ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಕುಟುಂಬದಲ್ಲಿ ಮುಖ್ಯ ಜವಾಬ್ದಾರಿ ನಿಮ್ಮದಾಗುತ್ತೆ; ಸ್ತ್ರೀ ವಾರ ಭವಿಷ್ಯ

ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಕುಟುಂಬದಲ್ಲಿ ಮುಖ್ಯ ಜವಾಬ್ದಾರಿ ನಿಮ್ಮದಾಗುತ್ತೆ; ಸ್ತ್ರೀ ವಾರ ಭವಿಷ್ಯ

Weekly Women Horoscope: ಸ್ತ್ರೀ ವಾರ ಭವಿಷ್ಯ (ಜೂನ್ 28 ರಿಂದ ಜುಲೈ 4) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್ ಜ್ಯೋತಿಷಿ)

ಜೂನ್ 28 ರಿಂದ ಜುಲೈ 4ರವರೆಗಿನ ಸ್ತ್ರೀ ವಾರ ಭವಿಷ್ಯ ತಿಳಿಯಿರಿ
ಜೂನ್ 28 ರಿಂದ ಜುಲೈ 4ರವರೆಗಿನ ಸ್ತ್ರೀ ವಾರ ಭವಿಷ್ಯ ತಿಳಿಯಿರಿ

ಮೇಷ ರಾಶಿ

ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಿಮ್ಮ ಕೆಲಸಕ್ಕೆ ತಕ್ಕಂತೆ ಯಶಸ್ಸು ದೊರೆಯುತ್ತದೆ. ಯಾರ ಮಾತನ್ನು ಸುಲಭವಾಗಿ ಕೇಳದೆ ಬುದ್ದಿವಂತಿಕೆಯಿಂದ ವರ್ತಿಸುವಿರಿ. ಸಂಗಾತಿಯೊಂದಿಗೆ ಉತ್ತಮ ಅನುಬಂಧ ಮುಂದುವರೆಯುತ್ತದೆ. ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಬಿಡುವು ತೆಗೆದುಕೊಳ್ಳದೆ ದುಡಿಯುವ ಕಾರಣ ತಲೆನೋವಿನ ಸಮಸ್ಯೆ ಎದುರಾಗಬಹುದು. ನಿಮ್ಮ ಉತ್ತಮ ಪ್ರಯತ್ನದಿಂದ ಕುಟುಂಬದ ಹಣಕಾಸಿನ ಕೊರತೆ ಮರೆಯಾಗುತ್ತದೆ. ವಾದ ವಿವಾದಗಳಿಗೆ ಬದಲಾಗಿ ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವಿರಿ. ಉದ್ಯೋಗಸ್ಥರು ನಿರೀಕ್ಷೆಗೂ ಮೀರಿದ ಉತ್ತಮ ಫಲಗಳನ್ನು ಗಳಿಸುತ್ತಾರೆ.

ವೃಷಭ ರಾಶಿ

ಪತಿಯು ಆರಂಭಿಸುವ ಹೊಸ ವ್ಯವಹಾರಗಳಲ್ಲಿ ಸಂಪೂರ್ಣ ಸಹಕಾರ ನೀಡುವಿರಿ. ಹಣಕಾಸಿನ ವಿಚಾರದಲ್ಲಿ ಬಹು ದಿನಗಳು ಅನುಕೂಲವಾಗುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಪತಿಯ ಮನೆ ಮತ್ತು ತವರು ಮನೆ ಜವಾಬ್ದಾರಿಗಳು ನಿಮ್ಮ ಪಾಲಾಗುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಸಣ್ಣಪುಟ್ಟ ತಪ್ಪಿಗೂ ರೋಷಾವೇಶದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ಬೇಸರ ಉಂಟಾಗಿ ಉದ್ಯೋಗ ಬದಲಿಸುವ ತೀರ್ಮಾನಕ್ಕೆ ಬರುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸದಿರಿ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸ್ವಂತ ಆಸೆ ಆಕಾಂಕ್ಷೆಗಳನ್ನು ದೂರ ಮಾಡಿ ಬೇರೆಯವರ ಸಲುವಾಗಿ ಜೀವನ ನಡೆಸುವಿರಿ.

