ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ರಾಶಿಚಿಹ್ನೆಗೆ ಅನುಗುಣವಾಗಿ ಯಾವ ಯೋಗ ಭಂಗಿ ನಿಮಗೆ ಸರಿ ಹೊಂದುತ್ತದೆ? ಇಲ್ಲಿದೆ ನೋಡಿ ವಿವರ

ನಿಮ್ಮ ರಾಶಿಚಿಹ್ನೆಗೆ ಅನುಗುಣವಾಗಿ ಯಾವ ಯೋಗ ಭಂಗಿ ನಿಮಗೆ ಸರಿ ಹೊಂದುತ್ತದೆ? ಇಲ್ಲಿದೆ ನೋಡಿ ವಿವರ

ಒಂದೊಂದು ರಾಶಿಚಕ್ರದವರು ಒಂದೊಂದು ಸ್ವಭಾವವನ್ನು ಹೊಂದಿರುತ್ತಾರೆ. ಹಾಗೇ ಯೋಗದಿಂದ ಮಾನಸಿಕ , ದೈಹಿಕ ಆರೋಗ್ಯವನ್ನು ಸುಧಾರಿಸಬಹುದು. ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಯೋಗ ಭಂಗಿಗಳು ಹೊಂದಬಹುದು. ಇಲ್ಲಿದೆ ಮಾಹಿತಿ.

ನಿಮ್ಮ ರಾಶಿಚಿಹ್ನೆಗೆ ಅನುಗುಣವಾಗಿ ಯಾವ ಯೋಗ ಭಂಗಿ ನಿಮಗೆ ಸರಿ ಹೊಂದುತ್ತದೆ? ಇಲ್ಲಿದೆ ವಿವರ
ನಿಮ್ಮ ರಾಶಿಚಿಹ್ನೆಗೆ ಅನುಗುಣವಾಗಿ ಯಾವ ಯೋಗ ಭಂಗಿ ನಿಮಗೆ ಸರಿ ಹೊಂದುತ್ತದೆ? ಇಲ್ಲಿದೆ ವಿವರ

ಆರೋಗ್ಯಕರ ಜೀವನಕ್ಕೆ ಯೋಗ ಬಹಳ ಮುಖ್ಯ. ಯೋಗದಲ್ಲಿ ಬರುವ ವಿವಿಧ ಆಸನಗಳು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಿಮ್ಮ ಆರೋಗ್ಯ ಸಮಸ್ಯೆಗೆ ತಕ್ಕಂತೆ ನಿರ್ದಿಷ್ಟ ಯೋಗಾಸನ ಮಾಡುವುದು ಸಾಮಾನ್ಯ, ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಕೂಡಾ ಯೋಗಾಸನ ಮಾಡಬಹುದು ಎಂಬ ವಿಚಾರ ನಿಮಗೆ ಗೊತ್ತಾ?

ಹೌದು, ನಿಮ್ಮ ರಾಶಿಗೆ ಅನುಗುಣವಾಗಿ ಮಾಡುವ ಯೋಗವು ನಿಮ್ಮ ದೇಹದಲ್ಲಿ ಪಾಸಿಟಿವ್‌ ಎನರ್ಜಿ ಉಂಟು ಮಾಡುತ್ತದೆ. ಇದು ನಿಮಗೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಹಾಗಾದ್ರೆ ಯಾವ ರಾಶಿಯವರು ಯಾವ ರೀತಿಯ ಯೋಗ ಮಾಡಿದರೆ ಉತ್ತಮ? ನೋಡೋಣ.

ಮೇಷ

ಮೇಷ ರಾಶಿಯವರಿಗೆ ಬೋಟ್‌ ಪೋಸ್‌ ಅಥವಾ ನವಾಸನ ಬಹಳ ಹೊಂದುತ್ತದೆ. ಈ ಭಂಗಿಯು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ನಿಮ್ಮ ದೇಹವನ್ನು ಟೋನ್‌ ಮಾಡುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ವೃಷಭ

ಈ ರಾಶಿಯವರಿಗೆ ವೃಕ್ಷಾಸನ ಬಹಳ ಸೂಕ್ತವಾಗಿದೆ. ಇದನ್ನು ಮರದ ಭಂಗಿ ಎಂದೂ ಕರೆಯಲಾಗುತ್ತದೆ. ಇದು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಹೇಳಿ ಮಾಡಿಸಿದಂಥ ಯೋಗ ಭಂಗಿ. ಇದು ಸೊಂಟ ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಒಟ್ಟಾರೆ ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ.

