ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾಹನ ಖರೀದಿಸಲು ಯೋಚಿಸಿದ್ದೀರಾ? ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಅದೃಷ್ಟ ತರುತ್ತದೆ? ಇಲ್ಲಿದೆ ಮಾಹಿತಿ

ವಾಹನ ಖರೀದಿಸಲು ಯೋಚಿಸಿದ್ದೀರಾ? ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಅದೃಷ್ಟ ತರುತ್ತದೆ? ಇಲ್ಲಿದೆ ಮಾಹಿತಿ

ಯಾವುದೇ ಹೊಸ ಕೆಲಸ ಮಾಡುವುದಿದ್ದರೂ ಶುಭ ಮುಹೂರ್ತ ಕೇಳುತ್ತೇವೆ. ವಾಹನ ಖರೀದಿಸುವುದಿದ್ದರೆ ನಮ್ಮ ಅದೃಷ್ಟದ ಬಣ್ಣ ಯಾವುದು ಎಂಬುದನ್ನು ತಿಳಿದುಕೊಳ್ಳುತ್ತೇವೆ. ನಮ್ಮ ದೈನದಿಂದ ಜೀವನದಲ್ಲಿ ಇವೆಲ್ಲವೂ ಬಹಳ ಮಹತ್ವದ ಸ್ಥಾನ ಪಡೆದಿವೆ. ನಿಮ್ಮ ರಾಶಿಯ ಪ್ರಕಾರ ಯಾವ ಬಣ್ಣದ ವಾಹನ ಖರೀದಿಸುವುದು ಉತ್ತಮ? ಮಾಹಿತಿ ಇಲ್ಲಿದೆ. (ಬರಹ: ಅರ್ಚನಾ ವಿ. ಭಟ್‌)

ವಾಹನ ಖರೀದಿಸಲು ಯೋಚಿಸಿದ್ದೀರಾ? ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಅದೃಷ್ಟ ತರುತ್ತದೆ? ಇಲ್ಲಿದೆ ಮಾಹಿತಿ
ವಾಹನ ಖರೀದಿಸಲು ಯೋಚಿಸಿದ್ದೀರಾ? ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಅದೃಷ್ಟ ತರುತ್ತದೆ? ಇಲ್ಲಿದೆ ಮಾಹಿತಿ

ನಾವೆಲ್ಲರೂ ಯಾವುದಾದರೂ ಒಂದು ವಾಹನ ಖರೀದಿಸಬೇಕೆಂದರೆ ಹಲವಾರು ಅಂಶಗಳನ್ನು ಪರಿಶೀಲಿಸುತ್ತೇವೆ. ಸಂಪೂರ್ಣ ಮಾಹಿತಿ ಕಲೆಹಾಕುತ್ತೇವೆ. ವಾಹನದ ಬಾಳಿಕೆ, ವೈಶಿಷ್ಟ್ಯ, ತಯಾರಾದ ದಿನಾಂಕ ಹೀಗೆ ಎಲ್ಲವನ್ನು ಚರ್ಚಿಸುತ್ತೇವೆ. ಜೊತೆಗೆ ಖರೀದಿಸಲು ಉತ್ತಮ ದಿನ, ಸಮಯವನ್ನು ನೋಡುತ್ತೇವೆ. ಆದರೆ ಜ್ಯೋತಿಷ್ಯ ಶಾಸ್ತ್ರ ಉತ್ತಮ ದಿನದ ಜೊತೆಗೆ ನಿಮ್ಮ ರಾಶಿಗೆ ಅನುಗುಣವಾಗಿ ವಾಹನದ ಬಣ್ಣವೂ ಇದ್ದರೆ ಅದು ನಿಮಗೆ ಅದೃಷ್ಟವನ್ನು ತರುತ್ತದೆ. ಅಷ್ಟೇ ಅಲ್ಲದೇ ಅದು ಸವಾರರಿಗೆ ಸುರಕ್ಷತೆ, ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ನೀಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ನಿಮ್ಮ ರಾಶಿಯ ಆಧಾರದ ಮೇಲೆ ಯಾವ ಬಣ್ಣದ ವಾಹನ ಖರೀದಿಸಿದರೆ ಒಳ್ಳೆಯದು?