ಮಿಥುನ ರಾಶಿ

ಕುಟುಂಬದಲ್ಲಿ ನಿಮಗೆ ವಿಶೇಷವಾದ ಗೌರವ ಲಭಿಸುತ್ತದೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಕುಟುಂಬದ ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಸಂಗಾತಿಯೊಂದಿಗೆ ಅನಾವಶ್ಯಕವಾದ ವಾದ ವಿವಾದಗಳಿರುತ್ತವೆ. ಸತತ ಪ್ರಯತ್ನದ ನಡುವೆಯೂ ಹಣವನ್ನು ಉಳಿಸಲು ವಿಫಲರಾಗುವಿರಿ. ನಿಮ್ಮ ನೆಮ್ಮದಿ ಕೆಡುವಂತಹ ಪ್ರಸಂಗ ಒಂದು ಕುಟುಂಬದಲ್ಲಿ ನಡೆಯಲಿದೆ. ಸಂಬಂಧಿಕರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಕಿರಿ ಕಿರಿಯ ಅನುಭವವಾಗುತ್ತದೆ. ಮಕ್ಕಳ ಯಶಸ್ಸಿನಿಂದ ಸಂತೋಷಗೊಳ್ಳುವಿರಿ. ಮನರಂಜನ ಕಾರ್ಯಕ್ರಮಗಳಲ್ಲಿ ಎಲ್ಲರ ಗಮನ ಸೆಳೆಯುವಿರಿ. ಪತಿಯೊಂದಿಗೆ ಸಣ್ಣ ಬಂಡವಾಳದಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ.

ಕಟಕ ರಾಶಿ

ತವರು ಮನೆಯಿಂದ ನಿಮ್ಮ ಬಹುದಿನದ ಕನಸೊಂದು ನನಸಾಗಲಿದೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ಅನಾವಶ್ಯಕವಾದ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ನಿಮ್ಮ ಒಪ್ಪಿಗೆಯಂತೆ ಮಾತ್ರ ಕುಟುಂಬದ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅಪಾಯದ ಸನ್ನಿವೇಶದಲ್ಲಿಯೂ ಬುದ್ದಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ನಿಮ್ಮದಲ್ಲದ ತಪ್ಪಿಗೆ ಬೇರೆಯವರಿಂದ ಟೀಕೆಗಳನ್ನು ಕೇಳಬೇಕಾಗುತ್ತದೆ. ಒಳ್ಳೆಯ ಕೆಲಸ ಕಾರ್ಯಗಳಿಗಾಗಿ ಹಣವನ್ನು ವಿನಿಯೋಗಿಸುವಿರಿ. ಉದ್ಯೋಗದ ಆರಂಭದಲ್ಲಿ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಯಶಸ್ಸಿನಿಂದ ನಿಮ್ಮ ಮನಸ್ಸಿಗೆ ಸಂತಸ ಉಂಟಾಗಲಿದೆ. ಅವಿರತ ಕೆಲಸದ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಮರೆಯದಿರಿ.

