ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Career Horoscope: ಪತ್ರಿಕೋದ್ಯಮ, ಸಿನಿಮಾ, ರಾಜಕೀಯ; ನಿಮ್ಮ ರಾಶಿ ಪ್ರಕಾರ ಯಾವ ವೃತ್ತಿ ಆರಿಸಿಕೊಂಡರೆ ಒಳ್ಳೆಯದು?

Career Horoscope: ಪತ್ರಿಕೋದ್ಯಮ, ಸಿನಿಮಾ, ರಾಜಕೀಯ; ನಿಮ್ಮ ರಾಶಿ ಪ್ರಕಾರ ಯಾವ ವೃತ್ತಿ ಆರಿಸಿಕೊಂಡರೆ ಒಳ್ಳೆಯದು?

ಜೀವನದಲ್ಲಿ ನಾಲ್ಕು ಜನ ನಮ್ಮನ್ನು ಗುರುತಿಸುವಂತೆ ಬಾಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕೆಲವೊಮ್ಮೆ ಗ್ರಹಗತಿಗಳು ಇದಕ್ಕೆ ಅಡ್ಡಿಯಾಗುತ್ತವೆ. ಆದರೆ ಅದಕ್ಕೂ ಮುನ್ನ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಯೋಚಿಸಬೇಕು. ಪತ್ರಿಕೋದ್ಯಮ, ಸಿನಿಮಾ, ರಾಜಕೀಯ; ನಿಮ್ಮ ರಾಶಿ ಪ್ರಕಾರ ಯಾವ ವೃತ್ತಿ ಆರಿಸಿಕೊಂಡರೆ ಒಳ್ಳೆಯದು? ಇದನ್ನೂ ಓದಿ.

ಪತ್ರಿಕೋದ್ಯಮ, ಸಿನಿಮಾ, ರಾಜಕೀಯ; ನಿಮ್ಮ ರಾಶಿ ಪ್ರಕಾರ ಯಾವ ವೃತ್ತಿ ಆರಿಸಿಕೊಂಡರೆ ಒಳ್ಳೆಯದು?
ಪತ್ರಿಕೋದ್ಯಮ, ಸಿನಿಮಾ, ರಾಜಕೀಯ; ನಿಮ್ಮ ರಾಶಿ ಪ್ರಕಾರ ಯಾವ ವೃತ್ತಿ ಆರಿಸಿಕೊಂಡರೆ ಒಳ್ಳೆಯದು? (PC: Pixabay)

ಯಾವುದೇ ವ್ಯಕ್ತಿ ಹುಟ್ಟಿದ ದಿನಾಂಕ, ಸಮಯ, ಊರಿನ ಆಧಾರದ ಮೇಲೆ ಅವರ ಜಾತಕವನ್ನು ಬರೆಯಲಾಗುತ್ತದೆ. ಹಾಗೇ ಆ ಜನ್ಮ ಕುಂಡಲಿ ಆಧಾರದ ಮೇಲೆ ಯಾವ ರಾಶಿಯವರ ಭವಿಷ್ಯ ನಿರ್ಧರಿಸಲಾಗುತ್ತದೆ. ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ರಾಶಿ ಭವಿಷ್ಯದ ಆಧಾರದ ಮೇಲೆ ಯಾವ ರಾಶಿಯವರು ಯಾವ ರೀತಿಯ ವೃತ್ತಿ ಕೈಗೊಂಡರೆ ಅವರು ಯಶಸ್ಸು ಗಳಿಸುತ್ತಾರೆ ಎನ್ನುವುದನ್ನು ಕೂಡಾ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಯಾವ ರಾಶಿಯವರು ಯಾವ ವೃತ್ತಿಯನ್ನು ಆರಿಸಿಕೊಂಡರೆ ಅವರ ವೃತ್ತಿ ಜೀವನ ಚೆನ್ನಾಗಿರುತ್ತದೆ ನೋಡೋಣ.