ಮೇಷ ರಾಶಿ

ಈ ರಾಶಿಯವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಅವರು ತಾವು ಮಾಡುವ ಎಲ್ಲ ಕೆಲಸದಲ್ಲೂ ಧೈರ್ಯ, ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ನೀಲಿ ಬಣ್ಣವು ಅವರ ಅದೃಷ್ಟದ ಬಣ್ಣವಾಗಿದೆ. ಅದಲ್ಲದೇ ಕೆಂಪು, ಕೇಸರಿ ಮತ್ತು ಹಳದಿ ಬಣ್ಣಗಳೂ ನಿಮಗೆ ಅದೃಷ್ಟವನ್ನು ನೀಡುತ್ತದೆ.

ವೃಷಭ ರಾಶಿ

ಈ ರಾಶಿಯಲ್ಲಿ ಹುಟ್ಟಿದವರು ಮೂಲಭೂತವಾಗಿಯೇ ನಂಬಿಕೆಗೆ ಅರ್ಹರು. ವೃಷಭ ರಾಶಿಯು ಚಂದ್ರನೊಂದಿಗೆ ಸಂಬಂಧವನ್ನು ಹೊಂದಿದೆ. ಅದು ವಾಸ್ತವದಲ್ಲಿ ತಾಳ್ಮೆ ಅವರ ಗುಣವಾಗಿದೆ. ಈ ರಾಶಿಯ ಜನರಿಗೆ ಬಿಳಿ ಬಣ್ಣವು ಅದೃಷ್ಟನ್ನು ತಂದುಕೊಡುತ್ತದೆ. ಹಸಿರು ಬಣ್ಣವನ್ನೂ ಆಯ್ದುಕೊಳ್ಳಬಹುದು. ಕಪ್ಪು ಬಣ್ಣದ ಕಾರು, ಬೈಕ್‌,ಅಥವಾ ಸ್ಕೂಟರ್‌ ಖರೀದಿಸುವುದು ಅಶುಭ.

ಮಿಥುನ ರಾಶಿ

ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಮಿಥುನ ರಾಶಿಯವರಿಗೆ ತಿಳಿ ಹಳದಿ ಮತ್ತು ಹಸಿರು ಬಣ್ಣ ಅದೃಷ್ಟವನ್ನು ತಂದು ಕೊಡುತ್ತದೆ. ಅವು ಜೀವನದಲ್ಲಿ ಸಕಾರಾತ್ಮಕತೆ ಮತ್ತು ಯಶಸ್ಸನ್ನು ನೀಡುತ್ತದೆ.

ಕಟಕ ರಾಶಿ

ಈ ರಾಶಿಯವರು ಬಹಳ ಸೂಕ್ಷ್ಮ ಮನಸ್ಸಿನವರು. ಅವರು ಬಿಳಿ ಮತ್ತು ಬೂದು ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಣ್ಣಗಳು ಅವರ ಸೂಕ್ಷ್ಮ ಮನಸ್ಸನ್ನು ಸೆಳೆಯುವುದರ ಜೊತೆಗೆ ಹೆಚ್ಚಿನ ಸುರಕ್ಷತೆ ಮತ್ತು ಅದೃಷ್ಟವನ್ನು ನೀಡುತ್ತದೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಬಿಳಿ, ಬೂದು, ಸಿಲ್ವರ್‌ ಮತ್ತು ಕ್ರೀಮ್‌ ಬಣ್ಣವನ್ನು ಆಯ್ದುಕೊಳ್ಳಬಹುದು. ಈ ಬಣ್ಣಗಳು ಅವರಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಅದೃಷ್ಟವನ್ನು ತರುತ್ತದೆ.