ಸಿಂಹ ರಾಶಿ

ನಿಮ್ಮ ಸಾಮಾಜಿಕ ಕಳಕಳಿಗೆ ಎಲ್ಲರ ಬೆಂಬಲ ಮತ್ತು ಮೆಚ್ಚುಗೆ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶವೊಂದು ದೊರೆಯುತ್ತದೆ. ಸಾಮಾಜಿಕ ಜೀವನದಲ್ಲಿ ನಾಯಕರಾಗಿ ಕೀರ್ತಿಗಳಿಸುವಿರಿ. ಕುಟುಂಬದ ಕೆಲಸ ಕಾರ್ಯಗಳನ್ನು ಸಹ ಆಸಕ್ತಿಯನ್ನು ಮಾಡುವಿರಿ. ಮಾತಿನಲ್ಲೇ ಎಲ್ಲರನ್ನು ಗೆಲ್ಲಬಲ್ಲಿರಿ. ಅತಿಯಾದ ಬುದ್ಧಿವಂತಿಗೆ ನಿಮ್ಮಲ್ಲಿ ಇರುತ್ತದೆ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ನಿಮ್ಮಲ್ಲಿ ಇರುತ್ತದೆ. ಉದ್ಯೋಗದಲ್ಲಿ ಅನಗತ್ಯವಾದ ಹಿನ್ನೆಡೆ ಉಂಟಾಗುತ್ತದೆ. ಸೋಲನ್ನು ಸಂತೋಷವಾಗಿ ಸ್ವೀಕರಿಸುವ ನೀವು ಎಲ್ಲರಿಗೂ ಮಾದರಿಯಾಗುವಿರಿ.

ಕನ್ಯಾ ರಾಶಿ

ಉದ್ಯೋಗಸ್ಥರಾದಲ್ಲಿ ನಿಮಗೆ ಉನ್ನತ ಅಧಿಕಾರ ದೊರೆಯುತ್ತದೆ. ಜೀವನದಲ್ಲಿ ನಿಮ್ಮ ಇಚ್ಛೆಗೆ ಅನುಗುಣವಾಗಿ ಕೆಲಸಕಾರ್ಯಗಳು ನಡೆಯಲಿವೆ. ಉತ್ತಮ ಆದಾಯವಿರುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆಗೂಡಿ ಧೀರ್ಘಕಾಲದ ಪ್ರಯಾಣಕ್ಕೆ ಸಿದ್ದರಾಗುವಿರಿ. ಹೊಸ ವ್ಯಾಪಾರ ವ್ಯವಹಾರಗಳಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಖರ್ಚು ವೆಚ್ಚಗಳು ಸಹ ಹೆಚ್ಚಾಗಲಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸ್ವಂತ ಜಮೀನನ್ನು ಕೊಳ್ಳುವ ಯೋಜನೆಗೆ ತವರಿನ ಸಹಕಾರವಿರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರುವುದು ಒಳಿತು. ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ.

ತುಲಾ ರಾಶಿ

ಐಷಾರಾಮಿ ಜೀವನವನ್ನು ನಡೆಸುವಿರಿ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಉದ್ಯೋಗದಲ್ಲಿನ ತೊಂದರೆಯನ್ನು ಎದುರಿಸಿ ಗೆಲ್ಲುವಿರಿ. ಕುಟುಂಬದಲ್ಲಿ ಸ್ನೇಹ ಸೌಹಾರ್ದ ನೆಲಸಲು ಕಾರಣರಾಗುವಿರಿ. ಸೋದರನಿಗೆ ಹಣದ ಸಹಾಯ ನೀಡುವಿರಿ. ನಿಮ್ಮ ಸಹಾಯದಿಂದ ಪತಿಯ ವ್ಯಾಪಾರ ವ್ಯವಹಾರದಲ್ಲಿ ವಿಶೇಷವಾದ ಅನುಕೂಲತೆಗಳು ದೊರೆಯುತ್ತವೆ. ಸೋದರಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಅನಾವಶ್ಯಕ ಕಲಹ ಉಂಟಾಗುತ್ತದೆ. ಸೋಲಲು ಒಪ್ಪದೆ ಗೆಲ್ಲುವವರೆಗೂ ಹೋರಾಟ ನಡೆಸುವಿರಿ. ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರ ಸಹಾಯ ಸಹಕಾರ ದೊರೆಯುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ.

