ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಟಕ ರಾಶಿಗೆ ಶುಕ್ರನ ಪ್ರವೇಶ, ಸೌಂದರ್ಯ ದೇವತೆಗೆ ರಾಹುವಿನ ದೃಷ್ಠಿ; ಮಕರ ಸೇರಿ ಈ 5 ರಾಶಿಯವರಿಗೆ ಒಳ್ಳೆ ಸಮಯ

ಕಟಕ ರಾಶಿಗೆ ಶುಕ್ರನ ಪ್ರವೇಶ, ಸೌಂದರ್ಯ ದೇವತೆಗೆ ರಾಹುವಿನ ದೃಷ್ಠಿ; ಮಕರ ಸೇರಿ ಈ 5 ರಾಶಿಯವರಿಗೆ ಒಳ್ಳೆ ಸಮಯ

ಶುಕ್ರನು ಜುಲೈ 6 ರಂದು ಮಿಥುನ ರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಕೆಲವು ದಿನಗಳ ನಂತರ, ಅಂದರೆ ಆಗಸ್ಟ್ 31ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶಿಸುತ್ತಾನೆ ಕಟಕದಲ್ಲಿ ಶುಕ್ರನಿರುವವರೆಗೂ ಶುಕ್ರನಿಗೆ ರಾಹುವಿನ ದೃಷ್ಟಿ ಇರುತ್ತದೆ. ಈ ಕಾರಣದಿಂದ ಪ್ರತಿಯೊಂದು ರಾಶಿಗಳೂ ವಿವಿಧ ಫಲಗಳನ್ನು ಪಡೆಯುತ್ತವೆ. (ಎಚ್‌. ಸತೀಶ್, ಜ್ಯೋತಿಷಿ)

ಕಟಕ ರಾಶಿಗೆ ಶುಕ್ರನ ಪ್ರವೇಶ, ಸೌಂದರ್ಯ ದೇವತೆಗೆ ರಾಹುವಿನ ದೃಷ್ಠಿ; ಮಕರ ಸೇರಿ ಈ 5 ರಾಶಿಯವರಿಗೆ ಒಳ್ಳೆ ಸಮಯ
ಕಟಕ ರಾಶಿಗೆ ಶುಕ್ರನ ಪ್ರವೇಶ, ಸೌಂದರ್ಯ ದೇವತೆಗೆ ರಾಹುವಿನ ದೃಷ್ಠಿ; ಮಕರ ಸೇರಿ ಈ 5 ರಾಶಿಯವರಿಗೆ ಒಳ್ಳೆ ಸಮಯ

ಈ ಕೆಳಕಂಡ ರಾಶಿಗಳು ರಾಹು ಮತ್ತು ಶುಕ್ರದ ಸಹಾಯದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲವರಿಗೆ ಹಣದ ವಿಚಾರವಾಗಬಹುದು, ಇನ್ನೂ ಕೆಲವರಿಗೆ ಕುಟುಂಬದ ವಿಚಾರವಾಗಬಹುದು ಅಥವಾ ವಿವಾಹವೇ ಇರಬಹುದು. ಸಣ್ಣಪುಟ್ಟ ಪೂಜೆ ಪುನಸ್ಕಾರದಿಂದ ಹೆಚ್ಚಿನ ಶುಭಫಲಗಳನ್ನು ನಿರೀಕ್ಷಿಸಬಹುದು.

ವೃಷಭ

ಹೆಚ್ಚಿನ ಪ್ರಯತ್ನದಿಂದಾಗಿ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವಿರಿ. ಸಂಬಂಧಿಕರ ಸಹಾಯ ಇರದೆ ಹೋದರೂ ಹೊರಗಿನವರು ನಿಮಗೆ ಧೈರ್ಯ ತುಂಬುತ್ತಾರೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ದಂಪತಿ ನಡುವೆ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ನಿಮ್ಮ ವಿರೋಧಿಗಳು ಒಳ್ಳೆಯತನಕ್ಕೆ ಮಾರುಹೋಗುತ್ತಾರೆ. ಕಿರಿಯ ಸೋದರಿಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಚರ್ಮದ ರೋಗದಿಂದ ಬಳಲುತ್ತಿದ್ದವರು ಉತ್ತಮ ಆರೋಗ್ಯ ಗಳಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಇದ್ದ ಆತಂಕ ಮರೆಯಾಗುತ್ತದೆ. ಉತ್ತಮ ಪ್ರಯತ್ನದಿಂದಾಗಿ ವಿದೇಶಕ್ಕೆ ತೆರಳಲು ಸಾಧ್ಯವಾಗುತ್ತದೆ. ಉದ್ಯೋಗ ಬದಲಿಸಲು ಇದು ಒಳ್ಳೆಯ ಸಮಯ.

