ರ ಬುಧವಾರದಿಂದ ಮೀನ ರಾಶಿಯಲ್ಲಿ ಶುಕ್ರ, ಸೂರ್ಯ ಪರಸ್ಪರ ಹತ್ತಿರದಲ್ಲಿದ್ದಾರೆ. ಮಾ 23ರ ಭಾನುವಾರದವರೆಗೆ ಹೀಗೆ ಇರಲಿದ್ದಾರೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತೆ.

ರಾಶಿ ಚಕ್ರದ ಕೆಲವು ಗ್ರಹಗಳ ಚಲನೆಯು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರೀತಿ, ಸೌಂದರ್ಯ ಹಾಗೂ ಆರ್ಥಿಕತೆಯನ್ನು ಆಳುವ ಸ್ವರ್ಗೀಯ ಶುಕ್ರನು, ಸೂರ್ಯನಿಗೆ ತುಂಬಾ ಹತ್ತಿರಕ್ಕೆ ಬಂದಿದ್ದಾರೆ. 2025ರ ಮಾರ್ಚ್ 19 ರಿಂದ ಶುಕ್ರ ಮತ್ತು ಸೂರ್ಯ ಪರಸ್ಪರ ಹತ್ತಿರದಲ್ಲಿದ್ದಾರೆ. ಈ ಮುಖಾಮುಖಿಯು ಮಾರ್ಚ್ 23 ರವರೆಗೆ ಜಾರಿಯಲ್ಲಿರುತ್ತದೆ. ಎರಡು ಪ್ರಮುಖ ಗ್ರಹಗಳ ಮುಖಾಮುಖಿಯ ಪರಿಣಾಮಗಳನ್ನು ಮಾರ್ಚ್ 31 ರವರಿಗೆ ಎಲ್ಲಾ 12 ರಾಶಿಯವರು ಅನುಭವಿಸುತ್ತವೆ. ಶುಕ್ರ ಗ್ರಹವು ಪ್ರತಿ ರಾಶಿಚಕ್ರ ಚಿಹ್ನೆಯ ಪ್ರೀತಿಯ ಜೀವನ, ಹಣಕಾಸು ಮತ್ತು ವೈಯಕ್ತಿಕ ವಿಚಾರಗಳಲ್ಲಿ ಫಲಗಳನ್ನು ನೀಡುತ್ತವೆ.
ಮೇಷ ರಾಶಿ: ಪ್ರೀತಿಯ ಜೀವನದಲ್ಲಿ ಸಂತೋಷ ಇರುತ್ತದೆ. ಅಜಾಗರೂಕ ಖರ್ಚುಗಳಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಹಾಯ ಮಾಡಲು ಸಾಧ್ಯವಾಗಿದ್ದರೂ ಪರವಾಗಿಲ್ಲ, ಖರ್ಚಿನಲ್ಲಿ ಜಾಗರೂಕರಾಗಿರಿ. ಪರಿಸ್ಥಿತಿಗಳಿಗೆ ತುಂಬಾ ಒಗ್ಗಿಕೊಳ್ಳುತ್ತೀರಿ. ಕೆಲವೊಂದು ವಿಚಾರಗಳಲ್ಲಿ ಸ್ಪಷ್ಟತೆಗೆ ಅಡ್ಡಿಗಳು ಇರುತ್ತವೆ. ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯುತ್ತೀರಿ.
ವೃಷಭ ರಾಶಿ: ಶುಕ್ರನ ಚಿಹ್ನೆಯಾದ ವೃಷಭ ರಾಶಿಯವರಿಗೆ ಸವಾಲುಗಳ ನಡುವೆ ಆರ್ಥಿಕ ಲಾಭಗಳನ್ನು ಕಾಣುತ್ತಾರೆ. ಸುರಕ್ಷತೆಯ ಪ್ರಜ್ಞೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ, ವಿಶೇಷವಾಗಿ ಸಂಬಂಧಗಳು ಮತ್ತು ಹಣದೊಂದಿಗೆ, ಸ್ವಲ್ಪ ಅಲುಗಾಟ ಇರುತ್ತದೆ. ಪಾಲುದಾರ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ. ಕ್ರಮ ತೆಗೆದುಕೊಳ್ಳುವ ಬದಲು ಚಿಂತನೆ ಮತ್ತು ಯೋಜನೆ ರೂಪಿಸಲು ಇದು ಅತ್ಯುತ್ತಮ ಸಮಯ. ಸಂತೋಷ ಮತ್ತು ಹೆಚ್ಚು ಸುರಕ್ಷಿತವಾಗಿರುವಂತೆ ಭಾಸವಾಗುತ್ತದೆ.