ವೃಶ್ಚಿಕ ರಾಶಿ

ಅತಿಯಾದ ಆಸೆ ಇದ್ದರೂ ಕುಟುಂಬಕ್ಕೆ ವಿರೋದವಾಗಿ ನಡೆಯುವುದಿಲ್ಲ. ಹಠದ ಗುಣದ ಕಾರಣ ಉದ್ಯೋಗದಲ್ಲಿ ನೆಮ್ಮದಿ ಇರುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣ ಇರುತ್ತದೆ. ದೊರೆವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳೂವಿರಿ. ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ದೀಘಕಾಲದ ಅನಾರೋಗ್ಯ ಆತಂಕಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವರು. ಆದುನಿಕತೆಗೆ ತಕ್ಕಂತಹ ಜೀವನವನ್ನು ನಡೆಸುವಿರಿ. ಪತಿಯೊಂದಿಗೆ ಸಂತೋಷ ಸಂಭ್ರಮಗಳಿಂದ ವೇಳೆ ಕಳೆಯುವಿರಿ. ಅಶಕ್ತ ಜನರಿಗಾಗಿ ಸಮಯವನ್ನು ಮೀಸಲಿಡುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ ಆಪತ್ಕಾಲಕ್ಕೆ ಹಣವನ್ನು ಉಳಿಸಬಹುದು.

ಧನಸ್ಸು ರಾಶಿ

ಕಷ್ಟ ನಷ್ಟಗಳಿಗೆ ಅಳುಕದೆ ಆತ್ಮವಿಶ್ವಾಸದಿಂದ ಜೀವನವನ್ನು ನಡೆಸುವಿರಿ. ಉದ್ಯೋಗದಲ್ಲಿನ ಕಾರ್ಯದಕ್ಷತೆಗೆ ತಕ್ಕಂತಹ ಪ್ರಂಶಂಸೆ ದೊರೆಯುತ್ತದೆ.ಆಮದು ರಫ್ತಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಸುವಿರಿ. ಪತಿ ಮತ್ತು ಮಕ್ಕಳ ಜೊತೆ ಸಂತಸದಿಂದ ಬಾಳುವಿರಿ. ಸಮಾಜದ ಅಧಿಕಾರಯುತ ಸ್ಥಾನಮಾನ ದೊರೆಯುತ್ತದೆ. ಎರಡಕ್ಕಿಂತಲೂ ಹೆಚ್ಚಿನ ಮೂಲದಿಂದ ಆದಾಯ ಗಳಿಸುವಿರಿ. ಚಾಡಿಮಾತಿನ ಬಗ್ಗೆ ತಿರಸ್ಕಾರ ಇರುತ್ತದೆ. ಸೋಲನ್ನು ಒಪ್ಪದೇ ಛಲದಿಂದ ಗೆಲುವನ್ನು ಸಾಧಿಸುವಿರಿ. ಕೋಪವನ್ನು ಮರೆತು ಎಲ್ಲರೊಂದಿಗೆ ಸ್ನೇಹದಿಂದ ಇರಲು ಪ್ರಯತ್ನಿಸುವಿರಿ. ಮನರಂಜನೆಗಾಗಿ ದೂರದ ಊರಿಗೆ ಪ್ರವಾಸ ಮಾಡುವಿರಿ.

