ಕಾಳಸರ್ಪ ಯೋಗ ಎಂದರೇನು; ಮಂತ್ರ ಪಠಣ, ಸರಳ ಪೂಜೆ ಮೂಲಕ ಈ ಸರ್ಪ ದೋಷ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಾಳಸರ್ಪ ಯೋಗ ಎಂದರೇನು; ಮಂತ್ರ ಪಠಣ, ಸರಳ ಪೂಜೆ ಮೂಲಕ ಈ ಸರ್ಪ ದೋಷ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಕಾಳಸರ್ಪ ಯೋಗ ಎಂದರೇನು; ಮಂತ್ರ ಪಠಣ, ಸರಳ ಪೂಜೆ ಮೂಲಕ ಈ ಸರ್ಪ ದೋಷ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

Kalasarpayoga: ಪ್ರತಿಯೊಬ್ಬರ ಜಾತಕದಲ್ಲೂ ಏನಾದರೂ ಸಮಸ್ಯೆ ಇದ್ದೇ ಇರುತ್ತದೆ. ಅದರಲ್ಲಿ ಹೆಚ್ಚಿನ ಜನರು ಭಯ ಪಡುವುದು ಕಾಳಸರ್ಪ ಯೋಗದ ಬಗ್ಗೆ. ಇದನ್ನು ಕಾಳಸರ್ಪ ದೋಷ ಎಂದೂ ಕರೆಯುತ್ತಾರೆ. ಕಾಳಸರ್ಪ ಯೋಗ ಎಂದರೇನು; ಮಂತ್ರ ಪಠಣ, ಸರಳ ಪೂಜೆ ಮೂಲಕ ಈ ಸರ್ಪ ದೋಷ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಕಾಳಸರ್ಪ ಯೋಗ ಎಂದರೇನು; ಮಂತ್ರ ಪಠಣ, ಸರಳ ಪೂಜೆ ಮೂಲಕ ಈ ಸರ್ಪ ದೋಷ ಹೋಗಲಾಡಿಸುವುದು ಹೇಗೆ?
ಕಾಳಸರ್ಪ ಯೋಗ ಎಂದರೇನು; ಮಂತ್ರ ಪಠಣ, ಸರಳ ಪೂಜೆ ಮೂಲಕ ಈ ಸರ್ಪ ದೋಷ ಹೋಗಲಾಡಿಸುವುದು ಹೇಗೆ? (PC: Canva)

ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೂ ಜನರು ಮೊದಲು ಭಯಪಡುವುದು ಸರ್ಪ ದೋಷದ ಬಗ್ಗೆ. ಅವುಗಳಲ್ಲಿ ಸರ್ಪ ದೋಷ, ಸರ್ಪ ಶಾಪ ಮತ್ತು ಕಾಳಸರ್ಪ ದೋಷ ಬಹುಮುಖ್ಯವಾದವು. ಯಾವುದೇ ಕುಂಡಲಿಯಲ್ಲಿ ಈ ಮೇಲಿನ ಅಂಶಗಳನ್ನು ಕಂಡರೆ ಭಯ ಪಡುವ ಅಗತ್ಯವಿಲ್ಲ. ಪ್ರತಿಯೊಂದು ದೋಷಗಳಿಗೂ ತನ್ನದೇ ಆದ ಪರಿಹಾರಗಳು ಇರುತ್ತವೆ. ಇದರಲ್ಲಿ ಮುಖ್ಯವಾಗಿ ವಿಶಾಖ ನಕ್ಷತ್ರದ ಪೂಜೆ.