ಮೇಷ ರಾಶಿ

ಮೇಷ ರಾಶಿಯ ಜನರು ಧೈರ್ಯಶಾಲಿಗಳು. ಇವರು ಸಾಹಸಪ್ರಿಯರು. ಈ ರಾಶಿಯ ಜನರು ಸೇಲ್ಸ್‌, ಮಾರ್ಕೆಟಿಂಗ್ ಅಥವಾ ಮೆಚ್ಚಿನ ಕ್ರೀಡೆಗಳನ್ನು ಆಯ್ಕೆ ಮಾಡಿಕೊಂಡರೆ ಅವರ ಜೀವನ ಉಜ್ವಲವಾಗಿರುತ್ತದೆ.

ವೃಷಭ ರಾಶಿ

ವೃಷಭ ರಾಶಿಯ ಜನರು ಬುದ್ಧಿವಂತರು. ಅವರು ಹಣವನ್ನು ಬುದ್ಧಿವಂತಿಕೆಯಿಂದ ಬಳಸುವುದರಲ್ಲಿ ನಿಪುಣರು. ಆದ್ದರಿಂದ ಈ ರಾಶಿಯ ಜನರು ಬ್ಯಾಂಕಿಂಗ್, ಹಣಕಾಸು ಅಥವಾ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡರೆ ಇವರಿಗೆ ಒಳ್ಳೆ ಭವಿಷ್ಯವಿದೆ.

ಮಿಥುನ ರಾಶಿ

ಮಿಥುನ ರಾಶಿಯವರು ಬಲವಾದ ಸಂವಹನ ಕೌಶಲ್ಯವನ್ನು ಹೊಂದಿದ್ದಾರೆ. ಈ ರಾಶಿಗೆ ಸೇರಿದ ಜನರು ಪತ್ರಿಕೋದ್ಯಮ, ಬರವಣಿಗೆ, ನಟನೆ ಅಥವಾ ಸಾರ್ವಜನಿಕ ಸಂಪರ್ಕಗಳಂತಹ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಆರಿಸಿಕೊಳ್ಳಬಹುದು.

ಕರ್ಕಾಟಕ ರಾಶಿ

ಈ ರಾಶಿಯವರು ಹೆಚ್ಚು ಭಾವನಾತ್ಮಕ ಮತ್ತು ಸಹಾನುಭೂತಿಯುಳ್ಳವರು. ಇವರು ನರ್ಸಿಂಗ್‌, ಸಮಾಜಸೇವೆ, ವೈದ್ಯಕೀಯ, ಸಮಾಲೋಚನೆ ಇತ್ಯಾದಿಗಳಿಗೆ ಸಂಬಂಧಿಸಿದ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡರೆ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ.

ಸಿಂಹ ರಾಶಿ

ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ನಿಷ್ಠಾವಂತರು. ನಾಯಕತ್ವ ವಹಿಸಿಕೊಳ್ಳುವಲ್ಲಿ ಸದಾ ಮುಂದಿರುತ್ತಾರೆ. ಇವರು ಮನರಂಜನೆ, ಇವೆಂಟ್ ಮ್ಯಾನೇಜ್‌ಮೆಂಟ್, ಫ್ಯಾಷನ್, ಡಿಸೈನಿಂಗ್‌ನಲ್ಲಿ ವೃತ್ತಿ ಜೀವನ ಆರಂಭಿಸಿದರೆ ಕೀರ್ತಿ ಪತಾಕೆ ಹಾರಿಸಬಹುದು.

ಕನ್ಯಾ ರಾಶಿ

ಬುಧ ಅಧಿಪತ್ಯವಿರುವ ಕನ್ಯಾ ರಾಶಿಯವರು ಬಹಳ ವಿಶ್ಲೇಷಣಾತ್ಮಕರು. ಈ ರಾಶಿಗೆ ಸೇರಿದವರು ಬರವಣಿಗೆ, ವಿಶ್ಲೇಷಣೆ, ಲೆಕ್ಕಪತ್ರ ನಿರ್ವಹಣೆ, ಎಂಜಿನಿಯರಿಂಗ್, ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಿಸಿಕೊಂಡರೆ ಒಳ್ಳೆಯದು.

