ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಲಾವಿದರಿಗೆ ವಿಶೇಷ ಪ್ರಶಸ್ತಿ ಗೌರವ ದೊರೆಯಲಿದೆ, ಸಭೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಿರಿ; ಸ್ತ್ರೀ ವಾರ ಭವಿಷ್ಯ

ಕಲಾವಿದರಿಗೆ ವಿಶೇಷ ಪ್ರಶಸ್ತಿ ಗೌರವ ದೊರೆಯಲಿದೆ, ಸಭೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಿರಿ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಜೂನ್‌ 21 ರಿಂದ 27ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಕಲಾವಿದರಿಗೆ ವಿಶೇಷ ಪ್ರಶಸ್ತಿ ಗೌರವ ದೊರೆಯಲಿದೆ, ಸಭೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಿರಿ; ಸ್ತ್ರೀ ವಾರ ಭವಿಷ್ಯ
ಕಲಾವಿದರಿಗೆ ವಿಶೇಷ ಪ್ರಶಸ್ತಿ ಗೌರವ ದೊರೆಯಲಿದೆ, ಸಭೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಿರಿ; ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly Women horoscope in Kannada).

ಮೇಷ

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ಜವಾಬ್ದಾರಿಯಿಂದ ದೂರ ಉಳಿಯುವಿರಿ. ಹಣಕಾಸಿನ ವಿಚಾರದಲ್ಲಿ ಪತಿಯ ಸಹಾಯ ದೊರೆಯುತ್ತದೆ. ಉದ್ಯೋಗದ ವಿಚಾರದಲ್ಲಿ ಗಲಿಬಿಲಿಗೆ ಒಳಗಾಗುವಿರಿ. ಪತಿಯ ಜೊತೆ ಉತ್ತಮ ಬಾಂಧವ್ಯ ಇರುತ್ತದೆ. ಆರೋಗ್ಯದ ಬಗ್ಗೆ ಹಿರಿಯರ ಮಾತನ್ನು ಕೇಳುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ತವರು ಮನೆಯ ಆಸ್ತಿ ವಿವಾದವನ್ನು ಬಗೆಹರಿಸುವಿರಿ. ಸಂತಾನ ಲಾಭವಿದೆ. ಆರೋಗ್ಯ ಕಾಪಾಡಿಕೊಳ್ಳಲು ಸರಳ ವ್ಯಾಯಾಮ ಕ್ರಮವನ್ನು ಅನುಸರಿಸುವಿರಿ. ಎಲ್ಲರನ್ನೂ ಮಾತಿನ ಮೋಡಿಯಿಂದ ಗೆಲ್ಲುವಿರಿ. ಸಹನೆಯಿಂದ ವರ್ತಿಸಿದಲ್ಲಿ ತೊಂದರೆ ದೂರವಾಗುತ್ತವೆ.

ವೃಷಭ

ಕುಟುಂಬದ ಎಲ್ಲರ ಮನವನ್ನು ಅರಿತು ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಕುಟುಂಬದ ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ತೀಮಾನವೇ ಅಂತಿಮವಾಗುತ್ತದೆ. ನಿಮಗಿಷ್ಟವಾದ ಒಡವೆ ವಸ್ತ್ರಗಳನ್ನು ತೆಗೆದುಕೊಳ್ಳುವಿರಿ. ಪತಿಯೊಂದಿಗೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ತಂದೆಯವರು ಆರಂಭಿಸಿದ ಹಣಕಾಸಿನ ಸಂಸ್ಥೆಯ ಒಡೆತನ ಲಭಿಸುತ್ತದೆ. ನಿರೀಕ್ಷಿತ ರೀತಿಯಲ್ಲಿ ಜೀವನ ಸಾಗುವ ಕಾರಣ ಸಂತೋಷದಿಂದ ಇರುವಿರಿ. ಕಷ್ಟಪಟ್ಟು ಕೂಡಿಟ್ಟ ಹಣ ಒಳ್ಳೆಯ ಕಾರ್ಯಕ್ಕೆ ಖರ್ಚಾಗುತ್ತದೆ. ಉದ್ಯೋಗಸ್ಥರು ಹಿರಿಯ ಅಧಿಕಾರಿಗಳ ಪ್ರಶಂಸೆ ಗಳಿಸುತ್ತಾರೆ. ಯಾವುದೇ ವಿಚಾರವಾದರೂ ಕ್ರೀಡಾ ಮನೋಭಾವನೆಯಿಂದ ಸ್ವೀಕಸುವಿರಿ, ಸುಲಭವಾಗಿ ಯಾರಿಗೂ ಹಣ ನೀಡುವುದಿಲ್ಲ.