ಮಿಥುನ ರಾಶಿ: ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸವಾಲುಗಳು ಇರುತ್ತವೆ. ನಿಮ್ಮ ಪ್ರೀತಿಯ ಉದ್ದೇಶಗಳನ್ನು ವ್ಯಕ್ತಪಡಿಸುವುದು ಅಥವಾ ಸಂಬಂಧಗಳಲ್ಲಿ ಸಾಮರಸ್ಯವನ್ನು ಪ್ರಚೋದಿಸುವುದು ಬಹುತೇಕ ಅಸಾಧ್ಯವೆಂದು ತೋರಬಹುದು. ಅಪರಿಚತರ ಬಗ್ಗೆ ಜಾಗರೂಕರಾಗಿರಿ. ತಪ್ಪು ತಿಳುವಳಿಕೆಗಳು ಉದ್ಭವಿಸಬಹುದು, ಆದ್ದರಿಂದ ತಾಳ್ಮೆಯು ನಿಮ್ಮ ಬಲವಾದ ಮಿತ್ರವಾಗಿರುತ್ತದೆ. ಹಣಕಾಸಿನ ಬಗ್ಗೆ, ಎಲ್ಲಾ ವಹಿವಾಟುಗಳು ಅಥವಾ ಹೂಡಿಕೆಗಳಲ್ಲಿನ ಪ್ರತಿಯೊಂದು ವಿವರವನ್ನು ಪರಿಶೀಲಿಸಬೇಕು.
ಕಟಕ ರಾಶಿ: ಸಂಬಂಧಗಳನ್ನು ಪೋಷಿಸುವಲ್ಲಿ ಸವಾಲುಗಳು ಇರುತ್ತವೆ. ಆದರೆ ಸ್ವಲ್ಪಮಟ್ಟಿಗೆ ಮೆಚ್ಚುಗೆ ಪಡೆಯುತ್ತೀರಿ, ಜೊತೆಗೆ ತಾಳ್ಮೆಯಿಂದ ಇರುತ್ತೀರಿ. ಕೆಲವೊಂದು ವಿಷಯಗಳನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳದಂತೆ ಕಾಳಜಿ ವಹಿಸಬೇಕು. ಹಣಕಾಸಿನ ವಿಷಯಕ್ಕೆ ಬಂದರೆ, ತಡೆಯಾಗಿದ್ದ ಹಣ ನಿಮ್ಮ ಕೈಸೇರುತ್ತದೆ. ವ್ಯಾಪಾರಿಗಳಿಗೆ ಲಾಭ ಇರುತ್ತದೆ. ಪ್ರಚೋದನೆ ನೀಡುವವರಿಂದ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ
ಸಿಂಹ ರಾಶಿ: ಶುಕ್ರ ಮತ್ತು ಸೂರ್ಯ ಮುಖಾಮುಖಿಯಾಗಿರುವದು ಸಿಂಹ ರಾಶಿಯವರಿಗೆ ಸಾಕಷ್ಟು ಶುಭ ಫಲಗಳನ್ನು ತಂದಿದೆ. ಇದರ ಜೊತೆಗೆ ಕೆಲವೊಂದು ಸವಾಲುಗಳು ಇರುತ್ತವೆ. ಪ್ರೇಮ ಜೀವನದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತವೆ. ಅಸೂಯೆ ಅಥವಾ ನಿರ್ಲಕ್ಷಿಸಲ್ಪಟ್ಟ ಭಾವನೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಂವಹನ ಮುಖ್ಯವಾಗಿರುತ್ತದೆ. ತಪ್ಪು ತಿಳುವಳಿಕೆಗಳನ್ನು ತಪ್ಪಿಸಲು ನಿಮ್ಮ ಅಗತ್ಯಗಳು ಮತ್ತು ಆಸೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ಆರ್ಥಿಕವಾಗಿ, ಅಪಾಯಕಾರಿ ಹೂಡಿಕೆಗಳಿಗೆ ಇದು ಸೂಕ್ತ ಸಮಯವಲ್ಲ.