ಸಿಂಹ ರಾಶಿ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತಮ್ಮ ಪ್ರಾಬಲ್ಯವನ್ನು ತೋರಿಸುವವರಾಗಿರುತ್ತಾರೆ. ಇವರಿಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಸ್ವಯಂ ಪ್ರದರ್ಶಿಸಿಕೊಳ್ಳುವ ಗುಣ ಹೊಂದಿರುತ್ತಾರೆ. ಈ ರಾಶಿಯ ಪುರುಷ ಮತ್ತು ಮಹಿಳೆಗೆ ವಾಹನ ಖರೀದಿಗೆ ಬೂದು ಬಣ್ಣ ಒಳ್ಳೆಯದು. ಕೆಂಪು, ಕೇಸರಿ, ಹಳದಿ ಮತ್ತು ಬಿಳಿ ಬಣ್ಣಗಳ ವಾಹನಗಳನ್ನು ಸಹ ಆಯ್ದುಕೊಳ್ಳಬಹುದಾಗಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಸೂಕ್ಷ್ಮ ಮನಸ್ಸಿನ ಶ್ರಮಜೀವಿಗಳು. ಅವರ ಸರಳ ಸ್ವಭಾವ ಮತ್ತು ವರ್ತನೆಯು ಅವರನ್ನು ಸಂವೇದನಾಶೀಲರಾಗುವಂತೆ ಮಾಡುತ್ತದೆ. ಇವರು ಕಾರು ಖರೀದಿಸುವುದಿದ್ದರೆ ನೀಲಿ ಮತ್ತು ಬಿಳಿ ಬಣ್ಣಗಳು ಅದೃಷ್ಟವನ್ನು ತಂದುಕೊಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕನ್ಯಾ ರಾಶಿಯವರು ಬೂದು ಮತ್ತು ಹಸಿರು ಬಣ್ಣಗಳನ್ನು ಸಹ ಆಯ್ದುಕೊಳ್ಳಬಹುದು. ಆದರೆ ಕೆಂಪು ಬಣ್ಣದಿಂದ ದೂರವಿದ್ದರೆ ಒಳಿತು.

ತುಲಾ ರಾಶಿ

ಈ ರಾಶಿಯವರು ಮೂಲತಃ ಶಾಂತ ಸ್ವಭಾವದವರಾಗಿದ್ದಾರೆ. ಅವರು ಸಾಮರಸ್ಯ, ಸಮತೋಲನ ಜೀವನದಲ್ಲಿ ಆನಂದವನ್ನು ಕಾಣುತ್ತಾರೆ. ತುಲಾ ರಾಶಿಯ ಅಡಿಯಲ್ಲಿ ಜನಿಸಿದವರಿಗೆ ನೀಲಿ ಮತ್ತು ಕಪ್ಪು ಅದೃಷ್ಟದ ಬಣ್ಣಗಳಾಗಿವೆ ಎಂದು ಶಾಸ್ತ್ರ ಹೇಳುತ್ತದೆ. ಕಾರು ಖರೀದಿಸುವುದಿದ್ದರೆ ಬಿಳಿ ಮತ್ತು ಹಸಿರು ಬಣ್ಣಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.

ವೃಶ್ಚಿಕ ರಾಶಿ

ಈ ರಾಶಿಯಲ್ಲಿ ಜನಿಸಿದವರು ಬಲಶಾಲಿಗಳು ಎಂದು ಹೇಳಲಾಗುತ್ತದೆ. ಇವರಿಗೆ ಯಾವುದೇ ಆತಂಕ ಕಾಡುವುದಿಲ್ಲ. ವೃಶ್ಚಿಕ ರಾಶಿಯವರಿಗೆ ಬಿಳಿ ಬಣ್ಣವು ಅದೃಷ್ಟದ ಬಣ್ಣವಾಗಿದೆ. ಕೆಂಪು, ಹಳದಿ ಮತ್ತು ಕೇಸರಿ ಬಣ್ಣವನ್ನು ಸಹ ಆಯ್ಕೆಮಾಡಿಕೊಳ್ಳಬಹುದು. ಆದರೆ ಕಪ್ಪು ಮತ್ತು ಹಸಿರು ಬಣ್ಣದಿಂದ ದೂರವಿರಲು ಸಲಹೆ ನೀಡಲಾಗುತ್ತದೆ.