ಮಿಥುನ

ಬಹಳ ದಿನದ ಕುಟುಂಬದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಿರಿ. ಕೆಲವರು ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಚ್ಚರವಿರಲಿ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳ ಜವಾಬ್ದಾರಿ ನಿಮ್ಮದಾಗಲಿದೆ. ಸಭೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವಿರಿ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವಿರಿ. ಪತಿಯ ಜೊತೆ ಪ್ರೀತಿ ವಿಶ್ವಾಸ ಇರುತ್ತದೆ. ಬೇಸರ ಕಳೆಯಲು ಪತಿಯೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಸೋದರನಿಂದ ಹಣದ ಸಹಾಯ ದೊರೆಯುತ್ತದೆ. ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಬೇಕು.

ಕಟಕ

ಪತಿ ಮತ್ತು ಮಕ್ಕಳ ಜೊತೆ ದೀರ್ಘ ಪ್ರವಾಸ ಮಾಡುವಿರಿ. ಉದ್ಯೋಗಿಗಳಿಗೆ ಸಮಸ್ಯೆ ಎದುರಾಗಲಿವೆ. ಈ ಕಾರಣದಿಂದ ಉದ್ಯೋಗವನ್ನು ಬದಲಿಸುವ ನಿರ್ಧಾರ ಮಾಡುವಿರಿ. ಹಣಕಾಸಿನ ಕೊರತೆ ಇರುತ್ತದೆ. ಸೋದರದಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ಮಾನಸಿಕ ಒತ್ತಡದಿಂದ ಬಳಲುವಿರಿ. ಮಾಡುವ ಕೆಲಸದಲ್ಲಿ ತೊಂದರೆ ಇರುತ್ತದೆ. ಸಾರಿಗೆ ಸಂಚಾರ ಕಲ್ಪಿಸುವ ಸಂಸ್ಥೆಯಿಂದ ಲಾಭವಿರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆತ್ಮೀಯ ಸ್ನೇಹಿತರ ಭೇಟಿ ಮನಸ್ಸಿನ ಸಂತಸವನ್ನು ಹೆಚ್ಚಿಸುತ್ತದೆ. ಅವಶ್ಯಕತೆ ಹೆಚ್ಚಾದಲ್ಲಿ ಕುಟುಂಬದ ಹಿರಿಯರಿಂದ ಹಣಕಾಸಿನ ನೆರವು ದೊರೆಯುತ್ತದೆ.

ಸಿಂಹ

ಜೀವನದಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದ್ದೀರಿ. ಹಣದ ವಿಚಾರದಲ್ಲಿ ಇದ್ದ ವಾದ ವಿವಾದಗಳು ಕಡಿಮೆ ಆಗುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರ ಲಭಿಸುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾಗುವಿರಿ. ಕುಟುಂಬದ ಸದಸ್ಯರಲ್ಲಿ ಒಮ್ಮತ ಇರುವುದಿಲ್ಲ. ಮಕ್ಕಳ ಮೇಲೆ ಅಧಿಕಾರ ಚಲಾಯಿಸುವಿರಿ. ಕೌಟುಂಬಿಕ ಜೀವನದಲ್ಲಿ ಸುಖ ಸಂತೋಷವಿರುತ್ತದೆ. ಪತಿ ಜೊತೆ ವಿದೇಶ ಪ್ರಯಾಣ ಮಾಡುವಿರಿ. ಅನಿರೀಕ್ಷಿತವಾಗಿ ಆತ್ಮೀಯರಿಂದ ಉಡುಗೊರೆ ದೊರೆಯಲಿದೆ. ಸಮಾಜ ಸೇವೆಯಲ್ಲಿ ಆಸಕ್ತಿ ಉಂಟಾಗಲಿದೆ. ವೃತ್ತಿಕ್ಷೇತ್ರದಲ್ಲಿ ಉತ್ತಮ ಅವಕಾಶ ತಾನಾಗಿಯೇ ಒದಗಿ ಬರಲಿದೆ. ಅತಿಯಾದ ಧೈರ್ಯ ಒಳ್ಳೆಯದಲ್ಲ.