ತುಲಾ ರಾಶಿ

ತುಲಾ ರಾಶಿಯ ಜನರು ರಾಜತಾಂತ್ರಿಕ ಕೌಶಲ್ಯವನ್ನು ಹೊಂದಿದ್ದಾರೆ. ಈ ಚಿಹ್ನೆಗೆ ಸೇರಿದ ಜನರು ಕಾನೂನು, ಇವೆಂಟ್‌ ಮ್ಯಾನೇಜ್‌ಮೆಂಟ್‌ ಇತ್ಯಾದಿ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಸ್ಥಾಪಿಸಿದರೆ ಪ್ರವರ್ಧಮಾನಕ್ಕೆ ಬರುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಆತ್ಮವಿಶ್ವಾಸ ಮತ್ತು ಸಾಹಸಮಯರು. ಪತ್ರಿಕೋದ್ಯಮ, ಪತ್ತೇದಾರಿ ಕೆಲಸ, ಸಂಶೋಧನೆ, ಮನಃಶಾಸ್ತ್ರಜ್ಞರು, ಚಿಕಿತ್ಸಕರು ಇತ್ಯಾದಿ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡರೆ ಕಡಿಮೆ ಅವಧಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ.

ಧನು ರಾಶಿ

ಧನು ರಾಶಿಯವರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ಈ ರಾಶಿಗೆ ಸೇರಿದವರು ಪ್ರವಾಸ ಬರವಣಿಗೆ, ಸಂಶೋಧನೆ, ಬೋಧನೆ, ತತ್ತ್ವಶಾಸ್ತ್ರ, ಕಾನೂನು, ಕನ್ಸಲ್ಟೆನ್ಸಿಯಲ್ಲಿ ಕೆರಿಯರ್‌ ಶುರು ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಮಕರ ರಾಶಿ

ಮಕರ ರಾಶಿಯವರು ಯಾವುದೇ ಕೆಲಸವನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಾಡುವವರು. ಸಿಇಒ, ವ್ಯವಸ್ಥಾಪಕರು, ಕಾರ್ಯ ನಿರ್ವಾಹಕರು, ಬ್ಯಾಂಕರ್‌ಗಳು, ವಾಸ್ತುಶಿಲ್ಪಿಗಳು, ರಾಜಕಾರಣಿಗಳು, ಇಂಜಿನಿಯರ್‌ಗಳಾದಲ್ಲಿ ಉತ್ತಮ ಭವಿಷ್ಯವಿದೆ.

ಕುಂಭ ರಾಶಿ

ಕುಂಭ ರಾಶಿಯವರು ಸದಾ ಆಧುನಿಕ ತಂತ್ರಜ್ಞಾನದ ಬಗ್ಗೆ ಯೋಚಿಸುವವರು. ಈ ರಾಶಿಗೆ ಸೇರಿದ ಜನರು ತಂತ್ರಜ್ಞಾನ, ಸಾಮಾಜಿಕ ಚಟುವಟಿಕೆ, ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಾರೆ.

ಮೀನ ರಾಶಿ

ಮೀನರ ರಾಶಿಯವರು ಆಧ್ಯಾತ್ಮಿಕತೆ ಹಾಗೂ ಕಲೆಯಲ್ಲಿ ಹೆಚ್ಚು ಆಸಕ್ತಿ ಉಳ್ಳವರು. ಈ ರಾಶಿಗೆ ಸೇರಿದವರು ಕಲಾವಿದರು, ಸಂಗೀತಗಾರರು, ಬರಹಗಾರರು, ವೈದ್ಯರು, ಮನಶಾಸ್ತ್ರಜ್ಞರು, ಪಶು ವೈದ್ಯಕೀಯ ಮುಂತಾದ ವೃತ್ತಿಗಳನ್ನು ಆರಿಸಿಕೊಂಡರೆ ಉತ್ತಮ ಪ್ರಗತಿಯನ್ನು ಕಾಣಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)