ಧನು ರಾಶಿ

ಧನು ರಾಶಿಯವರು ಪ್ರವಾಸವನ್ನು ಹೆಚ್ಚು ಇಷ್ಟ ಪಡುತ್ತಾರೆ. ಇವರು ಸದಾ ಖುಷಿಯಿಂದ ಜೀವಿಸುತ್ತಾರೆ. ಧನು ರಾಶಿಯವರಿಗೆ ಕೆಂಪು ಮತ್ತು ಸಿಲ್ವರ್‌ ಬಣ್ಣ ಅದೃಷ್ಟವನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನೀವು ಕಾರನ್ನು ಖರೀದಿಸುವುದಿದ್ದರೆ ಕೆಂಪು, ಹಳದಿ, ಮತ್ತು ಕೇಸರಿ ಬಣ್ಣಗಳು ಹೆಚ್ಚಿನ ಅದೃಷ್ಟವನ್ನು ನೀಡುತ್ತದೆ. ಆದರೆ ನೀಲಿ ಮತ್ತು ಕಪ್ಪು ಬಣ್ಣವನ್ನು ಎಂದಿಗೂ ಖರೀದಿಸಬೇಡಿ.

ಮಕರ ರಾಶಿ

ಕರ್ತವ್ಯ, ಭರವಸೆ ಮತ್ತು ಶಿಸ್ತು ಇಷ್ಟಪಡುವ ಮಕರ ರಾಶಿಯವರಿಗೆ ಸ್ವಯಂ ನಿಯಂತ್ರಣ ಮಾಡುವವರಾಗಿದ್ದಾರೆ. ಇವರು ಸ್ಥಿತಪ್ರಜ್ಞರಾಗಿರುತ್ತಾರೆ. ಈ ರಾಶಿಯವರಿಗೆ ಬಿಳಿ ಬಣ್ಣವು ಅದೃಷ್ಟದ ಬಣ್ಣವಾಗಿದೆ. ಅದಲ್ಲದೇ ಬೂದು, ಹಳದಿ ಮತ್ತು ಹಸಿರು ಬಣ್ಣದ ವಾಹನಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಕೆಂಪು ಮತ್ತು ನೀಲಿ ಬಣ್ಣಗಳಿಂದ ದೂರವಿರಬೇಕೆಂದು ಶಾಸ್ತ್ರ ಹೇಳುತ್ತದೆ.

ಕುಂಭ ರಾಶಿ

ಈ ರಾಶಿಯವರು ಸ್ವಂತವಾಗಿ ಯೋಚಿಸುವ ಮತ್ತು ಸ್ವಾತಂತ್ರ್ಯವನ್ನು ಬಯಸುವ ಗುಣದವರಾಗಿರುತ್ತಾರೆ. ಜೊತೆಗೆ ಇವರು ಮುಂದಾಲೋಚನೆಯನ್ನು ಮಾಡಿರುತ್ತಾರೆ. ಬೂದು, ಬಿಳಿ ಮತ್ತು ನೀಲಿ ಬಣ್ಣಗಳು ನಿಮಗೆ ಅದೃಷ್ಟದ ಬಣ್ಣಗಳಾಗಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮೀನ ರಾಶಿ

ಮೀನ ರಾಶಿಯವರು ಆಳವಾಗಿ ಮತ್ತು ರಚನಾತ್ಮಕವಾಗಿ ಯೋಚಿಸುವವರು. ಆರಾಮದಾಯಕ ವಾಹನಗಳು ಅವರನ್ನು ಹೆಚ್ಚಾಗಿ ಸೆಳೆಯುತ್ತದೆ. ಮೀನ ರಾಶಿಯವರು ಅದೃಷ್ಟದ ಬಣ್ಣ ಬಿಳಿ, ಬಂಗಾರದ ಬಣ್ಣ, ಮತ್ತು ಹಳದಿಯಾಗಿದೆ. ಇದರ ಹೊರತಾಗಿಯೂ ಕಂಚು, ಕಡುಗೆಂಪು ಮತ್ತು ಕೇಸರಿ ಬಣ್ಣವನ್ನು ಸಹ ಆಯ್ದುಕೊಳ್ಳಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ. ಭಟ್‌