ಕನ್ಯಾ

ದೃಢವಾದ ಮನಸ್ಸಿನ ಯಾವುದೇ ಕೆಲಸ ಆರಂಭಿಸುವುದಿಲ್ಲ. ಪತಿಯು ತೆಗೆದುಕೊಳ್ಳುವ ತೀರ್ಮಾನಗಳನ್ನು ಗೌರವಿಸುವಿರಿ. ಪತಿಯ ಸಹಾಯದಿಂದ ಯಾವುದೇ ತೊಂದರೆ ಉಂಟಾಗದು. ಪ್ರತಿಯೊಂದು ವಿಚಾರದಲ್ಲೂ ನಿರೀಕ್ಷಿತ ಬದಲಾವಣೆಗಳನ್ನು ಪಡೆಯುವಿರಿ. ನೀವು ಮಾಡುವ ತಪ್ಪುಗಳನ್ನು ಸುಲಭವಾಗಿ ಒಪ್ಪುವುದಿಲ್ಲ. ಆದರೆ ಬೇರೆಯವರ ತಪ್ಪುಗಳನ್ನೂ ಕ್ಷಮಿಸುವುದಿಲ್ಲ. ನಿರೀಕ್ಷೆಗೆ ಮೀರಿದ ಆದಾಯವಿರುತ್ತದೆ ಸಂಸಾರವನ್ನು ಸರಿಯಾದ ಹಾದಿಯಲ್ಲಿ ಸಾಗಿಸುವಿರಿ. ಹಣಕಾಸಿನ ನಿರ್ವಹಣೆಯಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ ತೊಂದರೆ ಕಾಣದು. ನಿಮಗಿಷ್ಟವೆನಿಸುವ ಉದ್ಯೋಗವನ್ನು ಸುಲಭವಾಗಿ ಸಂಪಾದಿಸಬಲ್ಲಿರಿ. ಅತಿಯಾಗಿ ಯೋಚನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ತುಲಾ

ಕುಟುಂಬದ ಅಭಿವೃದ್ಧಿಗೆ ಸದಾ ಶ್ರಮಿಸುವಿರಿ. ಮಕ್ಕಳ ಶ್ರೇಯೋಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ದಾಂಪತ್ಯದಲ್ಲಿಎದುರಾಗುವ ತೊಂದರೆಯೊಂದನ್ನು ದಿಟ್ಟತನದಿಂದ ಎದುರಿಸುವಿರಿ. ಸದಾ ಚುರುಕುತನದಿಂದ ಕರ್ತವ್ಯ ಪಾಲನೆ ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಪಾಲುದಾರಿಕೆಯಲ್ಲಿ ಗುಡಿ ಕೈಗಾರಿಕೆಯೊಂದನ್ನು ಆರಂಭಿಸುವಿರಿ. ಆರೋಗ್ಯದಲ್ಲಿ ತೊಂದರೆ ಕಾಣದು. ರಾಜಕೀಯದಲ್ಲಿ ಆಸಕ್ತಿ ಇದ್ದಲ್ಲಿ ಅವಕಾಶವೊಂದು ದೊರೆಯಲಿದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡುವಿರಿ. ಹಾಸ್ಯದ ಮನೋಭಾವನೆ ಇರಲಿದೆ. ಹೊಸ ವಾಹನ ಕೊಳ್ಳುವಿರಿ. ದಿನ ನಿತ್ಯದ ಕೆಲಸ ಮಾಡುವ ವೇಳೆ ಎಚ್ಚರಿಕೆ ವಹಿಸಿ.

ವೃಶ್ಚಿಕ

ಕೆಲಸ ಕಾರ್ಯಗಳಲ್ಲಿ ಮಹತ್ತರ ಯಶಸ್ಸು ದೊರೆಯುತ್ತದೆ. ಯಾವುದೋ ಚಿಂತೆ ನಿಮ್ಮನ್ನು ಕಾಡಲಿದೆ. ಆರೋಗ್ಯದ ಬಗ್ಗೆ ಗಮನ ನೀಡಬೇಕಿದೆ. ಹಟವನ್ನು ತೊರೆದು ಆತ್ಮೀಯರ ಮನ ಗೆಲ್ಲುವಿರಿ. ಪತಿ ಮತ್ತು ಮಕ್ಕಳ ಜೊತೆ ಸುದೀರ್ಘ ಪ್ರವಾಸ ಮಾಡುವಿರಿ. ಗೃಹಿಣಿಯರು ಶಾಂತಿ ಸಮಾಧಾನದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಂತಾನ ಲಾಭವಿದೆ. ಪತಿಯ ಜೊತೆ ವಾದ ವಿವಾದದಲ್ಲಿ ತೊಡಗುವಿರಿ. ಪತಿ ಮತ್ತು ಮಕ್ಕಳೊಂದಿಗೆ ಮನರಂಜನಾ ಸ್ಥಳಕ್ಕೆ ತೆರಳುವಿರಿ. ನಿಮ್ಮ ಪ್ರಯತ್ನದ ಫಲವಾಗಿ ಹಣದ ತೊಂದರೆ ಕಡಿಮೆ ಆಗಲಿದೆ.