ಬ್ರಹ್ಮಚಾರಿ ಪೂಜೆ, ಷಷ್ಠಿ ಪೂಜೆ, ಆಶ್ಲೇಷ ಬಲಿ ಪೂಜೆ, ಸರ್ಪ ಸೂಕ್ತ ಹೋಮ, ಪುರುಷ ಸೂಕ್ತ ಹೋಮ, ನಾಗ ಪ್ರತಿಷ್ಠೆ ಇನ್ನೂ ಮುಂತಾದ ಪೂಜೆಗಳನ್ನು ಮಾಡುವ ಮೂಲಕ ದೋಷದಿಂದ ಹೊರಬರಬಹುದು. ಹಣವಿದ್ದವರು ಯಾವುದೇ ಪರಿಹಾರ ಮಾಡಬಲ್ಲರು. ಆದರೆ ಜನ ಸಾಮಾನ್ಯರು ಮಂತ್ರಗಳನ್ನು ಪಠಿಸುವುದು, ಕೆಲವು ಕಥೆಗಳನ್ನು ಓದುವುದು ಮತ್ತು ಇನ್ನಿತರ ಸರಳವಾದ ದಾನ ಧರ್ಮಗಳಿಂದ ಪರಿಹಾರವನ್ನು ಪಡೆಯಬಹುದು.

ಲಗ್ನದ ಸಮೇತ ಎಲ್ಲಾ ನವಗ್ರಹಗಳು ರಾಹು ಮತ್ತು ಕೇತುಗಳ ನಡುವೆ ಇದ್ದಲ್ಲಿ ಅದನ್ನು ಕಾಳ ಸರ್ಪ ದೋಷ ಎಂದು ಕರೆಯುತ್ತೇವೆ. ಕೇವಲ ಲಗ್ನಕುಂಡಲಿಯಲ್ಲಿ ಕಾಳ ಸರ್ಪ ದೋಷವಿದ್ದು ನವಾಂಶ ಕುಂಡಲಿಯಲ್ಲಿ ಕಾಳ ಸರ್ಪ ದೋಷ ಇಲ್ಲದೆ ಹೋದಲ್ಲಿ ತಾಪತ್ರಯಗಳು ಕಡಿಮೆ ಮಟ್ಟದಲ್ಲಿ ಇರುತ್ತದೆ.

ಅಪೂರ್ಣ ಕಾಳಸರ್ಪ ಯೋಗ

ಆದರೆ ಬಹುತೇಕ ಜಾತಕಗಳಲ್ಲಿ ಕಾಳ ಸರ್ಪದೋಷ ಇರುವುದೇ ಇಲ್ಲ. ಅದರಲ್ಲಿ ಕೆಲವು ಅಂಶಗಳು ಇಲ್ಲಿವೆ. ಇದನ್ನು ಅಪೂರ್ಣ ಕಾಳ ಸರ್ಪಯೋಗ ಎಂದು ಕರೆಯಲಾಗುತ್ತದೆ. ಇಂದಿಗೂ ಇದನ್ನು ದೋಷ ಎನ್ನಬೇಕೋ ಅಥವ ಯೋಗ ಎನ್ನಬೇಕೋ ಎಂಬ ಚಂಚಲತೆ ಎಲ್ಲರಲ್ಲಿಯೂ ಇದೆ. ಕಾರಣವೆಂದರೆ ಕಾಳ ಸರ್ಪದೋಷ ಇರುವ ಅನೇಕರು ಸಮಾಜದಲ್ಲಿ ಅತ್ಯುನ್ನತ ಪದವಿಗೆ ಏರಿದ್ದಾರೆ. ರಾಹು ಮತ್ತು ಕೇತುವನ್ನು ಹೊರತು ಪಡಿಸಿದರೆ ಒಟ್ಟು 7 ಗ್ರಹಗಳಿವೆ. ಈ ಏಳು ಗ್ರಹಗಳಲ್ಲಿ ಯಾವುದೇ ಗ್ರಹವು ರಾಹು ಕೇತುವಿನ ಮಧ್ಯೆ ಇರದೇ ಹೊರಗಿದ್ದಲ್ಲಿ, ಸರಳ ಪರಿಹಾರಗಳಿಂದ ಎದುರಾಗಬಹುದಾದ ತೊಂದರೆಗಳಿಂದ ಪಾರಾಗಬಹುದು.