ಮಿಥುನ

ಇವರಿಗೆ ಈಗಲ್ ಪೋಸ್‌ ಅಥವಾ ಗರುಡಾಸನವು ಸೂಕ್ತವಾಗಿದೆ. ಈ ಆಸನವು ಭುಜ, ಬೆನ್ನು ಮತ್ತು ಸೊಂಟದ ಸ್ನಾಯುಗಳನ್ನು ವಿಸ್ತರಿಸುತ್ತದೆ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಮಿಥುನ ರಾಶಿಯವರಿಗೆ ಏಕಾಗ್ರತೆಯನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ.

ಕಟಕ

ಇವರಿಗೆ ಚೈಲ್ಡ್‌ ಪೋಸ್‌ ಅಥವಾ ಬಾಲಾಸನ ಬಹಳ ಸೂಕ್ತವಾಸ ಆಸನವಾಗಿದೆ. ಯಾರಾದರೂ ಅಸುರಕ್ಷಿತ ಭಾವನೆಯನ್ನು ಅನುಭವಿಸಿದಾಗ ಈ ಭಂಗಿಯು ತುಂಬಾ ಹಿತವಾದ ಭಾವನೆಯನ್ನು ನೀಡುತ್ತದೆ. ಇದು ದೇಹದಲ್ಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಮಗುವಿನಂತೆ ವ್ಯಕ್ತಿಯು ಸುರಕ್ಷಿತ ಮತ್ತು ತಾಜಾತನವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

ಸಿಂಹ

ಇವರಿಗೆ ಹೆಸರಿಗೆ ತಕ್ಕಂತೆ ಸಿಂಹನಾರಿ ಭಂಗಿ ಅಥವಾ ಭುಜಂಗಾಸನವು ಹೊಂದುತ್ತದೆ. ಈ ಭಂಗಿಯು ದೇಹವನ್ನು, ನಿರ್ದಿಷ್ಟವಾಗಿ ಬೆನ್ನುಮೂಳೆ ಮತ್ತು ಸೊಂಟದ ಸುತ್ತಲಿನ ಅಂಗಗಳನ್ನು ಸಡಿಲಗೊಳಿಸುತ್ತದೆ.

ಕನ್ಯಾ

ದೇವಿಯ ಭಂಗಿ ಅಥವಾ ಉತ್ಕಟ ಕೋನಾಸನವು ಕನ್ಯಾರಾಶಿಯ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುತ್ತದೆ. ಇದು ಇಡೀ ದೇಹವನ್ನು ಬೆಚ್ಚಗಿರುವಂತೆ ಮಾಡುತ್ತದೆ, ಹಾಗೂ ವಿಸ್ತರಿಸುತ್ತದೆ. ಇದು ರಕ್ತದ ಹರಿವಿನ ವ್ಯವಸ್ಥಿತ ಪರಿಚಲನೆಗೆ ಅನುವು ಮಾಡಿಕೊಡುತ್ತದೆ.

ತುಲಾ

ಅರ್ಧ ಚಂದ್ರನ ಭಂಗಿ ಅಥವಾ ಅರ್ಧ ಚಂದ್ರಾಸನವು ತುಲಾ ರಾಶಿಯವರಿಗೆ ಪರಿಪೂರ್ಣ ಸಮತೋಲನದ ಭಂಗಿಯಾಗಿದೆ. ಏಕೆಂದರೆ ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬುವಿಕೆ, ಮುಟ್ಟಿನ ಸಮಯದಲ್ಲಿ ಸೆಳೆತದ ಸಮಸ್ಯೆಗಳನ್ನು ಈ ಭಂಗಿಯು ಕಡಿಮೆ ಮಾಡುತ್ತದೆ.