ಧನಸ್ಸು

ಸಮಯಕ್ಕೆ ತಕ್ಕಂತೆ ಮನಸ್ಸನ್ನು ಬದಲಿಸಿ ತೊಂದರೆಯಿಂದ ಪಾರಾಗುವಿರಿ. ಕಟ್ಟುನಿಟ್ಟಿನ ತೀರ್ಮಾನದಿಂದ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುವಿರಿ. ಒಡವೆ ವಸ್ತ್ರಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಕುಟುಂಬದಲ್ಲಿ ದೇವತಾ ಕಾರ್ಯದ ಜವಾಬ್ದಾರಿ ನಿಮ್ಮದಾಗುತ್ತದೆ. ಭೂವಿವಾದವೊಂದು ನಿಮ್ಮ ಮಾತುಕತೆಯಿಂದ ಪರಿಹಾರಗೊಳ್ಳಲಿದೆ. ಮಕ್ಕಳಿಗೆ ಅವಶ್ಯವೆನಿಸುವ ಅನುಕೂಲತೆಗಳನ್ನು ಕಲ್ಪಿಸುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಕುಟುಂಬದಲ್ಲಿ ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಪತಿಯ ಜೊತೆಯಲ್ಲಿ ಉತ್ತಮ ಅನ್ಯೋನ್ಯತೆ ಬೆಳೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ.

ಮಕರ

ಆತುರದ ನಿರ್ಧಾರದಿಂದ ಕಷ್ಟಕ್ಕೆ ಸಿಲುಕುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಬೇಸರ ಉಂಟಾಗಲಿದೆ. ಸಮಯಕ್ಕೆ ತಕ್ಕ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಕೇಳುಗರಿಗೆ ಬೇಸರ ಮೂಡುವಂತೆ ಮಾತುಕತೆ ನಡೆಸುವಿರಿ. ತಪ್ಪು ಗ್ರಹಿಕೆಯಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗಲಿದೆ. ತವರಿಗೆ ತೆರಳುವ ವಿಚಾರವನ್ನು ಅನಿವಾರ್ಯವಾಗಿ ಮುಂದೂಡುವಿರಿ. ತಂದೆಯವರ ವ್ಯಾಪಾರ ವ್ಯವಹಾರದಲ್ಲಿ ಸಹಾಯ ಮಾಡುವಿರಿ. ಪತಿಯೊಂದಿಗೆ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕಲಾವಿದರಿಗೆ ವಿಶೇಷವಾದ ಪ್ರಶಸ್ತಿ ಸನ್ಮಾನಗಳು ಲಭಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ವಿಶ್ರಾಂತಿಯ ಅಗತ್ಯವಿರುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ.

ಕುಂಭ

ಕುಟುಂಬದ ಕೆಲಸ ಕಾರ್ಯಗಳಲ್ಲಿ ಬೇರೆಯವರ ಸಹಾಯ ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪ್ರಮುಖ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ನಿಮ್ಮ ಪತಿಗೆ ಬೇಸರವಾಗುವ ಸನ್ನಿವೇಶದಲ್ಲಿ ಸಿಲುಕುವಿರಿ. ಕುಟುಂಬದ ಮಂಗಳ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲಿವೆ. ಆಡುವ ಮಾತಿನಲ್ಲಿ ನಿಜಾಂಶ ಇರುವುದು ಮುಖ್ಯ. ಉದ್ಯೋಗಕ್ಕಾಗಿ ಪರಸ್ಥಳಕ್ಕೆ ತೆರಳುವಿರಿ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಉಂಟಾಗಲು ಕಾರಣರಾಗುವಿರಿ ಗೃಹಿಣಿಯರಿಗೆ ಜವಾಬ್ದಾರಿ ಕಡಿಮೆಯಾಗುತ್ತದೆ. ಪತಿಯೊಂದಿಗೆ ಇದ್ದ ಮನಸ್ತಾಪ ಕೊನೆಯಾಗುತ್ತದೆ. ಸೋದರನ ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ಪಾಲುದಾರಿಕೆ ಪಡೆಯುವಿರಿ.

ಮೀನ

ಹೊಂದಾಣಿಕೆ ಬುದ್ಧಿಯಿಂದ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವಿರಿ. ಸಂತಾನ ಲಾಭವಿದೆ. ಮಕ್ಕಳು ಕೌಟುಂಬಿಕ ಜವಾಬ್ದಾರಿಯಿಂದ ದೂರ ಉಳಿಯುತ್ತಾರೆ. ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನಾವಶ್ಯಕ ಖರ್ಚು ವೆಚ್ಚಗಳು ಕಂಡು ಬರುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ದೂರದ ಸಂಬಂಧಿಯೊಬ್ಬರು ವ್ಯಾಪಾರದಲ್ಲಿ ಪಾಲುದಾರರಾಗುತ್ತಾರೆ. ಬುದ್ಧಿವಂತಿಕೆಯಿಂದ ವರ್ತಿಸುವ ಕಾರಣ ಸಮಾಜದಲ್ಲಿ ಅತಿ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ಕ್ರೀಡಾಸಕ್ತರಿಗೆ ಉತ್ತಮ ಅವಕಾಶ ದೊರೆಯಲಿದೆ. ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ ಇರಲಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).