  • ರಾಹು ಕೇತುಗಳಿಂದ ದೂರ ಜನ್ಮಲಗ್ನ ಇದ್ದಲ್ಲಿ, ಆ ಲಗ್ನಇರುವ ನಕ್ಷತ್ರದ ಅಧಿಪತಿಯ ಪೂಜೆಯಿಂದ, ಎದುರಾಗಬಹುದಾದ ತೊಂದರೆಗಳು ದೂರವಾಗುತ್ತವೆ. ಅದರಲ್ಲಿಯೂ ನಕ್ಷತ್ರಗಳ ಪಾದಗಳನ್ನು ಪರಿಗಣಿಸುವುದು ಒಳ್ಳೆಯದು.
  • ರಾಹು ಕೇತುಗಳಿಂದ ರವಿಯು ಹೊರಗಿದ್ದಲ್ಲಿ ಪ್ರತಿ ಭಾನುವಾರ ಶ್ರೀ ಸೂರ್ಯರ ಪೂಜೆ ಮತ್ತು ಸೂರ್ಯನ ನಕ್ಷತ್ರಗಳಾದ ಕೃತ್ತಿಕಾ, ಉತ್ತರ ಮತ್ತು ಉತ್ತರಾಷಾಢ ನಕ್ಷತ್ರಗಳಿರುವಾಗ ಈ ಸೂರ್ಯನ ಪೂಜೆಯನ್ನು ಮಾಡಬೇಕು. ಇದರಿಂದ ಎದುರಾಗುವ ತೊಂದರೆಯಿಂದ ಪಾರಾಗಬಹುದು.
  • ರಾಹು ಕೇತುವಿನಿಂದ ಚಂದ್ರನು ಹೊರಗಿದ್ದಲ್ಲಿ ಶ್ರೀ ದುರ್ಗಾ ಪೂಜೆಯನ್ನು ಮಾಡಬೇಕು. ಚಂದ್ರನ ನಕ್ಷತ್ರಗಳಾದ ರೋಹಿಣಿ, ಹಸ್ತ ಮತ್ತು ಶ್ರವಣ ನಕ್ಷತ್ರಗಳು ಇರುವ ದಿನಗಳಂದು ಕುಲದೇವತೆಗೆ ಹಾಲು ಮತ್ತು ಮೊಸರನ್ನು ಅಭಿಷೇಕ ಮಾಡಿದರೆ ಆಗಬಹುದಾದ ತೊಂದರೆಗಳು ಕಡಿಮೆಯಾಗುತ್ತದೆ.
  • ರಾಹು ಕೇತುವಿನಿಂದ ಕುಜನು ಹೊರಗಿದ್ದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಪೂಜೆಯನ್ನು ಮಾಡಬೇಕು.ಕುಜನ ನಕ್ಷತ್ರಗಳಾದ ಮೃಗಶಿರ, ಚಿತ್ತ ಮತ್ತು ಧನಿಷ್ಠ ನಕ್ಷತ್ರಗಳಿದ್ದಾಗ ದೇವಾಲಯಕ್ಕೆ ವಿಭೂತಿಯನ್ನು ನೀಡುವ ಮೂಲಕಎದುರಾಗುವ ತೊಂದರೆಗಳಿಂದ ಪರಾಗಬಹುದು.
  • ರಾಹು ಕೇತುವಿನಿಂದ ಬುಧನು ಹೊರಗಿದ್ದಲ್ಲಿ ಶ್ರೀ ವಿಷ್ಣುವಿನ ಪೂಜೆ ಮಾಡುವ ಮೂಲಕ ಎದುರಾಗಬಹುದಾದ ತೊಂದರೆಯಿಂದ ಪಾರಾಗಬಹುದು. ಆಶ್ಲೇಷ, ಜೇಷ್ಠ ಮತ್ತು ರೇವತಿ ನಕ್ಷತ್ರಗಳು ಇರುವ ದಿನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡಿ ಎದುರಾಗುವ ತೊಂದರೆಗಳಿಂದ ಪಾರಾಗಬಹುದು.

ಇದನ್ನೂ ಓದಿ: ನಕಾರಾತ್ಮಕ ಶಕ್ತಿ ನಾಶ ಮಾಡಿ ಸದಾ ಧನಾತ್ಮಕ ಶಕ್ತಿಯನ್ನು ತರಲಿದೆ ಈ ತ್ರಿಶಕ್ತಿ ಯಂತ್ರ; ಮನೆಯ ಯಾವ ದಿಕ್ಕಿನಲ್ಲಿ ಇದನ್ನು ಇರಿಸಬೇಕು?