ಕನ್ಯಾ ರಾಶಿ: ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳನ್ನು ತಾಳ್ಮೆ ಹಾಗೂ ಎಚ್ಚರಿಕೆಯಿಂದ ನಿರ್ವಹಿಸುತ್ತೀರಿ. ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸೌಮ್ಯವಾಗಿರುತ್ತೀರಿ. ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಈ ಅವಧಿಯನ್ನು ಪರಿಗಣಿಸಿ. ನಿಮ್ಮ ಬಜೆಟ್ ಗಳನ್ನು ಪರಿಷ್ಕರಿಸುತ್ತೀರಿ. ವೆಚ್ಚಗಳು ಇರುತ್ತವೆ. ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ತುಲಾ ರಾಶಿ: ನ್ಯಾಯಸಮ್ಮತತೆಗಾಗಿ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಸಂಬಂಧದ ನಿರ್ಧಾರಕ್ಕೆ ಆತುರಪಡುವುದನ್ನು ತಪ್ಪಿಸಿ. ಹೊಸ ಹಣಕಾಸು ಒಪ್ಪಂದಗಳನ್ನು ಮಾಡಿಕೊಳ್ಳಲು ಇದು ಅತ್ಯಂತ ಅನುಕೂಲಕರ ಸಮಯವಲ್ಲ. ಯಾವುದೇ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕದಿರುವುದು ಅಥವಾ ಹೂಡಿಕೆ ನಿರ್ಧಾರ ತೆಗೆದುಕೊಳ್ಳದಿರುವುದು ಬುದ್ಧಿವಂತಿಕೆಯಾಗಿದೆ. ಶುಕ್ರನಿಂದ ಸಾಕಷ್ಟು ಶುಭ ಫಲಗಳನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ: ಪರಿಸ್ಥಿತಿಯನ್ನು ಧೈರ್ಯದಿಂದ ಮತ್ತು ಮುಕ್ತವಾಗಿ ಎದುರಿಸುತ್ತೀರಿ. ಸಂಘರ್ಷ ಅಥವಾ ತಪ್ಪು ತಿಳುವಳಿಕೆಯ ಹಂತಕ್ಕೆ ಹೆಚ್ಚಿಸಬಹುದು. ಕ್ರಿಯೆಗಳನ್ನು ನಿಯಂತ್ರಿಸಲು ಅಸೂಯೆ ಅಥವಾ ಸ್ವಾಧೀನತೆಗೆ ಅವಕಾಶ ನೀಡಬೇಡಿ. ಬದಲಾಗಿ, ನಂಬಿಕೆಯನ್ನು ಪ್ರೋತ್ಸಾಹಿಸಿ. ಬಾಕಿ ಇರುವ ಪಾವತಿಗಳನ್ನು ಪೂರ್ಣಗೊಳಿಸುತ್ತೀರಿ.
ಧನು ರಾಶಿ: ಪ್ರೀತಿಯ ವಿಷಯಕ್ಕೆ ಬಂದಾಗ ಹೊಸ ಮತ್ತು ರೋಮಾಂಚನಕಾರಿಯಾದದ್ದನ್ನು ಅನುಭವಿಸುತ್ತೀರಿ. ಹೊಸ ಸಂಬಂಧಗಳನ್ನು ಹೊಂದಲು ಅಥವಾ ಇತರರಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತೀರಿ. ನಿಮ್ಮ ಸಂಗಾತಿಯ ವಿಭಿನ್ನ ಅಗತ್ಯಗಳನ್ನು ತಪ್ಪಿಸಲು ಮುಂದಾಗುತ್ತೀರಿ. ಹೆಚ್ಚುವರಿಯಾಗಿ, ಈ ಸಮಯದಲ್ಲಿ, ಜೂಜಾಡಲು ಅಥವಾ ಆರ್ಥಿಕವಾಗಿ ಏನನ್ನಾದರೂ ಅಪಾಯಕ್ಕೆ ಸಿಲುಕಲು ಹೆಚ್ಚು ಪ್ರಚೋದಿಸುತ್ತದೆ. ಆದರೆ ಜಾಗರೂಕರಾಗಿರಿ.