ವೃಶ್ಚಿಕ

ಇವರಿಗೆ ಶಲಭಾಸನ ಉತ್ತಮ ಆಸನವಾಗಿದೆ. ದೇಹದ ಎಲ್ಲಾ ಸ್ನಾಯುಗಳನ್ನು ಸಕ್ರಿಯಗೊಳಿಸಲು ಈ ಆಸನವು ಹೇಳಿ ಮಾಡಿಸಿದಂತೆ ಇದೆ. ಇದು ಭಂಗಿಯನ್ನು ಸುಧಾರಿಸುತ್ತದೆ ಮತ್ತು ಸ್ನಾಯುಗಳನ್ನು ಟೋನ್ ಮಾಡುತ್ತದೆ, ಸೊಂಟ ಮತ್ತು ಮಂಡಿರಜ್ಜುಗಳನ್ನು ಬಲಪಡಿಸುತ್ತದೆ.

ಧನಸ್ಸು

ರಿವರ್ಸ್ ವಾರಿಯರ್ II ಅಥವಾ ವಿಪರೀತ ವಿರಭದ್ರಾಸನ IIವು ಧನಸ್ಸು ರಾಶಿಯವರಿಗೆ ಸರಿ ಹೊಂದುವ ಆಸನವಾಗಿದೆ. ಧನಸ್ಸು ರಾಶಿಯವರು ಸದಾ ಪ್ರಮುಖ ವಿಷಯದ ಮೇಲೆ ಕೇಂದ್ರೀಕರಿಸುವುದರಿಂದ ಈ ಆಸನವು ಏಕಾಗ್ರತೆಯನ್ನು ಸುಧಾರಿಸುತ್ತದೆ. ಈ ಭಂಗಿಯು ದೇಹವನ್ನು ಸ್ಟ್ರೆಚ್‌ ಮಾಡಲು ಸಹಾಯ ಮಾಡುತ್ತದೆ.

ಮಕರ

ಮೌಂಟೇನ್ ಪೋಸ್‌ ಅಥವಾ ತಾಡಾಸನವು ಮಕರ ರಾಶಿಯವರಿಗೆ ಸರಿ ಹೊಂದುವ ಆಸನವಾಗಿದೆ. ಈ ಭಂಗಿಯು ಉಸಿರಾಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಶಾಂತ ಮನಸ್ಸಿನ ಸ್ಥಿತಿಯನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಕಿಬ್ಬೊಟ್ಟೆಯ ಸ್ನಾಯುಗಳನ್ನು ಮತ್ತಷ್ಟು ಬಲಪಡಿಸುತ್ತದೆ.

ಕುಂಭ

ಊರ್ಧ್ವ ಧನುರಾಸನವು ಕುಂಭ ರಾಶಿಯವರಿಗೆ ತಮ್ಮ ಸೃಜನಾತ್ಮಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಈ ಭಂಗಿಯು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹದಲ್ಲಿ ಆರೋಗ್ಯಕರ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ, ಒತ್ತಡ ಅಥವಾ ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಮೀನ

ಮೀನಿನ ಭಂಗಿ ಅಥವಾ ಮತ್ಸ್ಯಾಸನವು ಮೀನ ರಾಶಿಯವರಿಗೆ ಸೂಕ್ತವಾಗಿದೆ. ಏಕೆಂದರೆ ಈ ಭಂಗಿಯು ಆಧ್ಯಾತ್ಮಿಕ ಮನಸ್ಸಿಗೆ ದೇಹ ಮತ್ತು ಮನಸ್ಸಿನ ಚಕ್ರಗಳನ್ನು ತೆರೆಯುತ್ತದೆ. ಇದು ಸಕಾರಾತ್ಮಕ ಸೆಳವನ್ನು ಉತ್ತೇಜಿಸುತ್ತದೆ. ಕುತ್ತಿಗೆಯ ಹಿಂಭಾಗ ಮತ್ತು ಮೇಲಿನ ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೀನವು ಈ ಯೋಗದ ಭಂಗಿಯನ್ನು ನೈಸರ್ಗಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತೇಜಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.