ಮಿಥುನ

ವಿದೇಶಿ ಆಡಳಿತವಿರುವ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರಿಗೆ ಹೆಚ್ಚಿನ ಅನುಕೂಲತೆ ಕಂಡುಬರುತ್ತದೆ. ಸಂಸ್ಥೆಯ ಮುಖಾಂತರ ವಿದೇಶದಲ್ಲಿ ಉದ್ಯೋಗ ಮಾಡುವಿರಿ. ನಿಮ್ಮ ಮಾತಿಗೆ ಕುಟುಂಬದಲ್ಲಿ ಉತ್ತಮ ಮನ್ನಣೆ ದೊರೆಯುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಜನರ ಬೆಂಬಲ ದೊರೆಯುತ್ತದೆ. ರಾಜಕೀಯದಲ್ಲಿ ಉನ್ನತ ನಿರೀಕ್ಷೆಯಂತೆ ಸ್ಥಾನ ಮಾನ ಪಡೆಯುವಿರಿ. ಹಣದ ತೊಂದರೆಯಿಂದ ಮುಕ್ತಿ ಪಡೆಯುವಿರಿ. ಧಾರ್ಮಿಕ ಕಾರ್ಯಕ್ರಮದ ನೇತೃತ್ವ ನಿಮ್ಮದಾಗಲಿದೆ. ಕುಟುಂಬದ ಮಹಿಳೆಯರ ಆಸ್ತಿಯ ವಿವಾದದಲ್ಲಿ ಜಯ ಲಭಿಸುತ್ತದೆ. ವಂಶದ ವೃತ್ತಿ ಅಥವಾ ವ್ಯಾಪಾರವೊಂದನ್ನು ಆರಂಭಿಸಿ ಉತ್ತಮ ಆದಾಯ ಗಳಿಸುವಿರಿ. ಆದರೆ ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.

ಕನ್ಯಾ

ದೂರದ ಸಂಬಂಧಿಕರು ಅಥವಾ ಹಳೆಯ ಸ್ನೇಹಿತರಿಂದ ಸಹಾಯ ದೊರೆಯಲಿದೆ. ದಾಂಪತ್ಯದಲ್ಲಿ ಅನಾವಶ್ಯಕವಾದ ವಾದ ವಿವಾದ ಇರಲಿದೆ. ಆದರೆ ನಿಮ್ಮ ಬುದ್ಧಿವಂತಿಕೆಯ ಮಾತುಕತೆ ದೊಡ್ಡ ಹಗರಣಕ್ಕೆ ಆಸ್ಪದ ನೀಡುವುದಿಲ್ಲ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ಗುರಿ ತಲುಪಲಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದಲ್ಲಿ ಯಶಸ್ಸನ್ನು ಕಾಣುತ್ತಾರೆ. ವಿದೇಶಿ ಭಾಷೆ ಅಥವಾ ವಿದೇಶಿ ಕಲಾಪ್ರಕಾರವನ್ನು ಅಭ್ಯಾಸ ಮಾಡಿದವರಿಗೆ ವಿಶೇಷ ಮನ್ನಣೆ ಲಭಿಸುತ್ತದೆ. ಮಾನಸಿಕ ಒತ್ತಡ ದೂರವಾಗಲಿದೆ. ವಂಶದ ಆಸ್ತಿಯಲ್ಲಿ ಸಿಂಹಪಾಲು ನಿಮಗೆ ದೊರೆಯುತ್ತದೆ.

ತುಲಾ

ವೃತ್ತಿಕ್ಷೇತ್ರದಲ್ಲಿ ಹೆಚ್ಚಿನ ಪ್ರಶಸ್ತಿ ಪುರಸ್ಕಾರ ಲಭಿಸುತ್ತದೆ. ಸ್ವಂತ ಪ್ರತಿಭೆಯಿಂದ ಕೈಹಿಡಿದ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುವಿರಿ. ಉದ್ಯೋಗದಲ್ಲಿ ಸಮಸ್ಯೆ ಕಂಡುಬರುತ್ತದೆ. ನಿಮ್ಮ ಪ್ರಯತ್ನದಿಂದ ಪರಿಸ್ಥಿತಿಯು ತಿಳಿಗೊಳ್ಳುತ್ತದೆ. ಹಾರ್ಮೋನ್ ಅಥವ ಕಿಣ್ವಗಳ ಸ್ರವಿಕೆಯಲ್ಲಿ ತೊಂದರೆ ಕಂಡುಬರುತ್ತದೆ. ಆಹಾರ ಕ್ರಮದಲ್ಲಿ ಬದಲಾವಣೆ ತಂದು ಕೊಳ್ಳುವುದು ಒಳಿತು. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಉಂಟಾಗಲಿದೆ. ಹಿರಿಯರಿಂದ ಹಣಕಾಸಿನ ಸಹಾಯ ಗಳಿಸುವಿರಿ. ಕ್ರಮೇಣವಾಗಿ ಮನದಲ್ಲಿರುವ ಚಿಂತೆಯಿಂದ ದೂರವಾಗುವಿರಿ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಆತುರದಿಂದ ಮುಂದುವರೆದಲ್ಲಿ ಎಲ್ಲರ ವಿರೋಧವನ್ನು ಎದುರಿಸುವಿರಿ.

ಮಕರ

ಸೋಲಿಗೆ ಭಯ ಪಡದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಕಷ್ಟ ಪಟ್ಟು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ನಿಮ್ಮ ಕಾರ್ಯನಿಷ್ಠೆಗೆ ತಕ್ಕ ಪ್ರಶಂಸೆ ಗಳಿಸುವಿರಿ. ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ವಿದೇಶಿ ಸಂಸ್ಥೆಯ ಪಾಲುದಾರಿಕೆ ಪಡೆಯುವಿರಿ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಬೇರೆಯವರ ಮಾತನ್ನು ನಂಬಿ ಸೋದರರನ್ನು ಅನುಮಾನಿಸುವಿರಿ. ಆದರೆ ನಿಜ ತಿಳಿದು ಪಶ್ಚಾತಾಪ ಪಡುವಿರಿ. ಮಕ್ಕಳ ಜೀವನ ರೂಪಿಸುವಲ್ಲಿ ಯಶಸ್ವಿಯಾಗುವಿರಿ. ನವದಂಪತಿಗಳಿಗೆ ಸಂತಾನಲಾಭವಿದೆ. ದಾಂಪತ್ಯದಲ್ಲಿನ ಅಪಸ್ವರ ಮರೆಯಾಗಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸ್ಥಿರತೆ ಉಂಟಾಗಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.