ಮಕರ ರಾಶಿ: ಪ್ರೀತಿಯ ವಿಷಯಗಳಲ್ಲಿ ಗಂಭೀರ ಮನೋಭಾವವನ್ನು ಹೊಂದಿರುತ್ತೀರಿ. ಇದು ಸಂಬಂಧಗಳ ಬಗ್ಗೆ ಹೆಚ್ಚು ಚಿಂತನಶೀಲ ಮನೋಭಾವಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ, ಸಂಪನ್ಮೂಲಗಳನ್ನು ಸಂರಕ್ಷಿಸುವತ್ತ ಗಮನ ಹರಿಸುತ್ತೀರಿ. ಸಮಯ ವ್ಯರ್ಥ ಮಾಡಬೇಡಿ. ಹೊಸ ಗುರಿಗಳಿಗಾಗಿ ಯೋಜನೆಗಳನ್ನು ರೂಪಿಸುತ್ತೀರಿ. ಕಷ್ಟದ ಸಮಯ ದೂರವಾಗುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿಮ್ಮದಾಗುತ್ತದೆ.
ಕುಂಭ ರಾಶಿ: ಕೆಲವೆಂದು ಸಂಬಂಧಗಳಿಂದ ಸಂಪರ್ಕ ಕಡಿದುಕೊಳ್ಳಬಹುದು ಅಥವಾ ಹಿಂದೆ ಸರಿಯಬಹುದು. ಹೆಚ್ಚು ಶ್ರಮಿಸುವ ಅಗತ್ಯವಿದೆ. ಆರ್ಥಿಕವಾಗಿ ಬಲಗೊಳ್ಳುತ್ತೀರಿ. ನಿಮ್ಮ ಹಣವನ್ನು ಹೂಡಿಕೆ ಮಾಡುವ ಸೃಜನಶೀಲ ಮಾರ್ಗಗಳಲ್ಲಿ ವಿಭಿನ್ನ ಆಸಕ್ತಿಯನ್ನು ತರಬಹುದು. ವಾಸ್ತವವಾಗಿ, ಸೃಜನಶೀಲತೆ ನಿಜವಾಗಿಯೂ ಒಂದು ಆಸ್ತಿಯಾಗಿರುತ್ತದೆ. ಪ್ರತಿ ಹೊಸ ಯೋಜನೆಯು ಸಾಕಷ್ಟು ನಿರ್ಧಾರಗಳಿಗೆ ಕಾರಣವಾಗುತ್ತದೆ.
ಮೀನ ರಾಶಿ: ವಾಸ್ತವ ಮತ್ತು ಕಾಲ್ಪನಿಕತೆಯ ನಡುವಿನ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ನಿರಾಶೆಯನ್ನು ತಪ್ಪಿಸಲು ಪ್ರೀತಿಪಾತ್ರರೊಂದಿಗೆ ವ್ಯವಹರಿಸುವಾಗ ಸ್ಪಷ್ಟತೆಯನ್ನು ಹೊಂದಿರುತ್ತೀರಿ. ಹಣಕಾಸಿನ ರಂಗದಲ್ಲಿ, ಊಹಾತ್ಮಕ ಉದ್ಯಮಗಳಿಂದ ತಪ್ಪಿಸಿಕೊಳ್ಳುತ್ತೀರಿ. ಹಣಕಾಸು ನಿರ್ವಹಣೆಯ ಕಡೆಗೆ ಹೆಚ್ಚು ಗಮನ ಹರಿಸುತ್ತೀರಿ. ಸವಾಲಿನ ದಿನಗಳನ್ನು ಧೈರ್ಯವಾಗಿ ಎದುರಿಸುತ್ತೀರಿ.
ಬರಹ: ನೀರಜ್ ಧಂಖೇರ್, ಜ್ಯೋತಿಷಿ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