ಮಕರ ರಾಶಿ

ನಿಮ್ಮಲ್ಲಿನ ಸಮರ್ಪಣಾ ಮನೋಭಾವ ಬೇರೆಯವರಲ್ಲಿ ಅಸೂಯೆಯನ್ನು ಮೂಡಿಸುತ್ತದೆ. ಕುಟುಂಬದಲ್ಲಿ ಮುಖ್ಯ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಉನ್ನತ ಗೌರವಕ್ಕೆ ಪಾತ್ರರಾಗುವಿರಿ. ಕುಟುಂಬಕ್ಕೆ ಸಂಬಂಧಿಸಿದ ಗಂಭೀರವಾದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಿರಿ. ಪತಿಯ ಜೊತೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಸಂಸಾರದಲ್ಲಿ ಕ್ರಮೇಣವಾಗಿ ಸುಖ ಶಾಂತಿ ನೆಲೆಸುತ್ತದೆ. ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಸ್ವಂತ ಬಳಕೆಗಾಗಿ ಐಷಾರಾಮಿ ವಾಹನ ಒಂದನ್ನು ಕೊಳ್ಳುವಿರಿ. ಸಾಲದ ವ್ಯವಹಾರದಿಂದ ದೂರ ಉಳಿಯುವಿರಿ.

ಕುಂಭ ರಾಶಿ

ಕುಟುಂಬದಲ್ಲಿ ಎದುರಾಗುವ ವಿರೋಧಗಳ ನಡುವೆಯೂ ಆರ್ಥಿಕ ಪ್ರಗತಿಯನ್ನು ಗಳಿಸುವಿರಿ. ನಿರಾಸೆ ಸಹಿಸದೆ ವೃತ್ತಿ ಜೀವನದಲ್ಲಿ ಹೋರಾಟದ ಮನೋಭಾವನೆ ತೋರುವಿರಿ. ಪತಿಯ ಪಾಲುಗಾರಿಕೆ ವ್ಯಾಪಾದಲ್ಲಿ ಸಹಕಾರ ನೀಡುವಿರಿ. ನೆರೆಹೊರೆಯವರ ಚಾಡಿ ಮಾತನ್ನು ಕೇಳಿದರೆ ದಂಪತಿಯಲ್ಲಿ ಮನಸ್ತಾಪ ಉಂಟಾಗಬಹುದು. ಉದ್ಯೋಗದಲ್ಲಿನ ತೊಂದರೆ ದೂರವಾಗುವುದು. ಧಾರ್ಮಿಕ ಕಾರ್ಯಕ್ರಮವೊಂದನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಸಮರ್ಪಣಾ ಮನೋಭಾವನೆ ಸಾಮಾಜಿಕ ಗೌರವಕ್ಕೆ ಕಾರಣವಾಗಲಿದೆ. ಆರೋಗ್ಯವನ್ನು ಸ್ಥಿರವಾಗಿರಿಸಿಕೊಳ್ಳಲು ಪ್ರಯತ್ನಿಸಿ. ಮಕ್ಕಳನ್ನು ಪ್ರೀತಿ ಮಮತೆಯಿಂದ ನೋಡುವಿರಿ. ಭೂವಿವಾದವೊಂದು ಬಗೆಹರಿಯಲಿದೆ.

ಮೀನ ರಾಶಿ

ಸ್ಥಿರವಾದ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು. ಮೃದುವಾದ ಮಾತಿನಿಂದ ಕುಟುಂಬದಲ್ಲಿ ಪ್ರೀತಿಯ ಸ್ಥಾನಮಾನ ಗಳಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಲಾಭವಿದೆ. ಆರೋಗ್ಯದಲ್ಲಿ ತೊಂದರೆಯಿಂದ ಪಾರಾಗುವಿರಿ. ವಿಶ್ರಾಂತಿ ಇಲ್ಲದ ಕಾರಣ ಮನಸ್ಸಿಗೆ ಬೇಸರ ಉಂಟಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪತಿಯು ಸಹಾಯ ಸಹಕಾರ ಸದಾ ಇರುತ್ತದೆ. ತಾಯಿಯೊಂದಿಗೆ ಹಣಕಾಸಿನ ವಿಚಾರಕ್ಕೆ ಬೇಸರ ಉಂಟಾಗುತ್ತದೆ. ಆದರೂ ಸಂಯಮ ಕಳೆದುಕೊಳ್ಳದೆ ಎಲ್ಲರ ಗಮನ ಸೆಳೆಯುವಿರಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.