ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Venus Transit: ಮುಂದಿನ 20 ದಿನ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಎಲ್ಲ ಶುಕ್ರನ ಕೃಪೆ

Venus Transit: ಮುಂದಿನ 20 ದಿನ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಎಲ್ಲ ಶುಕ್ರನ ಕೃಪೆ

Venus Transit: ಮುಂದಿನ 20 ದಿನ ಮೂರು ರಾಶಿಯವರಿಗೆ ಶುಕ್ರದೆಸೆ. ಶುಕ್ರನ ಕೃಪೆಯಿಂದಾಗಿ ಮೊದಲ ಮೂರು ರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ.

ಮುಂದಿನ 20 ದಿನ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಮುಂದಿನ 20 ದಿನ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಶುಕ್ರನು ಸದ್ಯ ಮಿಥುನ ರಾಶಿಯಲ್ಲಿ ಕುಳಿತಿದ್ದಾನೆ. ಜೂನ್ ತಿಂಗಳಲ್ಲಿಯೇ ಶುಕ್ರ ಗ್ರಹ ಬುಧ ರಾಶಿಗೆ ಪ್ರವೇಶಿಸಿದೆ. ಶುಕ್ರನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ಎಂಬುದು ನಮಗೆ ತಿಳಿದಿದೆ. ಶುಕ್ರನ ಮಂಗಳಕರ ಅಂಶವು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಶುಕ್ರನು ಮುಂದಿನ ಜುಲೈ ತಿಂಗಳಲ್ಲಿ ರಾಶಿ ಬದಲಾವಣೆ ಮಾಡಲಿದ್ದಾನೆ. ದೃಕ್ ಪಂಚಾಂಗದ ಪ್ರಕಾರ, ಜುಲೈ 7ರ ಬೆಳಗ್ಗೆ ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಸದ್ಯ ಶುಕ್ರವು ಮಿಥುನ ರಾಶಿಯಲ್ಲಿ ಇರುವುದರಿಂದ, ಕೆಲವೊಂದು ರಾಶಿಚಕ್ರ ಚಿಹ್ನೆಗಳಿಗೆ ಮುಂದಿನ 20 ದಿನಗಳ ಕಾಲ ಅದೃಷ್ಟ ಇದೆ.

ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಮುಂದಿನ 20 ದಿನಗಳ ಕಾಲ ಶುಭವಾಗಲಿದೆ ಎಂದು ಪಂಚಾಂಗ ಹೇಳುತ್ತದೆ. ಶುಕ್ರನ ಕೃಪೆಯಿಂದಾಗಿ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.

ಮೇಷ ರಾಶಿ (Aries)

ಶುಕ್ರನ ಸ್ಥಾನ ಬದಲಾವಣೆಯಿಂದ ಮೇಷ ರಾಶಿಯ ಜನರಿಗೆ ಶುಭವಾಗಲಿದೆ. ಹೀಗಾಗಿ ನಿಮ್ಮ ಕೆಲಸದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ. ಇದರಿಂದ ನಿಮ್ಮ ವ್ಯವಹಾರ ಉತ್ತಮಗೊಳ್ಳುತ್ತದೆ. ಅದು ಲಾಭದಾಯಕವೆಂದು ಸಾಬೀತಾಗುತ್ತದೆ. ಈ ಸಮಯದಲ್ಲಿ ಪ್ರವಾಸಕ್ಕೂ ಹೋಗಬಹುದು. ಆರ್ಥಿಕವಾಗಿ ಲಾಭ ಪಡೆಯಲಿದ್ದೀರಿ. ದಾಂಪತ್ಯ ಜೀವನ ಉತ್ತಮವಾಗಿ ಸಾಗುತ್ತದೆ. ಸಂಗಾತಿಯೊಂದಿಗೆ ಪ್ರಣಯವನ್ನು ನಿರೀಕ್ಷಿಸಬಹುದು.

ವೃಷಭ ರಾಶಿ (Taurus)

ವೃಷಭ ರಾಶಿಯವರಿಗೆ ಕೂಡಾ ಶುಕ್ರ ಸಂಕ್ರಮವು ಪ್ರಯೋಜನಕಾರಿಯಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಸಂತೋಷ ಮತ್ತು ಶಾಂತಿಯಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಸಂಗಾತಿಯೊಂದಿಗೆ ಡೇಟಿಂಗ್‌ಗೆ ಹೋಗಬಹುದು. ಹೊಸ ಆದಾಯದ ಮೂಲದಿಂದ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ನೀವು ಅರಸುತ್ತಿರುವ ಹೊಸ ಉದ್ಯೋಗ ನಿಮಗೆ ಸಿಗುವ ಸಾಧ್ಯತೆಯೂ ಇದೆ.

ಮಿಥುನ ರಾಶಿ (Gemini)

ಶುಕ್ರನ ರಾಶಿಚಕ್ರದ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಮಂಗಳಕರವಾಗುತ್ತದೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಜೀವನದಲ್ಲಿ ಪ್ರಣಯ ಉಳಿಯುತ್ತದೆ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ನೀವು ಹೊಸ ಕೆಲಸ ಕಾರ್ಯಗಳನ್ನು ಪಡೆಯಬಹುದು. ವೃತ್ತಿಪರ ಜೀವನ ಸುಧಾರಣೆ ಕಾಣುತ್ತದೆ. ಆ ಮೂಲಕ ಆರ್ಥಿಕವಾಗಿ ಸ್ಥಿರವಾಗಿರುತ್ತೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.