ಗುರುವಿನ ಪೂಜೆಯಿಂದ ಮುಕ್ತಿ

  • ರಾಹು ಮತ್ತು ಕೇತುವಿನಿಂದ ಗುರು ಹೊರಗಿದ್ದಲ್ಲಿ ಗುರುವಾರ ಅಥವಾ ಮಂಗಳವಾರ ಶ್ರೀ ಗುರುವಿನ ಪೂಜೆಯನ್ನು ಮಾಡುವ ಮೂಲಕ ತೊಂದರೆಯಿಂದ ಪಾರಾಗಬಹುದು. ಗುರುವಿನ ನಕ್ಷತ್ರಗಳಾದ ಪುನರ್ವಸು, ವಿಶಾಖ ಮತ್ತು ಪೂರ್ವಭಾದ್ರ ನಕ್ಷತ್ರಗಳು ಇರುವ ದಿನ ಗುರುಗಳಿಗೆ ಪೂಜೆ ಮಾಡಿಸುವುದು ಮತ್ತು ವಯೋವೃದ್ಧರಿಗೆ ಕಡಲೆಬೇಳೆಯಿಂದ ಮಾಡಿದ ಸಿಹಿ ತಿಂಡಿಯನ್ನು ನೀಡುವ ಮೂಲಕ ಎದುರಾಗುವ ತೊಂದರೆಯಿಂದ ಪಾರಾಗಬಹುದು.
  • ರಾಹು ಕೇತುವಿನಿಂದ ಶುಕ್ರನು ಹೊರಗಿದ್ದಲ್ಲಿ ಶುಕ್ರವಾರದಂದು ಅನ್ನಪೂರ್ಣೇಶ್ವರಿಯ ದೇವಾಲಯದಲ್ಲಿ ಪೂಜೆಯನ್ನು ಮಾಡಿಸಬೇಕು. ಮನೆಯಲ್ಲಿ ಸಂಜೆ ಸೂರ್ಯ ಮುಳುಗುವ ಮುನ್ನಲಕ್ಷ್ಮಿಯ ಪೂಜೆಯನ್ನು ಮಾಡಿದಲ್ಲಿ ತೊಂದರೆ ತಾಪತ್ರಗಳಿಂದ ದೂರ ಉಳಿಯಬಹುದು. ಮುಖ್ಯವಾಗಿ ಇವರು ಶುಕ್ರನ ನಕ್ಷತ್ರಗಳಾದ ಭರಣಿ, ಪುಬ್ಬಾ ಮತ್ತು ಪೂರ್ವಾಷಾಢ ನಕ್ಷತ್ರಗಳಿರುವ ದಿನ ಕುಟುಂಬದಲ್ಲಿರುವ ಹೆಣ್ಣು ಮಕ್ಕಳು ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು.
  • ರಾಹು ಕೇತುವಿನಿಂದ ಶನಿಯು ಹೊರಗಿದ್ದಲ್ಲಿ ಶ್ರೀ ಆಂಜನೇಯನ ಪೂಜೆಯಿಂದ ಅಥವಾ ಶ್ರೀ ಶಿವ ಪಾರ್ವತಿಯ ಪೂಜೆ ಮೂಲಕ, ಎದುರಾಗುವ ತೊಂದರೆಗಳಿಂದ ಹೊರ ಬರಬಹುದು. ಶನಿಯ ನಕ್ಷತ್ರಗಳಾದ ಪುಷ್ಯ ಅನುರಾಧ ಮತ್ತು ಉತ್ತರಭಾದ್ರದ ನಕ್ಷತ್ರವಿರುವ ದಿನ ನಿಮ್ಮ ಅಧಿಕಾರದಡಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಅವರು ಇಷ್ಟ ಪಟ್ಟ ಅನುಕೂಲತೆಗಳನ್ನು ಕಲ್ಪಿಸಿಕೊಡಿ. ಇದರಿಂದ ಎದುರಾಗುವ ತೊಂದರೆಗಳಿಂದ ಪಾರಾಗಬಹುದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.